ಬಾಲಿವುಡ್ ನ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಅವರು ನಮ್ಮ ಕರ್ನಾಟಕದ ಪ್ರತಿಭೆ, ಮಂಗಳೂರಿನ ಮೂಲದ ನಟಿ ಶಿಲ್ಪಾ ಶೆಟ್ಟಿ ಅವರು ಬಾಲಿವುಡ್ ನಲ್ಲಿ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಿಲ್ಪಾ ಶೆಟ್ಟಿ ಅವರು ಹೆಸರು ಮಾಡಿದ್ದು, ಕರ್ನಾಟಕದ ಹೆಸರನ್ನು ಎತ್ತಿ ಹಿಡಿದಿದ್ದಾರೆ ಎಂದರೆ ತಪ್ಪಲ್ಲ. ಶಿಲ್ಪಾ ಶೆಟ್ಟಿ ಅವರಿಗೆ ಕರ್ನಾಟಕ ಹಾಗೂ ಕನ್ನಡದ ಬಗ್ಗೆ ಗೌರವವಿದೆ. ಆಗಾಗ ತಮ್ಮ ಹುಟ್ಟೂರಿಗೆ ಬಂದು ದೇವರಿಗೆ ಪೂಜೆ ಮಾಡಿಸುವುದು ಉಂಟು. ಇದೀಗ ಶಿಲ್ಪಾ ಶೆಟ್ಟಿ ಅವರು ಚಿಕ್ಕಮಗಳೂರಿನ ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆಯೊಂದನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಈಗಾಗಲೇ ಆನೆ ದೇವಸ್ಥಾನವನ್ನು ತಲುಪಿದ್ದು, ಶ್ರೀಗಳು ಬರಮಾಡಿಕೊಂಡಿದ್ದಾರೆ.

ಹೌದು, ನಟಿ ಶಿಲ್ಪಾ ಶೆಟ್ಟಿ ಅವರು ಮುಂಬೈನಲ್ಲಿ ಜೀವನ ಮಾಡುತ್ತಿದ್ದರೂ ಕೂಡ, ಕರ್ನಾಟಕದ ಜೊತೆಗಿನ ನಂಟನ್ನು ಕಳೆದುಕೊಂಡಿಲ್ಲ. ಆಗಾಗ ಅವರು ಇಲ್ಲಿನ ದೇವಸ್ಥಾನಗಳಿಗೆ ಭೇಟಿ ಕೊಡುವುದನ್ನ ನೋಡಿದ್ದೇವೆ, ಹಾಗೆಯೇ ಹಲವು ಕಾರ್ಯಕ್ರಮಗಳಲ್ಲಿ ತುಳು ಭಾಷೆಯನ್ನ ಬಹಳ ಖುಷಿಯಿಂದ ಮಾತನಾಡುವುದನ್ನು ನೋಡಿದ್ದೇವೆ. ತಾಯ್ನಾಡಿನ ಜೊತೆಗಿನ ಸಂಬಂಧವನ್ನ ನಟಿ ಶಿಲ್ಪಾ ಶೆಟ್ಟಿ ಅವರು ಕಡಿದುಕೊಂಡಿಲ್ಲ, ಇದು ಎಲ್ಲರೂ ಸಂಭ್ರಮ ಪಡಬೇಕಾದ ವಿಷಯ. ಇದೀಗ ಇವರು ದೇವಸ್ಥಾನಕ್ಕೆ ರೋಬೋಟಿಲ್ ಆನೆಯನ್ನು ಕೊಟ್ಟಿರುವುದು ಇನ್ನು ಒಳ್ಳೆಯ ವಿಷಯ ಆಗಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ರಂಭಾಪುರಿ ಮಠದ ಶ್ರೀಗಳಾದ ಶ್ರೀ ಸೋಮೇಶ್ವರ ಜಗದ್ಗುರುಗಳು ಶಿಲ್ಪಾ ಶೆಟ್ಟಿ ಅವರ ಗಿಫ್ಟ್ ಅನ್ನು ಒಪ್ಪಿಕೊಂಡು, ಆನೆಯನ್ನು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಈ ರೋಬೋಟಿಕ್ ಆನೆಯು ನಿಜವಾದ ಆನೆಯ ಥರವೇ ಇದೆ. ಯಾವಾಗಲೂ ಕಣ್ಣನ್ನು ಬಿಟ್ಟುಕೊಂಡು, ಸೊಂಡಿಳನ್ನು ಆಡಿಸುತ್ತಾ, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಆಶೀರ್ವಾದವನ್ನು ಸಹ ಮಾಡಲಿದೆ. ಆನೆಯನ್ನು ನೋಡಿದರೆ, ಇದು ರೋಬೋಟಿಕ್ ಆನೆ ಎಂದು ಗೊತ್ತಾಗುವುದು ಇಲ್ಲ. ಅಷ್ಟು ನ್ಯಾಚುರಲ್ ಆಗಿ ಕಾಣುತ್ತದೆ. ಈಗಾಗಲೇ ಆನೆಯು ದೇವಸ್ಥಾನದ ಆವರಣಕ್ಕೆ ಬಂದಿದ್ದು, ಅದಕ್ಕಾಗಿ ಹೊಸ ಜಾಗವನ್ನು ತಯಾರು ಮಾಡಲಾಗಿದೆ.

