ನಟಿ ಸಪ್ನಾ ದೀಕ್ಷಿತ್ ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಮತ್ತು ಕಿರುತೆರೆಯಲ್ಲಿ ನಟಿಸುತ್ತಿರುವ ಕಲಾವಿದೆ. ಹಲವು ಧಾರಾವಾಹಿಗಳಲ್ಲಿ ಇವರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪ್ರಸ್ತುತ ಸಪ್ನಾ ದೀಕ್ಷಿತ್ ಅವರು ಜೀಕನ್ನಡ ವಾಹಿನಿಯ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ವಿಲ್ಲನ್ ಪಾತ್ರ ಶಾರ್ವರಿ ಪಾತ್ರದಲ್ಲಿ ಸಪ್ನಾ ದೀಕ್ಷಿತ್ ಅವರು ನಟಿಸುತ್ತಿದ್ದು ಶಾರ್ವರಿ ಪಾತ್ರ ಜನರಿಗೆ ಬಹಳ ಇಷ್ಟವಾಗಿದೆ. ಸಪ್ನಾ ದೀಕ್ಷಿತ್ ಅವರು ನಿಜ ಜೀವನದಲ್ಲಿ ಬಹಳ ಕಷ್ಟ ಪಟ್ಟಿದ್ದಾರೆ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ತಮ್ಮ ಪರ್ಸನಲ್ ಲೈಫ್ ಬಗ್ಗೆ, ಗಂಡನ ವಿಚಾರ ಎಲ್ಲವನ್ನು ಸಹ ಹೇಳಿಕೊಂಡಿದ್ದಾರೆ. ಗಂಡನನ್ನು ಬಿಡುವುದಕ್ಕೆ ಹಲವು ಕಾರಣಗಳು ಇದ್ದರೂ ಸಹ ಗಂಡನ ಜೊತೆಗೆ ಇದ್ದಾರೆ. ಈ ಜರ್ನಿ ಬಗ್ಗೆ ತಿಳಿಸಿದ್ದಾರೆ.

ಈ ಮೊದಲು ಸಪ್ನಾ ಅವರು ಕಮಲಿ ಧಾರಾವಾಹಿಯಲ್ಲಿ ಹಾಗೂ ಇನ್ನಿತರ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಶ್ರೀರಸ್ತು ಶುಭಮಸ್ತು ಧಾರಾವಾಹಿಗೆ ಇವರು ಬಂದಿದ್ದು ರೀಪ್ಲೇಸ್ಮೆಂಟ್ ಆರ್ಟಿಸ್ಟ್ ಆಗಿ. ಶಾರ್ವರಿ ಪಾತ್ರವನ್ನು ಮೊದಲಿಗೆ ನಟಿ ನೇತ್ರಾ ಜಾಧವ್ ಅವರು ನಟಿಸುತ್ತಿದ್ದರು. ಅವರಿಗೆ ತೆಲುಗಿನಲ್ಲಿ ಒಳ್ಳೆಯ ಅವಕಾಶ ಸಿಕ್ಕ ಕಾರಣ ಶ್ರೀರಸ್ತು ಶುಭಮಸ್ತು ಧಾರಾವಾಹಿ ಇಂದ ಹೊರಬಂದರು. ಅವರ ಪಾತ್ರಕ್ಕೆ ನಂತರ ಆಯ್ಕೆಯಾಗಿ ಬಂದಿದ್ದು ಸಪ್ನಾ ದೀಕ್ಷಿತ್ ಅವರು. ಇವರನ್ನು ಶಾರ್ವರಿ ಪಾತ್ರದಲ್ಲಿ ಆಕ್ಸೆಪ್ಟ್ ಮಾಡುವುದಕ್ಕೆ ಕೆಲವು ದಿನಗಳ ಸಮಯ ಹಿಡಿಯಿತು. ಆದರೆ ಜನರಿಗೆ ಈಗ ಸಪ್ನಾ ದೀಕ್ಷಿತ್ ಅವರ ಅಭಿನಯ ಮತ್ತು ಶಾರ್ವರಿ ಪಾತ್ರ ಜನರಿಗೆ ಬಹಳ ಇಷ್ಟವಾಗಿದೆ. ಆದರೆ ಈ ಧಾರಾವಾಹಿ ಶೀಘ್ರದಲ್ಲೇ ಮುಗಿಯಲಿದೆ ಎಂದು ಮಾಹಿತಿ ಸಿಕ್ಕಿದೆ..
ಜೀಕನ್ನಡ ವಾಹಿನಿಯಲ್ಲಿ 2 ಹೊಸ ಧಾರಾವಾಹಿಗಳು ಶುರುವಾಗುವುದಕ್ಕೆ ಸಜ್ಜಾಗಿದೆ, ಕರ್ಣ ಮತ್ತು ರಾಘವೇಂದ್ರ ಸ್ವಾಮಿಗಳ ಧಾರಾವಾಹಿ. ಕರ್ಣ ಧಾರಾವಾಹಿ ಖ್ಯಾತ ನಟ ಕಿರಣ್ ರಾಜ್ ನಾಯಕನಾಗಿ ನಟಿಸುತ್ತಿರುವ ಧಾರಾವಾಹಿ ಆಗಿದೆ. ಈ ಧಾರಾವಾಹಿಯ ಪ್ರೊಮೋ ಈಗಾಗಲೇ ಬಿಡುಗಡೆ ಆಗಿದ್ದು, ಇನ್ನೊಂದು ತಿಂಗಳಲ್ಲಿ ಬಹುಶಃ ಐಪಿಎಲ್ ಮುಗಿದ ನಂತರ ಕರ್ಣ ಧಾರಾವಾಹಿ ಶುರುವಾಗುತ್ತದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಶ್ರೀರಸ್ತು ಶುಭಮಸ್ತು ಧಾರಾವಾಹಿ ಮುಕ್ತಾಯ ಆಗುತ್ತದೆ ಎಂದು ಹೇಳಲಾಗುತ್ತಿದೆ. ಕಥೆ ಸಹ ಮುಕ್ತಾಯದ ಹಂತ ತಲುಪುವ ಹಾಗೆಯೇ ಕಾಣುತ್ತಿದೆ. ಹಾಗಾಗಿ ಸಪ್ನಾ ದೀಕ್ಷಿತ್ ಅವರ ಪಾತ್ರ ಸಹ ಮುಗಿಯಲಿದೆ. ಈ ವೇಳೆ ಇವರು ಒಂದು ಸಂದರ್ಶನದಲ್ಲಿ ಮಾತನಾಡಿದ್ದು ಅನೇಕ ವಿಚಾರಗಳನ್ನು ಶೇರ್ ಮಾಡಿದ್ದಾರೆ.

ಸಪ್ನಾ ದೀಕ್ಷಿತ್ ಅವರ ಪತಿಯ ಹೆಸರು ಅಶ್ವಿನ್. ಇವರಿಬ್ಬರು ಇಸ್ಮಾರ್ಟ್ ಜೋಡಿ ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ್ದರು. ಆ ಕಾರ್ಯಕ್ರಮದ ವೇಳೆ ಗಂಡನ ಬಗ್ಗೆ ಅನೇಕ ವಿಚಾರಗಳನ್ನು ಶೇರ್ ಮಾಡಿದ್ದರು. ಈಗ ಸಂದರ್ಶನದಲ್ಲಿ ಇನ್ನಷ್ಟು ವಿಚಾರಗಳನ್ನು ಶೇರ್ ಮಾಡಿದ್ದಾರೆ. ಸಪ್ನಾ ದೀಕ್ಷಿತ್ ಅವರು ಹೇಳುವ ಪ್ರಕಾರ, ಅವರ ಗಂಡ ಅಶ್ವಿನ್ ಅವರು ಕೆಲಸದ ವಿಚಾರದಲ್ಲಿ ಕಂಸಿಸ್ಟೆಂಟ್ ಆಗಿ ಇರಲಿಲ್ಲ ಎಂದಿದ್ದಾರೆ. ಒಂದು ವರ್ಷ ಕೆಲಸಕ್ಕೆ ಹೋಗುವುದು, ಮತ್ತೆ ಬ್ರೇಕ್ ತೆಗೆದುಕೊಳ್ಳುವುದು ಈ ರೀತಿ ಮಾಡುತ್ತಿದ್ದರಂತೆ. ಅವರು ಚೆನ್ನಾಗಿ ಕೆಲಸಕ್ಕೆ ಹೋಗುವಾಗ, ಎಲ್ಲರೂ ಅವರ ಜೊತೆಗೆ ಇದ್ದರು, ಹುಡುಗರು ಅವರ ಬಳಿ ಇದ್ದ ದುಡ್ಡಿಗಾಗಿ ಅವರ ಜೊತೆಗೆ ಇರುತ್ತಿದ್ದರು. ದುಡ್ಡು ಖಾಲಿ ಆದಾಗ ಎಲ್ಲರೂ ಅವರನ್ನು ಬಿಟ್ಟು ಹೊರಟು ಹೋದರು ಎಂದು ತಿಳಿಸಿದ್ದಾರೆ.
