ಶಾಸಕ ಶಿವರಾಂ ಹೆಬ್ಬಾರ್ ಹಾಗು ಎಸ್ ಟಿ ಸೋಮಶೇಖರ್ ಸದ್ಯ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕರು. ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆಗೊಂಡಿರೋ ಈ ಶಾಸಕರು ಇದೀಗ ತಮ್ಮ ಮುಂದಿನ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳಲು ಮುಂದಾಗಿದ್ದಾರೆ. ಸದ್ಯಕ್ಕೆ ಫ್ರೀ ಬರ್ಡ್ ಆಗಿರೋ ಈ ಶಾಸಕರ ಮುಂದಿನ ನಡೆ ಬಗ್ಗೆ ಒಂದಿಷ್ಟು ಕುತೂಹಲ ಅಂತು ಇದ್ದೇ ಇದೆ. ಕಾಂಗ್ರೆಸ್ ನಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಇಬ್ಬರು ನಾಯಕರು ಕೈ ಹಿಡಿಯೋದು ಪಕ್ಕ ಎನ್ನಲಾಗುತ್ತಿದೆ . ಆದರೆ ಇದಕ್ಕೆ ಸಾಕಷ್ಟು ಅಡೆ-ತಡೆಗಳು ಸಹ ಇಬ್ಬರು ನಾಯಕರಿಗೆ ಇವೆ. ಸವಾಲಿನ ನಡುವೆ ಈ ನಾಯಕರು ಕಾಂಗ್ರೆಸ್ ಸೇರ್ತಾರಾ ಅನ್ನೊದೆ ಪ್ರಶ್ನೆ.

ಹೌದು ಬಿಜೆಪಿ ಶಾಸಕರಾದ್ರೂ ಕೂಡ ಕಾಂಗ್ರೆಸ್ ಜೊತೆಯಲ್ಲೇ ಗುರುತಿಸುವ ಮೂಲಕ ಬಿಜೆಪಿ ನಾಯಕರಿಗೆ ಅಶಿಸ್ತು ಪ್ರದರ್ಶನ ಮಾಡಿದ್ದರು. ಈ ನಿಟ್ಟಿನಲ್ಲಿ ಪಕ್ಷ ವಿರೋಧಿ ಚಟುವಟಿಕೆಯ ಮೇಲೆ ಬಿಜೆಪಿಯ ಇಬ್ಬರು ಶಾಸಕರಾದ ಶಿವರಾಮ ಹೆಬ್ಬಾರ್ ಹಾಗೂ ಎಸ್ ಟಿ ಸೋಮಶೇಖರ್ ಕೇಂದ್ರೀಯ ಶಿಸ್ತು ಸಮಿತಿ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿ ಶಾಕ್ ನೀಡಿದೆ. ಆದರೆ ಈ ಶಾಕ್ ಗೆ ಬೆಚ್ಚಿ ಬೀಳದ ಇಬ್ಬರು ನಾಯಕರು ತಮ್ಮ ಮುಂದಿನ ಹಾದಿಯನ್ನ ಹುಡುಕಲು ಮುಂದಾಗಿದ್ದು ಕಾಂಗ್ರೆಸ್ ನತ್ತ ಕಣ್ಣಿಟ್ಟಿದ್ದಾರೆ. ಯಾಕಂದ್ರೆ ಇದನ್ನೇ ಈ ನಾಯಕರು ಬಯಸಿದ್ದರು ಅಂತ ಚರ್ಚೆ ಆಗ್ತಾ ಇದೆ.
