ಬಾಲಿವುಡ್ ಸ್ಟಾರ್ ಹೀರೋ, ತ್ರಿವಳಿ ಖಾನ್ ಗಳಲ್ಲಿ ಒಬ್ಬರಾಗಿರುವ ಆಮೀರ್ ಖಾನ್ ಅವರು ಶ್ರೇಷ್ಠ ನಟ ಎನ್ನುವುದು ನಮಗೆಲ್ಲ ಗೊತ್ತಿರುವ ವಿಷಯ. 30 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಬಾಲಿವುಡ್ ನಲ್ಲಿ ಸಕ್ರಿಯವಾಗಿರುವ ಆಮೀರ್ ಖಾನ್ ಅವರು ಸಿನಿಮಾಗಳ ವಿಚಾರದ ಜೊತೆಗೆ ತಮ್ಮ ವೈಯಕ್ತಿಕ ಜೀವನದ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಾರೆ. ಈಗಾಗಲೇ ಎರಡು ಬಾರಿ ವಿಚ್ಛೇದನ ಕೊಟ್ಟು ಸುದ್ದಿಯಾಗಿದ್ದ ಆಮೀರ್ ಖಾನ್ ಅವರು ಇದೀಗ ಮೂರನೇ ಮದುವೆ, ಪ್ರೀತಿ ಪ್ರೇಮದ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಹೌದು, ಕಳೆದ ಕೆಲವು ದಿನಗಳಿಂದ ಇವರು ಮೂರನೇ ಮದುವೆಗೆ ತಯಾರಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು, ಅದೆಲ್ಲದಕ್ಕೂ ಈಗ ಆಮೀರ್ ಖಾನ್ ಅವರು 60ನೇ ವರ್ಷದ ಹುಟ್ಟುಹಬ್ಬಕ್ಕೆ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಫ್ಯಾನ್ಸ್ ಗಳಿಗೆ ಒಂದು ರೀತಿ ಆಶ್ಚರ್ಯ ಆಗಿದೆ.
ನಟ ಆಮೀರ್ ಖಾನ್ ಅವರು ರಿಲೇಶನ್ಷಿಪ್ ನಲ್ಲಿ ಇದ್ದಾರೆ ಎನ್ನುವ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ಸುದ್ದಿಗಳು ಕೇಳಿಬಂದಿದ್ದವು. ಬೆಂಗಳೂರು ಮೂಲದ ಹುಡುಗಿಯ ಜೊತೆಗೆ ಆಮೀರ್ ಖಾನ್ ಪ್ರೀತಿಯಲ್ಲಿ ಬಿದ್ದಿದ್ದಾರೆ, ಈಗಾಗಲೇ ಆಕೆಯನ್ನು ತಮ್ಮ ಕುಟುಂಬಕ್ಕೆ ಪರಿಚಯಿಸಿದ್ದಾರೆ ಎನ್ನುವ ಸುದ್ದಿಗಳು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ ಈ ಬಗ್ಗೆ ಆಮೀರ್ ಖಾನ್ ಅವರಾಗಲಿ, ಅವರ ಕುಟುಂಬ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇದೀಗ ಖುದ್ದು ಆಮೀರ್ ಖಾನ್ ಅವರೇ ತಮ್ಮ ಹುಟ್ಟುಹಬ್ಬದ ವೇಳೆ ಈ ವಿಚಾರವನ್ನು ಬಹಿರಂಗವಾಗಿ ತಿಳಿಸಿದ್ದಾರೆ. ಹಾಗೆಯೇ ಪಾಪಾರಾಜಿಗಳ ಜೊತೆಗೆ ಮತ್ತು ಅಭಿಮಾನಿಗಳ ಜೊತೆಗೆ ಕೇಕ್ ಕತ್ತರಿಸಿ 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ವಿಚಾರ ಈಗ ಇಂಟರ್ನೆಟ್ ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ನಟ ಆಮೀರ್ ಖಾನ್ ಅವರು ಈಗಾಗಲೇ ಎರಡು ಬಾರಿ ಮದುವೆ ಆಗಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದಾರೆ. ರೀನಾ ದತ್ ಅವರಿಗೆ ವಿಚ್ಛೇದನ ಕೊಟ್ಟು ಕಿರಣ್ ರಾವ್ ಅವರೊಡನೆ ಮದುವೆಯಾಗಿದ್ದರು, ಇತ್ತೀಚಿನ ವರ್ಷಗಳಲ್ಲಿ ಕಿರಣ್ ರಾವ್ ಅವರಿಗೆ ಸಹ ವಿಚ್ಛೇದನ ಕೊಟ್ಟರು. ಆದರೆ ಕಿರಣ್ ರಾವ್ ಅವರೊಡನೆ ಸ್ನೇಹ ಹಾಗೆಯೇ ಇದೆ. ಮೊದಲ ಪತ್ನಿ ಜೊತೆಗೆ ಕೂಡ ಅದೇ ಫ್ರೆಂಡ್ಶಿಪ್ ಉಳಿಸಿಕೊಂಡಿದ್ದಾರೆ ಆಮೀರ್ ಖಾನ್. ಮಗ ಆಜಾದ್ ಗಾಗಿ ಕಿರಣ್ ರಾವ್ ಹಾಗೂ ಆಮೀರ್ ಖಾನ್ ಇಬ್ಬರು ಸಹ ಜೊತೆಯಾಗಿ ಮಗನ ಓದಿನ ಬಗ್ಗೆ ಗಮನ ಕೊಡುತ್ತಿದ್ದಾರೆ. ಮಗನ ಶಾಲೆಯ ಕಾರ್ಯಕ್ರಮಗಳಲ್ಲಿ ಇಬ್ಬರು ಜೊತೆಯಾಗಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಮಕ್ಕಳ ವಿಷಯದಲ್ಲಿ ಇವರಿಗೆ ಹೆಚ್ಚು ಕಾಳಜಿ ಇದೆ ಎಂದು ಹೇಳಬಹುದು. ಆದರೆ ಇದೀಗ ಮೂರನೇ ಮದುವೆಗೆ ಸಿದ್ಧವಾಗಿದ್ದಾರೆ ನಟ ಆಮೀರ್.

