SSMB29 ಅಪ್ಡೇಟ್: ದಕ್ಷಿಣದ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ತಮ್ಮ ಮೆಗಾ ಫಿಲ್ಮ್ ಪ್ರಾಜೆಕ್ಟ್ ‘SSMB29’ಗಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ದಕ್ಷಿಣದ ಸೂಪರ್ಸ್ಟಾರ್ ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ ಅವರಂತಹ ದೊಡ್ಡ ಹೆಸರುಗಳು ಈ ಚಿತ್ರದಲ್ಲಿ ಸೇರಿಕೊಂಡಿವೆ. ರಾಜಮೌಳಿ ಈ ಚಿತ್ರದ ಬಗ್ಗೆ ತುಂಬಾ ಸೀರಿಯಸ್ ಆಗಿದ್ದಾರೆ. ‘ಬಾಹುಬಲಿ’ ಸಿರೀಸ್, ‘RRR’ ನಂತಹ ಸೌತ್ ಚಿತ್ರಗಳ ಮೂಲಕ ದೇಶ ಮತ್ತು ವಿಶ್ವದಲ್ಲಿ ಖ್ಯಾತಿ ಪಡೆದ ರಾಜಮೌಳಿ ಈಗ ಮತ್ತೊಂದು ಬಿಗ್ ಬಜೆಟ್ ಚಿತ್ರ ‘SSMB29’ ಅನ್ನು ತರುತ್ತಿದ್ದಾರೆ. ಚಿತ್ರದ ಶೂಟಿಂಗ್ ಶುರುವಾಗಿದೆ. ವರದಿಯ ಪ್ರಕಾರ ರಾಜಮೌಳಿ ತಮ್ಮ ಚಿತ್ರದ ಬಗ್ಗೆ ದೊಡ್ಡ ಹೆಜ್ಜೆ ಇಟ್ಟಿದ್ದಾರೆ.
ಮಹೇಶ್ ಬಾಬು ಮತ್ತು ರಾಜಮೌಳಿ ಮೊದಲ ಬಾರಿಗೆ ‘ಎಸ್ಎಸ್ಎಂಬಿ 29’ ಮೂಲಕ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಇದೂ ಒಂದು. ಚಿತ್ರದ ಬಗ್ಗೆ ಹೊಸ ಮಾಹಿತಿಗಾಗಿ ಪ್ರೇಕ್ಷಕರು ನಿರಂತರವಾಗಿ ಕಾಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಚಿತ್ರದ ಟೈಟಲ್ ಕುರಿತು ಸಹ ಅಪ್ಡೇಟ್ಗಳನ್ನು ಕೇಳುತ್ತಲೇ ಇರುತ್ತಾರೆ.
ಚಿತ್ರದ ಟೈಟಲ್ ಬಗ್ಗೆಯೂ ಚರ್ಚೆ ತೀವ್ರಗೊಂಡಿದೆ. ಇನ್ನು SSMB 29 ರ ತಾರಾಗಣದ ಬಗ್ಗೆ ಕೆಲವು ಕುತೂಹಲಕಾರಿ ಊಹಾಪೋಹಗಳು ಸ್ವಲ್ಪ ಸಮಯದಿಂದ ಸುತ್ತುತ್ತಿವೆ. ಈ ಯೋಜನೆಯ ಅಧಿಕೃತ ಶೀರ್ಷಿಕೆಯನ್ನು ಬಹುತೇಕ ಅಂತಿಮಗೊಳಿಸಲಾಗಿದೆ ಎಂದು ವದಂತಿಗಳು ಹರಡಿವೆ. ರಾಜಮೌಳಿ ತಮ್ಮ ಮಹತ್ವಾಕಾಂಕ್ಷೆಯ ಚಿತ್ರದ ಶೀರ್ಷಿಕೆಯನ್ನು ಅಂತಿಮಗೊಳಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಳ್ಳಲಾಗುತ್ತಿದೆ.

