ಸಂಜು ವೆಡ್ಸ್ ಗೀತಾ 1 ಸಿನಿಮಾವು 2011 ರಲ್ಲಿ ಕರ್ನಾಟಕದಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾದ ನಿರ್ದೇಶನವನ್ನು ನಾಗಶೇಖರ್ ಅವರು ಮಾಡಿದ್ದರು ಮತ್ತು ಪ್ರಮೋದ್ ನಾರಾಯಣ್ ನಿರ್ಮಾಣ ಮಾಡಿದ್ದರು. ಶ್ರೀನಗರ ಕಿಟ್ಟಿ ಮತ್ತು ರಮ್ಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿ ಜನಮನ್ನಣೆಗೆ ಪಾತ್ರರಾಗಿದ್ದರು. ಸಾಧು ಕೋಕಿಲಾ ಅವರ ಹಿನ್ನೆಲೆ ಸಂಗೀತ ಈ ಸಿನಿಮಾಕ್ಕೆ ಇನ್ನಷ್ಟು ಮೆರುಗನ್ನು ನೀಡಿತ್ತು. ಸಿನಿಮಾ ಬಿಡುಗಡೆಯಾಗಿ ಹೌಸ್ ಫುಲ್ ಪ್ರದರ್ಶನವನ್ನೂ ಕಂಡಿತ್ತು. ಇಂದಿಗೂ ಆ ಸಿನಿಮಾಕ್ಕೆ ಅದರದೇ ಆದ ಅಭಿಮಾನಿಗಳಿದ್ದಾರೆ.

ಕಿಟ್ಟಿ ರಮ್ಯಾ ಕಾಂಬಿನೇಷನ್ ಗೇ ಜನ ಮಾರುಹೋಗಿದ್ದರು. ಇದೀಗ ಇದೇ ಸಿನಿಮಾದ ಎರಡನೇ ಭಾಗದ ಶೂಟಿಂಗ್ ಗೆ ಎಲ್ಲಾ ಸಿದ್ದತೆಗಳು ನಡೆಯುತ್ತಿವೆ. ನಾಯಕನಾಗಿ ಶ್ರೀನಗರ ಕಿಟ್ಟಿಯೇ ನಟಿಸಲಿದ್ದಾರೆ. ಆದರೆ ಈ ಸಿನಿಮಾಕ್ಕೆ ನಾಯಕಿಯಾಗಿ ಯಾರು ನಟಿಸುತ್ತಾರೆ ಎಂಬ ವಿಷಯದ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿತ್ತು. ಕೆಲ ದಿನಗಳ ಹಿಂದೆ ಈ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿತ್ತು. ಆಗಲೂ ನಾಯಕಿಯ ಬಗ್ಗೆ ಭಾರೀ ಮಾತಾಗಿತ್ತು. ಇದೀಗ ನಾಯಕನಟಿಯ ಹೆಸರನ್ನು ಚಿತ್ರ ತಂಡ ರಿವೀಲ್ ಆಗಿದ್ದು ರಚಿತಾ ರಾಮ್ ಅವರು ಕಿಟ್ಟಿ ಗೆ ಜೊತೆಯಾಗಲಿದ್ದಾರೆ.
ಈ ವಿಷಯ ಕೇಳಿ ಡಿಂಪಲ್ ಕ್ವೀನ್ ನ ಫ್ಯಾನ್ಸ್ ಸಂತೋಷ ವ್ಯಕ್ತ ಪಡಿಸಿದ್ದಾರೆ. ಸ್ವತಃ ರಚಿತಾ ರಾಮ್ ಕೂಡಾ ಈ ಚಿತ್ರತಂಡದ ಜೊತೆ ಕೆಲಸ ಮಾಡಲು ಖುಷಿ ಇದೆ ಎಂದಿದ್ದಾರೆ.