ರೋಗಿ ಬಯಸಿದ್ದು ಹಾಲು ಅನ್ನ ವೈದ್ಯರು ಹೇಳಿದ್ದು ಹಾಲು ಅನ್ನ ಆಗಿದೆ ಎಸ್ ಟಿ ಸೋಮಶೇಖರ್ ಹಾಗೂ ಹೆಬ್ಬಾರ್ ಅವರ ಪರಿಸ್ಥಿತಿ. ತುಂಬಾ ದಿನಗಳಿಂದ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದ ಇಬ್ಬರು ನಾಯಕರು ಕಾಂಗ್ರೆಸ್ನ ಸಭೆ ಸಮಾರಂಭಗಳಲ್ಲಿ ಭಾಗಿಯಾಗಿ ನಾವು ಬಿಜೆಪಿಯಿಂದ ದೂರ ದೂರ ಅನ್ನ ಸಂದೇಶವನ್ನು ನೀಡಿದ್ದರು. ಕಾಂಗ್ರೆಸ್ ನ ಎಲ್ಲ ಕಾರ್ಯಕ್ರಮದಲ್ಲಿ ಭಾಗಿಯಾಗೋ ಮೂಲಕ ನಾವು ಬಿಜೆಪಿಯಲ್ಲಿ ಇಲ್ಲ ಅನ್ನೋದನ್ನ ತೋರಿಸಿದ್ದರು. ಇವರ ನಡೆಗೆ ಅನೇಕ ಬಾರು ಕೆಲವೊಂದಿಷ್ಟು ಬಿಜೆಪಿಯ ನಾಯಕರು ಇಬ್ಬರು ಶಾಸಕರಿಗೂ ಎಚ್ಚರಿಕೆ ಸಹ ನೀಡಿದ್ರು. ಆದರೆ ಸರ್ಕಾರಿ ಕಾರ್ಯಕ್ರಮಗಳು ಅನ್ನೋ ನೆಪವಡ್ಡಿ ಸಿಎಂ ಮತ್ತು ಡಿಸಿಎಂ ಕಾರ್ಯಕ್ರಮಗಳಲ್ಲಿ ನೇರವಾಗಿ ಭಾಗಿಯಾಗುತ್ತಿದ್ದರು.

ಅಷ್ಟೆ ಅಲ್ಲ ಬಿಜೆಪಿಯಲ್ಲಿ ಯಾವುದೇ ಕಾರ್ಯಕ್ರಮ, ಸಭೆ, ಸಮಾರಂಭ, ಕೇಂದ್ರದ ನಾಯಕರು ಬಂದಾಗಲೂ ಈ ಶಾಸಕರು ಬರಲಿಲ್ಲ. ಆದರೆ ಬೆಳಗ್ಗೆ ಎದ್ರೆ ಸಾಕು ಡಿಸಿಎಂ ಸೇರಿ ಅನೇಕ ಮುಖಂಡರ ಮನೆಯಲ್ಲೇ ಇರ್ತಾ ಇದ್ದು, ನಾವು ಬಿಜೆಪಿಯಿಂದ ದೂರನೇ ಇರುತ್ತೇವೆ ಅನ್ನೋ ಸಂದೇಶವನ್ನು ಸಹ ಇಬ್ಬರು ನಾಯಕರು ಕೊಟ್ಟಿದ್ದರು. ಅದ್ರೆ ಎಷ್ಟೇ ಎಚ್ಚರಿಕೆ ಕೊಟ್ರು ಕ್ರಮ ಕೈಗೊಳ್ಳಿ ಅನ್ನೋ ಮಾತನೇ ಹೇಳುತ್ತಿದ್ರು. ಹೀಗಾಗಿ ಕ್ರಮ ಕೈಗೊಳ್ಳುವುದನ್ನೆ ಆ ನಾಯಕರು ಕಾಯ್ತಿದ್ರು ಅನ್ನಿಸುತ್ತೆ. ಹೀಗಾಗಿ ಇದೀಗ ಅಧಿಕೃತವಾಗಿ ತಮ್ಮ ದೃಷ್ಠಿಯನ್ನ ಕೈ ನತ್ತ ನೆಟ್ಟಿದ್ದಾರೆ ಎನ್ನಲಾಗಿದೆ. ಇದರ ಮದ್ಯ ಕಾಂಗ್ರೆಸ್ ನಾಯಕರು ಸಹ ಈ ಉಚ್ಚಾಟಿತ ಇಬ್ಬರು ನಾಯಕರಿಗೆ ಕಾಂಗ್ರೆಸ್ ಗೆ ಬರುವುದಾದರೆ ವೆಲ್ ಕಂ ಎಂದರೆ, ಮತ್ತೊಂದಿಷ್ಟು ಜನ ವಿರೋಧ ಕೂಡ ಮಾಡಿದ್ದಾರೆ.