ಏತನ್ಮಧ್ಯೆ ರಾಜಮೌಳಿ ನಿರ್ದೇಶನದ ಈ ಚಿತ್ರವು ವಿಷ್ಣುವಿನ ವಾಹನವೆಂದು ಪರಿಗಣಿಸಲಾದ ಗರುಡನಿಗೆ ಸಂಬಂಧಿಸಿದ ಪೌರಾಣಿಕ ಮತ್ತು ಕಾಲ್ಪನಿಕ ವಿಷಯಗಳನ್ನು ಸಹ ಒಳಗೊಂಡಿರಬಹುದು ಎಂದು ಕೆಲವು ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ. ಆದರೆ SSMB 29 ರ ತಂಡವು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
SSMB 29 ಮೂಲಕ ಮಹೇಶ್ ಬಾಬು ಮತ್ತು ಎಸ್ಎಸ್ ರಾಜಮೌಳಿ ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರವನ್ನು ಕಾಡಿನ ಸಾಹಸವುಳ್ಳ ಚಿತ್ರ ಎಂದು ಸಹ ಪರಿಗಣಿಸಲಾಗುತ್ತಿದ್ದು, ದೊಡ್ಡ ಮಟ್ಟದಲ್ಲಿರಲಿದೆ ಎಂದು ಊಹಿಸಲಾಗಿದೆ. ಇದಲ್ಲದೆ ಚಿತ್ರವು ರಾಜಮೌಳಿ ಅವರ ಟ್ರೇಡ್ಮಾರ್ಕ್ ಆಗಿರುವ ಪುರಾಣ ಮತ್ತು ಭಾರತೀಯ ಮಹಾಕಾವ್ಯಗಳ ಒಂದು ನೋಟವನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ. ರಾಜಮೌಳಿ ಅವರ ಚಿತ್ರಕ್ಕಾಗಿ ಮಹೇಶ್ ಬಾಬು ಅವರು ನಟನಾ ಕಾರ್ಯಾಗಾರ ಮತ್ತು ದೈಹಿಕ ತರಬೇತಿ ಎರಡನ್ನೂ ಪ್ರಾರಂಭಿಸಿದ್ದಾರೆ. ಮಹೇಶ್ ಬಾಬು ಅವರ ಶಿಕ್ಷಕರಾಗಿ ಹಿರಿಯ ನಟ ನಾಸರ್ ಅವರನ್ನು ನಿರ್ದೇಶಕರು ನೇಮಿಸಿದ್ದಾರೆ.
ಇತ್ತೀಚೆಗೆ ರಾಜಮೌಳಿ ‘ಎಸ್ಎಸ್ಎಂಬಿ 29’ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಮಹೇಶ್ ಬಾಬು ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ, ಪ್ರಿಯಾಂಕಾ ಚೋಪ್ರಾ ಕೂಡ ಈ ಚಿತ್ರದ ಭಾಗವಾಗಿದ್ದಾರೆ. ರಾಜಮೌಳಿ ತಮ್ಮ ಇತರ ಚಿತ್ರಗಳಂತೆ ಈ ಸಿನಿಮಾದ ಚಿತ್ರೀಕರಣವನ್ನೂ ಗೌಪ್ಯವಾಗಿಡಲು ಬಯಸಿದ್ದಾರೆ. ಇದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಮಾಧ್ಯಮಗಳು ಅಥವಾ ಸಾಮಾಜಿಕ ಮಾಧ್ಯಮಗಳಿಗೆ ಸೋರಿಕೆಯಾಗದಂತೆ ರಕ್ಷಿಸಲು ಬಯಸಿದ್ದಾರೆ.
