ತಮ್ಮ ಸಹಜ ಅಭಿನಯದ ಮೂಲಕ ಭಾರತದ ಎಲ್ಲೆಡೆ ಹೆಸರುವಾಸಿ ಆಗಿರುವವರು ನಟಿ ಸಾಯಿಪಲ್ಲವಿ. ಊಟಿ ಮೂಲದ ಈ ಹುಡುಗಿ ಓದಿದ್ದು ಎಂ.ಬಿ.ಬಿ.ಎಸ್ ಆಗಿದ್ದರೂ ಇವರನ್ನು ಸೆಳೆದದ್ದು ನಟನೆಯ ಕ್ಷೇತ್ರ. ನಟಿ ಸಾಯಿಪಲ್ಲವಿ ಅವರು ವಿದೇಶದಲ್ಲಿ ಮೆಡಿಸಿನ್ ಓದಿದವರು. ಓದುವಾಗಲೇ ಮಲಯಾಳಂ ನ ಪ್ರೇಮಂ ಸಿನಿಮಾ ಮೂಲಕ ನಟನೆ ಶುರು ಮಾಡಿದರು. ಅದಕ್ಕಿಂತ ಮೊದಲು ಕೆಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು.
ಪ್ರೇಮಂ ನಲ್ಲಿ ಇವರ ಮಲರ್ ಟೀಚರ್ ಪಾತ್ರದ ಕ್ರೇಜ್ ಯಾವ ಮಟ್ಟಕ್ಕೆ ಇತ್ತು ಎಂದು ಎಲ್ಲರಿಗೂ ಗೊತ್ತೇ ಇದೆ. ಈ ಸೂಪರ್ ಸಕ್ಸಸ್ ನಂತರ ಸಾಯಿಪಲ್ಲವಿ ಅವರು ತೆಲುಗಿನ ಫಿದಾ ಸಿನಿಮಾದಲ್ಲಿ ನಟಿಸಿದರು. ಅದಾದಮೇಲೆ ಇವರು ತಿರುಗಿ ನೋಡಿದ್ದೇ ಇಲ್ಲ. ತೆಲುಗು, ತಮಿಳು, ಮಲಯಾಳಂ ಹೀಗೆ ಎಲ್ಲಾ ಭಾಷೆಯಲ್ಲಿ ಉತ್ತಮ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು, ಅಚ್ಚುಕಟ್ಟಾದ ಅಭಿನಯದ ಅಭಿನಯದ ಮೂಲಕ ತಮ್ಮದೇ ಆದ ವಿಶೇಷ ಶೈಲಿಯಲ್ಲಿ ಛಾಪು ಮೂಡಿಸಿದ್ದಾರೆ.

ನಟಿ ಸಾಯಿಪಲ್ಲವಿ ಗಾರ್ಗಿ ಸಿನಿಮಾದ ಕನ್ನಡ ವರ್ಷನ್ ನಲ್ಲಿ, ಕನ್ನಡದಲ್ಲಿ ತಾವೇ ಡಬ್ ಮಾಡುವ ಮೂಲಕ ಕನ್ನಡಿಗರಿಗೂ ಹತ್ತಿರವಾದರು. ಇದೀಗ ಇವರು ಗಾರ್ಗಿ ಬಳಿಕ ಬ್ರೇಕ್ ಪಡೆದು ಅಮರನ್ ಸಿನಿಮಾ ಮೂಲಕ ತೆರೆಮೇಲೆ ಬಂದಿದ್ದಾರೆ. ಮೇಜರ್ ಮುಕುಂದ್ ವರದರಾಜನ್ ಅವರ ಜೀವನಾಧಾರಿತ ಸಿನಿಮಾ ಇದಾಗಿದ್ದು, ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಿ ಎಲ್ಲೆಡೆ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಸಾಯಿಪಲ್ಲವಿ ಅವರ ಇಂಟರೆಸ್ಟಿಂಗ್ ಪ್ರಾಜೆಕ್ಟ್ ರಾಮಾಯಣ.
