ನಟಿ ಸಮಂತಾ ರುತ್ ಪ್ರಭು ಇಂದು ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ಹೀರೋಯಿನ್ ಗಳಲ್ಲಿ ಒಬ್ಬರು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡು ಹೆಸರು ಮಾಡಿರುವ ನಟಿ ಸಮಂತಾ ಅವರು, ಅತಿದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಹಾಗೆಯೇ ಇವರ ಸಿನಿಮಾಗಳು ಅಂದರೆ ಜನರು ಕೂಡ ಬಹಳ ಇಷ್ಟಪಟ್ಟು ನೋಡುತ್ತಾರೆ. ಮಹಿಳಾ ಪ್ರಧಾನ ಸಿನಿಮಾಗಳ ಟ್ರೆಂಡ್ ಅನ್ನು ಮತ್ತೊಮ್ಮೆ ತರುತ್ತಿರುವ ಕೆಲವೇ ಕೆಲವು ನಟಿಯರಲ್ಲಿ ಇವರು ಕೂಡ ಒಬ್ಬರು ಎಂದು ಹೇಳಿದರೆ ತಪ್ಪಲ್ಲ. ಸಮಂತಾ ಅವರು ಇದೀಗ ತಮ್ಮ ಕೆರಿಯರ್ ವಿಚಾರದಲ್ಲಿ, ಹೊಸ ಪ್ರಯತ್ನದಲ್ಲಿ ತೆಗೆದುಕೊಂಡಿರುವ ಒಂದು ನಿರ್ಧಾರದ ಬಗ್ಗೆ ಸುದ್ದಿಯಾಗಿದ್ದು, ಇದನ್ನು ಕೇಳಿ ನೆಟ್ಟಿಗರು ಸಂತೋಷ ಪಟ್ಟಿದ್ದಾರೆ. ಸಮಂತಾ ಅವರ ಈ ಗಟ್ಟಿ ನಿರ್ಧಾರಕ್ಕೆ ಜನರಿಂದ ಬೆಂಬಲ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಆ ನಿರ್ಧಾರ ಯಾವುದು?

ನಟಿ ಸಮಂತಾ ಅವರು ಯಾವುದೇ ಬ್ಯಾಗ್ರೌಂಡ್ ಇಲ್ಲದೇ ಕಷ್ಟಪಟ್ಟು ಬೆಳೆದು ಬಂದವರು. ಚೆನ್ನಾಗಿ ಓದಿಕೊಂಡಿದ್ದ ಸಮಂತಾ ಅವರು ಚಿತ್ರರಂಗಕ್ಕೆ ಬಂದಿದ್ದೇ ಅಚಾನಕ್ ಆಗಿ. ಆ ರೀತಿ ಮುಗ್ಧ ಹುಡುಗಿಯಾಗಿ ಬಂದ ಸಮಂತಾ ಅವರು ಇಂದು ದೊಡ್ಡ ಸ್ಟಾರ್ ನಟಿಯಾಗಿ ಬೆಳೆದು ನಿಂತಿರುವುದು ಸಂತೋಷ ಪಡುವಂಥ ವಿಷಯ. ಮಿಡ್ಲ್ ಕ್ಲಾಸ್ ಹುಡುಗಿಯರು ಬಾನೆತ್ತರಕ್ಕೆ ಕನಸು ಕಾಣಬಹುದು ಅನ್ನೋದನ್ನ ತೋರಿಸಿಕೊಟ್ಟವರು ನಟಿ ಸಮಂತಾ. ಇದೇ ಕಾರಣಕ್ಕೆ ಇವರಿಗೆ ಅತಿದೊಡ್ಡ ಅಭಿಮಾನಿ ಬಳಗ ಇದೆ. ಸಮಂತಾ ಅವರ ಫ್ಯಾನ್ಸ್ ಎಲ್ಲರೂ ತಮ್ಮ ಮೆಚ್ಚಿನ ನಟಿಯನ್ನು ಎಂದಿಗೂ ಬಿಟ್ಟುಕೊಡದೇ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ಸಮಂತಾ ಅವರು ಸಹ ಅಭಿಮಾನಿಗಳಿಗೆ ಇಷ್ಟ ಆಗುವ ಹಾಗೆ ಇದ್ದಾರೆ.