ತಮ್ಮ ಚಿತ್ರದ ಚಿತ್ರೀಕರಣವನ್ನು ಗೌಪ್ಯವಾಗಿಡಲು ರಾಜಮೌಳಿ ಅವರು ಒಪ್ಪಂದಕ್ಕೆ ಸಹಿ ಹಾಕಿಸಿದ್ದಾರೆಯೇ ಎಂಬ ಪ್ರಶ್ನೆಯೂ ಇದೆ. ಏಕೆಂದರೆ ಕೆಲವು ಮಾಧ್ಯಮ ವರದಿಗಳ ಪ್ರಕಾರ, ಅವರು ತಮ್ಮ ಸಿಬ್ಬಂದಿ ಮತ್ತು ನಟರಿಂದ ಸಹಿ ಮಾಡಿದ ಬಹಿರಂಗಪಡಿಸದ ಒಪ್ಪಂದವನ್ನು ಪಡೆದಿದ್ದಾರೆ. ಈ ಒಪ್ಪಂದದ ಪ್ರಕಾರ, ಯಾರೂ ಚಿತ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸೆಟ್ನಿಂದ ಹಂಚಿಕೊಳ್ಳುವಂತಿಲ್ಲ. ಅಲ್ಲದೆ, ಫೋನ್ ಅನ್ನು ಸೆಟ್ಗೆ ತರುವ ಹಾಗಿಲ್ಲ. ಆದರೆ ಇದನ್ನು ಇನ್ನೂ ಖಚಿತಪಡಿಸಿಲ್ಲ.
ಎಸ್ಎಸ್ಎಂಬಿ 29 ಚಿತ್ರಕ್ಕೆ ಸಂಬಂಧಿಸಿದಂತೆ ಸದ್ಯ ಮಾಹಿತಿಯೊಂದು ಬಹಿರಂಗವಾಗಿದ್ದು, ಚಿತ್ರದಲ್ಲಿ ಸೌತ್ ನಟ ಪೃಥ್ವಿರಾಜ್ ಸುಕುಮಾರನ್ ಅವರ ಜಾಗಕ್ಕೆ ಬಾಲಿವುಡ್ ನಟರೊಬ್ಬರು ಎಂಟ್ರಿ ಕೊಟ್ಟಿದ್ದಾರೆ. SSMB29 ಬಗ್ಗೆ ಅನೇಕ ಮಾಹಿತಿಗಳು ನಿರಂತರವಾಗಿ ಹೊರಬರುತ್ತಿವೆ. ಚಿತ್ರದ ತಾರಾಬಳಗಕ್ಕೆ ಸಂಬಂಧಿಸಿದಂತೆ ಹೊರಬಿದ್ದಿರುವ ಮಾಹಿತಿ ಪ್ರಕಾರ ಇದೀಗ ಪ್ರಿಯಾಂಕಾ ಚೋಪ್ರಾ ನಂತರ ಪೃಥ್ವಿರಾಜ್ ಬದಲಿಗೆ ಮತ್ತೊಬ್ಬ ಬಾಲಿವುಡ್ ನಟನ ಹೆಸರು ಸೇರ್ಪಡೆಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಪೃಥ್ವಿರಾಜ್ ಸುಕುಮಾರನ್ ಎಸ್ಎಸ್ಎಂಬಿ 29 ಚಿತ್ರದ ಭಾಗವಾಗಿರುವುದಿಲ್ಲ. SSMB29 ಚಿತ್ರದಲ್ಲಿ ಪೃಥ್ವಿರಾಜ್ ಬದಲಿಗೆ ಜಾನ್ ಅಬ್ರಹಾಂ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಕೆಲ ದಿನಗಳ ಹಿಂದೆ ಶೂಟಿಂಗ್ಗಾಗಿ ಪ್ರಿಯಾಂಕಾ ಮಹೇಶ್ ಬಾಬು ಜೊತೆ ಹೈದರಾಬಾದ್ ತಲುಪಿದ್ದರು.

ಪ್ರಿಯಾಂಕಾ ನಂತರ ಈ ನಟ ಎಂಟ್ರಿ?
ಮೂಲಗಳ ಪ್ರಕಾರ ಪ್ರಿಯಾಂಕಾ ಚೋಪ್ರಾ ಮತ್ತು ಮಹೇಶ್ ಬಾಬು ಅವರ SSMB29 ನಲ್ಲಿ ಜಾನ್ ಅಬ್ರಹಾಂ ನಟಿಸಲಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಅವರನ್ನು ಕೈ ಬಿಡಲಾಗಿದೆ. ಅವರು ಮೊದಲ ಆಯ್ಕೆಯಾಗಿದ್ದರೂ ಆದರೆ ಕೊನೆ ಕ್ಷಣದಲ್ಲಿ ಸಿನಿಮಾದಿಂದ ಔಟ್ ಆಗಿದ್ದಾರೆ. ಪ್ರಿಯಾಂಕಾ ಚೋಪ್ರಾ ಕೂಡ ಜಾನ್ ಜೊತೆಗಿನ ಹಲವು ದೃಶ್ಯಗಳನ್ನು ಹೊಂದಿದ್ದು, ಹೈದರಾಬಾದ್ನಲ್ಲಿ ಮಾತ್ರ ಚಿತ್ರೀಕರಣ ನಡೆಯಲಿದೆ.
