ಸಿನಿಮಾ ಅನ್ನೋದು ಮನರಂಜನೆಯ ದೊಡ್ಡ ಮಾಧ್ಯಮ. ದಿನೇ ದಿನೇ ಜನರಿಗೆ ಸಿನಿಮಾ ಮೇಲಿನ ಕ್ರೇಜ್ ಹೆಚ್ಚಾಗುತ್ತಿದೆ, ವಿಭಿನ್ನವಾದ ಕಥೆಗಳನ್ನು ಸಿನಿಮಾ ರೂಪದಲ್ಲಿ ನೋಡಬೇಕು ಎಂದು ಜನರು ಬಯಸುತ್ತಿದ್ದಾರೆ. ಅದೇ ರೀತಿ ಸಿನಿಮಾ ತಯಾರಕರು ಸಹ ಒಳ್ಳೊಳ್ಳೆಯ ಕಥೆಗಳನ್ನು ತೆರೆಮೇಲೆ ನೋಡುವುದಕ್ಕೆ ಬಯಸುತ್ತಿದ್ದಾರೆ. ಎಲ್ಲಾ ಭಾಷೆಗಳಲ್ಲಿ ಸಹ ಉತ್ತಮ ಕಥೆ ಇರುವ ಸಿನಿಮಾಗಳು ತೆರೆ ಕಾಣುತ್ತಿವೆ. ಇದರ ನಡುವೆ ಸಿನಿಮಾಗಳ ಹಣಗಳಿಕೆ ಕೂಡ ಅಷ್ಟೇ ಅದ್ಧೂರಿಯಾಗಿದೆ. ಭಾರತೀಯ ಸಿನಿಮಾಗಳು ತಾವು ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಸಾವಿರಾರು ಕೋಟಿ ಹಣಗಳಿಕೆ ಮಾಡುತ್ತಿದೆ.

ಹೌದು, ಹಾಲಿವುಡ್ ಸಿನಿಮಾಗಳಿಗೆ ಮಾತ್ರ ಈ ರೀತಿ ರೀಚ್ ಸಿಗುತ್ತದೆ ಎಂದು ಎಲ್ಲರೂ ಭಾವಿಸಿದ್ದ ವೇಳೆ, ಭಾರತದ ಸಿನಿಮಾಗಳಿಗೆ ಒಳ್ಳೆಯ ರೀಚ್ ಸಿಗುತ್ತಿರುವುದನ್ನು ನೋಡಿದರೆ ಸಂತೋಷ ಹಾಗೂ ಹೆಮ್ಮೆ ಆಗುತ್ತದೆ. ಬಾಲಿವುಡ್ ಮತ್ತು ಸೌತ್ ಸಿನಿಮಾಗಳು, ಎರಡು ಕೂಡ ಇದರಲ್ಲಿ ಭಾಗಿಯಾಗಿದೆ. ಹೀಗಿರುವಾಗ ಭಾರತೀಯ ಚಿತ್ರರಂಗದಲ್ಲಿ 1000 ಕೋಟಿ ಗಳಿಕೆ ಕಂಡಂಥ ಸಿನಿಮಾ ನೀಡಿದ ಮೊದಲ ನಟಿ ಯಾರು ಎನ್ನುವ ಕುತೂಹಲ ಶುರುವಾಗಿದೆ. ಈ ನಟಿ ನಮ್ಮ ದಕ್ಷಿಣ ಭಾರತಕ್ಕೆ ಸೇರಿದವರು ಎನ್ನುವುದು ಇನ್ನೊಂದು ಸಂತೋಷದ ವಿಷಯ ಆಗಿದೆ. ಹೌದು, ಯಾವುದೇ ಬಾಲಿವುಡ್ ನಟಿ ಅಲ್ಲ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ದೀಪಿಕಾ ಪಡಿಕೋಣೆ ಅಲ್ಲ, ಆಲಿಯಾ ಭಟ್ ಅಲ್ಲ, ಅನುಷ್ಕಾ ಶರ್ಮಾ ಅಲ್ಲಾ ಅಥವಾ ಇನ್ಯಾವುದೇ ನಟಿಯು ಅಲ್ಲ. 1000 ಕೋಟಿ ಕಲೆಕ್ಷನ್ ಮಾಡಿದ ಸಿನಿಮಾದಲ್ಲಿ ನಟಿಸಿದ ಮೊದಲ ನಟಿ, ರಮ್ಯಾ ಕೃಷ್ಣನ್. ಹೌದು, ಇದು ನಿಜ. ಬಾಹುಬಲಿ ಸಿನಿಮಾ ಸೀರೀಸ್ ನಲ್ಲಿ ಇವರ ಪಾತ್ರಕ್ಕೆ ಇದ್ದ ಪ್ರಾಮುಖ್ಯತೆ ಎಷ್ಟರ ಮಟ್ಟಿಗೆ ಇದೆ ಎಂದು ಗೊತ್ತೇ ಇದೆ. ಶಿವಗಾಮಿ ಪಾತ್ರವನ್ನ ಜನರು ಇಂದಿಗೂ ಕೂಡ ಮರೆತಿಲ್ಲ. ರಮ್ಯಾ ಕೃಷ್ಣನ್ ಅವರು ಆ ಪಾತ್ರದಲ್ಲಿ ಅಷ್ಟೇ ಅದ್ಭುತವಾಗಿ ಅಭಿನಯಿಸಿ, ಆ ಪಾತ್ರವೇ ತಾವಾಗಿ ಅಭಿನಯಿಸಿದ್ಧರು. 