ಈ ಜೋಡಿ ನೋಡಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಲವ್ ಮಾಡಿದ್ರೆ, ಮದುವೆಯಾಗಿ ಜೀವನ ನಡೆಸಿದ್ರೆ ಇವರ ಹಾಗೆ ನಡೆಸಬೇಕು ಎಂದು ಎಲ್ಲಾ ಲವ್ವರ್ ಗಳು ಅಂದುಕೊಳ್ಳುತ್ತಾರೆ. ಬಹುತೇಕ ಎಲ್ಲಾ ಲವರ್ ಗಳಿಗೆ ಸ್ಪೂರ್ತಿ ಈ ಜೋಡಿ. ಯಶ್ ಹಾಗೂ ರಾಧಿಕಾ ಸ್ಯಾಂಡಲ್ ವುಡ್ ನಲ್ಲಿ ಕೂಡ ಎಲ್ಲರ ಮೆಚ್ಚಿನ ಜೋಡಿ ಆಗಿದ್ದಾರೆ. ಮದುವೆಯಾಗಿ ಸುಖವಾದ ಸಂಸಾರ ನಡೆಸಿಕೊಂಡು ಹೋಗುತ್ತಿರುವ ಯಶ್ ರಾಧಿಕಾ ಜೋಡಿ, ಹಲವು ಬಾರಿ ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಇದೀಗ ಮತ್ತೊಮ್ಮೆ ಈ ಕ್ಯೂಟ್ ಜೋಡಿ ಸುದ್ದಿಯಲ್ಲಿದ್ದು, ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬಕ್ಕೆ ಯಶ್ ಅವರು ಕೊಟ್ಟಿರುವ ಸರ್ಪ್ರೈಸ್ ಇಂದ ಅವರ ಹಾರ್ಟ್ ಬೀಟ್ ಜೋರಾಗಿದೆ ಎಂದು ಖುದ್ದು ರಾಧಿಕಾ ಅವರೇ ಹೇಳಿದ್ದಾರೆ. ಹಾಗಿದ್ದಲ್ಲಿ ಯಶ್ ಅವರು ಕೊಟ್ಟ ಆ ಸುಂದರವಾದ ಸರ್ಪ್ರೈಸ್ ಏನು ಗೊತ್ತಾ? ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ..
ಯಶ್ ಹಾಗೂ ರಾಧಿಕಾ ಜೋಡಿ ನಟನೆ ಶುರುಮಾಡಿದ್ದು ಬಹುತೇಕ ಒಂದೇ ರೀತಿ. ಧಾರಾವಾಹಿಗಳಲ್ಲಿ ನಟನೆ ಶುರು ಮಾಡಿದರು. ಆಗಿನಿಂದಲೂ ಇಬ್ಬರಿಗೂ ಒಳ್ಳೆಯ ಪರಿಚಯವಿತ್ತು. ಆ ಪರಿಚಯ, ಸ್ನೇಹವಾಯಿತು. ಇಬ್ಬರು ಜೊತೆಯಾಗಿ ಸಿನಿಮಾ ರಂಗಕ್ಕೆ ಕೂಡ ಎಂಟ್ರಿ ಕೊಟ್ಟರು. ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ರಾಧಿಕಾ ಅವರಿಗೆ ನಾಯಕನಾಗಿದ್ದು ಯಶ್ ಅವರು. ಅವರಿಬ್ಬರ ಜೋಡಿ ಈ ಸಿನಿಮಾ ಇಂದಲೇ ಎಲ್ಲರಿಗೂ ಬಹಳ ಇಷ್ಟವಾಗಿತ್ತು. ಅಭಿಮಾನಿಗಳ ಮೆಚ್ಚಿನ ಜೋಡಿ ಆಗಿಬಿಟ್ಟರು ಯಶ್ ರಾಧಿಕಾ. ಅಲ್ಲಿಂದ ಇವರಿಬ್ಬರು ಯಶಸ್ಸಿನ ವಿಷಯದಲ್ಲಿ ಹಿಂದಿರುಗಿ ನೋಡಿದ್ದೆ ಇಲ್ಲ. ರಾಧಿಕಾ ಅವರು ಚಂದನವನದ ಸ್ಟಾರ್ ಹೀರೋಯಿನ್ ಆಗಿ ಹೆಸರು ಮಾಡಿದರು. ಒಳ್ಳೊಳ್ಳೆಯ ಪಾತ್ರಗಳಲ್ಲಿ ನಟಿಸುತ್ತಾ ಹೋದರು.

ಇನ್ನು ಯಶ್ ಅವರ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಅವರ ಜರ್ನಿ ಎಲ್ಲರಿಗೂ ಸ್ಪೂರ್ತಿ. ಮಿಡ್ಲ್ ಕ್ಲಾಸ್ ನಲ್ಲಿ ಹುಟ್ಟಿ ಬೆಳೆದ ಯಶ್ ಅವರು, ಬಸ್ ಕಂಡಕ್ಟರ್ ಅವರ ಮಗ. ಅಲ್ಲಿಂದಲೇ ಸ್ಟಾರ್ ಆಗಬೇಕು ಅನ್ನೋ ಕನಸು ಕಂಡು, ಒಂದೊಂದೇ ಹೆಜ್ಜೆಯನ್ನು ಆ ಕನಸಿನ ಕಡೆಗೆ ಇಡುತ್ತಾ ಬಂದು, ಕಷ್ಟಗಳನ್ನು ಪಟ್ಟು, ಅವಮಾನಗಳನ್ನು ಸಹಿಸಿಕೊಂಡು ಇಂದು ರಾಕಿಂಗ್ ಸ್ಟಾರ್ ಆಗಿ ನಿಂತಿದ್ದಾರೆ. ಇಂದು ಯಶ್ ಅಂದ್ರೆ ಇಡೀ ಭಾರತ ಚಿತ್ರರಂಗ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರು ತಿರುಗಿ ನೋಡುತ್ತಾರೆ. ಕೆಜಿಎಫ್ ಅನ್ನೋ ಆ ಸಿನಿಮಾಗಳು ಯಶ್ ಅವರಿಗೆ ಅಷ್ಟು ದೊಡ್ಡ ಮಟ್ಟಕ್ಕೆ ಹೆಸರು ತಂದುಕೊಟ್ಟಿದೆ. ಯಶ್ ಅವರು ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದಾರೆ ಎನ್ನುವುದರ ಹಿಂದಿನ ಪ್ರಮುಖ ಕಾರಣ ರಾಧಿಕಾ ಪಂಡಿತ್ ಅವರು ಎಂದರೆ ಖಂಡಿತ ತಪ್ಪಲ್ಲ.
