ಸೋಷಿಯಲ್ ಮೀಡಿಯಾ ಇಂದ ಭಾರಿ ಫೇಮಸ್ ಆದವರಲ್ಲಿ ಸೋನು ಶ್ರೀನಿವಾಸ್ ಗೌಡ ಸಹ ಒಬ್ಬರು. ಟಿಕ್ ಟಾಕ್ ಇದ್ದ ವೇಳೆ ಟಿಕ್ ಟಾಕ್ ಗಳ ಮೂಲಕ ಒಂದು ಮಟ್ಟಕ್ಕೆ ವೈರಲ್ ಆಗಿದ್ದ ಸೋನು ಶ್ರೀನಿವಾಸ್ ಗೌಡ, ಬಳಿಕ ಇನ್ಸ್ಟಾಗ್ರಾಮ್ ರೀಲ್ಸ್ ಇಂದ ಸಿಕ್ಕಾಪಟ್ಟೆ ವೈರಲ್ ಆಗಿದ್ದರು, ಇವರು ಟ್ರೋಲ್ ಆಗಿದ್ದೇ ಹೆಚ್ಚು ಎಂದು ಹೇಳಿದರು ಸಹ ತಪ್ಪಲ್ಲ. ಈಗಲೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸೋನು ಶ್ರೀನಿವಾಸ್ ಗೌಡ ಇದೀಗ ಮಂತ್ರಾಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ವರ್ಷ ಶುರುವಾಗುವ ಮೊದಲು ಸೋನು ಶ್ರೀನಿವಾಸ್ ಗೌಡ ದೇವರ ದರ್ಶನಕ್ಕೆ ಹೋಗಿದ್ದಾರೆ..

ಹೌದು, ಮಂತ್ರಾಲಯಕ್ಕೆ ರಾಯರ ದರ್ಶನ ಪಡೆದಿದ್ದಾರೆ ಸೋನು. ಮಂತ್ರಾಲಯಕ್ಕೆ ಹೋಗಿರುವ ಫೋಟೋಸ್ ಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೊಸ ವರ್ಷದಿಂದ ಜೀವನ ಇನ್ನು ಒಳ್ಳೆಯ ರೀತಿ ನಡೆಯಲಿ, ಎಲ್ಲವೂ ಚೆನ್ನಾಗಾಗಲಿ ಎಂದು ದೇವರಲ್ಲಿ ಬೇಡಿಕೊಂಡು, ಆಶೀರ್ವಾದ ಪಡೆಯುವುದಕ್ಕೆ ಹೋಗಿದ್ದಾರೆ ಸೋನು ಗೌಡ. ಇವರ ಟೆಂಪಲ್ ರನ್ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಒಳ್ಳೆದಾಗ್ಲಿ ಅಂತಿದ್ದಾರೆ ಫ್ಯಾನ್ಸ್. ಹಾಗೆಯೇ ಸೋನು ಅವರ ಹಳೆಯ ಫೋಟೋಸ್ ಹಾಗೂ ವಿಡಿಯೋಗಳು ರೀಲ್ಸ್ ಗಳು ಸಹ ಆಗಾಗ ವೈರಲ್ ಆಗುತ್ತದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಸೋನು ಶ್ರೀನಿವಾಸ್ ಗೌಡ ಆಗಾಗ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಕೂಡ ಭೇಟಿ ನೀಡುತ್ತಾರೆ. ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ಬರುತ್ತಾರೆ. ಆಗಾಗ ಟೆಂಪಲ್ ರನ್ ಮಾಡುತ್ತಲೇ ಇರುತ್ತಾರೆ ಎಂದು ಹೇಳಬಹುದು. ಸೋನು ಶ್ರೀನಿವಾಸ್ ಗೌಡ ಸೋಷಿಯಲ್ ಮೀಡಿಯಾ ಇಂದ ವೈರಲ್ ಆಗಿರುವ ವ್ಯಕ್ತಿ, ಇವರು ಹೆಚ್ಚು ಟ್ರೋಲ್ ಆಗೋ ಮೂಲಕವೇ ಫೇಮಸ್ ಆಗಿ, ಬಿಗ್ ಬಾಸ್ ವರೆಗು ಹೋದ ಹುಡುಗಿ. ಬಿಗ್ ಬಾಸ್ ಕನ್ನಡ ಓಟಿಟಿ ಮೊದಲ ಸೀಸನ್ ನಲ್ಲಿ ಸ್ಪರ್ಧಿಯಾಗಿ ಹೋಗಿದ್ದರು ಸೋನು, ಬಿಗ್ ಬಾಸ್ ಮನೆಯೊಳಗೆ ಜಗಳ ಆಡುತ್ತಾ ಹೆಚ್ಚು ಕಂಟೆಂಟ್ ಕೊಡುತ್ತಿದ್ದರು ಎಂದು ಹೇಳಿದರು ತಪ್ಪಲ್ಲ. ರಾಕೇಶ್ ಅಡಿಗ ಅವರ ಜೊತೆಗೆ ಹೆಚ್ಚು ಕ್ಲೋಸ್ ಆಗಿದ್ದರು.
