ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಚಿತ್ರರಂಗದ ಸ್ಟಾರ್ ಹೀರೋ, ಇಂದು ಇವರು ಹಿಂದಿ ಚಿತ್ರರಂಗಕ್ಕೆ ಮಾತ್ರ ಮೀಸಲಾಗಿಲ್ಲ, ಬಾಲಿವುಡ್ ನಟನಾಗಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಕಲಾವಿದರಲ್ಲಿ ಇವರು ಒಬ್ಬರು. ಸಲ್ಮಾನ್ ಖಾನ್ ಅವರಿಗೆ ಎಷ್ಟರ ಮಟ್ಟಿಗೆ ಬೇಡಿಕೆ ಇದೆ, ಎಂಥಾ ಸಿನಿಮಾಗಳಲ್ಲಿ ಅವರು ನಟಿಸುತ್ತಾರೆ ಎಂದು ನಮಗೆಲ್ಲಾ ಗೊತ್ತೇ ಇದೆ. ಇನ್ನು ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ಸಹ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. ಇವರು ಕಥೆಗಳನ್ನು ಬರೆದು, ಅದ್ಭುತ ಬರಹಗಾರರಾಗಿ ಹೆಸರು ಮಾಡಿದವರು. ಇಂಥ ಸಲೀಂ ಖಾನ್ ಅವರು ಅಣ್ಣಾವ್ರ ಸಿನಿಮಾಗೆ ಕಥೆ ಬರೆದಿದ್ರು ಎನ್ನುವ ವಿಷಯ ಹೆಚ್ಚಿನ ಜನರಿಗೆ ಗೊತ್ತಿಲ್ಲ..

ಹೌದು, ಆಗಿನ ಕಾಲದಲ್ಲಿ ಅಣ್ಣಾವ್ರು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದರು. ಅವರ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದವು. ಅದಕ್ಕೆ ಕಾರಣ ಅಣ್ಣಾವ್ರು ಆಯ್ಕೆ ಮಾಡಿಕೊಳ್ಳುತ್ತಿದ್ದ ಕಥೆಗಳು. ಒಳ್ಳೆಯ ಕಥೆಗಳು, ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂಥ ಕಥೆಗಳನ್ನೇ ಅಣ್ಣಾವ್ರು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಜೊತೆಗೆ ಅವರ ಅಭಿನಯ ಕೂಡ ಅಷ್ಟೇ ಅದ್ಭುತವಾಗಿ ಇರುತ್ತಿತ್ತು, ಈ ಕಾರಣಕ್ಕೆ ಡಾ. ರಾಜ್ ಕುಮಾರ್ ಅಭಿನಯಿಸಿದ ಬಹುತೇಕ ಸಿನಿಮಾಗಳು ಹಿಟ್ ಆಗುತ್ತಿದ್ದವು. ಜನರು ಇವರ ಸಿನಿಮಾ ನೋಡಲು ಪದೇ ಪದೇ ಥಿಯೇಟರ್ ಗೆ ಬರುತ್ತಿದ್ದರು. ಸಿನಿಮಾಗಳು ರಜತೋತ್ಸವ ಆಚರಿಸುತ್ತಿದ್ದವು.

ಇನ್ನು ಸಲೀಂ ಖಾನ್ ಅವರು ಉತ್ತಮವಾದ ಬರಹಗಾರ. ಹಿಂದಿಯ ಬ್ಲಾಕ್ ಬಸ್ಟರ್ ಹಿಟ್ ಶೋಲೇ ಸಿನಿಮಾಗೆ ಕಥೆ ಬರೆದಿದ್ದು ಇವರೇ. ಸಲೀಂ ಖಾನ್ ಹಾಗೂ ಜಾವೇದ್ ಖಾನ್ ಇಬ್ಬರದ್ದು ಸೂಪರ್ ಹಿಟ್ ರೈಟಿಂಗ್ ಕಾಂಬಿನೇಷನ್ ಎಂದರೆ ತಪ್ಪಲ್ಲ. ಇವರಿಬ್ಬರು ಸೇರಿ ರಚಿಸುವ ಕಥೆಗಳು ಅಷ್ಟು ಅದ್ಭುತವಾಗಿ ಇರುತ್ತಿದ್ದವು. ಶೋಲೇ ಸಿನಿಮಾ ಹಿಂದಿಯಲ್ಲಿ ಸೂಪರ್ ಹಿಟ್ ಆಗುವುದರ ಜೊತೆಗೆ, ದೇಶದ ಎಲ್ಲೆಡೆ ಅದ್ಭುತ ಪ್ರದರ್ಶನ ಕಂಡಿತು. ಸಿನಿಮಾದ ಯಶಸ್ಸಿನಿಂದ ಕಥೆಗಾರರಿಗೆ ಕೂಡ ಬೇಡಿಕೆ ಹೆಚ್ಚಾಯಿತು. ಬೇರೆ ಭಾಷೆಯವರು ಸಹ ಇವರಲ್ಲಿ ಬಂದು ಕಥೆ ಬರೆಸಿಕೊಳ್ಳುತ್ತಿದ್ದರಂತೆ. ಅಷ್ಟರ ಮಟ್ಟಿಗೆ ಸಲೀಂ ಖಾನ್ ಅವರಿಗೆ ಬೇಡಿಕೆ ಸೃಷ್ಟಿಯಾಗಿತ್ತು.