1000 ಕೋಟಿ ಸಿನಿಮಾ ನಟಿ ಇವರೇ ಅನ್ನೋದರಲ್ಲಿ ಯಾವುದೇ ಸಂಶಯ ಅಂತೂ ಇಲ್ಲ..

ಇನ್ನು ರಮ್ಯಾ ಕೃಷ್ಣನ್ ಅವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. 3 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಇವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ನಟಿಸಿ, ಸ್ಟಾರ್ ಹೀರೋಯಿನ್ ಆಗಿ ಹೆಸರು ಮಾಡಿದ್ದಾರೆ. ಇಂದಿಗೂ ಸಹ ಇವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ರಮ್ಯಾ ಕೃಷ್ಣನ್ ಅವರಿಗೆ ಹೀರೋಯಿನ್ ಗೆ ಇರುವಂತಹ ಬೇಡಿಕೆ ಇದೆ, ಒಂದು ದಿನಕ್ಕೆ ಇವರು 10 ಲಕ್ಷ ಸಂಭಾವನೆ ಪಡೆಯುತ್ತಾರೆ ಎನ್ನುವ ವಿಷಯ ಸಹ ಗೊತ್ತೇ ಇದೆ. ಒಂದು ಸಿನಿಮಾಗೆ 10 ದಿನ ಕೆಲಸ ಮಾಡಿದರೆ, ಅಲ್ಲೇ 1 ಕೋಟಿ ಸಂಭಾವನೆ ಪಡೆದ ಹಾಗೆ ಆಗುತ್ತದೆ.
ಈಗಲೂ ಸಹ ಎಲ್ಲಾ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸುವುದಕ್ಕೆ ಇವರಿಗೆ ಭಾರಿ ಬೇಡಿಕೆ ಇದೆ. ಕನ್ನಡದಲ್ಲಿ ಸಹ, ಪುನೀತ್ ರಾಜ್ ಕುಮಾರ್, ಸುದೀಪ್ ಇವರೆಲ್ಲರ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈಗಲೂ ಇಷ್ಟು ಬೇಡಿಕೆ ಇರುವುದಕ್ಕೆ ಪ್ರಮುಖ ಕಾರಣ ರಮ್ಯಾ ಕೃಷ್ಣನ್ ಅವರು ಉಳಿಸಿಕೊಂಡು ಬಂದಿರುವ ಗ್ಲಾಮರ್, ಬ್ಯೂಟಿ ಎಂದು ಹೇಳಿದರೆ ತಪ್ಪಲ್ಲ. ಈಗಲೂ ಅಷ್ಟೇ ಸುಂದರವಾಗಿ ಕಾಣುತ್ತಾರೆ ರಮ್ಯಾ ಕೃಷ್ಣನ್. ಸಿನಿಮಾಗಳ ಜೊತೆಗೆ ಕೆಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಸಹ ರಮ್ಯಾ ಕೃಷ್ಣನ್ ಅವರು ಕಾಣಿಸಿಕೊಳ್ಳುತ್ತಾರೆ.