ಶಿವಣ್ಣ ಅವರಿಗೆ ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮುಗಿದಿದೆ. ಶಿವಣ್ಣ ಚೇತರಿಸಿಕೊಳ್ಳುತ್ತಿದ್ದಾರೆ, ಶೀಘ್ರದಲ್ಲೇ ಅಭಿಮಾನಿಗಳ ಜೊತೆಗೆ ಮಾತನಾಡುತ್ತಾರೆ ಎಂದು ಶಿವಣ್ಣ ಅವರ ಪತ್ನಿ ಗೀತಕ್ಕಾ ಮತ್ತು ಮಗಳು ನಿವೇದಿತಾ ಇಬ್ಬರು ಸಹ ಮಾಹಿತಿ ನೀಡಿದ್ದರು. ಆದರೆ ಈಗ ಶಿವಣ್ಣ ಅವರ ಮನೆಯಲ್ಲಿ ದುಃಖದ ವಾತಾವರಣ ಮನೆಮಾಡಿದೆ, ಶಿವಣ್ಣ ಅವರ ಮನೆಯ ಸದಸ್ಯನ ಹಾಗಿದ್ದ ಅವರ ಮುದ್ದಿನ ಶ್ವಾನ ವಿಧಿವಶವಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾವುಕರಾಗಿ ಪೋಸ್ಟ್ ಶೇರ್ ಮಾಡಿದ್ದಾರೆ ಶಿವಣ್ಣ. ನೀಮೋ ಬಗ್ಗೆ ಗೀತಾ ಶಿವ ರಾಜ್ ಕುಮಾರ್ ಅವರು ಭಾವನಾತ್ಮಕವಾಗಿ ಪತ್ರ ಬರೆದಿದ್ದಾರೆ…

“ನಮ್ಮ ಮನೆಯಲ್ಲಿ ನಾವು ಐದಲ್ಲಾ, ಆರು ಜನ. ಶಿವಣ್ಣ, ಗೀತಾ, ನಿಶು, ನಿವಿ, ದಿಲೀಪ್ ಮತ್ತು ನನ್ನ ಮರಿ ನೀಮೋ. ನಿಶು ಹುಟ್ಟುಹಬ್ಬಕ್ಕೆ ದಿಲೀಪ್ ಅವರು ಮದುವೆಗೆ ಮುಂಚೆ ನೀಮೋನನ್ನು ಗಿಫ್ಟ್ ಆಗಿ ತಂದರು. ನಿಶು ಡಾಕ್ಟರ್ ಆಗಿದ್ದರಿಂದ ಅವಳಿಗೆ ನೀಮೋನನ್ನು ನೋಡಿಕೊಳ್ಳಲು ಸಮಯ ಆಗೋದಿಲ್ಲ ಎಂದು ನಮ್ಮ ಮನೆಗೆ ತಂದ್ವಿ! ಹೀಗೆ ಅವನು ನಮ್ಮ ಮನೆಯಲ್ಲಿ ಆರನೆಯವನಾದ. Thanks Dileep for bringing him to our life. ಎಲ್ಲರೂ ಅವರ ಪೆಟ್ ಹಿಂದೆ ಓಡಾಡ್ತಾ ಇರ್ತಾರೆ. ಆದ್ರೆ ನೀಮೋ ಯಾವಾಗೂ ನನ್ನ ಹಿಂದೆ. ನಾನು ಕಿಚನ್ನಲ್ಲಿ ಇರುವಾಗ ಅಥವಾ ಮನೆಯಲ್ಲಿ ಎಲ್ಲೇ ಹೋದ್ರೂ ಅವನು ಯಾವಾಗಲೂ ನನ್ನ ಹಿಂದೆ.
ನನ್ನ ಕೆಲ್ಸ ಮುಗಿಯುವುದು ಎಷ್ಟೇ ಹೊತ್ತಾದರೂ ಅವನು ಮಾತ್ರ ನನ್ನ ಹಿಂದೆ. ಶಿವಣ್ಣ ಅವರ ಕಾಲ ಬಳಿ ಅಂಟಿಕೊಂಡು, ಆಂಗಲ್ ಅಡ್ವಸ್ಟ್ ಮಾಡಿಕೊಂಡು, ನನ್ನ ಮುಖ ಕಾಣೋ ಹಾಗೆ ಕೂರ್ತಿದ್ದ ನೀಮೋ. ನೀಮೋ ನನ್ನ ಜೀವನದ ಭಾಗ. ನೀಮೋ, ಗೀತಾ ಇಬ್ಬರಲ್ಲ, ನಾವಿಬ್ಬರೂ ಒಂದೇ. ಅವನು ಬೆಳೆಯುವಾಗ ಅವನು ಎಷ್ಟೇ ದೊಡ್ಡವನಾದ್ರು ಮಗುವಿನಂತೆ ಆರೈಕೆ ಮಾಡಿ, ಅವನ ಊಟ, ತಿಂಡಿ, ಅವನಿಗೆ ಜ್ವರ ಬಂದರೆ ತಕ್ಷಣ ಟೀಟ್ಮೆಂಟ್, ಅದಾದಮೇಲೆ ಅವನಿಗೆ ಕರೆಕ್ಟ್ ಟೈಮಿಗೆ ಮೆಡಿಸಿನ್, ಹೀಗೆ ತುಂಬಾ ಕಾಳಜಿಯಿಂದ ನೋಡಿಕೊಂಡಿದ್ದು ನಿವಿ. ಈಗ ಈ ಮರಿ ನಮ್ಮನ್ನೆಲ್ಲಾ ಬಿಟ್ಟು ದೇವರ ಹತ್ತಿರ ಹೋದ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ನನ್ನ ಮರಿ ನಾನು ಅಮೇರಿಕಾಗೆ ಬಂದ ಮೇಲೆ ನನ್ನನ್ನು ಬಿಟ್ಟು ಹೋದ. ಅವನ ನಿಸ್ವಾರ್ಥ ಪ್ರೀತಿ ಯಾರಿಂದಲೂ ತುಂಬಲು ಸಾಧ್ಯವಾಗೋಲ್ಲ. ನಾವು ಅಮೇರಿಕಾಗೆ ಬಂದ ಮೇಲೆನೇ ಅವನು ಹೊರಡಬೇಕು ಎಂದು ಅವನು ಡಿಸೈಡ್ ಮಾಡಿದ್ದ ಅನ್ಸುತ್ತೆ.