ನಾಯಕಿಯ ಹೆಸರು ರಿವೀಲ್ ಗು ಮುನ್ನ ಹೀರೋಯಿನ್ ರಚಿತಾ ಇರಬಹುದಾ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಇದೀಗ ನಿಜವಾಗಿದೆ. ಈ ಸಿನಿಮಾದ ನಿರ್ದೇಶನವನ್ನೂ ನಾಗಶೇಖರ್ ಅವರೇ ನಿರ್ದೇಶಿಸಲಿದ್ದಾರೆ ಹಾಗೂ ಅವರೇ ಬಂಡವಾಳವನ್ನೂ ಹೂಡಿದ್ದಾರೆ. ಇನ್ನೇನು ಶೂಟಿಂಗ್ ಪೂರ್ಣ ಗೊಂಡು 2024ರ ದಸರಾ ವೇಳೆಗೆ ಈ ಸಿನಿಮಾ ಬಿಡುಗಡೆಯಾಗಬಹುದು ಎಂದು ನಾಗಶೇಖರ್ ಹೇಳಿದ್ದಾರೆ.
ಈ ಸಿನಿಮಾದ ಬಗ್ಗೆ ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳಲು ಜನ ಕಾಯುತ್ತಿದ್ದಾರೆ. ರಮ್ಯಾ ಅಭಿಮಾನಿಗಳು ಈ ಸಿನಿಮಾಕ್ಕೂ ಮೋಹಕತಾರೆಯೇ ಹೀರೋಯಿನ್ ಆಗಿ ನಟಿಸುತ್ತಾರೆ ಎಂದು ನಿರೀಕ್ಷಿಸಿದ್ದರು. ಇದೀಗ ಸುಳ್ಳಾಗಿದೆ. ರಚಿತಾ ರಾಮ್ ಪ್ರಸ್ತುತ ಬಹು ಬೇಡಿಕೆಯ ನಟಿ ಆಗಿದ್ದಾರೆ. ಅವರ ಕೈಯಲ್ಲಿ ಹಲವು ಪ್ರಾಜೆಕ್ಟ್ ಗಳಲ್ಲೂ ಬ್ಯುಸಿ ಆಗಿದ್ದಾರೆ. ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲೂ ರಚಿತಾ ರಾಮ್ಗೆ ಭಾರೀ ಬೇಡಿಕೆ ಇದೆ. ರಚಿತಾ ಮಜಭಾರತ, ಕ್ವೀನ್ ಮುಂತಾದ ರಿಯಾಲಿಟಿ ಶೋ ಗಳಲ್ಲಿ ಜಡ್ಜ್ ಆಗಿದ್ದರು.
ಇದೀಗ ‘ಭರ್ಜರಿ ಬ್ಯಾಚುಲರ್’ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದಾರೆ.ಸೋಶಿಯಲ್ ಮೀಡಿಯಾ ದಲ್ಲೂ ಸಕತ್ ಆಕ್ಟಿವ್ ಆಗಿದ್ದಾರೆ ಈ ಗುಳಿಕೆನ್ನೆ ಬೆಡಗಿ. ಡ್ರೆಸ್, ಕಾಸ್ಮಟಿಕ್ಸ್ ಇವುಗಳಿಗೂ ಕೊಲಬರೇಶನ್ ಶೂಟ್ ಮಾಡುತ್ತಿದ್ದಾರೆ. ಅಷ್ಟೆ ಅಲ್ಲದೆ ಮ್ಯಾಟ್ನಿ’, ‘ಶಬರಿ’, ‘ಲವ್ ಮಿ ಆರ್ ಹೇಟ್ ಮಿ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಇವರ ‘ಮ್ಯಾಟ್ನಿ’ ಸಿನಿಮಾವಂತೂ ಇನ್ನೂ ಕುತೂಹಲ ಸೃಷ್ಟಿಸಿದೆ. ರಚಿತಾ ಯಾವುದೇ ಕಾಂಟ್ರವರ್ಸಿ ಗಳಲ್ಲಿ ತಮ್ಮನ್ನು ತೊಡಿಗಿಸಿಕೊಳ್ಳದೇ ತಾನಾಯ್ತು ತನ್ನ ಕೆಲಸವಾಯ್ತು ಎಂದು ಕೇವಲ ಕೆಲಸದ ಮೇಲೆಯೇ ಆಸಕ್ತಿ ವಹಿಸುವ ವ್ಯಕ್ತಿತ್ವ ಇವರದು.