ಬಿಜೆಪಿಯಿಂದ ಗೇಟ್ಪಾಸ್ ಆಗಿರೋ ಶಾಸಕರಿಬ್ಬರ ಚಿತ್ತ ಇದೀಗ ಕಾಂಗ್ರೆಸ್ನತ್ತ ನೆಟ್ಟಂಗಿದೆ. ಕಾಂಗ್ರೆಸ್ ನಲ್ಲೇ ಮುಂದಿನ ಭವಿಷ್ಯ ಕಟ್ಟಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ ಉಚ್ಛಾಟಿತ ಶಾಸಕರು ಎಂದು ಹೇಳಲಾಗುತ್ತಿದೆ. ಈಗಾಗಲೇ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿರೋ ಸೋಮಶೇಖರ್, ಹೆಬ್ವಾರ್ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಕಡೆಯೇ ಹೆಜ್ಹೆ ಹಾಕಬೇಕಾದ ಅನಿವಾರ್ಯತೆ ಇದೆ. ಈಗ ಇಬ್ಬರಿಗೂ ಅಸಲಿ ಅಗ್ನಿಪರೀಕ್ಷೆ ಆರಂಭವಾಗಿದೆ. ಕಾಂಗ್ರೆಸ್ ಸೇರ್ಪಡೆ ಸದ್ಯಕ್ಕೆ ಆಗದಿದ್ರೂ ಮುಂದೆ ಅದೇ ಇಬ್ಬರಿಗೂ ಗಟ್ಟಿ. ಆದ್ರೆ ಅದು ಅಷ್ಟು ಸುಲಭವಿಲ್ಲ.. ಕೈ ಸೀನಿಯರ್ ಲೀಡರ್ಗಳಿಂದ ಸೋಮಶೇಖರ್, ಹೆಬ್ಬಾರ್ಗೆ ವೆಲ್ಕಂವಾದ್ರು, ಸ್ಥಳೀಯವಾಗಿ ಇಬ್ಬರ ಕ್ಷೇತ್ರಗಳಲ್ಲೂ ಇಬ್ಬರಿಗೂ ವಿರೋಧ ಬರೋದು ಫಿಕ್ಸ್.

ಯಶವಂತಪುರ ಹಾಗೂ ಯಲ್ಲಾಪುರ ಕ್ಷೇತ್ರಗಳಲ್ಲಿ ಲೋಕಲ್ ಕೈ ಮುಖಂಡರಿಂದ ವಿರೋಧವಾಗುವ ಸಾಧ್ಯತೆ ಹೆಚ್ಚಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್ ಬಿಟ್ಟು ಹೋದವರು ಅನ್ನೋ ಕಳಂಕವೊತ್ತಿರೋ ಇಬ್ಬರಿಗೂ ಮತ್ತೆ ಮರಳಿ ಬರ್ತಿರೋದೂ ಅಧಿಕಾರಕ್ಕಾಗಿಯೇ ಎಂದು ಅಪಸ್ವರ ಎದ್ದಿದೆ. ಹೀಗಾಗಿ ಇಬ್ವರ ಆಗಮನಕ್ಕೆ ಬಾರೀ ವಿರೋಧವಾಗುವ ಸಾಧ್ಯತೆ ಇದೆ. ಅಷ್ಟೆ ಅಲ್ಲ ಹಿಂದೆ ಮೈತ್ರಿ ಸರ್ಕಾರ ಉರುಳಿಸುವಲ್ಲಿ ಈ ಇಬ್ಬರು ನಾಯಕರು ಕೂಡ ಪ್ರಮುಖ ಪಾತ್ರ ವಹಿಸಿದವರು. ಹೀಗಾಗಿ ಸದ್ಯ ಕಾಂಗ್ರೆಸ್ ಹಾದಿಯೂ ಅಷ್ಟು ಸುಲಭವಿಲ್ಲ.
ಒಟ್ಟಾರೆ ಇದೀಗ ಫ್ರೀಬರ್ಡ್ ಆಗಿರೋ ಇಬ್ಬರು ಕಾಂಗ್ರೆಸ್ ನತ್ತ ದೃಷ್ಟಿ ನೆಟ್ಟಿದ್ದಾರೆ. ಆದ್ರೆ ಅದು ಅಷ್ಟು ಸುಲಭವಲ್ಲ. ಯಾಕಂದ್ರೆ ಹೈ ಕಮಾಂಡ್ ಒಪ್ಪಿದರೂ ಕೂಡ ಸ್ಥಳೀಯ ವಿರೋಧ ಇದ್ದೇ ಇದೆ ಅಂತ ಸಹ ಹೇಳಲಾಗ್ತಿದ್ದು ಇದನ್ನ ಯಾವ ರೀತಿ ನಿಭಾಯಿಸುತ್ತಾರೆ ಕಾದು ನೋಡಬೇಕು.



