ಪಹಲ್ಗಾಮ್ ಘಟನೆ ಬಳಿಕ ಪಾಕಿಸ್ತಾನದ ವಿರುದ್ಧ ಸಿಡಿದೆದ್ದಿರುವ ಭಾರತ ಈಗಾಗಲೇ ಯುದ್ಧಭ್ಯಾಸ ಆರಂಭ ಮಾಡಲು ನಿರ್ಧಾರ ಮಾಡಿದೆ. ಈಗಾಗಲೇ ಕೆಲವೊಂದು ಕಠಿಣ ಕ್ರಮಗಳ ಮಧ್ಯೆಯೂ ನಾಗರೀಕರ ರಕ್ಷಣೆಗೆ ಮುಂದಾಗಿದೆ ಭಾರತ. ಈ ಸಂಬಂಧ ನಾಗರೀಕರು ಯುದ್ಧದ ಸಮಯದಲ್ಲಿ ಹೇಗೆ ಇರಬೇಕು. ಯಾವೆಲ್ಲಾ ಸೂಚನೆ ಇರಲಿದೆ ಅನ್ನೋದನ್ನ ಅವರಿಗೆ ತಿಳಿಸಲು ಮುಂದಾಗಿದ್ದು, ನಾಳೆಯಿಂದ ಇದಕ್ಕಾಗಿ ಮಾಕ್ ಡ್ರಿಲ್ ಮಾಡ್ತಾ ಇದೆ.
ಹೌದು, ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತ-ಪಾಕಿಸ್ತಾನ ನಡುವೆ ಯುದ್ಧದ ಭೀತಿ ಹೆಚ್ಚಾಗುತ್ತಲೇ ಇದೆ. ಯಾವ ಸಮಯದಲ್ಲಿ ಬೇಕಾದರೂ ಯುದ್ಧ ನಡೆಯುವ ಪರಿಸ್ಥಿತಿ ಇದೆ. ಈಗಾಗಲೇ ಗಡಿ ಭಾಗಗಳಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ. ಅಲ್ಲಿ ಅಪ್ರಚೋದಿತ ಗುಂಡಿನ ದಾಳಿ ಆದರೆ ಯಾವ ರೀತಿ ನಿಭಾಯಿಸಬೇಕು ಅಂತಲೂ ತಿಳಿಸಬೇಕಿದೆ. ಇದರ ಮಧ್ಯೆ ನಮ್ಮ ಸೈನಿಕರಿಗೂ ಪೂರ್ವಸಿದ್ದತೆ ಬಗ್ಗೆ ತಿಳಿಸಲಾಗಿದೆ.

ನಾಳೆಯಿಂದ ದೇಶಾದ್ಯಂತ ಮಾಕ್ ಡ್ರಿಲ್ ನಡೆಯಲಿದೆ. ಈಗಾಗಲೇ ಗಡಿ ಭಾಗದ ರಾಜ್ಯಗಳು ಸೇರಿದಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರದ ಮಾಕ್ ಡ್ರಿಲ್ ಬಗ್ಗೆ ಸೂಚನೆ ನೀಡಿದೆ. ನಾಗರಿಕರ ರಕ್ಷಣೆ ಸಂಬಂಧ ಭದ್ರತಾ ತಾಲೀಮು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ಆಯಾಯ ರಾಜ್ಯಗಳು ಈ ಅಣುಕು ಪ್ರದರ್ಶನ ಮಾಡಲು ಮುಂದಾಗಿವೆ. ಒಟ್ಟು 5 ಹಂತಗಳಲ್ಲಿ ಈ ಮಾಕ್ ಡ್ರಿಲ್ ನಡೆಸುವಂತೆ ಕೇಂದ್ರ ಸೂಚನೆ ನೀಡಿದೆ.
