ನಮ್ಮ ಶಿವಣ್ಣ ಅವರು ಕ್ಯಾನ್ಸರ್ ಗೆದ್ದು ಬಂದಿದ್ದಾರೆ ಎಂದು ನಿಮಗೆಲ್ಲಾ ಗೊತ್ತೇ ಇದೆ. ಶಿವಣ್ಣ ಈಗ ಕ್ಯಾನ್ಸರ್ ಫ್ರೀ. ಅಮೆರಿಕಾಗೆ ಹೋಗಿ ಚಿಕಿತ್ಸೆ ಪಡೆದು, ಸರ್ಜರಿ ಮಾಡಿಸಿಕೊಂಡು ಬಂದಿದ್ದಾರೆ ಶಿವಣ್ಣ. ಕ್ಯಾನ್ಸರ್ ರೋಗದ ಜೊತೆಗೆ ಹೋರಾಡಿ, ಸೋಲಿಸಿ, ಮೃತ್ಯುಂಜಯನ ಹಾಗೆ ಶಿವಣ್ಣ ಬಂದಿದ್ದಾರೆ. ಅಭಿಮಾನಿಗಳೆಲ್ಲರಿಗೂ ಇದು ಬಹಳ ಸಂತೋಷದ ಸುದ್ದಿ, ಶಿವಣ್ಣ ಚೆನ್ನಾಗಿರಬೇಕು ಎನ್ನುವುದೇ ಎಲ್ಲರ ಆಸೆ ಅಲ್ಲವೇ. ಶಿವಣ್ಣ ಮೊದಲಿಗಿಂತ ಇನ್ನುಮುಂದೆ ಹೆಚ್ಚು ಎನರ್ಜಿಟಿಕ್ ಆಗಿರಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಶಿವಣ್ಣ ಹಾಗೂ ಗೀತಕ್ಕ ಇಬ್ಬರೂ ಈಗ ಜನರಿಗೆ ಒಂದು ಹೊಸ ಕೊಡುಗೆ ನೀಡಲು ಮುಂದಾಗಿದ್ದಾರೆ. ಹೌದು ಕ್ಯಾನ್ಸರ್ ಇಂದ ಬಳಲುತ್ತಿರುವವರಿಗೆ ಸಹಾಯ ಮಾಡುವುದಕ್ಕೆ ಮುಂದಾಗಿದ್ದಾರೆ ಶಿವಣ್ಣ ಮತ್ತು ಗೀತಕ್ಕ.
ಶಿವಣ್ಣ ಅವರಿಗೆ ಕ್ಯಾನ್ಸರ್ ಇರುವ ವಿಚಾರ ಅಭಿಮಾನಿಗಳಿಗೆ ಗೊತ್ತಾದ ನಂತರ ಎಲ್ಲರೂ ಬಹಳ ಶಾಕ್ ಆಗಿದ್ದರು. ಅಭಿಮಾನಿಗಳಿಗೆ ಅಂತೂ ಶಿವಣ್ಣ ಅವರಿಗೆ ಏನಾಗುತ್ತದೆಯೋ, ಆ ಪುಣ್ಯಾತ್ಮ ಹುಷಾರಾಗಿರಲಿ ಎಂದು ಅಭಿಮಾನಿಗಳು ಬಯಸಿದ್ಧರು. ಶಿವಣ್ಣ ಅವರು ಇಲ್ಲಿದ್ದುಕೊಂಡೇ ಟ್ರೀಟ್ಮೆಂಟ್ ಪಡೆಯುತ್ತಿದ್ದರು. ಆದರೆ ಜನರಿಗೆ ಗೊತ್ತಾಗಿದ್ದು ಬಹಳ ತಡವಾಗಿ. ಭೈರತಿ ರಣಗಲ್ ಸಿನಿಮಾ ಬಿಡುಗಡೆ ವೇಳೆ ಶಿವಣ್ಣ ಅಭಿಮಾನಿಗಳಿಗೆ ಈ ವಿಚಾರವನ್ನು ತಿಳಿಸಿದರು. ಅಲ್ಲಿಯವರೆಗೂ ಯಾರಿಗೂ ಕೂಡ ಗೊತ್ತಿರಲಿಲ್ಲ. ಇನ್ನು ಗೀತಕ್ಕ ಅವರು ಹೇಳಿದ ಪ್ರಕಾರ, ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಶಿವಣ್ಣ ಅವರ ಆರೋಗ್ಯದಲ್ಲಿ ಏನೋ ವ್ಯತ್ಯಾಸ ಇದೆ ಎಂದು ಗೊತ್ತಾಯಿತಂತೆ. ಟೆಸ್ಟ್ ಮಾಡಿಸಿ, ರಿಪೋರ್ಟ್ ಬಂದ ಬಳಿಕ ತಕ್ಷಣವೇ ಶಿವಣ್ಣ ಅವರಿಗೆ ಈ ವಿಷಯವನ್ನು ಹೇಳಿರಲಿಲ್ಲವಂತೆ.