ಪ್ರಿಯಾಂಕಾ ಮತ್ತು ಮಹೇಶ್ ಬಾಬು ತಮ್ಮ ಪಾತ್ರಗಳ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಜಾನ್ ಶೀಘ್ರದಲ್ಲೇ ಅವರನ್ನು ಸೇರುವ ಸಾಧ್ಯತೆಯಿದೆ. ಮತ್ತೊಂದೆಡೆ, ಜಾನ್ ಕೂಡ ತಮ್ಮ ‘ದಿ ಡಿಪ್ಲೋಮ್ಯಾಟ್’ ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಚಲನಚಿತ್ರವು ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದ ಭಾರತೀಯ ಹುಡುಗಿಯನ್ನು ರಕ್ಷಿಸುವ ಕಾರ್ಯಾಚರಣೆಯ ಮೇಲೆ ಕೇಂದ್ರೀಕರಿಸುತ್ತದೆ. ಕುಮುದ್ ಮಿಶ್ರಾ, ಶರೀಬ್ ಹಶ್ಮಿ ಮತ್ತು ಅಶ್ವಥ್ ಭಟ್ ಅಭಿನಯದ ಈ ಚಿತ್ರ ಮಾರ್ಚ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಪ್ರಿಯಾಂಕಾ ರಾಜ್ಕುಮಾರ್ ರಾವ್ ಅವರೊಂದಿಗೆ ದಿ ವೈಟ್ ಟೈಗರ್ ನಂತರ ಯಾವುದೇ ಬಾಲಿವುಡ್ ಚಿತ್ರದಲ್ಲಿ ನಟಿಸಿರಲಿಲ್ಲ. ಈ ಚಲನಚಿತ್ರವು 2021 ರಲ್ಲಿ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಯಿತು. ವರದಿಗಳ ಪ್ರಕಾರ, ಪ್ರಿಯಾಂಕಾ ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ಜೀ ಲೇ ಜರಾ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ ಸಿಟಾಡೆಲ್ ಸೀಸನ್ 2ರಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ಳಲಿದ್ದಾರೆ.
ರಾಜಮೌಳಿ ಅವರ ಮುಂಬರುವ ಚಿತ್ರವು ವಿಶೇಷವಾದದ್ದು ಏಕೆ?
ಈ ಚಿತ್ರದ ಬಜೆಟ್ ಕೂಡ 1000 ಕೋಟಿ ಎಂದು ಹೇಳಲಾಗುತ್ತಿದೆ. ದೇಶ-ವಿದೇಶದ ಹಲವು ಸ್ಥಳಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯಲಿದೆ. ಚಿತ್ರೀಕರಣವೂ ಆಫ್ರಿಕಾದ ಕಾಡಿನಲ್ಲಿ ಕೂಡ ನಡೆಯಲಿದೆ. ವಿಎಫ್ಎಕ್ಸ್ ಮೂಲಕ ಕಾಡಿನ ಜಗತ್ತು ಮತ್ತು ಪ್ರಾಣಿಗಳನ್ನು ಚಿತ್ರದಲ್ಲಿ ತೋರಿಸಲಾಗುವುದು. ರಾಜಮೌಳಿ ಅವರ ಚಿತ್ರಗಳಲ್ಲಿ VFX ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ, ಇದರಿಂದಾಗಿ ಅವರ ಕಥೆ ಮತ್ತು ಚಿತ್ರವು ವಿಭಿನ್ನವಾಗಿರುತ್ತದೆ.