ಬಿಗ್ ಬಾಸ್ ಕನ್ನಡ ಸೀಸನ್ 11 ಈಗ 11ನೇ ವಾರ ಮುಗಿಸಿದೆ. ಈ ವೇಳೆ ಬಿಗ್ ಬಾಸ್ ಶೋನಲ್ಲಿ ಹಲವು ಸ್ಟ್ರಾಂಗ್ ಸ್ಪರ್ಧಿಗಳಿದ್ದು, ದಿನೇ ದಿನೇ ಕಾಂಪಿಟೇಶನ್ ಹೆಚ್ಚಾಗುತ್ತಲೇ ಹೋಗುತ್ತಿದೆ. ಯಾರು ವಿನ್ನರ್ ಆಗ್ತಾರೆ ಅನ್ನೋ ಕುತೂಹಲ ಸಹ ಜಾಸ್ತಿ ಆಗುತ್ತಿದೆ. ಹಾಗೆಯೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇತ್ತೀಚೆಗೆ ಕೆಲವು ದಿನಗಳಿಂದ ಬಿಗ್ ಬಾಸ್ ಮನೆಯ ಸ್ಪರ್ಧಿ ಮೋಕ್ಷಿತಾ ಅವರ ಬಗ್ಗೆ ಕೆಲವು ಸುದ್ದಿಗಳು ವೈರಲ್ ಆಗುತ್ತಿದ್ದು, ಅವರ ಅಭಿಮಾನಿಗಳು ನಾವು ಮೋಕ್ಷಿತಾ ಪರವಾಗಿ ಯಾವಾಗಲೂ ಇರ್ತೀವಿ ಅಂತಿದ್ದಾರೆ. ಅಷ್ಟಕ್ಕೂ ಆಗಿರೋದೇನು? ಪೂರ್ತಿ ಡೀಟೇಲ್ಸ್ ಇಲ್ಲಿದೆ ನೋಡಿ..

ಬಿಗ್ ಬಾಸ್ ಮನೆಯ ಸ್ಟ್ರಾಂಗ್ ಸ್ಪರ್ಧಿಗಳಲ್ಲಿ ಒಬ್ಬರು ಮೋಕ್ಷಿತಾ ಪೈ. ಪ್ರತಿ ವಾರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹಾಗೆಯೇ ಮೋಕ್ಷಿತಾ ಅವರು ಟಾಸ್ಕ್ ಗಳಲ್ಲಿ ಉತ್ತಮವಾಗಿ ಪರ್ಫಾರ್ಮ್ ಮಾಡುವುದರ ಜೊತೆಗೆ, ಉತ್ತಮವಾಗಿ ಜಡ್ಜ್ ಮಾಡುತ್ತಿದ್ದಾರೆ. ಹಾಗೆಯೇ ಮೋಕ್ಷಿತಾ ಅವರಿಗೆ ಹೊರಗಡೆ ಅಭಿಮಾನಿ ಬಳಗ ಕೂಡ ದೊಡ್ಡದಾಗುತ್ತಲೇ ಇದೆ. ಇವರು ನಟನೆ ಶುರು ಮಾಡಿದ್ದು ಪಾರು ಧಾರಾವಾಹಿಯ ಮೂಲಕ, ಈ ಧಾರಾವಾಹಿಯಲ್ಲಿ ಮೋಕ್ಷಿತಾ ಅವರ ಪಾತ್ರ ಅದ್ಭುತವಾಗಿ ಮೂಡಿ ಬಂದಿತ್ತು, ಹಾಗೆಯೇ ಅವರಿಗೆ ಒಳ್ಳೆಯ ಜನಪ್ರಿಯತೆ ಮತ್ತು ಅಭಿಮಾನಿ ಬಳಗ ಎಲ್ಲವು ಸಿಕ್ಕಿತ್ತು. ಇದೀಗ ಇವರು ಪಾರು ನಂತರ ಬಿಗ್ ಬಾಸ್ ಗೆ ಬಂದಿದ್ದಾರೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಬಿಗ್ ಬಾಸ್ ಮನೆಯೊಳಗೆ ಒಂದ್ ರೇಂಜ್ ಗೆ ಸದ್ದು ಮಾಡುತ್ತಿದ್ದಾರೆ ಮೋಕ್ಷಿತಾ. ಆದರೆ ಒಂದೆರಡು ದಿನಗಳಿಂದ ಮೋಕ್ಷಿತಾ ಅವರ ಬಗ್ಗೆ ಬೇರೆಯದೇ ವಿಷಯ ಸಿಕ್ಕಾಪಟ್ಟೆ ಸುದ್ದಿ ಆಗುತ್ತಿದೆ. ಅದು ಒಂದು ಹಳೆಯ ವಿಚಾರ ಆಗಿದ್ದು, ಈಗ ಹೊರತಂದು ಮೋಕ್ಷಿತಾ ಅವರ ಬಗ್ಗೆ ನೆಗಟಿವ್ ಪ್ರಚಾರ ಮಾಡಲಾಗುತ್ತಿದೆ. ಈ ವಿಚಾರದ ಬಗ್ಗೆ ಮೋಕ್ಷಿತಾ ಅವರ ಕುಟುಂಬದವರಾಗಲಿ, ಅವರ ಆತ್ಮೀಯರಾಗಲಿ ಯಾರು ಕೂಡ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ, ಆದರೆ ಅವರ ಅಭಿಮಾನಿಗಳು ಮೋಕ್ಷಿತಾ ಅವರ ಪರವಾಗಿ ನಿಂತಿದ್ದಾರೆ. ಏನೇ ಆದರೂ ಮೋಕ್ಷಿತಾ ಅವರಿಗೆ ಸಪೋರ್ಟ್ ಮಾಡೋದು ಬಿಡೋದಿಲ್ಲ ಎಂದಿದ್ದಾರೆ.