ನಮ್ಮ ರಾಜ್ಯದಲ್ಲೂ ಕೂಡ ನಾಳೆ ಮಾಕ್ ಡ್ರಿಲ್ ನಡೆಯಲಿದೆ. ಈ ಮಾಕ್ ಡ್ರಿಲ್ ಗೆ ಆಪರೇಷನ್ ಅಭ್ಯಾಸ ಎಂದು ಹೆಸರು ನಾಮಕರಣ ಮಾಡಲಾಗಿದೆ. ಎಷ್ಟು ನಿಮಿಗಳ ಕಾಲ ಸೈರನ್ ಮೊಳಗಿಸಬೇಕು. ಯಾವ ಯಾವ ಸಂದರ್ಭದಲ್ಲಿ ಸೈರನ್
ಮೊಳಗಿಸಬೇಕೆಂಬುದರ ಬಗ್ಗೆ ಕೇಂದ್ರದಿಂದ ಸ್ಟೇಟ್ ಸಿವಿಲ್ ಡಿಫೆನ್ಸ್ ಗೆ ಮಾರ್ಗಸೂಚಿ ನೀಡಲಾಗುತ್ತೆ. ಈ ಮಾಕ್ ಡ್ರಿಲ್ ಭಾಗಗಳಲ್ಲಿ ಒಂದು ಸೈರನ್. ಒಟ್ಟು ಮೂರು ರೀತಿಯಲ್ಲಿ ಸೈರನ್ ಕೇಳಿಸುತ್ತೆ. ಮೊದಲ ಸೈರನ್ ಜನರಿಗೆ ಅಲರ್ಟ್ ಕೊಡುತ್ತೆ. ಅಟ್ಯಾಕ್ ನಡೆಯುವ ಬಗ್ಗೆ ಜನರಿಗೆ ಸೂಚನೆ ಕೊಡುತ್ತೆ. ಎರಡನೇ ಸೈರನ್ ಅಟ್ಯಾಕ್ ಟೈಂನಲ್ಲಿ ಆಗುತ್ತೆ
ಮೂರನೇ ಸೈರನ್ ಪರಿಸ್ಥಿತಿ ಮತ್ತೆ ನಾರ್ಮಲ್ ಗೆ ಬಂದಾಗ ಆಗುತ್ತೆ.

ಮೊದಲ ಸೈರನ್ ಕೇಳಿಸಿದಾಗ ಜನರು ಏನ್ ಮಾಡ್ಬೇಕು. ಯಾವ ಯಾವ ಸೈರನ್ ಬಂದಾಗ ಜನರು ಅಲರ್ಟ್ ಆಗಬೇಕು ಎಂಬತಹ ಮಾಹಿತಿಯ ಜೊತೆಗೆ ಈ ಅಣುಕು ಪ್ರದರ್ಶನ ಇರಲಿದೆ. ಗೃಹ ರಕ್ಷಕ ದಳ, NCC, NSS ವಿದ್ಯಾರ್ಥಿಗಳು ಮಾಕ್ ಡ್ರಿಲ್ನಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದೆ.
ಇನ್ನು ಈಗಾಗಲೇ ಸರಣಿ ಸಭೆಗಳ ಮೂಲಕ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇನ್ನು ಈ ಅಣಕು ಪ್ರದರ್ಶನದಲ್ಲಿ ಏನೆಲ್ಲಾ ಇರುತ್ತೆ ಅನ್ನೋದನ್ನ ನೋಡೋದಾದ್ರೆ ವಾಯುದಾಳಿಯ ಎಚ್ಚರಿಕೆ ನೀಡಲಾಗುತ್ತದೆ. ವಾಯುದಾಳಿಯ ಸೈರನ್ ಮೊಳಗಿಸಿ ಮಾಹಿತಿ ನೀಡಲಾಗುತ್ತದೆ. ಪ್ರತಿಕೂಲ ದಾಳಿ ವೇಳೆ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ತರಬೇತಿ ನೀಡಲಾಗುತ್ತದೆ. ಇನ್ನು ವಿದ್ಯುತ್ ದೀಪ್ ಬಂದ್ ಮಾಡುವ ಕುರಿತು ಹೇಳಲಾಗುತ್ತದೆ. ಅಂದರೆ ವಾಯುದಾಳಿ ಸಂದರ್ಭದಲ್ಲಿ ನಗರ ಮತ್ತು ಹಳ್ಳಿಗಳಲ್ಲಿ ವಿದ್ಯುತ್ ದೀಪ್ ಸಂಪೂರ್ಣ ಬಂದ್ ಆಗಿರಲಿದೆ ಅಷ್ಟೆ ಅಲ್ಲ ರಾತ್ರಿ ವಾಹನ ಸಂಚಾರ ಕೂಡ ನಿಲ್ಲಿಸಲಾಗುತ್ತದೆ. ಶತ್ರುಗಳಿಗೆ ಜನಸಂಖ್ಯೆ, ವಾಸಿಸುವ ಗುರುತು ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತದೆ. ಇದರ ಜೊತೆಗೆ ದೇಶದ ಆಸ್ತಿ ಕಾಪಾಡುವ ನಿಟ್ಟಿನಲ್ಲೂ ಯಾವ ರೀತಿ ಈ ಪರಿಸ್ಥಿತಿ ನಿಭಾಯಿಸಬೇಕು ಅಂತ ತೋರಿಸಲಾಗುತ್ತದೆ. ಇದರ ಜೊತೆಗೆ ಪ್ರಮುಖವಾದದ್ದು ಅಂದರೆ ಸಂಕಷ್ಟಕ್ಕೆ ಸಿಲುಕಿದವರನ್ನು ಹೇಗೆ ರಕ್ಷಣೆ ಮಾಡಬೇಕು ಅನ್ನೋದ್ರ ಬಗ್ಗೆ ತಿಳಿಸುವುದು.



