ಟಿಕ್ ಟಾಕ್, ರೀಲ್ಸ್ ಹಾಗೂ ಬಿಗ್ ಬಾಸ್ ಮೂಲಕ ನಾಡಿನಾದ್ಯಂತ ಸುದ್ದಿಯಾಗಿ, ಬಳಿಕ ಸಾಕಷ್ಟು ಟ್ರೋಲ್ ಆಗಿದ್ದ ಸೋನು ಗೌಡ ಮತ್ತೆ ಹಾಟ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಚಿಕ್ಕ ಡ್ರೆಸ್ ಧರಿಸಿ ಕೈಯಿಂದ ಮೈ ಮುಚ್ಚಿಕೊಂಡಿದ್ದಾರೆ. ಬಿಕಿನಿ, ಬೆಡ್ ರೂಂಫೋಟೋ ಬಳಿಕ ಸೋನು ಹೊಸ ಫೋಟೋಸ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಫೋಟೋ ಕಂಡ ನೆಟ್ಟಿಗರು ಈಕೆ ‘ಮತ್ಸ್ಯ ಕನ್ಯೆ ಎನ್ನುತ್ತಿದ್ದಾರೆ’.


ಆಕಾಶ ನೀಲಿ ಡ್ರೆಸ್ ಧರಿಸಿ ಸೋನು ಮಾಲ್ಡೀವ್ಸ್ನಲ್ಲಿ ಮಿಂಚಿದ್ದಾರೆ. ಎಂದಿನಂತೆ ಮತ್ತೆ ಹಾಟ್ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಹೊಸ ಲುಕ್ನಲ್ಲೂ ಸೋನು ಮೋಡಿ ಮಾಡ್ತಿದ್ದಾರೆ. ಶೇರ್ ಮಾಡಿರುವ ಫೋಟೋಗಳಲ್ಲಿ ಸೋನು ಗೌಡ ಸಖತ್ ಆಗಿ ಕಾಣುತ್ತಿದ್ದು, ನೆಟ್ಟಿಗರು ‘ಈಕೆ ಮತ್ಸ್ಯ ಕನ್ಯೆ’ ಎಂದು ಕೊಂಡಾಡಿದ್ದಾರೆ. ಟ್ರೋಲಿಗರ ಕಾಟದಿಂದ ಬೇಸತ್ತ ಸೋನು ಇತ್ತೀಚೆಗಷ್ಟೇ ಗಳಗಳನೆ ಅತ್ತಿದ್ದರು. ಆದರೆ ಇದೀಗ ಟ್ರೋಲಿಗರಿಗೆ ಖ್ಯಾರೆ ಎನ್ನದ ವೈರಲ್ ಹುಡುಗಿ ಮಾಲ್ಡೀವ್ಸ್ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.
ತಿಂಗಳ ಹಿಂದೆ ಸೋನು ಖಾಸಗಿ ಫೋಟೋ- ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಹಸಿಬಿಸಿ ದೃಶ್ಯಗಳನ್ನು ನೋಡಿ ಪಡ್ಡೆ ಹುಡುಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಜೊತೆಗೆ ಮೊನ್ನೆಯಷ್ಟೇ ಸೋನು ಹೊಸ ವೀಡಿಯೋವೊಂದನ್ನು ಶೇರ್ ಮಾಡಿದ್ದರು, ಹುಡುಗಿಯರಿಗೆ ಮಾತ್ರ ಹುಡುಗರು ನೋಡಬೇಡ ಎಂದು ಹಾಕಿ ಕುತೂಹಲ ಹೆಚ್ಚಿಸಿದ್ದರು. ಆದರೆ ಈ ಎಲ್ಲವನ್ನು ಬಿಟ್ಟು ಸೋನು ಶ್ರೀನಿವಾಸ್ ಗೌಡ ದೂರದ ಮಾಲ್ಡೀವ್ಸ್ನಲ್ಲಿ ಏಕಾಂಗಿಯಾಗಿ ಎಂಜಾಯ್ ಮಾಡುತ್ತಿದ್ದಾರೆ.