ಭಾರತೀಯ ಆಹಾರವನ್ನು ಬಹಳ ಇಷ್ಟಪಟ್ಟು ಸೇವಿಸುವ ಮಂದಿ ಪಂಚದಾದ್ಯಂತ ಇದ್ದಾರೆ. ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋದಲ್ಲೂ ಇದೇ ವಿಷಯ ಮತ್ತೆ ಚರ್ಚೆಯಾಗುತ್ತಿದೆ. ಹೌದು, ದಕ್ಷಿಣ ಕೊರಿಯಾದ ಮಹಿಳೆಯೊಬ್ಬರು ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಜಲೇಬಿಯನ್ನು ತಿಂದಿರುವ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋ ನೋಡಿದರೆ ಅವರು ಅದನ್ನು ಎಷ್ಟು ಇಷ್ಟಪಟ್ಟಿದ್ದಾರೆ ಎಂಬುದು ಗೊತ್ತಾಗುತ್ತದೆ. ಈ ಮಹಿಳೆಯ ಹೆಸರು ಕೆಲ್ಲಿ. ಅವರು ಭಾರತದಲ್ಲಿ ತಮ್ಮ ಅನುಭವಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚಿನ ವಿಡಿಯೋದಲ್ಲಿಯೂ ಕೆಲ್ಲಿ ಜಿಲೇಬಿ ಬಗ್ಗೆ ಹೊಗಳಿದ್ದಾರೆ.
ವಿಡಿಯೋ ಯಾಕೆ ವೈರಲ್ ಆಗುತ್ತಿದೆ?
ಈ ವಿಡಿಯೋ ಪುಣೆಯಲ್ಲಿ ತೆಗೆದಿರುವುದು ಎಂಬುದನ್ನು ನಿಮಗೆ ನೋಡಿದರೆ ತಿಳಿಯುತ್ತದೆ. ಇದನ್ನು ದಕ್ಷಿಣ ಕೊರಿಯಾದ ಕೆಲ್ಲಿ ಎಂಬುವವರು ಪೋಸ್ಟ್ ಮಾಡಿದ್ದಾರೆ. ಕೆಲ್ಲಿ ಭಾರತದಲ್ಲಿ ಸುತ್ತಾಡುತ್ತಾ ವಿಭಿನ್ನ ಅನುಭವಗಳನ್ನು ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅವರು ಮೊದಲ ಬಾರಿಗೆ ವಡಾ ಪಾವ್ ಅನ್ನು ಪ್ರಯತ್ನಿಸಿದ್ದರು. ಅದಕ್ಕೆ 10/10 ರೇಟ್ ಮಾಡಿದ್ದರು. ಅವರ ಆ ವಿಡಿಯೋ ಮೊದಲು ವೈರಲ್ ಆಗಿತ್ತು. ಅಂದಹಾಗೆ ತನ್ನ ಇತ್ತೀಚಿನ ರೀಲ್ಸ್ನಲ್ಲಿ ಕೆಲ್ಲಿ ಜನಪ್ರಿಯ ಭಾರತೀಯ ಸಿಹಿ ಜಲೇಬಿಯನ್ನು ಪ್ರಯತ್ನಿಸಿದ್ದಾರೆ.
ಕೆಲ್ಲಿ ತನ್ನ ಪ್ರತಿಕ್ರಿಯೆಯನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಅದನ್ನು ನಿಜವಾಗಿಯೂ ಇಷ್ಟಪಟ್ಟಿರುವುದಾಗಿ ಬಹಿರಂಗಪಡಿಸಿದರು. “ನನಗೆ ಜಿಲೇಬಿ ಎಂದರೆ ತುಂಬಾ ಇಷ್ಟ. ವಾಹ್, ಇದು ನಿಜವಾಗಿಯೂ ಅದ್ಭುತವಾಗಿದೆ. ಇದು ಇಷ್ಟು ಚೆನ್ನಾಗಿರುತ್ತದೆ ಎಂದು ನಾನು ಎಂದಿಗೂ ಯೋಚಿಸರಲಿಲ್ಲ” ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಲ್ಲಿ ನಾವು ಕೆಲ್ಲಿ ಅವರ ವಿಡಿಯೋವನ್ನು ಹಂಚಿಕೊಂಡಿದ್ದು ಅದನ್ನು ನೀವು ವೀಕ್ಷಿಸಬಹುದು.
ವಿಡಿಯೋಗೆ ಬಂದ ತಮಾಷೆಯ ಕಾಮೆಂಟ್ಗಳು
ಈ ವಿಡಿಯೋ ಕೆಲ ಸಮಯದ ಹಿಂದೆ ಅಪ್ಲೋಡ್ ಆಗಿದ್ದು, ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಸದ್ಯ 49000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋಗೆ ಹಲವು ಫನ್ನಿ ಕಾಮೆಂಟ್ಗಳು ಕೂಡ ಬಂದಿವೆ. ಕೆಲ್ಲಿ ಜಿಲೇಬಿ ತಿನ್ನುವುದನ್ನು ನೋಡಿದ ಜನರು ಕಾಮೆಂಟ್ ವಿಭಾಗದಲ್ಲಿ “ಜಿಲೇಬಿಯನ್ನು ತಯಾರಿಸುವ ಈ ಕಲೆಯನ್ನು ನಿಮ್ಮ ದೇಶವಾದ ದಕ್ಷಿಣ ಕೊರಿಯಾಕ್ಕೆ ಕೊಂಡೊಯ್ಯಿರಿ” ಎಂದರೆ ಮತ್ತೋರ್ವ ಬಳಕೆದಾರರು ಕೆಲ್ಲಿಯನ್ನು ದೆಹಲಿಗೆ ಆಹ್ವಾನಿಸಿ, ಇಂಡಿಯಾ ಗೇಟ್ ಬಳಿ ನಿಮ್ಮೊಂದಿಗೆ ಊಟ ಮಾಡಲು ಬಯಸುತ್ತೇನೆ ಎಂದಿದ್ದಾರೆ. ನಾವೇನೂ ಕಡಿಮೆಯಿಲ್ಲ ಎಂಬಂತೆ ಹರಿಯಾಣ ಬಳಕೆದಾರರು ಒಮ್ಮೆ ಹರಿಯಾಣಕ್ಕೆ ಬನ್ನಿ ಮತ್ತು ದಬಾಂಗ್ ಹರ್ಯಾನ್ವಿ ಸಂಸ್ಕೃತಿ ಎಷ್ಟು ಮುಗ್ಧ ಮತ್ತು ಶುದ್ಧವಾಗಿದೆ ಎಂದು ನೋಡಿ ಎಂದು ಹೇಳಿದ್ದಾರೆ.