ಒಂದೆರಡು ವರ್ಷಗಳ ಹಿಂದೆ ಬೇರೆಯದೇ ವಿಚಾರ ಕೇಳಿಬಂದಿತ್ತು. ದಂಗಾಲ್ ಸಿನಿಮಾದಲ್ಲಿ ತಮ್ಮ ಜೊತೆಗೆ ಮಗಳ ಪಾತ್ರದಲ್ಲಿ ನಟಿಸಿದ್ದ ನಟಿಯ ಜೊತೆಗೆ ಆಮೀರ್ ಖಾನ್ ಡೇಟಿಂಗ್ ಮಾಡುತ್ತಿದ್ದಾರೆ, ಅವರಿಂದಲೇ ಕಿರಣ್ ರಾವ್ ಅವರಿಗೆ ವಿಚ್ಛೇದನ ಕೊಟ್ಟಿದ್ದು ಎನ್ನುವ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ವಿಚಾರಕ್ಕೆ ಆ ನಟಿ ಆಗಲಿ ಅಥವಾ ಅಮೀರ್ ಖಾನ್ ಅವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೆಲ್ಲವೂ ಒಂದು ಸುದ್ದಿಯಾದರೆ ಕಳೆದ ಕೆಲವು ದಿನಗಳಿಂದ ನಟ ಆಮೀರ್ ಖಾನ್ ಅವರು ಗೌರಿ ಎನ್ನುವ ಮಹಿಳೆಯನ್ನು ಪ್ರೀತಿಸುತ್ತಿದ್ದಾರೆ, ಆಕೆ ಬೆಂಗಳೂರು ಮೂಲದವರು, ಆಮೀರ್ ಖಾನ್ ಗೌರಿ ಅವರನ್ನು ತಮ್ಮ ಇಡೀ ಕುಟುಂಬಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು.
ಇಷ್ಟು ದಿವಸಗಳ ಕಾಲ ಈ ಸುದ್ದಿಗೆ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ. ಆದರೆ ಇದೀಗ ಆಮೀರ್ ಖಾನ್ ಅವರೇ ಈ ವಿಚಾರವನ್ನು ಎಲ್ಲರಿಗೂ ತಿಳಿಸಿದ್ದಾರೆ. ತಮ್ಮ 60ನೇ ವರ್ಷದ ಹುಟ್ಟುಹಬ್ಬದ ವಿಶೇಷ ದಿನದಂದು ಈ ವಿಚಾರವನ್ನೆಲ್ಲ ತಿಳಿಸಿದ್ದಾರೆ. ಆಮೀರ್ ಖಾನ್ ಅವರ ಮನೆಯಲ್ಲಿ ವಿಶೇಷ ಪಾರ್ಟಿ ಇತ್ತು, ಬಾಲಿವುಡ್ ಸ್ಟಾರ್ ಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್ ಎಲ್ಲರೂ ಸಹ ಆಮೀರ್ ಖಾನ್ ಅವರ ಬರ್ತ್ ಡೇ ಸೆಲೆಬ್ರೇಷನ್ ಗೆ ಹೋಗಿದ್ದರು. ಈ ಕಾರ್ಯಕ್ರಮಕ್ಕೆ ಗೌರಿ ಅವರನ್ನು ಕರೆಸಿ, ಎಲ್ಲರಿಗೂ ಪರಿಚಯ ಮಾಡಿಕೊಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಅದಾಗಲೇ ಆಮೀರ್ ಖಾನ್ ಅವರು ತಮ್ಮ ಕುಟುಂಬಕ್ಕೆ, ಮಕ್ಕಳಿಗೆ ಹಾಗೂ ಮಾಜಿ ಪತ್ನಿಯರಿಗೆ ಗೌರಿ ಅವರ ಪರಿಚಯ ಮಾಡಿಸಿದ್ದಾರೆ ಎನ್ನಲಾಗಿತ್ತು. ಇದೀಗ ಇಂಡಸ್ಟ್ರಿ ಫ್ರೆಂಡ್ಸ್ ಗು ಪರಿಚಯ ಮಾಡಿಸಿದ್ದಾರೆ.