ಬಾಲಿವುಡ್ ನಲ್ಲಿ ನಿತೇಶ್ ತಿವಾರಿ ಅವರ ನಿರ್ದೇಶನದಲ್ಲಿ ರಾಮಾಯಣ ತಯಾರಾಗುತ್ತಿದೆ. ಈ ಸಿನಿಮಾದ ಪ್ರೊಡ್ಯುಸರ್ ಗಳಲ್ಲಿ ಯಶ್ ಕೂಡ ಒಬ್ಬರು, ಜೊತೆಗೆ ಯಶ್ ಅವರು ರಾವಣನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಅವರು ನಟಿಸುತ್ತಿದ್ದು, ಸೀತೆಯ ಪಾತ್ರದಲ್ಲಿ ಸಾಯಿಪಲ್ಲವಿ ನಟಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ ಎಂದು ಮಾಹಿತಿ ಸಿಕ್ಕಿದೆ.

ರಾಮಾಯಣ ರೆಗ್ಯುಲರ್ ಸಿನಿಮಾಗಳ ರೀತಿ ಅಲ್ಲ, ಸೀತೆಯ ಪಾತ್ರ ಅಂದರೆ ಒಂದು ರೀತಿ ತಪಸ್ಸಿದ್ದ ಹಾಗೆ ಎಂದು ಹೇಳಿದರೂ ತಪ್ಪಲ್ಲ. ಅಮರನ್ ಸಿನಿಮಾದ ಇಂಟರ್ವ್ಯೂ ವೇಳೆ ಸೀತೆಯ ಪಾತ್ರದ ಬಗ್ಗೆ ಕೇಳಿದಾಗ ಸಾಯಿಪಲ್ಲವಿ ಅವರು ಹೆಚ್ಚಾಗಿ ಮಾತನಾಡಿಲ್ಲ, ಈಗ ಆ ಸಿನಿಮಾ ಬಗ್ಗೆ ಮಾತಾಡೋ ಸಮಯ ಅಲ್ಲ ಎಂದು ಹೇಳಿದ್ದರು. ಆದರೆ ನಿರೂಪಕರು ಮತ್ತೊಮ್ಮೆ ಕೇಳಿದಾಗ, ಸೀತೆ ಪಾತ್ರದಲ್ಲಿ ಬಣ್ಣ ಹಚ್ಚಿ ಕ್ಯಾಮೆರಾ ಎದುರು ಬರುವುದಕ್ಕಿಂತ ಮೊದಲು, ಆ ಒಂದು ಕೆಲಸ ಮಾಡುತ್ತಿದ್ದುದ್ದಾಗಿ ಸಾಯಿಪಲ್ಲವಿ ಹೇಳಿದ್ದಾರೆ..
ಹೌದು, ಸಾಮಾನ್ಯವಾದ ಪಾತ್ರದ ಹಾಗಲ್ಲ ಸೀತೆಯ ಪಾತ್ರ. ಈ ಕಾರಣಕ್ಕೆ ಸಾಯಿಪಲ್ಲವಿ ಅವರಿಗೆ ಸ್ವಲ್ಪ ಭಯವೂ ಇತ್ತಂತೆ, ಹಾಗಾಗಿ ಕ್ಯಾಮೆರಾ ಎದುರು ಹೋಗುವ ಮೊದಲು, ದೇವಿಗೆ ಪೂಜೆ ಮಾಡಿ, ಶ್ಲೋಕ ಹೇಳಿ ನಂತರ ಅಭಿನಯ ಮಾಡಲು ಕ್ಯಾಮೆರಾ ಎದುರು ಹೋಗುತ್ತಿದ್ದರಂತೆ. ಈ ವಿಚಾರವನ್ನು ಅವರು ತಿಳಿಸಿದ್ದು, ಸಾಯಿಪಲ್ಲವಿ ಅವರನ್ನು ಸೀತೆಯಾಗಿ ನೋಡುವುದಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ.