ಸಿನಿಮಾ ರಂಗದಲ್ಲಿ ಸೂಪರ್ ಸ್ಟಾರ್ ಎಂಬ ಪಟ್ಟ ಗಿಟ್ಟಿಸಿಕೊಂಡ ನಟ ರಜನಿಕಾಂತ್ ಅವರಿಗೆ ಸದ್ಯ ವಯಸ್ಸು 72 ಆದರೂ ಕೂಡ ಅವರಿಗಿರುವ ಪ್ಯಾನ್ ಕ್ರೇಜ಼್ ಒಂದಿಂಚೂ ಕಡಿಮೆಯಾಗಿಲ್ಲ. ಇದೀಗ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೇ ವೇಳೆ ಈ ಚಿತ್ರಕ್ಕಾಗಿ ರಜನಿಕಾಂತ್, ನಟ ಶಿವರಾಜ್ ಕುಮಾರ್ ಪಡೆದಿರುವ ಸಂಭಾವನೆ ಭಾರೀ ಚರ್ಚೆಯಲ್ಲಿದೆ. ಈ ಸಿನಿಮಾದ ನಟರು ಪಡೆದಿರುವ ಸಂಭಾವನೆ ಎಷ್ಟು ಎಂಬ ವಿವರ ಇಲ್ಲಿದೆ ನೋಡಿ.

ಆಗಸ್ಟ್ 10ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ಜೈಲರ್ ಚಿತ್ರ ಸಾಕಷ್ಟು ಹೈಪ್ ಕ್ರೀಯೇಟ್ ಮಾಡಿದೆ. ಇದೊಂದು ಬಿಗ್ ಬಜೆಟ್ ಚಿತ್ರವಾಗಿದ್ದು, ಸಿನಿಮಾದಲ್ಲಿ ರಜನಿ ಅವರಿಗೆ ರಮ್ಯಾ ಕೃಷ್ಣಾ ಜೋಡಿಯಾಗಿದ್ದಾರೆ. ಸದ್ಯ, ಈ ಸಿನಿಮಾದ ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದ್ದು, ಸೂಪರ್ ಸ್ಟಾರ್ ಈ ಚಿತ್ರಕ್ಕಾಗಿ ಬರೋಬ್ಬರಿ 100 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದಿನ ‘ಪೇಟಾ’ ಸಿನಿಮಾಗೆ ರಜನಿ 90 ಕೋಟಿ ಸಂಭಾವನೆ ಪಡೆದಿದ್ದು, ಇದೀಗ ರಜನಿ ಸಂಭಾವನೆ ‘ಜೈಲರ್’ ಮೂಲಕ 100 ಕೋಟಿ ಗಡಿ ದಾಟಿದೆ.
ಇನ್ನು ಜೈಲರ್ ಸಿನಿಮಾದ ನಿರ್ದೇಶ ನೆಲ್ಸನ್ ಅವರು ಕನ್ನಡ, ಮಲೆಯಾಳಂ, ಹಿಂದಿ ಹಾಗೂ ತೆಲುಗು ಚಿತ್ರರಂಗದ ಸ್ಟಾರ್ ನಟರನ್ನು ಒಟ್ಟಿಗೆ ಸೇರಿಸಿದ್ದಾರೆ. ಈ ಸಿನಿಮಾದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ನಟಿಸಿದ್ದು 4 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಇನ್ನು ಮೋಹನ್ ಲಾಲ್ 8 ಕೋಟಿ, ರಮ್ಯಾ ಕೃಷ್ಣ 80 ಲಕ್ಷ, ಬಾಲಿವುಡ್ ನಟ ಜಾಕಿಶ್ರಾಫ್ 4 ಕೋಟಿ ಹಾಗೂ ತಮಿಳಿನ ಹಾಸ್ಯ ನಟ ಯೋಗಿ ಬಾಬು 1 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.