ಬಾಲಿವುಡ್ ಮಂದಿಯ ಸ್ಟೈಲ್ಗೆ ಸೋಲದವರಿಲ್ಲ. ಸ್ಟಾರ್ ನಟಿಯರ ಸೊಗಸಾದ ಬಟ್ಟೆಗಳು, ಅಲಂಕಾರಿಕ ಪರಿಕರಗಳ ಮೇಲೆ ಎಲ್ಲರೂ ಒಂದು ಕಣ್ಣು ನೆಟ್ಟಿರುತ್ತಾರೆ. ಹೆಚ್ಚಾಗಿ ಜನರ ಗಮನವು ಅವರ ಪರ್ಸ್ಗಳ ಮೇಲೆ ಇರುತ್ತದೆ. ಕೆಲವೊಮ್ಮೆ ಅವರ ಲಕ್ಷಗಟ್ಟಲೆ ಮೌಲ್ಯದ ಶೂಗಳ ಮೇಲಿರುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ಈ ಸ್ಟಾರ್ಗಳ ಸ್ಟೈಲ್ ಅನ್ನು ಕಾಪಿ ಮಾಡುವುದನ್ನು ನಾವು ನೋಡಿರುತ್ತೇವೆ. ಇನ್ನು ನೀತಾ ಅಂಬಾನಿ ವಿಷಯಕ್ಕೆ ಬಂದರೆ ಅವರ ಸ್ಟೈಲ್ ಯಾವುದೇ ನಟಿಯರಿಗಿಂತ ನಾಲ್ಕು ಹೆಜ್ಜೆ ಮುಂದಿರುತ್ತದೆ. ಅವರ ಬಟ್ಟೆಯಿಂದ ಹಿಡಿದು ಆಭರಣದವರೆಗೆ ಎಲ್ಲವೂ ವಿಶಿಷ್ಟವಾಗಿರುತ್ತದೆ. ಅಂತೆಯೇ ಈ ಬಾರಿಯೂ ಮತ್ತೊಮ್ಮೆ ತಮ್ಮ ವಿಶಿಷ್ಟ ಸ್ಟೈಲ್ನಿಂದ ಜನರ ಗಮನ ಸೆಳೆದಿದ್ದಾರೆ ನೀತಾ. ಅಂದಹಾಗೆ ಸ್ಟೈಲಿಂಗ್ ವಿಷಯದಲ್ಲಿ ಯಾರಾದರೂ ಆಕೆಗೆ ಪೈಪೋಟಿ ನೀಡಲು ಸಾಧ್ಯವಾದರೆ, ಅದು ಹೊಸ ಒಟಿಟಿ ಸ್ಟಾರ್ ಶಾಲಿನಿ ಪಾಸಿ ಮಾತ್ರ. ನೀತಾ ಅವರು ಭಾಗವಹಿಸಿರುವ ಇದೇ ಈವೆಂಟ್ನಲ್ಲಿ ಶಾಲಿನಿ ಮತ್ತೊಮ್ಮೆ ತನ್ನ ಅದ್ಭುತ ಸ್ಟೈಲ್ನಿಂದ ಜನರ ಗಮನಸೆಳೆದಿದ್ದಾರೆ.

ನೀತಾ ಅಂಬಾನಿ ಮತ್ತು ಶಾಲಿನಿ ಪಾಸಿ ಇಬ್ಬರೂ ಒಂದೇ ಈವೆಂಟ್ನಲ್ಲಿ ಕಾಣಿಸಿಕೊಂಡರು. ಅಲ್ಲಿ ಇಬ್ಬರೂ ತುಂಬಾ ಸೊಗಸಾದ ಬಟ್ಟೆಗಳಲ್ಲಿ ಕಾಣಿಸಿಕೊಂಡರು. ಆದರೆ ಅವರ ಬಟ್ಟೆಗಳಿಗಿಂತ ಈ ಪರಿಕರದ ಬಗ್ಗೆ ಮಾತ್ರ ಹೆಚ್ಚು ಚರ್ಚಿಸಲಾಯಿತು. ಹೌದು ಇಡೀ ಸಮಾರಂಭದಲ್ಲಿ ಜನರ ಕಣ್ಣು ಅವರ ಬ್ಯಾಗ್ ಮೇಲೆ ಮಾತ್ರ ನೆಟ್ಟಿತ್ತು. ಬಾಲಿವುಡ್ ತಾರೆಯರಿಂದ ಅಲಂಕೃತಗೊಂಡಿದ್ದ ಈ ಕೂಟದಲ್ಲಿ ಎಲ್ಲರೂ ಸ್ಟೈಲಿಶ್ ಆಗಿಯೇ ಕಾಣಿಸಿಕೊಂಡಿದ್ದರು. ಆದರೆ ನೀತಾ ಅಂಬಾನಿ ಮತ್ತು ಶಾಲಿನಿ ಪಾಸಿ ಹ್ಯಾಂಡ್ ಬ್ಯಾಗ್ ಹಿಡಿದು ಆಗಮಿಸುತ್ತಿದ್ದಂತೆ ಆ ತರಹದ ಬ್ಯಾಗ್ ಬೇರೆ ಯಾರ ಕೈಯಲ್ಲೂ ಕಾಣದೇ ಜನ ಸುಮ್ಮನೆ ಮಿಕಿ ಮಿಕಿ ನೋಡುತ್ತಾ ನಿಂತಿದ್ದರು. ಸದ್ಯ ಇವರಿಬ್ಬರ ಬ್ಯಾಗ್ಗಳಿಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ನೀತಾ ಅಂಬಾನಿ ಲುಕ್