ಶಿವಣ್ಣ ಅವರ ಅಳಿಯ ದಿಲೀಪ್ ಅವರು ರಿಪೋರ್ಟ್ ನೋಡಿ ಭಯ ಪಡುವ ಅಗತ್ಯವಿಲ್ಲ, ಟ್ರೀಟ್ಮೆಂಟ್ ಇದೆ ಎಂದು ಹೇಳಿದ ಬಳಿಕ ಎಲ್ಲರೂ ಶಿವಣ್ಣ ಅವರಿಗೆ ವಿಷಯ ತಿಳಿಸಿದರಂತೆ. ಮೊದಲಿಗೆ ಶಿವಣ್ಣ ಪ್ಯಾನಿಕ್ ಆದರೂ ಸಹ ಎಲ್ಲರೂ ಕೂಡ ಶಿವಣ್ಣ ಅವರಿಗೆ ಧೈರ್ಯ ತುಂಬಿದ ಬಳಿಕ ಶಿವಣ್ಣ ಆರಾಮಾದರಂತೆ. ಶಿವಣ್ಣ ಅವರಿಗೆ ಟ್ರೀಟ್ಮೆಂಟ್ ನಡೆಯುತ್ತಾ ಇದ್ದಿದ್ದು ಬೆಂಗಳೂರಿನಲ್ಲೇ. ಇಲ್ಲಿನ ಡಾಕ್ಟರ್ ಗಳು ಒಳ್ಳೆಯ ರೀತಿಯಲ್ಲಿ ನೋಡಿಕೊಂಡ ಕಾರಣ ಶಿವಣ್ಣ ಅವರಿಗೆ ಇದ್ದ ಬ್ಲಾಡರ್ ಕ್ಯಾನ್ಸರ್ ದೇಹದ ಬೇರೆ ಯಾವುದಕ್ಕೂ ಸ್ಪ್ರೆಡ್ ಆಗಲಿಲ್ಲ. ಇದು ಎಷ್ಟು ಒಳ್ಳೆಯ ವಿಚಾರ ಅಲ್ವಾ. ಇದರಿಂದ ಅಮೆರಿಕಾದಲ್ಲಿನ ವೈದ್ಯರಿಗೆ ಕೂಡ ಅವರ ಕೆಲಸಗಳನ್ನು ಮಾಡುವುದಕ್ಕೆ, ಟ್ರೀಟ್ಮೆಂಟ್ ಕೊಡುವುದಕ್ಕೆ ಸುಲಭ ಆಯಿತು. ಶಿವಣ್ಣ ಅವರ ಆರೋಗ್ಯದ ಬಗ್ಗೆ ತಿಳಿದು ಬಂದಾಗ ಅಭಿಮಾನಿಗಳಿಗೆ ಕೂಡ ಬಹಳ ಆತಂಕ ಆಗಿತ್ತು.