ನಟಿ ಸಮಂತಾ ತೆಲುಗು, ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಎತ್ತರಕ್ಕೆ ಬೆಳೆದಿರುವವರು. ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ಸಿನಿಮಾಗಳಲ್ಲಿ ನಟಿಸಿ, ಸ್ಟಾರ್ ಹೀರೋಯಿನ್ ಆಗಿ ಬೆಳೆದವರು. ಒಂದು ಕಾಲದಲ್ಲಿ ಸಮಂತಾ ಅವರೇ ಎಲ್ಲಾ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಇರಬೇಕು ಎನ್ನುವ ಹಾಗೆ ಜನಪ್ರಿಯತೆ ಹಾಗೂ ಹೆಸರು ಗಳಿಸಿದರು. ಹಲವು ಅವಾರ್ಡ್ ಗಳನ್ನು ಸಹ ಗೆದ್ದಿದ್ದಾರೆ. ನಟಿ ಸಮಂತಾ ಅವರು ಕೆರಿಯರ್ ನಲ್ಲಿ ಪೀಕ್ ನಲ್ಲಿ ಇದ್ದ ಸಮಯದಲ್ಲೇ ತೆಲುಗಿನ ಸ್ಟಾರ್ ನಟ ನಾಗಚೈತನ್ಯ ಅವರ ಜೊತೆಗೆ ಮದುವೆಯಾದರು. ಆದರೆ ಇವರಿಬ್ಬರ ದಾಂಪತ್ಯ ಜೀವನ ಹೆಚ್ಚು ದಿವಸಗಳ ಕಾಲ ಉಳಿಯಲಿಲ್ಲ. ಮದುವೆಯಾದ 4 ವರ್ಷಗಳ ಒಳಗೆ ವಿಚ್ಛೇದನ ಪಡೆದು ಬೇರೆಯಾದರು.

ಇವರಿಬ್ಬರು ಬೇರೆಯಾಗಿದ್ದು 2021ರಲ್ಲಿ, ಆದರೆ ಇವತ್ತಿಗೂ ಸಹ ಅದೇ ವಿಚಾರ ಚರ್ಚೆ ಆಗುತ್ತಲೇ ಇರುತ್ತದೆ. ಇಬ್ಬರು ದೂರವಾಗಿದ್ದಕ್ಕೆ ಕಾರಣ ಏನಿರಬಹುದು ಎನ್ನುವ ಚರ್ಚೆ ಕೇಳಿ ಬರುತ್ತದೆ. ನಾಗಚೈತನ್ಯ ಈಗಾಗಲೇ ಎರಡನೇ ಮದುವೆ ಕೂಡ ಆಗಿದ್ದಾರೆ. ಆದರೆ ಸಮಂತಾ ಅವರು ಇದುವರೆಗೂ ಎರಡನೇ ಮದುವೆ ಅಥವಾ ಎರಡನೇ ಬಾರಿ ಪ್ರೀತಿಯ ಬಗ್ಗೆ ಎಲ್ಲಿಯೂ ಸಹ ಮಾತನಾಡಿಲ್ಲ. ಸಮಂತಾ ಅವರು ಸಂಪೂರ್ಣವಾಗಿ ತಮ್ಮ ಕೆರಿಯರ್ ನಲ್ಲಿಯೇ ತೊಡಗಿಸಿಕೊಂಡಿದ್ದಾರೆ. ಸಮಂತಾ ಅವರ ಪಿಕಲ್ ಬಾಲ್ ಟೀಮ್ ಇದೆ, ಅವರದ್ದೇ ಶಾಲೆ ಇದೆ, ಅವರದ್ದೇ ಅದ ಮಕ್ಕಳ ಆರೋಗ್ಯಕ್ಕೆ ಸಹಾಯ ಮಾಡುವ ಫೌಂಡೇಶನ್ ಇದೆ. ಹೀಗೆ ಹಲವು ಕಾರ್ಯಗಳಲ್ಲಿ ಸಮಂತಾ ತೊಡಗಿಸಿಕೊಂಡಿದ್ದಾರೆ..
ಹೀಗೆ ಅನೇಕ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದಿರುವ ಸಮಂತಾ ಅವರು ಮತ್ತೊಂದು ಪ್ರಮುಖ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಅದು ಚಿತ್ರರಂಗದಲ್ಲಿ ಆಗುವ ಸಂಭಾವನೆ ತಾರತಮ್ಯದ ಬಗ್ಗೆ. ಸಾಮಾನ್ಯವಾಗಿ ಚಿತ್ರರಂಗದಲ್ಲಿ ಸ್ಟಾರ್ ಹೀರೋಗಳಿಗೆ ನೂರಾರು ಕೋಟಿ ಸಂಭಾವನೆ ಕೊಡುತ್ತಾರೆ. ಆದರೆ ನಾಯಕಿಯರು ಎಷ್ಟೇ ಜನಪ್ರಿಯತೆ ಹೊಂದಿದ್ದರು ಸಹ ಅವರ ಸಂಭಾವನೆ 20 ಕೋಟಿ ದಾಟಿಲ್ಲ. ಇದು ಕೇಳುವುದಕ್ಕೆ ಕಹಿ ಅನ್ನಿಸಿದರು ಇದೇ ಸತ್ಯ. ಎಲ್ಲಾ ನಟಿಯರಿಗು ಈ ಬಗ್ಗೆ ಬೇಸರ ಇದೆ. ಸಮಂತಾ ಅವರು ಈ ಒಂದು ಸಂಪ್ರದಾಯವನ್ನು ಮುರಿದು, ಸಂಭಾವನೆಯ ವಿಚಾರದಲ್ಲಿ ಸಮಾನತೆ ತರುವುದಕ್ಕೆ ಮುಂದಾಗಿದ್ದಾರೆ. ಅದು ಹೇಗೆ ಎಂದು ನಿರ್ದೇಶನ ನಂದಿನಿ ರೆಡ್ಡಿ ತಿಳಿಸಿದ್ದಾರೆ.

