ಅಮೆರಿಕಾದಲ್ಲಿ ಸರ್ಜರಿ ಮುಗಿಸಿಕೊಂಡು ಬಂದ ನಂತರ ಒಂದೆರಡು ದಿನಗಳ ಕಾಲ ರೆಸ್ಟ್ ಪಡೆದ ಶಿವಣ್ಣ ಈಗ ಎಲ್ಲಾ ಕಡೆ ಆಕ್ಟಿವ್ ಆಗಿ ಓಡಾಡುತ್ತಿದ್ದಾರೆ. ಶಿವಣ್ಣ ಯಾವಾಗಲೂ ಎನರ್ಜಿಟಿಕ್ ಆಗಿರಬೇಕು ಎನ್ನುವುದೇ ಎಲ್ಲಾ ಅಭಿಮಾನಿಗಳ ಆಸೆ. ಇದೀಗ ಶಿವಣ್ಣ ಎಂದಿನಂತೆ ಲವಲವಿಕೆ ಇಂದ ತಮ್ಮ ಕುಟುಂಬದ ಜೊತೆಗೆ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ಅನುಗ್ರಹ ಪಡೆದಿದ್ದಾರೆ. ಶಿವಣ್ಣ ಅವರು ಮಂತ್ರಾಲಯಕ್ಕೆ ಭೇಟಿ ನೀಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಬಾರಿ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ಎಷ್ಟು ವಿಶೇಷವಾಗಿತ್ತು? ಹೇಗಿತ್ತು ಎನ್ನುವುದರ ಪೂರ್ತಿ ಡೀಟೇಲ್ಸ್ ತಿಳಿಸಿಕೊಡುತ್ತೇವೆ ಪೂರ್ತಿ ಲೇಖನ ಓದಿ..

ಶಿವಣ್ಣ ಅವರು 2024ರ ಡಿಸೆಂಬರ್ ನಲ್ಲಿ ಅಮೆರಿಕಾಗೆ ಸರ್ಜರಿಗೆ ಹೊರಟರು, ಎಲ್ಲಾ ಅಭಿಮಾನಿಗಳಿಗೂ ಕೂಡ ಶಿವಣ್ಣ ಅವರು ಬೇಗ ಹುಷಾರಾಗಿ ಬಂದರೆ ಸಾಕು ಎನ್ನುವುದೇ ಅಭಿಪ್ರಾಯ ಆಗಿತ್ತು. ಅದೇ ರೀತಿ, ಶಿವಣ್ಣ ಅವರ ಕುಟುಂಬದಿಂದ ಅವರ ಆರೋಗ್ಯದ ಬಗ್ಗೆ ಅಪ್ಡೇಟ್ ಗಳನ್ನು ನೀಡುತ್ತಲೇ ಇದ್ದರು. ಹೊಸ ವರ್ಷದಂದು ಅಭಿಮಾನಿಗಳ ಎದುರು ಬಂದ ಶಿವಣ್ಣ ತಾವು ಹುಷಾರಾಗಿ ಇರುವುದಾಗಿ ಅಭಿಮಾನಿಗಳ ಜೊತೆಗೆ ಹಂಚಿಕೊಂಡರು. ಇನ್ನು ಶಿವಣ್ಣ ಅವರ ಆರೋಗ್ಯದ ಬಗ್ಗೆ ಪತ್ನಿ ಗೀತಾ ಅವರು ಮತ್ತು ಮಗಳು ನಿವೇದಿತಾ ಇಬ್ಬರು ಕೂಡ ಅಪ್ಡೇಟ್ ನೀಡುತ್ತಲೇ ಇದ್ದರು. ಇನ್ನು ಜನವರಿ 26ರಂದು ಶಿವಣ್ಣ ಬೆಂಗಳೂರಿಗೆ ಬಂದರು. ನಂತರ ಬಹುತೇಕ ಸೆಲೆಬ್ರಿಟಿಗಳು ಸಹ ಶಿವಣ್ಣ ಅವರ ಮನೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು..

ಶಿವಣ್ಣ ಎಲ್ಲರೊಂದಿಗೂ ಸಮಯ ಕಳೆದಿದ್ದರು, ಹಾಗೆಯೇ ಸರಿಗಮಪ ಶೋನಲ್ಲಿ ಅನುಶ್ರೀ ಅವರ ಬರ್ತ್ ಡೇ ಸೆಲೆಬ್ರೇಷನ್ ಗಾಗಿ ಬಂದಿದ್ದರು ಶಿವಣ್ಣ. ಆಗ ಸ್ವಲ್ಪ ವೀಕ್ ಆಗಿಯೇ ಕಾಣಿಸಿಕೊಂಡರು ಸಹ, ಬಳಿಕ ಶಿವಣ್ಣ ಯಾಣಕ್ಕೆ ಹೋಗಿ, ಜೋಗ ಜಲಪಾತಕ್ಕೆ ಹೋಗಿ, ರಿಲ್ಯಾಕ್ಸ್ ಮಾಡಿದರು. ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿರುವ ಶಿವಣ್ಣ, ನಿಧಾನವಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಶುರು ಮಾಡಿದ್ದಾರೆ. ಇತ್ತೀಚೆಗೆ ನಟ ಡಾಲಿ ಧನಂಜಯ್ ಅವರ ಮದುವೆಗಾಗಿ ಮೈಸೂರಿಗೆ ಬಂದಿದ್ದರು ಶಿವಣ್ಣ. ಆ ಮದುವೆಯಲ್ಲಿ ಮೊದಲಿನ ಹಾಗೆ ಸಖತ್ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡರು. ಹೊಸ ಜೋಡಿಗೆ ವಿಸಭ್ ಮಾಡಿ, ಆಶೀರ್ವಾದ ಮಾಡಿದ ಶಿವಣ್ಣ, ಮಾಧ್ಯಮದ ಮುಂದೆ ಕೂಡ ಮಾತನಾಡಿದರು. ಇನ್ನು ಈಗ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ.

