ಬಾಲಿವುಡ್ ಸ್ಟಾರ್ ಹೀರೋಗಳ ಬಗ್ಗೆ ನಾವ್ಯಾರು ಹೊಸದಾಗಿ ಹೇಳಬೇಕಿಲ್ಲ. ಬಾಲಿವುಡ್ ಖಾನ್ ಗಳು ಭಾರತ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಸ್ಟಾರ್ ಹೀರೋಗಳು. ಶಾರುಖ್ ಖಾನ್, ಸಲ್ಮಾನ್ ಖಾನ್ ಹಾಗೂ ಆಮೀರ್ ಖಾನ್ ಮೂವರು ಸಹ ಅತಿಹೆಚ್ಚು ಹಣಗಳಿಕೆ ಮಾಡಿರುವ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇವರ ಸಿನಿಮಾಗಳು ಸಾವಿರ ಕೋಟಿ ಹಣಗಳಿಕೆ ಮಾಡಿವೆ. ಆದರೆ ಇವರೆಲ್ಲರನ್ನು ಹಿಂದಿಕ್ಕಿ 10 ಸಾವಿರ ಕೋಟಿ ಹಣಗಳಿಕೆ ಮಾಡಿರುವ ಸಿನಿಮಾಗಳಲ್ಲಿ ನಟಿಸಿರುವುದು ಈ ಒಬ್ಬ ನಟಿ.. ಆಕೆ ಕರ್ನಾಟಕದವರು ಎನ್ನುವುದು ನಮಗೆ ಹೆಮ್ಮೆಯ ವಿಷಯ..

ಶಾರುಖ್ ಖಾನ್ ಅವರ ಸೂಪರ್ ಹಿಟ್ ಸಿನಿಮಾಗಳು ಇತ್ತೀಚೆಗೆ ಬಂದದ್ದು ಜವಾನ್, ಪಠಾಣ್.. ಈ ಸಿನಿಮಾಗಳನ್ನು ಸೇರಿ, ಇವರ ಹಿಂದಿನ ಸಿನಿಮಾಗಳ ಕಲೆಕ್ಷನ್ ನೋಡಿದರೆ ₹9000 ಕೋಟಿ ದಾಟಿದೆ. ಇನ್ನು ಆಮೀರ್ ಖಾನ್ ಅವರ ಸಿನಿಮಾಗಳು ಈವರೆಗೂ ₹8300 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿವೆ. ಇನ್ನು ಸಲ್ಮಾನ್ ಖಾನ್ ಅವರು ₹7200 ಕೋಟಿ ರೂಪಾಯಿ ಹಣಗಳಿಕೆ ಮಾಡಿದೆ. ಇವರು ಬಾಲಿವುಡ್ ನ ಖಾನ್ ಗಳು, ಆದರೆ ಇವರನ್ನೇ ಹಿಂದಿಕ್ಕಿರೋದು ಬೇರೆ ಯಾರು ಅಲ್ಲ, ಬೆಂಗಳೂರಿನ ಬೆಡಗಿ ದೀಪಿಕಾ ಪಡುಕೋಣೆ. ಇದು ಕರ್ನಾಟಕದವರಾಗಿ ನಾವು ಹೆಮ್ಮೆ ಪಡುವಂಥ ವಿಷಯ.

ಹೌದು, ಇತ್ತೀಚಿನ ವರ್ಷಗಳಲ್ಲಿ ಭಾರತದ ಅತ್ಯಂತ ಯಶಸ್ವಿ ನಟಿ ದೀಪಿಕಾ ಪಡುಕೋಣೆ ಆಗಿದ್ದಾರೆ. ಹೌದು, ಇವರ ಸಿನಿಮಾಗಳು ₹10,000 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿದೆ. ಪಠಾಣ್, ಕಲ್ಕಿ, ಸಿಂಗಮ್ 3 ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳಲ್ಲಿ ದೀಪಿಕಾ ನಟಿಸಿದ್ದಾರೆ. ಕಲ್ಕಿ ಸಿನಿಮಾ ಕಳೆದ ವರ್ಷ ತೆರೆಕಂಡು ಸಾವಿರ ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿದೆ. ಇದಕ್ಕಿಂತ ಮೊದಲು ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಪದ್ಮಾವತ್ ಸಿನಿಮಾ ನೂರಾರು ಕೋಟಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಇವರು ನಟಿಸಿರುವ ಭಾರತದ ಸಿನಿಮಾಗಳನ್ನು ತೆಗೆದುಕೊಂಡರೆ, ಅವು ₹8000 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿದೆ.

