ಬಿಗ್ ಬಾಸ್ ಮನೆ ಪ್ರಾರಂಭದಿಂದಲೂ ಹಲವಾರು ಟ್ವಿಸ್ಟ್ ಗಳು ಮತ್ತು ಟರ್ನಿಂಗ್ಗಳನ್ನು ಒಳಗೊಂಡಿದ್ದು ಕುತೂಹಲಕಾರಿಯಾಗಿ ಮೂಡಿ ಬರುತ್ತಿದೆ. ಸ್ಪರ್ಧಿಗಳು ಗೆಲುವಿನ ತಾವಕದಿಂದಾಗಿ ತಾಳ್ಮೆಯನ್ನು ಕಳೆದುಕೊಂಡು ಒಬ್ಬರಿಗೊಬ್ಬರು ಕೂಗಾಡತ್ತಾ ತಿರುಚಾಡುತ್ತಾ ಜಗಳವಾಡುತ್ತಿದ್ದಾರೆ. ರಕ್ಷಿತಾ ಶೆಟ್ಟಿಯ ಜೊತೆಯಲ್ಲಿ ಅಶ್ವಿನಿ ಗೌಡ ಮತ್ತು ಜಾನ್ವಿ ಜಗಳವಾಡಿ ಸಮಾಧಾನ ಆಗಿರುವುದು ಮಾಸುವುದಕ್ಕೆ ಮುಂಚೆಯೇ ಕಾಕ್ರೋಚ್ ಸುಧಿ ಕೆಲವು ಬೇಡವಾದ ಕೆಟ್ಟ ಪದಗಳನ್ನು ಬಳಸುವ ಮೂಲಕ ಪೀಕಲಾಟಕ್ಕೆ ಸಿಲುಕಿಕೊಂಡಿದ್ದಾರೆ. ಸ್ಪರ್ಧೆಗಳು ಎಷ್ಟೇ ಪ್ರಯತ್ನ ಪಟ್ಟರು ಕೂಡ ಒಂದೇ ಸಮನೆ ಜಗಳವಾಡುತ್ತಾ ಬಯ್ಯುವುದನ್ನು ಮುಂದುವರೆಸಿದರು.

ರಕ್ಷಿತಾ ಶೆಟ್ಟಿ ಮನೆ ಒಳಗೆ ಕಾಲಿಟ್ಟಾಗಿನಿಂದ ಚಿನ್ನ ಕಂದ ಎಂದು ತಮ್ಮ ಪ್ರೀತಿಯ ಬೇಳೆ ಬೇಯಿಸಿಕೊಳ್ಳಲು ಅವಳನ್ನು ತಮ್ಮ ಪರವಾಗಿ ಸಿಕೊಂಡು ನಾಟಕ ಮಾಡಿದ ಅಶ್ವಿನಿ ಗೌಡ ಮತ್ತು ಜಾನ್ವಿ. ಅವರ ನಾಟಕವನ್ನು ಅರಿತ ರಕ್ಷಿತಾ, ಅಶ್ವಿನಿ ಗೌಡ ವಿರುದ್ಧ ತಿರುಗಿ ಬಿದ್ದಳು. ಇದರಿಂದ ಸಮಯಕ್ಕಾಗಿ ಕಾಯುತ್ತಿದ್ದ , ವಿಚಾರವನ್ನು ತೆಗೆದುಕೊಂಡು ಅವಳ ಮೇಲೆ ಬೇಡವಾದ ಶಬ್ದಗಳನ್ನು ಬಳಸುವ ಮೂಲಕ ಜಗಳವಾಡಿದರು. ಈ ವಿಚಾರಕ್ಕೆ ಸುದೀಪ್ ರವರ ಬುದ್ಧಿ ಹೇಳಿದ ಮೇಲೆ ಕ್ಷಮೆಯನ್ನು ಕೂಡ ಕೇಳಿದರು. ಆದರೂ ಬೂದಿ ಮುಚ್ಚಿದ ಕೆಂಡದಂತೆ ಅವರ ಕೆಟ್ಟ ಗುಣ ಅವರಲ್ಲಿಯೇ ಆಗೆಯೇ ಇದೆ ಅದು ಮಾತ್ರ ಬದಲಾಗಿಲ್ಲ.