ಆದರೆ ಶಿವಣ್ಣ ಯಾರು ಭಯ ಪಡಬಾರದು ಎಂದಿದ್ದರು. ಕ್ಯಾನ್ಸರ್ ಇದ್ದಾಗಲೇ ಶಿವಣ್ಣ ಸಿನಿಮಾ ಶೂಟಿಂಗ್ ಗಳಲ್ಲಿ, ರಿಯಾಲಿಟಿ ಶೂಟಿಂಗ್ ಗಳಲ್ಲಿ ಪಾಲ್ಗೊಂಡಿದ್ದರು. ಎಲ್ಲಿಯೂ ಸಹ ಎನರ್ಜಿ ಕಳೆದುಕೊಳ್ಳದೇ ಇದ್ದದ್ದು ಶಿವಣ್ಣ ಅವರ ವಿಶೇಷತೆ. ಕೀಮೋಥೆರಪಿ ಮುಗಿಸಿಕೊಂಡು ಬಂದ ನಂತರ, ಶೂಟಿಂಗ್ ಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅಲ್ಲಿ ಎಲ್ಲರೂ ಕೂಡ ಒಂದು ಮಗುವನ್ನು ನೋಡಿಕೊಳ್ಳುವ ಹಾಗೆ ಶಿವಣ್ಣ ಅವರನ್ನು ನೋಡಿಕೊಳ್ಳುತ್ತಿದ್ದರಂತೆ. ಗೀತಕ್ಕ ಅವರು ಸಹ ಶಿವಣ್ಣ ಅವರ ಜೊತೆಗೆ ಇರುತ್ತಿದ್ದರು. ಅಷ್ಟು ಚೆನ್ನಾಗಿ ಎಲ್ಲರೂ ಶಿವಣ್ಣ ಅವರನ್ನು ನೋಡಿಕೊಂಡಿದ್ದಾರೆ. ಇನ್ನು ಅಮೆರಿಕಾಗೆ ಹೋದ ನಂತರ ಅಲ್ಲಿ ಕೂಡ ವೈದ್ಯರು ಹಾಗೂ ಅವರ ಜೊತೆಯಲ್ಲಿದ್ದವರು ಬಹಳ ಜೋಪಾನವಾಗಿ ಕಾಳಜಿಯಿಂದ ನೋಡಿಕೊಂಡಿದ್ದಾರೆ. ಹಾಗಾಗಿ ಇಂದು ಶಿವಣ್ಣ ನಮ್ಮೆಲ್ಲರ ಜೊತೆಗೂ ಸಂತೋಷದಿಂದ ಇದ್ದಾರೆ.
ಅಮೆರಿಕಾ ಇಂದ ಶಿವಣ್ಣ ಬೆಂಗಳೂರಿಗೆ ಬಂದ ನಂತರ ಹಂತ ಹಂತವಾಗಿ ಎಲ್ಲಾ ಕಡೆ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿಗೆ ಬಂದಮೇಲೆ ಕೂಡ ಒಂದಷ್ಟು ದಿವಸಗಳ ಕಾಲ ವಿಶ್ರಾಂತಿಯನ್ನು ಸಹ ಪಡೆದರು. ಈಗ ಶೂಟಿಂಗ್ ಗೆ ಮರಳಿ ಬಂದಿದ್ದಾರೆ. ಶಿವಣ್ಣ ಅವರ 131ನೇ ಸಿನಿಮಾ ಶೂಟಿಂಗ್ ಶುರುವಾಗಿದೆ. ರಾಮ್ ಚರಣ್ ಜೊತೆಗೆ ಶಿವಣ್ಣ ಅಭಿನಯಿಸುತ್ತಿರುವ ಸಿನಿಮಾದ ಲುಕ್ ಟೆಸ್ಟ್ ಕೂಡ ಮುಗಿದಿದೆ. ಈ ರೀತಿಯಾಗಿ ಶಿವಣ್ಣ ಬ್ಯಾಕ್ ಟು ಫಾರ್ಮ್ ಎನ್ನುವ ರೀತಿಯಲ್ಲಿ ಇದ್ದಾರೆ. ಸಿನಿಮಾಗಳ ಜೊತೆಗೆ ಮುಂದೆ ಜೀಕನ್ನಡ ವಾಹಿನಿಯ ರಿಯಾಲಿಟಿ ಶೋನಲ್ಲಿ ಕೂಡ ಶಿವಣ್ಣ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಶಿವಣ್ಣ ಅವರಿಗೆ ಈಗ 62 ವರ್ಷ ವಯಸ್ಸು ಆಗಿದ್ದರು ಸಹ ಯಾವುದಕ್ಕೂ ಅಂಜದೆ, ಎಲ್ಲವನ್ನು ಎದುರಿಸುತ್ತಿರುವುದು ಎಲ್ಲರೂ ಮೆಚ್ಚಿಕೊಳ್ಳುವಂಥ ವಿಷಯ.