ರಾಕೇಶ್ ಸೋನು ಬೆಸ್ಟ್ ಫ್ರೆಂಡ್ಸ್ ಆಗಿದ್ದರು, ಈಗಲೂ ಸಹ ಅವರಿಬ್ಬರ ಫ್ರೆಂಡ್ಶಿಪ್ ಹಾಗೆ ಇದೆ. ಸೋನು ಗೌಡ ಬಿಗ್ ಬಾಸ್ ಓಟಿಟಿ ಫಿನಾಲೆವರೆಗು ತಲುಪಿದರು, ಆದರೆ ಫಿನಾಲೆಯಲ್ಲಿ ಗೆದ್ದು ಟಿವಿ ಸೀಸನ್ ಗೆ ಬರಲು ಸಾಧ್ಯ ಆಗಲಿಲ್ಲ. ಆದರೆ ಸೋನು ಶ್ರೀನಿವಾಸ್ ಗೌಡಗೆ ಬಿಗ್ ಬಾಸ್ ಇಂದ ಹೆಚ್ಚು ಜನಪ್ರಿಯತೆ ಸಿಕ್ಕಿದ್ದಂತೂ ನಿಜ. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುವುದು ಸಹ ಜಾಸ್ತಿಯೇ ಆಯಿತು. ಇವರು ಹೊರದೇಶಕ್ಕೆ ಹೋದರು, ಏನೇ ಮಾಡಿದರು ಟ್ರೋಲ್ ಮಾಡುವವರು ಮಾಡುತ್ತಲೇ ಇರುತ್ತಾರೆ. ಸೋನು ಶ್ರೀನಿವಾಸ್ ಗೌಡ ಮಾಡಿದ ಒಂದು ಕೆಲಸಕ್ಕೆ ಮೆಚ್ಚುಗೆ ಸಹ ವ್ಯಕ್ತವಾಗಿತ್ತು.
ಸೋನು ಮಾಡಿದ ಆ ಒಂದು ಒಳ್ಳೆಯ ಕೆಲಸ ಏನು ಎಂದರೆ, ಬಡ ಕುಟುಂಬದಲ್ಲಿ ಜನಿಸಿದ, ಒಂದು ಪುಟ್ಟ ಹುಡುಗಿಯನ್ನು ದತ್ತು ಪಡೆದು, ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ಮೆಚ್ಚಿಗೆ ಸೂಚಿಸುವ ವಿಷಯ. ಆ ಹುಡುಗಿಯ್ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿರುವ ಸೋನು, ಆಕೆಯನ್ನು ಒಳ್ಳೇ ಸ್ಕೂಲ್ ಗೆ ಸೇರಿಸಿ ಓದಿಸುತ್ತಿದ್ದಾರೆ. ಹಲವು ಕಾರಣಕ್ಕೆ ಸೋನು ಶ್ರೀನಿವಾಸ್ ಗೌಡರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದರು ಸಹ, ಈ ಒಂದು ಒಳ್ಳೆಯ ಕೆಲಸ ಮಾಡಿರೋದಕ್ಕೆ, ಹೀಗೆ ಇರಿ ಎಂದು ನೆಟ್ಟಿಗರು ಸೋನು ಗೆ ಸಜೆಶನ್ ನೀಡಿದ್ದರು. ಒಟ್ಟಿನಲ್ಲಿ ಮುಂದಿನ ವರ್ಷ ಇವರಿಗೆ ಚೆನ್ನಾಗಿರಲಿ ಎಂದು ಹಾರೈಸೋಣ.