ರಿಶಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಸಿನಿಮಾ ಮೂಲಕ ನಾಯಕಿಯಾಗಿ ಮುನ್ನೆಲೆಗೆ ಬಂದ ಕನ್ನಡತಿ ನಟಿ ಸಪ್ತಮಿ ಗೌಡ ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಇದೀಗ ಸಪ್ತಮಿ ಬಿಳಿ ಬಣ್ಣದ ಉಡುಗೆಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಸಪ್ತಮಿ ಗೌಡ ಅವರ ಫೋಟೋಗಳನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಅಪ್ಸರೆಯಂತಿ ಸಪ್ತಮಿ ಮಿಂಚುತ್ತಿರುವ ಈ ಹೊಸ ಫೋಟೋಗಳು ಸದ್ಯ ಸಕ್ಕತ್ ವೈರಲ್ ಆಗುತ್ತಿದೆ.


ಕಾಂತಾರ ಸಕ್ಸಸ್ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ಸಪ್ತಮಿ ಗೌಡ ಇತ್ತೀಚೆಗಷ್ಟೇ ‘ಕಾಂತಾರ’ ಸಿನಿಮಾದ ನಟನೆಗೆ ಸೈಮಾ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ. ಇದೀಗ ಸಪ್ತಮಿ ಗೌಡ ಬಿಳಿ ಬಟ್ಟೆ ಧರಿಸಿ ಕ್ಯಾಮೆರಾ ಕಣ್ಣಿಗೆ ಫೋಸ್ ನೀಡಿದ್ದು, ದೇವತೆಯಂತೆ ಕಂಗೊಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಪ್ತಮಿ ಗೌಡ ಅವರ ಹೊಸ ಫೋಟೋಗಳು ಸಾಕಷ್ಟು ಜನಮನ್ನಣೆ ಗಳಿಸುತ್ತಿದೆ.
ಕಾಂತಾರ ಸಿನಿಮಾ ಗಳಿಸಿದ ವಿಶ್ವಮನ್ನಣೆ ಇದೀಗ ಸಪ್ತಮಿಗೌಡ ಅವರಿಗೂ ವರದಾನವಾಗಿದೆ. ಲೀಲಾ ಪಾತ್ರದಲ್ಲಿ ಮಿಂಚಿದ ಸಪ್ತಮಿ ಗೌಡ ಇದೀಗ ಹಿಂದಿಯ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಮೂಲಕ ಇದೀಗ ಬಾಲಿವುಡ್ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಈ ಸಿನಿಮಾವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್ನಲ್ಲಿ ಸಪ್ತಮಿ ಗೌಡ ಅವರ ಅದೃಷ್ಟ ಹೇಗಿದೆ ಎಂಬುದನ್ನ ಕಾದು ನೋಡಬೇಕಾಗಿದೆ.