ಸಾಮಾನ್ಯವಾಗಿ ಕೀಮೋಥೆರಪಿ ಮಾಡಿದರೆ ಕೂದಲು ಉದುರುವುದು ಶುರುವಾಗುತ್ತದೆ. ಆದರೆ ಶಿವಣ್ಣ ಅವರಿಗೆ ಆ ಒಂದು ಸಮಸ್ಯೆ ಕೂಡ ಬರಲಿಲ್ಲವಂತೆ. ಇದನ್ನು ಗೀತಕ್ಕ ಇತ್ತೀಚಿನ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದು, ಡಾಕ್ಟರ್ ಗಳೇ ಇದರಿಂದ ಶಾಕ್ ಆಗಿದ್ದರಂತೆ. ಶಿವಣ್ಣ ಅವರ ವಿಲ್ ಪವರ್, ಅವರ ಎನರ್ಜಿಯನ್ನ ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರೆ ತಪ್ಪಲ್ಲ. ಇಂಥಹ ನಮ್ಮೆಲ್ಲರ ಪ್ರೀತಿಯ ಶಿವಣ್ಣ ಅವರು ಇದೀಗ ಒಂದು ಹೊಸ ನಿರ್ಧಾರ ಮಾಡಿದ್ದಾರೆ, ಶಿವಣ್ಣ ಹಾಗೂ ಗೀತಕ್ಕ ಇಬ್ಬರೂ ಸೇರಿ ಈ ಒಂದು ನಿರ್ಧಾರ ಮಾಡಿದ್ದು, ಜನರಿಗೆ ಇವರಿಬ್ಬರ ಮೂಲಕ ಒಂದೊಳ್ಳೆಯ ಕೊಡುಗೆ ನೀಡುವ ಪ್ಲಾನ್ ನಡೆಯುತ್ತಿದೆ. ಅದರಲ್ಲೂ ಕ್ಯಾನ್ಸರ್ ಇರುವವರಿಗೆ ಶಿವಣ್ಣ ಹಾಗೂ ಗೀತಕ್ಕ ಅವರ ನಿರ್ಧಾರದಿಂದ ಸ್ಪೂರ್ತಿ ಸಿಗುತ್ತದೆ. ಅಷ್ಟಕ್ಕೂ ಆ ಪ್ಲಾನ್ ಏನು ಎಂದು ತಿಳಿಸುತ್ತೇವೆ ನೋಡಿ..

ಶಿವಣ್ಣ ಹಾಗೂ ಗೀತಕ್ಕ ಇಬ್ಬರು ಸಹ ಕ್ಯಾನ್ಸರ್ ಸಮಸ್ಯೆಯನ್ನು ಬಹಳ ಹತ್ತಿರದಿಂದ ನೋಡಿರುವವರು. ಶಿವಣ್ಣ ಅವರ ಜೊತೆಗೆ ನಿಂತು ಕ್ಯಾನ್ಸರ್ ಗೆಲ್ಲಲು ಸಹಾಯ ಮಾಡಿದ್ದು ಗೀತಕ್ಕ. ಶಿವಣ್ಣ ಅವರು ಕ್ಯಾನ್ಸರ್ ಗೆದ್ದು ಬಂದಿರುವ ಈ ಜರ್ನಿ ಸಾಮಾನ್ಯವಾದ ಜರ್ನಿ ಅಂತೂ ಅಲ್ಲ. ಕ್ಯಾನ್ಸರ್ ಒಂದು ದೊಡ್ಡ ರೋಗ ಎಂದು ಭಯ ಪಡುವವರಿಗೆ ಶಿವಣ್ಣ ಅವರ ಜರ್ನಿ ಮೋಟಿವೇಟ್ ಮಾಡುತ್ತದೆ. ಹಾಗಾಗಿ ಕ್ಯಾನ್ಸರ್ ರೋಗಿಗಳಿಗೆ ಧೈರ್ಯ ತುಂಬುವ ಸಲುವಾಗಿ ಶಿವಣ್ಣ ಹಾಗೂ ಗೀತಕ್ಕ ಇಬ್ಬರು ಸೇರಿ, ಶಿವಣ್ಣ ಅವರ ಕ್ಯಾನ್ಸರ್ ಜರ್ನಿಯನ್ನು ಒಂದು ವಿಶೇಷ ಡಾಕ್ಯುಮೆಂಟರಿ ಆಗಿ ಮಾಡಬೇಕು ಎಂದು ನಿರ್ಧಾರ ಮಾಡಿದ್ದಾರೆ. ಇದರಿಂದ ಒಂದಷ್ಟು ಜನರಿಗೆ ಸಹಾಯ ಆಗುತ್ತದೆ ಎನ್ನುವ ಕಾರಣಕ್ಕೆ ಇಬ್ಬರೂ ಈ ನಿರ್ಧಾರ ತೆಗೆದುಕೊಂಡಿದ್ದು, ಅಭಿಮಾನಿಗಳಿಗೆ ಕೂಡ ಇದು ಬಹಳ ಇಷ್ಟವಾಗಿದೆ.