ಇದು ಬೇಸಿಗೆ ಸಮಯದಲ್ಲಿ ಕಾಣಸಿಗುತ್ತದೆ. ಯಾವುದೇ ನಾಗ ರೂಪವಲ್ಲ. ದೇಹದಲ್ಲಿ ಉಂಟಾದ ಸೋಂಕು ಎಂದು ಹೇಳಬಹುದು. ಇದು ನರ ದೋಷವನ್ನು ಉಂಟುಮಾಡುತ್ತದೆ. ಇದು ನೀರು ಗುಳ್ಳೆಯ ರೀತಿಯಲ್ಲಿ ದೇಹದಲ್ಲಿ ಕಾಣಿಸಿತ್ತದೆ. ಆ ಕಾಣಿಸಿಕೊಂಡ ಸ್ಥಳದಲ್ಲಿ ಬರೀ ನೋವು ನೆವೆ ಕಾಣಿಸಿಕೊಳ್ಳುತ್ತದೆ. ದೇಹದ ಒಂದು ಅಂಗವನ್ನು ಆವರಿಸಿದರೆ ಸಂಪೂರ್ಣ ಭಾಗಗಳಿಗೂ ಹರಡುತ್ತದೆ. ಈ ಉಷ್ಣತೆಯಿಂದ ರಕ್ತದ ಅಶುದ್ಧತೆ, ಪಿತ್ತ ಸಮಸ್ಯೆಯಿಂದ ಇಂತಹ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಆಹಾರದ ಅವಶ್ಯಕತೆ ರೋಕನಿರೋಧಕ ಶಕ್ತಿಯ ಕೊರತೆ ಯಾವ ರೀತಿಯ ಸರಿಯಾದ ಆಹಾರಗಳು ಇಲ್ಲದೆ ಇದ್ದಾಗ, ಆಹಾರಗಳು ಅಪೌಷ್ಟಿಕವಿಲ್ಲದ ಆಹಾರಗಳ ಜೊತೆಗೆ ಕಂಡುಬರುತ್ತದೆ.
ದೇಹದಲ್ಲಿ ಸೋಂಕುಗಳು ಹೆಚ್ಚಾಗುತ್ತದೆ. ಮತ್ತು ಪಿತ್ತ ಜಾಸ್ತಿಯಾಗುತ್ತದೆ. ಇದೇ ಕಾರಣದಿಂದ ಸರ್ಪ ಸುತ್ತುಗಳು ಕಂಡುಬರುತ್ತದೆ. ಇಂತಹ ಸಂದರ್ಭದಲ್ಲಿ ಕ್ಯಾರೆಟ್ ತುಂಡುಗಳನ್ನು ಸರ್ಪಸುತ್ತು ಬರುವ ಜಾಗಗಳಿಗೆ ಕಟ್ಟಿದರೆ ನೋವು ಮತ್ತು ಊತಗಳು ಕಡಿಮೆ ಮಾಡಿಕೊಳ್ಳಬಹುದು. ಇನ್ನೂ ಪುದಿನದಿಂದ ಮಾಡಿದ ಚಹಾ ಕೊಡಿಯುವುದರಿಂದ ಇಲ್ಲಿ ಬಂದಿರುವಂತಹ ಜ್ವರ,ನೋವು ಎಲ್ಲವೂ ಕಡಿಮೆಯಾಗುತ್ತದೆ. ಇನ್ನೂ ಹಲವರು ಇದನ್ನು ಬಿಸಿ ನೀರಿಗೆ ಬೆರೆಸಿ ಗಾಯಗಳ ಮೇಲೆ ಲೇಪನ ಮಾಡುವುದರಿಂದ ಗಾಯಗಳನ್ನು ವಾಸಿಮಾಡಿಕೊಳ್ಳಬಹುದು.
ಇದು ತಂಪು ಕೂಡ ಹೌದು. ಸರ್ಪ ಸುತ್ತಿಗೆ ರಾಗಿ ಮತ್ತು ಬಸಳೆಯನ್ನು ಮಿಶ್ರಣ ಮಾಡಿ ಗಾಯಗಳಿಗೆ ಲೇಪನ ಮಾಡುವುದರಿಂದ, ಆ ಒಂದು ಉರಿ ಮತ್ತು ನೋವುಗಳು ಹಿಂಸೆಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಅಡಿಕೆ ಮತ್ತು ಅಕ್ಕಿ ತೊಳೆದ ನೀರಿನಲ್ಲಿ ಅರೆದು ಶರೀರಕ್ಕೆ ಲೇಪಿಸುವುದರಿಂದ ಸರ್ಪಸುತ್ತನ್ನು ಶಮನ ಮಾಡಿಕೊಳ್ಳಬಹುದು. ಅತ್ತಿ ಅರಳ್ಳಿ ಮರದ ತೊಗಟೆಗಳು ಇವುಗಳನ್ನು ಕಷಾಯ ನಂತರ ಅದಕ್ಕೆ ಹಳೆಯ ತುಪ್ಪವನ್ನು ಮಿಶ್ರಣ ಮಾಡುವುದರಿಂದ ವೇಗವಾಗಿ ಗುಣಮುಖರಾಗಲು ಸಹಾಯವಾಗುತ್ತದೆ.
ಈ ಹಳೆ ತುಪ್ಪಗಳು ಹಳೆಯದಾಗಿದ್ದರೂ ತುಂಬಾ ಪೌಷ್ಠಿಕಾಂಶ ಅಂದರೆ ಇದೊಂದು ಮದ್ದಿನ ರೂಪದಲ್ಲಿ ನಮಗೆ ಸಹಾಯಕವಾಗುತ್ತದೆ. ಹವಳಗಳು ದೇಹದ ಶುದ್ಧತೆಯನ್ನು ಮಾಡುತ್ತದೆ. ಸಂಜೆ ಮಲ್ಲಿಗೆ ಅನ್ನುವುದು ಉರಿಯುತಗಳಿಗೆ ಉಪಯುಕ್ತವಾದುದು. ಇಂತಹ ಸಮಸ್ಯೆಗಳಿಗೆ ಮೊದಲ ಪರಿಹಾರವೇಂದರೆ ಮೊದಲು ಸರಿಯಾದ ಆಹಾರ ಪದ್ಧತಿ, ದೇಹಕ್ಕೆ ಏನು ಬೇಕು ಅನ್ನುವುದು ತಿಳಿದುಕೊಳ್ಳಿ. ನಿಮ್ಮ ಆಸೆಗಳಿಗೆ ಬೇಕಾದಂತಹ ಆಹಾರ, ಅದನ್ನು ಸ್ವಲ್ಪ ದಿನಗಳ ಮಟ್ಟಿಗೆ ತಡೆಗಟ್ಟಿದರೆ ಇಂತಹ ಇಂತಹ ಸಮಸ್ಯೆಗಳು ಪರಿಹರವಾಗಬಹುದು.