ಮೊದಲೆಲ್ಲಾ ಹೊಲ ಗದ್ದೆಗಳಲ್ಲಿ ದೃಷ್ಟಿ ಬೊಂಬೆ ಇಡುತ್ತಿದ್ದರು, ತಮ್ಮ ಬೆಳೆಗೆ ಯಾವುದೇ ಸಮಸ್ಯೆ ಆಗದೇ ಹೋಗಲಿ, ದೃಷ್ಟಿ ತಾಗದೇ ಹೋಗಲಿ ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿತ್ತು. ಮಡಕೆ ತಂದು, ಕಪ್ಪು ಬಣ್ಣ ಬಳಿದು, ವಿಚಿತ್ರವಾದ ಕಣ್ಣು ಮೂಗು ಇದನ್ನೆಲ್ಲ ಬರೆದು ದೃಷ್ಟಿ ಬೊಂಬೆಯಾಗಿ ಮಾಡಿ, ಹೊಲ ಗದ್ದೆಗಳಲ್ಲಿ ನೇತು ಹಾಕಲಾಗುತ್ತಿತ್ತು. ಹಲವು ವರ್ಷಗಳ ಕಾಲ ಇದನ್ನೆಲ್ಲಾ ನಾವು ನೋಡಿದ್ದೇವೆ. ಆದರೆ ಈಗ ಕಾಲ ಬದಲಾಗಿದೆ, ಟ್ರೆಂಡ್ ಬದಲಾಗಿದೆ. ದೃಷ್ಟಿ ಬೊಂಬೆ ವಿಷಯದಲ್ಲಿ ಕೂಡ ಈಗ ನಮ್ಮ ರೈತರು ಹೊಸತನ ತಂದಿದ್ದಾರೆ. ಅದರ ಬಗ್ಗೆ ಇಂದು ಪೂರ್ತಿ ಮಾಹಿತಿ ತಿಳಿಯೋಣ..

ಎಲ್ಲಾ ವಿಷಯದಲ್ಲೂ ಪ್ರಪಂಚ ಬದಲಾಗುತ್ತಿದೆ. ಹೊಸ ಟ್ರೆಂಡ್ ಗಳು ಸೃಷ್ಟಿ ಆಗುತ್ತಿದೆ, ಸೋಶಿಯಲ್ ಮೀಡಿಯಾ ಬಳಕೆ ಜಾಸ್ತಿಯಾದ ನಂತರ ಎಲ್ಲವೂ ಬದಲಾಗುತ್ತಿದೆ. ಜನರು ಹೊಸತನ, ಹೊಸ ಟ್ರೆಂಡ್ ಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಸಣ್ಣಪುಟ್ಟ ವಿಚಾರಗಳಲ್ಲಿ ಆಗುವ ಈ ಬದಲಾವಣೆ ಹೆಚ್ಚಾಗಿ ಸದ್ದು ಮಾಡುತ್ತಿದೆ ಎಂದರು ತಪ್ಪಲ್ಲ. ಈಗ ಎಲ್ಲಾ ಹಳ್ಳಿಗಳ ಕಡೆ ಸ್ಮಾರ್ಟ್ ಫೋನ್ ಬಂದಿದೆ, ಎಲ್ಲರೂ ಯೂಟ್ಯೂಬ್, ಇನ್ಸ್ಟಾಗ್ರಾಮ್, ಫೇಸ್ ಬುಕ್ ಇದೆಲ್ಲವನ್ನು ಕೂಡ ಬಳಕೆ ಮಾಡುತ್ತಾರೆ. ಹೀಗಿರುವಾಗ ಎಲ್ಲರೂ ತಾವು ಮಾಡುವ ಕೆಲಸಗಳ ಫೋಟೋ ತೆಗೆದು, ವಿಡಿಯೋ ಮಾಡಿ, ರೀಲ್ಸ್ ಪೋಸ್ಟ್ ಮಾಡುತ್ತಾರೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಇದೆಲ್ಲವೂ ಕಾಮನ್ ಆಗಿಬಿಟ್ಟಿದೆ. ಇನ್ನು ರೈತರು ಹೊಲ ಗದ್ದೆಗಳಲ್ಲಿ ಮಾಡುತ್ತಿರುವ ಕೆಲವು ಕೆಲಸಗಳು ಟ್ರೆಂಡ್ ಆಗಿದೆ. ಅದು ದೃಷ್ಟಿ ಬೊಂಬೆ ಕುರಿತ ವಿಷಯಗಳು. ದೃಷ್ಟಿ ಬೊಂಬೆಗಳನ್ನು ತಯಾರಿಸಿ ಇಡುವುದು ಬೆಳೆಗಳಿಗೆ ಯಾವುದೇ ಸಮಸ್ಯೆ ಆಗದೇ ಇರಲಿ ಎನ್ನುವ ಕಾರಣಕ್ಕೆ, ಮೊದಲೆಲ್ಲಾ ರೈತರು ತಾವೇ ಕೂತು ಮಡಿಕೆಗಳನ್ನು ಬಳಸಿ ದೃಷ್ಟಿ ಬೊಂಬೆ ತಯಾರಿಸುತ್ತಿದ್ದರು. ನಂತರ ಕಾಲ ಬದಲಾಯಿತು, ಈಗಂತೂ ಕೆಲವು ನಟಿಯರ ಫೋಟೋವನ್ನು ದೃಷ್ಟಿ ಬೊಂಬೆ ಆಗಿ ಇಡುವುದನ್ನು ಕಂಡಿದ್ದೇವೆ. ಕೆಲವು ಕಡೆ ಸನ್ನಿ ಲಿಯೋನ್ ಅವರ ಫೋಟೋವನ್ನು ದೃಷ್ಟಿ ಬೊಂಬೆ ಬದಲಾಗಿ ಇಡಲಾಗಿತ್ತು.

ಇದೆಲ್ಲವೂ ಒಂದು ಹೆಜ್ಜೆ ಮುಂದೆ ಹೋಗಿ, ಈಗ ಕಿಸ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡು, ಇಂದು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸದ್ದು ಮಾಡುತ್ತಿರುವ ಶ್ರೀಲೀಲಾ ಅವರ ಫೋಟೋವನ್ನು ಹಳ್ಳಿಯ ಗದ್ದೆಯ ಬಳಿ ದೃಷ್ಟಿ ಬೊಂಬೆಯ ರೀತಿ ಹಾಕಲಾಗಿದ್ದು, ಇದೀಗ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ಹರಿದಾಡುತ್ತಿದೆ, ಈಗ ಶ್ರೀಲೀಲಾ ಅವರು ಕನ್ನಡದಲ್ಲಿ ಸಿನಿಮಾ ಮಾಡುತ್ತಿಲ್ಲ, ಇವರು ತೆಲುಗಿನಲ್ಲಿ ಬ್ಯುಸಿ ಆಗಿದ್ದಾರೆ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ..ಆದರೆ ಇವರ ಫೋಟೋ ಹಾಕಿರೋದು ಕರ್ನಾಟಕದಲ್ಲಿ.
ಹೌದು, ಶ್ರೀಲೀಲಾ ಅವರ ಕ್ಯೂಟ್ ಆಗಿರುವ ಒಂದು ಫೋಟೋವನ್ನು ದೊಡ್ಡಬಳ್ಳಾಪುರ ಜಿಲ್ಲೆಯ ಹೊಸಹಳ್ಳಿ ಗ್ರಾಮದ ಗದ್ದೆಯೊಂದರ ಬಳಿ ನೋಡಬಹುದು. ಈ ರೀತಿ ಅವರ ಫೋಟೋವನ್ನು ನೋಡಬಹುದು. ಮೊದಲೆಲ್ಲ ಸಿನಿಮಾ ನಟಿಯರು ಎಂದರೆ ಅವರನ್ನು ಗೌರವದಿಂದ ಟ್ರೀಟ್ ಮಾಡುತ್ತಿದ್ದರು, ಕೆಲವರು ಪೂಜ್ಯ ಭಾವನೆ ಇಂದ ಕೂಡ ನೋಡುತ್ತಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ. ನಟಿಯರ ಫೋಟೋ ಈ ರೀತಿ ದೃಷ್ಟಿ ಬೊಂಬೆಯ ರೂಪದಲ್ಲಿ ಬಂದಿರುವುದು ನಿಜಕ್ಕೂ ಆಶ್ಚರ್ಯ ತರುವಂಥ ವಿಷಯ. ಮುಂದಿನ ದಿನಗಳಲ್ಲಿ ಬೇರೆ ಯಾವ ನಟಿಯ ಫೋಟೋ ಈ ರೀತಿ ಬರುತ್ತದೆ ಎಂದು ಕಾದು ನೋಡಬೇಕಿದೆ.