ದೀಪಿಕಾ ಪಡುಕೋಣೆ ಹಾಲಿವುಡ್ ನಲ್ಲಿ ಸಹ ನಟಿಸಿದ್ದಾರೆ. ಇವರ ಹಾಲಿವುಡ್ ಸಿನಿಮಾಗಳು ಸುಮಾರು ₹2200 ಕೋಟಿ ಯಷ್ಟು ಹಣಗಳಿಕೆ ಮಾಡಿದೆ. ಇದೆಲ್ಲವನ್ನು ಒಟ್ಟಾಗಿ ನೋಡಿದರೆ, ದೀಪಿಕಾ ಪಡುಕೋಣೆ ಅವರ ಸಿನಿಮಾಗಳು ಒಟ್ಟಾರೆಯಾಗಿ ₹10,000 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿದೆ. ಖಾನ್ ಗಳಿಗಿಂತ ಇವರು ಹೆಚ್ಚು ಯಶಸ್ವಿ ನಟಿ ಎಂದರೆ ತಪ್ಪಲ್ಲ. ಈಗ ತಾಯ್ತನದ ಸಂತೋಷವನ್ನು ಎಂಜಾಯ್ ಮಾಡುತ್ತಿರುವ ದೀಪಿಕಾ ಅವರು ಆದಷ್ಟು ಬೇಗ ನಟನೆಗೆ ಕಂಬ್ಯಾಕ್ ಮಾಡಲಿದ್ದಾರೆ. ಇವರು ಕಲ್ಕಿ2 ಹಾಗೂ ಬ್ರಹ್ಮಾಸ್ತ್ರ2 ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಈಗಾಗಲೇ ಕಲ್ಕಿ ಹಾಗೂ ಬ್ರಹ್ಮಾಸ್ತ್ರ ಸಿನಿಮಾ ಯಾವ ಮಟ್ಟದಲ್ಲಿ ಸದ್ದು ಮಾಡಿತ್ತು ಎಂದು ನಮಗೆಲ್ಲಾ ಗೊತ್ತೇ ಇದೆ. ಈ ಸಿನಿಮಾದ ಸೀಕ್ವೆಲ್ ಗಳು ಬಂದರೆ ಅವುಗಳು ಸಹ ಬಾಕ್ಸ್ ಆಫೀಸ್ ಧೂಳೆಬ್ಬಿಸುವುದು ಖಂಡಿತ. ಈ ರೀತಿಯಲ್ಲಿ ನಮ್ಮ ದೇಶದ ಅತ್ಯಂತ ಜನಪ್ರಿಯ ನಾಯಕಿ ಆಗಿದ್ದಾರೆ ದೀಪಿಕಾ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ಕನ್ನಡ ಸಿನಿಮಾದಲ್ಲಿ ಮೊದಲು ನಟಿಸಿ, ಬಾಲಿವುಡ್ ಗೆ ಎಂಟ್ರಿ ಕೊಟ್ಟು ಇಂದು ದೀಪಿಕಾ ಅವರು ಈ ಹಂತಕ್ಕೆ ಬೆಳೆದು ನಿಂತಿದ್ದಾರೆ ಎಂದರೆ ನಮಗೆ ನಿಜಕ್ಕೂ ಹೆಮ್ಮೆಯ ವಿಷಯ. ಕನ್ನಡದ ಹುಡುಗಿ ಇನ್ನು ಎತ್ತರಕ್ಕೆ ಬೆಳೆಯಲಿ.