ಮನೆಯಲ್ಲಿ ಸ್ವಚ್ಛತೆ ಮಾಡುವ ವಿಚಾರದಲ್ಲಿ ಎಲ್ಲರೂ ಮಾತನಾಡುತ್ತಿರುವ ಸಂದರ್ಭದಲ್ಲಿ ಎಲ್ಲರಿಗೂ ಒಂದೊಂದು ಜವಾಬ್ದಾರಿಗಳನ್ನು ಸುಧಿ ಯವರು ನೀಡುತ್ತಾರೆ. ಹಾಗೆಯೇ ರಕ್ಷಿತಾ ಶೆಟ್ಟಿಗೂ ಕೂಡ ಜವಾಬ್ದಾರಿ ನೀಡಲಾಗುತ್ತದೆ ಅದನ್ನ ರಕ್ಷಿತಾ ಶೆಟ್ಟಿ , ನಿರ್ವಹಿಸಲು ಒಪ್ಪಿಕೊಳ್ಳುತ್ತಾರೆ. ಮಧ್ಯದಲ್ಲಿ ರಕ್ಷಿತಾಳ ಹೆಸರನ್ನು ತರುವ ಮೂಲಕ ಎರಡು ಮೂರು ಬಾರಿ ಕೆಟ್ಟ ಪದವನ್ನು ಬಳಸಿದ್ದಾರೆ ಆದರೆ ಆ ಪದ ರಕ್ಷಿತಾ ಅವರಿಗೆ ಕೇಳಿಸಿಲ್ಲ. ಹೀಗಾಗಿ ಆ ಮೀಟಿಂಗ್ ನಿಂದ ರಕ್ಷಿತಾ ಎದ್ದು ಹೋಗಿದ್ದಾರೆ. ಕೇಳಿಸಿದ್ದರೆ ದೊಡ್ಡ ಯುದ್ಧವೇ ಆಗುತ್ತಿತ್ತು. ಮನೆಯಲ್ಲಿ ಯಾವುದೇ ರೀತಿಯ ಜಗಳಗಳು ವಾದಗಳು ಏನೇ ಆದರೂ ಹುಡುಗಿಯ ಮೇಲೆ ಆ ರೀತಿಯ ಪದಬಳಕೆ ಒಳ್ಳೆಯದಲ್ಲ.
ಇದನ್ನೆಲ್ಲಾ ಗಮನಿಸಿದ ಧ್ರುವಂತ್ ರಕ್ಷಿತಾಳನ್ನು ಕರೆತರುತ್ತಾರೆ ಆ ಸಂದರ್ಭದಲ್ಲಿ ಏಕಾಏಕಿಯಾಗಿ ರಕ್ಷಿತಾಳ ವಿರುದ್ಧ ಹೋಗಾಡ ತೊಡಗುತ್ತಾರೆ. ನನ್ನ ಲೋಟ ಕಾಣುತ್ತಿಲ್ಲ ಒಂದು ವಾರದಿಂದ ಅದನ್ನ ಯಾರೋ ಬಚ್ಚಿಟ್ಟಿದ್ದಾರೆ. ಯಾರೋ ಅವಳು ನೆನ್ನೆ ಮೊನ್ನೆ ಬಂದ ಸೆಡೆ ನನ್ನ ಬಗ್ಗೆ ಮಾತನಾಡುತ್ತಾಳೆ ಎಂದು ಐದು ಆರು ಸಾರಿ ಮಾತನಾಡಿದ್ದಾರೆ.
ಅವಳೊಬ್ಬಳೇ ಕಿಲಾಡಿನ ನೀವು ಯಾರು ಇದರ ಮಧ್ಯ ಬರಬೇಡಿ ಬಂದರೆ ನಾಲಿಗೆ ಸೀಳಿ ಬಿಡುತ್ತೇನೆ. ನನಗೆ ಮರ್ಯಾದೆ ಕೊಟ್ಟರೆ ನಾನು ಮರ್ಯಾದೆ ಕೊಡುತ್ತೇನೆ. ಎಂಬುದಾಗಿ ದುರಂಕಾರದಿಂದ ಮಾತನಾಡಿ ಎದ್ದು ಹೋಗುತ್ತಾರೆ. ಚಿಕ್ಕ ಹುಡುಗಿಗೆ ಈ ರೀತಿಯಾಗಿ ಮಾತನಾಡಬಾರದಿತ್ತು ಎಂದು ಗಿಲ್ಲಿ ನಟ ಹೇಳಿದಾಗ ಇದು ನಮ್ಮ ಕಡೆ ಮಾತನಾಡುವ ಸಾಮಾನ್ಯ ಭಾಷೆ ಎಂದು ಹೇಳಿ ತಮ್ಮ ಮಾತನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಈ ವಿಚಾರಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರಕ್ಕೆ ಕಿಚ್ಚ ಸುದೀಪ್ ಈ ವಾರ ಯಾವ ರೀತಿ ತರಾಟೆ ತೆಗೆದುಕೊಂಡು ಪಾಠ ಮಾಡುತ್ತಾರೋ ಕಾದು ನೋಡಬೇಕು.



