ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಎಂದರೆ ಎಲ್ಲಾ ಕಡೆ ಫೇಮಸ್. ಶೈನ್ ಶೆಟ್ಟಿ ಅವರು ಬಿಗ್ ಬಾಸ್ ರಿಯಾಲಿಟಿ ಶೋ ಇಂದ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಶೈನ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿದ್ದಾಗ ದೀಪಿಕಾ ದಾಸ್ ರವರ ಜೊತೆ ಆತ್ಮೀಯರಾಗಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬಂದಾಗಲೂ ಕೂಡ ಶೈನ್ ಶೆಟ್ಟಿ ಹಾಗೂ ದೀಪಿಕಾ ವಿವಾಹವಾಗುತ್ತಾರೆ ಎನ್ನುವ ಸುದ್ದಿ ಹಬ್ಬಿದವು ಆದರೆ ಈ ಎಲ್ಲಾ ಅಂತ ಕಂತೆಗಳು ಹೊಸ ತಿರುವು ಪಡೆದುಕೊಂಡಿದೆ. ನಟ ಶೈನ್ ಶೆಟ್ಟಿ ಹಾಗೂ ನಕ್ಷತ್ರ ಧಾರಾವಾಹಿಯಲ್ಲಿ ವಿಲನ್ ಆಗಿ ಅಬ್ಬರಿಸುತ್ತಿರುವ ಸುಕೃತ ನಾಗ್ ಇಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿ ಬಹಳ ಜೋರಾಗಿಯೇ ಹಬ್ಬಿತ್ತು. ಇಬ್ಬರು ಸದ್ಯದಲ್ಲಿಯೇ ಹೊಸ ಜೀವನ ಶುರು ಮಾಡಲಿದ್ದಾರೆ ಎನ್ನಲಾಗುತ್ತಿತ್ತು. ಈ ಬಗ್ಗೆ ನಟ, ಶೈನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಒಂದೇ ಫೀಲ್ಡ್ ನಲ್ಲಿರುವ ಕಾರಣ ನನಗೂ ಸುಕೃತಾಗೂ ಪರಿಚಯ ವಿದೆ. ಆದರೆ ಸಂಪರ್ಕವಿಲ್ಲ. ಇಬ್ಬರು ಇದುವರೆಗೂ ಭೇಟಿಯೂ ಆಗಿಲ್ಲ, ಮಾತುಕತೆಯನ್ನು ನಡೆಸಿಲ್ಲ. ಆದರೂ ಈ ರೀತಿಯಾದ ವಿಚಾರ ಸ್ಪ್ರೆಡ್ ಆಗಿದೆ. ದಯವಿಟ್ಟು ಈ ರೀತಿಯೆಲ್ಲಾ ಅಪಪ್ರಚಾರ ಮಾಡವೇಡಿ ಎಂದಿದ್ದಾರೆ. ಸದ್ಯ ನಾನು ನನ್ನ ಕೆರಿಯರ್ ನತ್ತ ಗಮನ ಹರಿಸಿದ್ದೇನೆ. ಇಂಥ ಸುದ್ದಿಯನ್ನೆಲ್ಲ ಹಬ್ಬಿಸಬೇಡಿ. ಮದುವೆ ಬಗ್ಗೆ ನಾನು ಇನ್ನು ಆಲೋಚನೆ ಕೂಡ ಮಾಡಿಲ್ಲ ಎಂದಿದ್ದಾರೆ.
ಈ ಮೂಲಕ ಸುಕೃತಾ ನಾಗ್ ಜೊತೆಗಿನ ಗಾಸಿಪ್ ಸುದ್ದಿಗೆ ಎಳ್ಳು ನೀರು ಬಿಟ್ಟಿದ್ದಾರೆ. ಶೈನ್ ಶೆಟ್ಟಿ, ಪುನೀತ್ ಅವರ ಅಪ್ಪು ಹಾಗೂ ರಿಷಬ್ ಅವರ ಕಾಂತಾರ ಸಿನಿಮಾದಲ್ಲಿ ನಟಿಸಿದ್ದರು. ಇನ್ನಷ್ಟು ಬೇರೆ ಬೇರೆ ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಮದುವೆ ವದಂತಿ ಬಗ್ಗೆ ನಟಿ ಸುಕೃತ ಅವರು ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ರೀತಿ ಸುದ್ದಿಗಳಿಗೆಲ್ಲಾ ತಲೆ ಕೆಡಿಸಿಕೊಳ್ಳಬಾರದು ಎಂದು ಅಂದುಕೊಳ್ಳುತ್ತಿದ್ದಾರಂತೆ. ಸುಕೃತ ಅವರು ಲಕ್ಷಣ ಧಾರಾವಾಹಿಯಲ್ಲಿ ವಿಲನ್ ಶ್ವೇತಾ ಆಗಿ ಮಿಂಚುತ್ತಿದ್ದಾರೆ. ಅಗ್ನಿಸಾಕ್ಷಿಯಲ್ಲಿ ಹೀರೋ ತಂಗಿಯಾಗಿ ಕಾಣಿಸಿಕೊಂಡು ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿಕೊಂಡಿದ್ದರು.
ಅಲ್ಲಿ ತುಂಬಾ ಸಾಫ್ಟ್ ಪಾತ್ರವನ್ನು ಮಾಡಿದ ನಟಿ ನಂತರದಲ್ಲಿ ಲಕ್ಷಣ ಸೀರಿಯಲ್ನಲ್ಲಿ ಭರ್ಜರಿಯಾಗಿ ವಿಲನ್ ಪಾತ್ರದಲ್ಲಿ ಹೈಲೈಟ್ ಆಗಿದ್ದಾರೆ. ವಿಲನ್ ಆಗಿ ನಟಿಸುತ್ತಿರುವ ಸುಕೃತ ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ಕೂಡಾ ವ್ಯಕ್ತವಾಗುತ್ತಿದೆ. ಅವರ ಫ್ಯಾನ್ಸ್ ಫಾಲೋವರ್ಸ್ಗಳಲ್ಲಿ ಒಂದಷ್ಟು ಜನರು ಮಾತ್ರ ಅಗ್ನಿ ಸಾಕ್ಷಿಯಲ್ಲಿ ನಿಮ್ಮ ಅಭಿನಯ ಮರೆಯಲಾಗದು ಎಂದು ಹೇಳುತ್ತಿದ್ದಾರೆ. ಅಗ್ನಿ ಸಾಕ್ಷಿ ಧಾರಾವಾಹಿ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು ನಟಿ ಸುಕೃತ.