ಆರೋಗ್ಯಕ್ಕೆ ವಿಶೇಷವಾಗಿ ಬೇಕಿರುವಂತಹದ್ದು ಸಂಜೀವಿನಿ ಸಸ್ಯ. ಇದು ಸಹಾನುಭಾರವಾಗಿರುವಂತಹದು. ಇದು ಮನುಷ್ಯನ ಜೀವನದಲ್ಲಿ ಹಲವು ರೋಗಗಳು ಬಗೆಹರಿಸುವಲ್ಲಿ ಸಹಾಯಕವಾಗಿರುತ್ತದೆ. ವೈದ್ಯರು ಸಿಗದೆ ಇರುವ ಸಂದರ್ಭದಲ್ಲಿ ಈ ಸಂಜೀವಿನಿ ಸಸ್ಯದ ರಸವನ್ನು ತೆಗೆದು ಕಿವಿಗೆ ಬಿಡುವುದರಿಂದ ಒಳ್ಳೆಯದು. ಯಾವ ಕಿವಿಯ ನೋವು ಇರುವುದಿಲ್ಲ. ಶೀಘ್ರ ಫಲವಾಗಿ ಕಡಿಮೆಯಾಗುತ್ತದೆ. ನಮ್ಮ ದಿನನಿತ್ಯದ ಆಹಾರಗಳಿಗೆ ಈ ಸಸ್ಯವನ್ನು ಸಸ್ಯ ಪದಾರ್ಥವಾಗಿ ಬಳಸಬಹುದು. ಇದನ್ನು ನೀರಲ್ಲಿ ಬೇಯಿಸಿ ಗೋಜ್ಜಾಗಿ,ಚಟ್ನಿ ,ಅಂಬಳಿ ಹೀಗೆ ನಾನಾ ರೀತಿಯಲ್ಲಿ ಬಳಸಬಹುದು.;ಇದು ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಇದನ್ನು ಊಟಕ್ಕೆ ಉಪ್ಪಿನಕಾಯಿ ಮತ್ತು ಈ ಚಟ್ನಿಯ ಜೊತೆ ಬೆರೆಸಿ ತಿಂದರೆ ಒಳ್ಳೆಯದು.
ಇವಿಷ್ಟು ಇದ್ದರೆ ಬೇರೆ ಆಹಾರದ ಅವಶ್ಯಕತೆ ಇರುವುದಿಲ್ಲ. ಇದು ಆರೋಗ್ಯ ಭಾಗ್ಯವನ್ನು ಕೊಡುತ್ತದೆ. ಒಂದೊಂದು ರೀತಿಯಲ್ಲಿ ಆರೋಗ್ಯಗಳು ಇದ್ದೇ ಇರುತ್ತದೆ. ಆರೋಗ್ಯದ ಅವಶ್ಯಕತೆ ಒಳಗೊಂಡಿರುವಂತಹ ದೊಡ್ಡ ಪತ್ರೆಯ ಗಿಡ ಅಷ್ಟು ಅದ್ಭುತವಾಗಿರುತ್ತದೆ. ಇವುಗಳನ್ನು ಬರೆಯಾಗಿ ತಿನ್ನಬಹುದು. ಇದನ್ನು ಈ ರೀತಿ ಚಟ್ನಿ, ಅಂಬಲಿ, ಗೊಜ್ಜು ಮಾಡಿ ಸೇವಿಸುವುದು ಒಳ್ಳೆಯದು. ವಿಧ ವಿಧವಾದ ಆಹಾರಗಳನ್ನು ಮಾಡಬಹುದು. ಇದು ಹಿತ್ತಲಲ್ಲಿದ್ದರೆ ಎಷ್ಟೇ ಬಗ್ಗೆ ಆಹಾರಗಳನ್ನು ಮಾಡಿಕೊಂಡು ತಿನ್ನಬಹುದು.
ಇದು ಆರೋಗ್ಯಕರವೂ ಹೌದು, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ಈ ರೀತಿಯಾಗಿ ಸೇವಿಸುವುದರಿಂದ ಒಳ್ಳೆಯದು. ಇದು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಅತ್ಯಂತ ಪ್ರಮುಖವಾದಂತಹ ಸ್ಥಾನವನ್ನು ಹೊಂದಿರುತ್ತದೆ. ನಮ್ಮ ನಿಮ್ಮೆಲ್ಲರ ಜೀವನಕ್ಕೆ ಒಳ್ಳೆಯ ಮತ್ತು ಪೂಜೆಗೆ ಬಳಸುವಂತಹ ಗಿಡವಾಗಿದೆ. ಇದು ನಿರಂತರವಾಗಿ ಉಪಯೋಗಕ್ಕೆ ಬರುವಂತಹ ಗಿಡವಾಗಿದೆ. ಇದರಿಂದ ಒಳಿತುಗಳು ಹೆಚ್ಚು. ಇದು ಒಂದು ಸಸ್ಯಮೂಲಿಕೆ ಮತ್ತು ಹಳ್ಳಿ ಮದ್ದು ಎಂದು ಹೇಳಬಹುದು. ತುಂಬಾ ಸಹಾಯಕಾರಿಯಾಗಿದೆ.