16 ವರ್ಷಗಳ ಕಾಲ ಅವರ ಗಂಡ ಸರಿಯಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲವಂತೆ. ಬಳಿಕ ಅವರಿಗೆ ಗೊತ್ತಿರುವ ಒಬ್ಬರ ಬಳಿ ನನ್ನ ಗಂಡನಿಗೆ ಕೆಲಸ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಕ್ಕೆ ಅವರು ನಮ್ಮ ಕಂಪೆನಿಯಲ್ಲೇ ಕೆಲಸ ಇದೆ ಎಂದು ಹೇಳಿ, ಸಪ್ನಾ ದೀಕ್ಷಿತ್ ಅವರ ಗಂಡನಿಗೆ ಕೆಲಸ ಕೊಡಿಸಿದರಂತೆ. ಈಗ ಅವರು ಕೆಲಸಕ್ಕೆ ಹೋಗುತ್ತಿದ್ದಾರೆ. ಎಲ್ಲವೂ ಚೆನ್ನಾಗಿದೆ, ದೊಡ್ಡ ಖರ್ಚುಗಳನ್ನು ಸಪ್ನಾ ಅವರು ನೋಡಿಕೊಂಡರೆ, ಸಣ್ಣ ಖರ್ಚುಗಳನ್ನು ಸಪ್ನಾ ಅವರ ಗಂಡ ನೋಡಿಕೊಳ್ಳುತ್ತಾರಂತೆ. ಅವರ ಸಂಸಾರ ಈಗ ಚೆನ್ನಾಗಿ ನಡೆಯುತ್ತಿದೆ, ಸಣ್ಣ ಪುಟ್ಟ ಜಗಳ ಅದೆಲ್ಲವೂ ಸಹ ಇದ್ದೇ ಇರುತ್ತದೆ. ಆದರೆ ಅದೆಲ್ಲವನ್ನು ಮೀರಿ ನಾವು ಚೆನ್ನಾಗಿದ್ದೇವೆ ಎಂದು ಹೇಳಿದ್ದಾರೆ. ಆದರೆ ಜನರು ಇವರಿಗೆ ಬೇರೆ ರೀತಿಯಲ್ಲೇ ಮಾತನಾಡುತ್ತಾರಂತೆ.

ಕೆಲವರು ಗಂಡನನ್ನು ಬಿಟ್ಟು ರೀಲ್ಸ್ ಮಾಡುತ್ತಿದ್ದೀಯಾ ಎಂದು ಹೇಳಿದರಂತೆ. ಆದರೆ ಗಂಡನನ್ನು ಬಿಡುವುದಕ್ಕೆ ಎಲ್ಲಾ ರೀತಿಯಲ್ಲಿ ಕಾರಣಗಳು ಇದ್ದರೂ ಸಹ ಸಪ್ನಾ ಅವರು ಗಂಡನನ್ನು ಬಿಡಲಿಲ್ಲ. ವ್ಯಕ್ತಿ ಒಳ್ಳೆಯವನು ಎನ್ನುವ ಕಾರಣಕ್ಕೆ ಗಂಡನ ಜೊತೆಗೆ ಇದ್ದಾರಂತೆ. ಈ ವಿಚಾರಗಳನ್ನು ಸಪ್ನಾ ಅವರು ಮಾತನಾಡಿದ್ದು, ಜನರು ಸುಲಭವಾಗಿ ಎಲ್ಲರ ಬಗ್ಗೆ ಮಾತನಾಡುತ್ತಾರೆ, ಆದರೆ ಅಸಲಿ ವಿಷಯ ಏನು ಎಂದು ಅವರಿಗೆ ಗೊತ್ತಿರುವುದಿಲ್ಲ ಎಂದು ಹೇಳಿದ್ದಾರೆ. ಸಪ್ನಾ ದೀಕ್ಷಿತ್ ಅವರು ಪ್ರಸ್ತುತ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಮುಂದೆ ಯಾವ ಸಿನಿಮಾದಲ್ಲಿ ಅಥವಾ ಧಾರಾವಾಹಿಯಲ್ಲಿ ನಟಿಸುತಾತೆ ಎಂದು ಕಾದು ನೋಡಬೇಕಿದೆ. ಸಪ್ನಾ ಅವರಿಗೆ ಮತ್ತು ಅವರ ಸಂಸಾರಕ್ಕೆ ಒಳ್ಳೆಯದಾಗಲಿ.