ನೀತಾ ಅಂಬಾನಿ ತುಂಬಾ ಸ್ಟೈಲಿಶ್. ಇಲ್ಲಿ ಅವರು ಬ್ಲ್ಯಾಕ್ ಅಂಡ್ ವೈಟ್ ಲುಕ್ ನಲ್ಲಿ ಕಾಣಿಸಿಕೊಂಡರು. ಅವರು ಕಪ್ಪು ಪ್ಯಾಂಟ್ನೊಂದಿಗೆ ಬಿಳಿ ಚೆಕ್ ಬ್ಲೇಜರ್ ಅನ್ನು ಸಹ ಹಾಕಿದ್ದರು. ಇದರೊಂದಿಗೆ, ಅವರು ಮುದ್ದಾದ ಸಣ್ಣ ಬ್ಯಾಗ್ ಅನ್ನು ಕೈಯ್ಯಲ್ಲಿ ಹಿಡಿದಿದ್ದರು. ಸಿನಿಮಾ ಹಾಲ್ನಲ್ಲಿ ಸಿಗುವ ಪಾಪ್ಕಾರ್ನ್ ಬಕೆಟ್ನಂತೆಯೇ ಈ ಬ್ಯಾಗ್ ವಿಭಿನ್ನವಾಗಿತ್ತು. ಈ ಕಪ್ಪು ಮತ್ತು ಬಿಳಿ ಬಣ್ಣದ ಬ್ಯಾಗ್ನಲ್ಲಿ ಪಾಪಿಂಗ್ ಪಾಪ್ಕಾರ್ನ್ಗಳು ಸಹ ಗೋಚರಿಸುತ್ತವೆ, ಅದು ನೀತಾ ಅವರ ಮಿನುಗುವ ಉಡುಪನ್ನು ಹೆಚ್ಚು ಕ್ಲಾಸಿಯನ್ನಾಗಿ ಮಾಡುತ್ತಿದೆ. ಈ ಬ್ಯಾಗ್ ನೀತಾ ಅಂಬಾನಿಯವರ ಫುಲ್ ಸ್ಟೈಲಿಂಗ್ ಲುಕ್ಗೆ ಸಾಕ್ಷಿಯಾಗಿದೆ.

ಶಾಲಿನಿ ಪಾಸಿ ಲುಕ್
ಶಾಲಿನಿ ಪಾಸಿ ಅವರ ಸ್ಟೈಲ್ ಕೂಡ ಯಾರಿಗಿಂತ ಏನೂ ಕಡಿಮೆ ಇರಲಿಲ್ಲ. ನೆಟ್ಫ್ಲಿಕ್ಸ್ನ ಒಟಿಟಿ ಶೋ ‘ಫ್ಯಾಬುಲಸ್ ಲೈವ್ಸ್ ವರ್ಸಸ್ ಬಾಲಿವುಡ್ ವೈವ್ಸ್’ ನಲ್ಲಿ ಕಾಣಿಸಿಕೊಂಡಂತೆ ಶಾಲಿನಿ ಪಾಸಿ ಕೂಡ ಹಾಜರಿದ್ದ ಎಲ್ಲರಿಗೂ ಸ್ಪರ್ಧೆಯನ್ನು ನೀಡುತ್ತಿದ್ದರು. ಈ ಈವೆಂಟ್ನಲ್ಲೂ ಅವರ ಸ್ಟೈಲ್ ಮೇಲ್ಮುಖವಾಗಿ ಕಾಣುತ್ತದೆ. ಪಾಸ್ಕೊ ಗ್ರೂಪ್ ಮಾಲೀಕ ಸಂಜಯ್ ಪಾಸಿ ಅವರ ಪತ್ನಿಯಾದ ಶಾಲಿನಿ ಪಾಸಿ ಬೂದು ಬಣ್ಣದ ಸ್ಯಾಟಿನ್ ಫಿನಿಶ್ ಡ್ರೆಪ್ ಶಾರ್ಟ್ ಡ್ರೆಸ್ ಧರಿಸಿದ್ದರು. ಅದರೊಂದಿಗೆ ತನ್ನ ಉದ್ದನೆಯ ಕೂದಲನ್ನು ಪೋನಿ ಸ್ಟೈಲ್ನಲ್ಲಿ ಕಟ್ಟಿದ್ದರು. ವಿಶೇಷ ಆಭರಣಗಳೊಂದಿಗೆ ವಿಶಿಷ್ಟವಾದ ಬ್ಯಾಗ್ ಕೂಡ ನೆರೆದರವರ ಕಣ್ಣು ಕುಕ್ಕುತ್ತಿತ್ತು. ಹೌದು, ಆಕೆಯ ಬ್ಯಾಗ್ ಅನ್ಯಗ್ರಹದ ಜೀವಿಯಂತೆ ಕಾಣುತ್ತಿತ್ತು. ಆದರೆ ಶಾಲಿನಿ ತನ್ನ OTT ಕಾರ್ಯಕ್ರಮದ ಪ್ರಚಾರದ ಸಮಯದಲ್ಲಿ ಅನೇಕ ಸೊಗಸಾದ ಬ್ಯಾಗ್ಗಳೊಂದಿಗೆ ಕಾಣಿಸಿಕೊಂಡಿದ್ದನ್ನು ನಾವಿಲ್ಲಿ ಗಮನಿಸಬಹುದು.