ನಂದಿನಿ ರೆಡ್ಡಿ ಅವರು ಬೆಂಗಳೂರು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಬಂದಿದ್ದರು. ಆಗ ನಡೆದ ಸಂವಾದದಲ್ಲಿ ಮಾತನಾಡುವಾಗ ಈ ವಿಚಾರ ತಿಳಿಸಿದ್ದಾರೆ. ಸಮಂತಾ ಅವರು 2023ರಲ್ಲಿ ತಿರಲಾಲ ಮೂವಿಂಗ್ ಪಿಕ್ಚರ್ಸ್ ಹೆಸರಿನಲ್ಲಿ ಪ್ರೊಡಕ್ಷನ್ ಕಂಪನಿ ಶುರು ಮಾಡಿದ್ದು, ಈ ಕಂಪನಿ ಇಂದ ತಯಾರಾಗುತ್ತಿರುವ ಮೊದಲ ಸಿನಿಮಾ ಬಂಗಾರಂ. ಈ ಸಿನಿಮಾದಲ್ಲಿ ನಟಿಸಿರುವವರಿಗೆ ಯಾವುದೇ ತಾರತಮ್ಯ ಮಾಡದೆ ಒಂದೇ ಸಂಭಾವನೆ ನೀಡಿದ್ದಾರಂತೆ ಸಮಂತಾ. ಈ ವಿಚಾರವನ್ನು ನಂದಿನಿ ರೆಡ್ಡಿ ಅವರು ತಿಳಿಸುತ್ತಿದ್ದ ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಸಮಂತಾ ಅವರ ಈ ನಿರ್ಧಾರಕ್ಕೆ ಪ್ರಶಂಸೆ ನೀಡಿದ್ದಾರೆ. ಸಮಂತಾ ಅವರು ಚಿತ್ರರಂಗದಲ್ಲಿ ಇಂಥದ್ದೊಂದು ಬದಲಾವಣೆ ತರುವುದಕ್ಕೆ ಮುಂದಾಗಿರುವುದು ನಿಜಕ್ಕೂ ಒಂದು ಕ್ರಾಂತಿಯ ರೀತಿ ಎಂದರೆ ತಪ್ಪಲ್ಲ.

ನಟರಿಗೆ ಸಿಗುವಷ್ಟು ಸುಲಭವಾಗಿ ಯಾವುದು ಕೂಡ ನಟಿಯರಿಗೆ ಸಿಗುವುದಿಲ್ಲ. ಒಬ್ಬ ನಟನಿಗೆ 4 ವರ್ಷಗಳಲ್ಲಿ ಸಿಗುವಷ್ಟು ಯಶಸ್ಸು ನಟಿಗೆ 8 ವರ್ಷಗಳಿಗೆ ಸಿಗಬಹುದೇನೋ. ಇತ್ತೀಚಿನ ವರ್ಷಗಳಲ್ಲಿ ಕೆಲವೇ ಕೆಲವು ನಟಿಯರು ಮಾತ್ರ ತಮ್ಮದೇ ಆದ ಛಾಪು ಮೂಡಿಸಿ, ಮಹಿಳಾ ಪ್ರಧಾನ ಸಿನಿಮಾಗಳಲ್ಲಿ, ಕಮರ್ಷಿಯಲ್ ಸಿನಿಮಾಗಳಲ್ಲಿ ಎಲ್ಲದರಲ್ಲೂ ನಟಿಸಿ ಯಶಸ್ವಿ ಆಗಿದ್ದಾರೆ. ತ್ರಿಷಾ ಅವರು, ನಯನತಾರ ಅವರು ಹೀಗೆ ಕೆಲವರು ಮಾತ್ರ. ಇದೇ ಸಾಲಿಗೆ ಸಮಂತಾ ಕೂಡ ಸೇರಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಸಮಂತಾ ಅವರು ತೆಗೆದುಕೊಂಡಿರುವ ಈ ಒಂದು ನಿರ್ಧಾರ, ಚಿತ್ರರಂಗಕ್ಕೆ ಬೇಕಿದ್ದ ಪ್ರಮುಖ ಬದಲಾವಣೆ ಆಗಿದ್ದು, ಮುಂದಿನ ಸಿನಿಮಾಗಳಲ್ಲಿ ಇದೇ ರೀತಿ ಮುಂದುವರೆಯಲಿ, ಸಮಂತಾ ಅವರಿಗೆ ಎಲ್ಲವೂ ಒಳ್ಳೆಯದಾಗಲಿ ಎಂದು ಹಾರೈಸೋಣ.