ವೈರಿಗಳ ಕೊನೆಯ ಅಸ್ತ್ರ ಅಪಪ್ರಚಾರ, ಇಂಥ ಫೇಕ್ ನ್ಯೂಸ್ ಗಳು ಎಷ್ಟೇ ಬಂದರು ಸಹ ನಾವು ಮೋಕ್ಷಿತಾ ಅವರ ಪರವಾಗಿ ಯಾವಾಗಲು ನಿಲ್ಲುತ್ತೇವೆ, ಇಂಥ ಸುದ್ದಿಗಳಿಗೆ ತಲೆಕೆಡಿಸಿಕೊಳ್ಳಬಾರದು, ನಾವು ಯಾವಾಗಲೂ ಮೋಕ್ಷಿತಾ ಅವರ ಪರವಾಗಿ ನಿಲ್ಲುತ್ತೇವೆ ಎಂದು ಮೋಕ್ಷಿತಾ ಅವರ ಫ್ಯಾನ್ಸ್ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುತ್ತಿದ್ದು, ಅದನ್ನು ಮೋಕ್ಷಿತಾ ಅವರ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ಪೋಸ್ಟ್ ಗಳನ್ನು ಶೇರ್ ಮಾಡಲಾಗುತ್ತಿದೆ. ಈ ಮೂಲಕ ಹೆಚ್ಚಿನ ಜನರು ಮೋಕ್ಷಿತಾ ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಮೋಕ್ಷಿತಾ ಅವರ ಕುಟುಂಬದವರು ಕೂಡ ಅಭಿಮಾನಿಗಳಿಗೆ ಸಪೋರ್ಟ್ ಮಾಡುತ್ತಿದ್ದಾರೆ.
ಇನ್ನು ಕೆಲವು ಅಭಿಮಾನಿಗಳು ಕಳೆದ ಬಾರಿ ಡ್ರೋನ್ ಪ್ರತಾಪ್ ಅವರ ವಿಚಾರದಲ್ಲಿ ಇದೇ ರೀತಿ ಆಗಿತ್ತು ಈಗ ಮೋಕ್ಷಿತಾ ಅವರ ವಿಚಾರದಲ್ಲಿ ಇದೇ ರೀತಿ ಆಗುತ್ತಿದೆ ಎಂದು ಪೋಸ್ಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಮೋಕ್ಷಿತಾ ಅವರಿಗೆ ಹೊರಗಡೆ ಎಷ್ಟು ಸಪೋರ್ಟ್ ಇದೆಯೋ, ಅಷ್ಟೇ ಟ್ರೋಲ್ ಮಾಡುವವರು ಕೂಡ ಹೆಚ್ಚಾಗಿದ್ದಾರೆ. ದಿನೇ ದಿನೇ ಬಿಗ್ ಬಾಸ್ ಮನೆಯ ಒಳಗೆ ಟಾಸ್ಕ್ ಗಳು ಟಫ್ ಆಗುತ್ತಿದ್ದು, ಕಾಂಪಿಟೇಶನ್ ಕೂಡ ಜಾಸ್ತಿ ಆಗಿದೆ. ಮೋಕ್ಷಿತಾ ಅವರು ಫಿನಾಲೆ ತಲುಪಿ, ವಿನ್ನರ್ ಆಗಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆ. ಈ ವರ್ಷ ಮಹಿಳಾ ಸ್ಪರ್ಧಿ ಗೆಲ್ಲುತ್ತಾರಾ ಅಥವಾ ಈ ಹಳೆಯ ಸುದ್ದಿ ಹಾಗೂ ಟ್ರೋಲ್ ಗಳು ಮೋಕ್ಷಿತಾ ಅವರ ಬಿಗ್ ಬಾಸ್ ಜರ್ನಿ ಮೇಲೆ ಪರಿಣಾಮ ಬೀರುತ್ತಾ ಎಂದು ಕಾದು ನೋಡಬೇಕಿದೆ..