ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋನು ಗೌಡ ಒಂದರ ಮೇಲೊಂದು ಫೋಟೋಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. ಆ ಫೋಟೋಗಳು ಕೂಡ ಸಖತ್ ವೈರಲ್ ಆಗುತ್ತಿವೆ. ಸದ್ಯ, ಮಾಲ್ಡೀವ್ಸ್ನಲ್ಲಿ ಎಂಜಾಯ್ ಮಾಡುತ್ತಿರುವ ಸೋನು ಗೌಡ ಇದೀಗ ಹಳದಿ ಸಾರಿ ಉಟ್ಟು ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿಕೊಂಡು, ಫೋಟೋ ಶೇರ್ ಮಾಡಿದ್ದಾರೆ. ವೈರಲ್ ಹುಡುಗಿಯ ಹೊಸ ಫೋಟೋಗಳನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.




ಮಾಲ್ಡೀವ್ಸ್ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿರುವ ಸೋನು ಹಲವಾರು ಫೋಟೋ್ಳನ್ನು ಜೊತೆಗೆ ಒಳ ಉಡುಪಿನ ಫೋಟೋ ಶೇರ್ ಮಾಡಿ ವಿಚಿತ್ರ ಪೋಸ್ ಕೊಟ್ಟಿದ್ದು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ಸೌಂಡ್ ಮಾಡಿತ್ತು. ಟ್ರೋಲರ್ ಗಳಿಗೆ ಕ್ಯಾರೆ ಎನ್ನದ ಸೋನು ಇದೀಗ ತಮಗೆ ಬೇಕಾದಂತೆ ಫೋಟೋಶೂಟ್ ಮಾಡಿಸಿಕೊಳ್ಳುತ್ತಾ, ಹಸಿಬಿಸಿ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಜೊತೆಗೆ ಈ ಫೋಟೋಗಳು ಲಕ್ಷಾಂತರ ವೀಕ್ಷಣೆ ಪಡೆಯುತ್ತಿದೆ.
ಸದ್ಯ, ಸೋನು ಗೌಡ ಹಂಚಿಕೊಂಡಿರುವ ಹಳದಿ ಸಾರಿಯ ಬೋಲ್ಡ್ ಫೋಟೋಗಳು ಸಕ್ಕತ್ ವೈರಲ್ ಆಗುತ್ತಿವೆ. ಹಳದಿ ಸಾರಿ ತೊಟ್ಟಿರುವ ಸೋನು ಬೀಚ್ ನಲ್ಲಿ ಹಾಟ್ ಹಾಟ್ ಆಗಿ ಕ್ಯಾಮರಾಗೆ ಫೋಸ್ ಕೊಟ್ಟಿದ್ದಾರೆ. ಜೊತೆಗೆ ಅದೇ ಸಾರಿಯಲ್ಲಿ ಮಲಗಿ ಫೋಟೋಶೂಟ್ ನಡೆಸಿದ್ದಾರೆ. ಸೋಮ ಹೊಸ ಅವತಾರ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುವ ಈ ವೈರಲ್ ಹುಡುಗಿ ಇದೀಗ, ಸಾರಿಯಲ್ಲಿ ಕಾಣಿಸಿಕೊಂಡಿದ್ದು ಸದ್ದು ಮಾಡುತ್ತಿದ್ದಾರೆ.