ಶಿವಣ್ಣ ಗೀತಕ್ಕ ಮತ್ತು ಶಿವಣ್ಣ ಅವರ ಮಗಳು ನಿವೇದಿತಾ ಕೂಡ ಜೊತೆಗೆ ಹೋಗಿದ್ದರು. ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ಆಶೀರ್ವಾದ ಪಡೆದಿದ್ದಾರೆ. ಇನ್ನು ಸುಬುಧೇಂದ್ರ ತೀರ್ಥರು ಶಿವಣ್ಣ ಅವರಿಗೆ ಆಶೀರ್ವದಿಸಿ, ಶಿವಣ್ಣ ಅವರ ಫ್ಯಾಮಿಲಿಗೆ ಮಂತ್ರಾಕ್ಷತೆ, ಶೇಷವಸ್ತ್ರ ಮತ್ತು ಸ್ಮರಣಿಕೆ ಇದೆಲ್ಲವನ್ನು ಸಹ ನೀಡಿದ್ದಾರೆ. ರಾಯರ ಬೃಂದಾವನಕ್ಕೆ ವಿಶೇಷ ಭೇಟಿ ನೀಡಿ, ಶಿವಣ್ಣ ಹಾಗೂ ಗೀತಕ್ಕ ದಂಪತಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಣ್ಣಾವ್ರ ಇಡೀ ಕುಟುಂಬ ಮಂತ್ರಾಲಯ ಹಾಗೂ ಗುರು ರಾಯರ ಭಕ್ತರು,ಆಗಾಗ ಇವರ ಕುಟುಂಬ ಮಂತ್ರಾಲಯಕ್ಕೆ ಭೇಟಿ ನೀಡುತ್ತಲೇ ಇತ್ತು. ಇದೀಗ ಶಿವಣ್ಣ ಅವರು ಸಹ ಅದೇ ರೀತಿ ಭೇಟಿ ನೀಡಿದ್ದಾರೆ. ಇನ್ನುಮುಂದೆ ಶಿವಣ್ಣ ಅವರಿಗೆ ಇನ್ನು ಒಳ್ಳೆಯದಾಗಲಿ ಎನ್ನುವುದೇ ಎಲ್ಲಾ ಅಭಿಮಾನಿಗಳ ಆಶಯ ಆಗಿದೆ.

ಶಿವಣ್ಣ ಅವರು ಈಗ ಹುಷಾರಾಗಿದ್ದು, ಹೊರಗಡೆ ಸಹ ಬರುತ್ತಿರುವ ಕಾರಣ, ಶಿವಣ್ಣ ಅವರು ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣಗಳಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಅರ್ಜುನ್ ಜನ್ಯ ಅವರು ನಿರ್ದೇಶನ ಮಾಡಿರುವ 45 ಸಿನಿಮಾ ಚಿತ್ರೀಕರಣ ಮತ್ತು ಡಬ್ಬಿಂಗ್ ಅನ್ನು ಈಗಾಗಲೇ ಮುಗಿಸಿರುವ ಶಿವಣ್ಣ, ಸಿನಿಮಾ ಪ್ರೊಮೋಷನ್ ಗಳಲ್ಲಿ ಪಾಲ್ಗೊಳ್ಳುತ್ತಾರೆ. 45 ಸಿನಿಮಾ ಆಗಸ್ಟ್ 15ರಂದು ತೆರೆ ಕಾಣಲಿದೆ ಎಂದು ಈಗಾಗಲೇ ಅನೌನ್ಸ್ ಮಾಡಿದ್ದಾರೆ. ಇನ್ನು ಶಿವಣ್ಣ ಈಗಾಗಲೇ ಇನ್ನು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಇನ್ನು ಕೆಲವು ದಿನಗಳ ಬಳಿಕ ಚಿತ್ರೀಕರಣಗಳು ಶುರುವಾಗುತ್ತದೆ. ಹೊಸ ಲುಕ್ ನಲ್ಲಿ ಮಿಂಚುತ್ತಿರುವ ಶಿವಣ್ಣ, ಅಭಿಮಾನಿಗಳನ್ನು ಭೇಟಿ ಮಾಡಲಿ ಎನ್ನುವುದೇ ಎಲ್ಲರ ಆಸೆ ಆಗಿದೆ.