ಇನ್ನು ಶಿಲ್ಪಾ ಶೆಟ್ಟಿ ಕುಂದ್ರಾ ಅವರು ಸಹ ಆನೆಯನ್ನು ದೇವಸ್ಥಾನಕ್ಕೆ ಕೊಡುವುದಕ್ಕೆ ಬಂದಿದ್ದರು. ಆ ವೇಳೆ ಆನೆಯನ್ನು ಶಿಲ್ಪಾ ಶೆಟ್ಟಿ ಅವರ ಜೊತೆಗೆ ತಂದ ಸಿಬ್ಬಂದಿಗಳು, ಶಿಲ್ಪಾ ಶೆಟ್ಟಿ ಅವರು ನಿಜವಾದ ಆನೆಯನ್ನು ಕೊಡಬೇಕು ಅಂದುಕೊಂಡಿದ್ದರು, ಆದರೆ ಕಾನೂನಿನ ರೂಲ್ಸ್ ಗಳು ಇರುವ ಕಾರಣ ಬೇಡ ಎಂದು ರೋಬೋಟಿಕ್ ಆನೆಯನ್ನು ಕೊಟ್ಟಿರುವುದಾಗಿ ವಿವರಿಸಿದ್ದಾರೆ. ಇನ್ನು ಆನೆ ಈಗಾಗಲೇ ದೇವಸ್ಥಾನದ ಆವರಣದಲ್ಲಿ ಇರುವುದರಿಂದ ಜನರು ರೋಬೋಟಿಕ್ ಆನೆಯನ್ನು ನೋಡಲು ದೇವಸ್ಥಾನಕ್ಕೆ ಬಂದಿದ್ದು, ಆನೆಯ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಜನರ ಸಂಭ್ರಮ ಸಹ ಮುಗಿಲು ಮುಟ್ಟಿದೆ..
ಶಿಲ್ಪಾ ಶೆಟ್ಟಿ ಅವರು ಮಾಡಿರುವ ಈ ಒಂದು ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ಸಿಕ್ಕಿದೆ. ಹಾಗೆಯೇ ಇವರಿಗೆ ನಮ್ಮ ರಾಜ್ಯದ ಬಗ್ಗೆ ಇರುವ ಅಭಿಮಾನ ಸಹ ಗೊತ್ತಾಗುತ್ತಿದೆ. ಬಾಲಿವುಡ್ ಗೆ ಹೋಗಿ, ಅಲ್ಲಿ ಅಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರೂ ಸಹ, ಶಿಲ್ಪಾ ಶೆಟ್ಟಿ ಅವರು ತಮ್ಮ ಬೇರನ್ನು ಮರೆಯದೆ ಇರುವುದು ಮೆಚ್ಚಲೇಬೇಕಾದ ವಿಷಯ. ಎಲ್ಲಾ ಕಲಾವಿದರು ಸಹ ಈ ಒಂದು ಗುಣವನ್ನು ಅಳವಡಿಸಿಕೊಳ್ಳಬೇಕು. ಅದು ಎಲ್ಲರಿಗೂ ಒಳ್ಳೆಯದು. ಇನ್ನು ನಮ್ಮ ರಾಜ್ಯದ ದೇವಸ್ಥಾನಗಳಲ್ಲಿ ನಿಜವಾದ ಆನೆಗಳ ಬದಲು ಇಂಥ ಆನೆಗಳನ್ನು ತಂದು ಇಡುವುದು ನಿಜಕ್ಕೂ ಒಂದು ಒಳ್ಳೆಯ ವಿಷಯ ಆಗುತ್ತದೆ.