ಆಮೀರ್ ಖಾನ್ ಅವರ ಮಕ್ಕಳಿಗೆ ಈ ರಿಲೇಶನ್ಷಿಪ್ ವಿಚಾರ ಸಂತೋಷ ತಂದಿದೆಯಂತೆ. ಇನ್ನು ಗೌರಿ ಅವರ ಬಗ್ಗೆ ಹೇಳುವುದಾದರೆ ಇವರು ಬೆಂಗಳೂರು ಮೂಲದ ಮಹಿಳೆ. ಸಿನಿಮಾ ನಿರ್ಮಾಣಕ್ಕೆ ಸಂಬಂಧಿಸಿದ ವಿಭಾಗದಲ್ಲಿ ಇವರು ಕೆಲಸ ಮಾಡುತ್ತಾರಂತೆ. ಗೌರಿ ಅವರಿಗೆ ಈಗಾಗಲೇ 6 ವರ್ಷದ ಒಬ್ಬ ಮಗ ಇದ್ದಾನೆ. 25 ವರ್ಷಗಳಿಂದ ಗೌರಿ ಹಾಗೂ ಆಮೀರ್ ಖಾನ್ ಅವರಿಗೆ ಪರಿಚಯವಿದ್ದು, ಕೆಲ ವರ್ಷಗಳ ಕಾಲ ಟಚ್ ನಲ್ಲಿ ಇರಲಿಲ್ಲವಂತೆ. ಕಿರಣ್ ರಾವ್ ಅವರಿಂದ ವಿಚ್ಛೇದನ ಪಡೆದ ನಂತರ ಗೌರಿ ಅವರ ಜೊತೆಗೆ ಮತ್ತೆ ಮಾತುಕತೆ ಶುರುವಾಗಿ, ಇಬ್ಬರ ನಡುವೆ ಪ್ರೀತಿ ಶುರುವಾಗಿ, ಒಂದೂವರೆ ವರ್ಷಗಳಿಂದ ಜೊತೆಯಾಗಿ ವಾಸ ಮಾಡುತ್ತಿದ್ದಾರಂತೆ. ಬಹಳ ಖುಷಿಯಾಗಿ ಇವರ ರಿಲೇಶನ್ಷಿಪ್ ಸಾಗುತ್ತಿದೆ ಎಂದು ಆಮೀರ್ ಖಾನ್ ಅವರು ತಿಳಿಸಿದ್ದಾರೆ.
ಪಾಪಾರಾಜಿಗಳ ಎದುರು, ಅಭಿಮಾನಿಗಳ ಜೊತೆಗೆ ಕೇಕ್ ಕಟ್ ಮಾಡಿದ ಆಮೀರ್ ಖಾನ್ ಅವರು ಗೌರಿ ಅವರ ವಿಚಾರ ತಿಳಿಸಿ, ಅವರ ಫೋಟೋಸ್ ಗಳನ್ನು ಲೀಕ್ ಮಾಡಬಾರದು, ಪ್ರೈವೆಸಿ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಪಾಪಾರಾಜಿಗಳ ಸಹ ಇದಕ್ಕೆ ಒಪ್ಪಿಕೊಂಡಿದ್ದಾರೆ. ಇನ್ನು ಆಮೀರ್ ಖಾನ್ ಅವರ ಸೂಪರ್ ಹಿಟ್ ಸಿನಿಮಾ ಲಗಾನ್, ಇದರಲ್ಲಿ ಕೂಡ ನಾಯಕಿಯ ಹೆಸರು ಗೌರಿ, ನಾಯಕನ ಹೆಸರು ಭುವನ್. ಇದೀಗ ಭುವನ್ ಗೆ ಮತ್ತೆ ಗೌರಿ ಸಿಕ್ಕಿದ್ದಾರೆ ಎಂದು ಆಮೀರ್ ಖಾನ್ ಅವರು ಮಾಧ್ಯಮಗಳ ಎದುರು ಹೇಳಿಕೊಂಡಿದ್ದಾರೆ. ಆಮೀರ್ ಖಾನ್ ಅವರಿಗೆ ಈಗ 60 ವರ್ಷ, ಸೀನಿಯರ್ ಸಿಟಿಜನ್ ಆಗಿದ್ದಾರೆ, ಆದರೆ ಅವರಿಗೆ ತಾವು ಸೀನಿಯರ್ ಸಿಟಿಜನ್ ಅಷ್ಟು ವಯಸ್ಸಾಗಿದೆ ಎಂದು ಅನ್ನಿಸಿಲ್ಲವಂತೆ.