ಊಟ ಮಾಡುವಾಗ ನಿಶು ಚೇರ್ ಹಿಂದೆ, ಆಮೇಲೆ ನಿವಿ ಜೊತೆಗೆ, ಹಾಗು ಮಲಗುತ್ತಿದ್ದಿದ್ದು ನಮ್ಮ ಜೊತೆಗೆ. ಈಗ ಒಂದು ತಿಂಗಳಿಂದ ರಾತ್ರಿ ಶಿವಣ್ಣನಿಗೆ ಅಂಟಿಕೊಂಡು ಮಲಗುತ್ತಿದ್ದ. ಮೊದಲ್ಲೆಲ್ಲಾ ಅವನು ಹೀಗೆ ಮಾಡಿದವನಲ್ಲ. ನೆನ್ನೆ ಮಾತನಾಡುವಾಗ ನಿವಿ ‘ಅವನಿಗೆ ಪಪ್ಪನಿಗೆ ಏನು ಆಗ್ತಾ ಇತ್ತು ಅಂತ ಗೊತ್ತಿತ್ತು ಅಂಸುತ್ತೆ, ಅದಕ್ಕೆ ಹಾಗೆ ಮಲಗುತ್ತಿದ್ದ’ ಅಂದಳು. ನನಗೂ ಹಾಗೆ ಅನ್ನಿಸಿತು. ನಾವು ಅಲ್ಲೇ ಇದ್ದರೆ ತುಂಬಾ ಕಷ್ಟ ಪಡ್ತೀವಿ, ಹಾಗೂ ಈ ಸಮಯದಲ್ಲಿ ಕಷ್ಟ ಪಡಬಾರದೆಂದು ಕಾದು ನನ್ನ ಮರಿ ನಮ್ಮೆಲ್ಲರನ್ನು ಬಿಟ್ಟು ಹೋದ.

ಅವನನ್ನು ನಮ್ಮ ಜೀವನದ ಭಾಗವಾಗಿ ಕರೆದುಕೊಂಡು ಬಂದಿದ್ದು ಹಾಗೂ ಅವನು ಹೊರಡುವಾಗ ಜೊತೆಯಲ್ಲೇ ನಿಂತಿದ್ದು ದಿಲೀಪ್. ನಮ್ಮ ಮನೆಯಲ್ಲಿ ಕಿರಣ, ಆಕಾಶ್, ಗಂಗಮ್ಮ, ಮನು, ಚಿಕ್ ಮನು ಎಲ್ಲರೂ ನೀಮೋನನ್ನು ಅವರ ಸ್ವಂತ ಮಗುವಿನಂತೆ ನೋಡಿಕೊಂಡಿದ್ದಾರೆ. ಅವರ ಕುಟುಂಬದ ಭಾಗದಂತೆ ನೋಡಿಕೊಂಡಿದ್ದಾರೆ. ಲಾವಣ್ಯಾ, ದಿಗಂತ್ ಹಾಗೂ ಅವರ ಮಗ ವಿಷ್ಣು, ಇವರಿಗೂ ನೀಮೋ ಅಂದರೆ ಅಷ್ಟೇ ಪ್ರೀತಿ. ವಿಷ್ಣು ಮತ್ತು ನೀಮೋ ಆಟ ಆಡುವಾಗ, ಅಥವಾ ವಿಷ್ಣು ಅವನ ಬಳಿ ಮಾತನಾಡೋದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ನೀಮೋ ಸದಾ ನಮ್ಮೊಳಗಿದ್ದಾನೆ, ನನ್ನೊಳಗಿದ್ದಾನೆ. ಯಾವಾಗೂ ಇರ್ತಾನೆ. ಅವನು ಹೋಗಿದ್ದನ್ನು ನಾನು ಕಣ್ಣಲ್ಲಿ ನೋಡಿಲ್ಲ.
ನೋಡಿದ್ದರೂ ಅವನು ಹೋಗಿದ್ದಾನೆ ಎಂದು ನಾನು ಎಂದೂ ಒಪ್ಪಿಕೊಳ್ಳಲ್ಲ. ಪ್ರಾಣಿಗಳು ನಮ್ಮನ್ನು ಬಿಟ್ಟು ಹೋಗೋವಾಗ ನಮ್ಮ ನೋವನ್ನೂ ಅವರ ಜೊತೆಯಲ್ಲಿ ತಗೆದುಕೊಂಡು ಹೋಗ್ತಾರಂತೆ. ನನ್ನ ನೀಮೋ ಶಿವಣ್ಣನಿಗೆ ಇದ್ದ ನೋವನ್ನು ಶಾಶ್ವತವಾಗಿ ತಗೊಂಡಿದ್ದಾನೆ.. ಲವ್ ಯು ನೀಮೋ.. ಗೀತಾ ಶಿವರಾಜಕುಮಾರ್..” ಎಂದು ಪತ್ರದಲ್ಲಿ ಬರೆದಿದ್ದಾರೆ ಗೀತಾ ಶಿವ ರಾಜ್ ಕುಮಾರ್ ಅವರು.