70ರ ದಶಕದಲ್ಲಿ ಸಿನಿಮಾ ಪ್ರಿಯರು ಇಷ್ಟಪಡುತ್ತಿದ್ದದ್ದು ಒಳ್ಳೆಯ ಕಥೆಗಳನ್ನೇ ಹಾಗಾಗಿ ಸಿನಿಮಾ ತಯಾರಕರು ಹಾಗೂ ಕಲಾವಿದರು ಅದಕ್ಕೆ ತಕ್ಕಂತೆಯೇ ಕಥೆಗಳನ್ನು ರಚಿಸುತ್ತಿದ್ದರು. ಅಣ್ಣಾವ್ರು ಸಹ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದ ಕಾಲ 70ರ ದಶಕ. ಆಗ ಅಣ್ಣಾವ್ರು ನಟಿಸಿದ ಪ್ರೇಮದ ಕಾಣಿಕೆ ಸಿನಿಮಾ ಬಿಡುಗಡೆ ಆಗಿತ್ತು, ಈ ಸಿನಿಮಾದಲ್ಲಿ ಅಣ್ಣಾವ್ರಿಗೆ ನಾಯಕಿಯಾಗಿ ಆರತಿ ಅವರು ಹಾಗೂ ಜಯಮಾಲಾ ಅವರು ಇಬ್ಬರು ನಟಿಸಿದ್ದರು. ಇದೊಂದು ಕನ್ನಡದ ಎವರ್ ಗ್ರೀನ್ ಸಿನಿಮಾ, ಆಲ್ ಟೈಮ್ ಸೂಪರ್ ಹಿಟ್. ಈಗಲೂ ಈ ಸಿನಿಮಾದ ಹಾಡುಗಳಿಗೆ ಭಾರಿ ಬೇಡಿಕೆ ಇದೆ.
ಇನ್ನೊಂದು ಸಿನಿಮಾ ರಾಜ ನನ್ನ ರಾಜ. ಇದು ಸಹ ಅಣ್ಣಾವ್ರ ಸಿನಿಮಾ, ಅವರಿಗೆ ನಾಯಕಿಯಾಗಿ ಆರತಿ ಅವರು ನಟಿಸಿದ್ದರು. ರಾಜ ನನ್ನ ರಾಜ ಕೂಡ ಒಳ್ಳೆಯ ಕಥೆ ಹಾಗೂ ಅದ್ಭುತವಾದ ಹಾಡುಗಳನ್ನು ಹೊಂದಿದ್ದ ಸಿನಿಮಾ. ಈ ಎರಡು ಸಿನಿಮಾಗಳಿಗೆ ಕಥೆ ಬರೆದಿದ್ದು ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ಎನ್ನುವುದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಆದರೆ ಈ ವಿಚಾರ ಅಂತು ನಿಜವಾಗಿದೆ, ಅಣ್ಣಾವ್ರಿಗೆ ಎಲ್ಲಾ ಭಾಷೆಯ ಕತೆಗಾರರು ಕಥೆಗಳನ್ನು ಬರೆದಿರುವುದು ವಿಶೇಷ. ಇಂದು ಸಲೀಂ ಖಾನ್ ಅವರ ಮಗ ಅಷ್ಟು ಎತ್ತರಕ್ಕೆ ಬೆಳೆದಿರುವುದು ಸಹ ಬಹಳ ಸಂತೋಷ ಪಡಬೇಕಾದ ವಿಷಯ.