ಯಶ್ ಅವರ ಕನಸುಗಳಿಗೆ ನಿರ್ಧಾರಗಳಿಗೆ ರಾಧಿಕಾ ಪಂಡಿತ್ ಅವರು ಸದಾ ಸಪೋರ್ಟ್ ಮಾಡಿದ್ದಾರೆ. ಮಕ್ಕಳನ್ನು ನೋಡಿಕೊಳ್ಳುವುದು ಹಾಗೆ ಯಶ್ ಅವರನ್ನು ಸಹ ನೋಡಿಕೊಳ್ಳುತ್ತಿದ್ದಾರೆ. ತಮ್ಮ ಫ್ಯಾಮಿಲಿ ಗಾಗಿ ಕೆರಿಯರ್ ಗೆ ಬ್ರೇಕ್ ಕೊಟ್ಟು, ಇಷ್ಟೆಲ್ಲ ಮಾಡುವುದು ಸಹ ಸುಲಭ ಅಲ್ಲ. ಬಹಳಷ್ಟು ಮಹಿಳೆಯರು ತಮ್ಮ ಕೆರಿಯರ್ ತಮಗೆ ಮುಖ್ಯ ಎಂದು ಹೇಳುವಂಥವರು ಇದ್ದಾರೆ. ಆದರೆ ರಾಧಿಕಾ ಪಂಡಿತ್ ಅವರು ತಮ್ಮ ಫ್ಯಾಮಿಳಿಗಾಗಿ ಎಲ್ಲವನ್ನು ಬಿಟ್ಟು ಇದ್ದಾರೆ. ಯಶ್ ಅವರು ಅದೇ ರೀತಿ ರಾಧಿಕಾ ಅವರನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಒಬ್ಬ ಗಂಡನಾಗಿ ಸದಾ ರಾಧಿಕಾ ಅವರಿಗೆ ಮಕ್ಕಳಿಗೆ ಸಪೋರ್ಟ್ ಮಾಡುತ್ತಲೇ ಇದ್ದಾರೆ. ಎಷ್ಟೇ ಬ್ಯುಸಿ ಇದ್ದರು ಫ್ಯಾಮಿಲಿಗಾಗಿ ಸಮಯ ಮಾಡಿಕೊಳ್ಳುತ್ತಾರೆ.

ಈ ಜೋಡಿಯನ್ನು ನೋಡಿದರೆ ಈಗಿನ ಪೀಳಿಗೆಯವರು ಇವರನ್ನು ನೋಡಿ ಕಲಿಯಬೇಕು. ಬೆಳಗ್ಗೆ ಲವ್, ಸಂಜೆ ಬ್ರೇಕಪ್, ಮರುದಿನ ಇನ್ನೊಬ್ಬರ ಜೊತೆ ಮದುವೆ ಎಂದು ಜೀವನ ಕಳೆಯುತ್ತಿರುವ ಈಗಿನ ಪೀಳಿಗೆಯವರಿಗೆ ಯಶ್ ಹಾಗೂ ರಾಧಿಕಾ ಜೋಡಿ ಮಾದರಿ. ಒಬ್ಬರನ್ನೊಬ್ಬರು ಹೇಗೆ ಬಿಟ್ಟುಕೊಡಬಾರದು, ಒಬ್ಬರಿಗೊಬ್ಬರು ಹೇಗೆ ಸಪೋರ್ಟಿವ್ ಆಗಿರಬೇಕು ಎನ್ನುವುದು ಇವರಿಬ್ಬರನ್ನು ನೋಡಿ ಕಲಿಯುವಂಥ ಮತ್ತೊಂದು ವಿಷಯ. ಈಗಿನ ಪೀಳಿಗೆಗೆ ಅಭಿಮಾನಿಗಳಿಗೆ ಮಾದರಿಯಾಗಿರುವ ಈ ಜೋಡಿಯ ಮತ್ತೊಂದು ಸುಂದರವಾದ ವಿಡಿಯೋ ಇಂಟರ್ನೆಟ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದು ಯಶ್ ಅವರು ರಾಧಿಕಾ ಅವರಿಗಾಗಿ ಪ್ರೀತಿಯಿಂದ ಹಾಡೊಂದನ್ನು ಹಾಡುತ್ತಿರುವ ವಿಡಿಯೋ ಆಗಿದೆ..
ಮೊನ್ನೆ ನಡೆದ ರಾಧಿಕಾ ಪಂಡಿತ್ ಅವರ ಬರ್ತ್ ಡೇ ಸೆಲೆಬ್ರೇಷನ್ ನಲ್ಲಿ, ಯಶ್ ಅವರು ಶಂಕರ್ ನಾಗ್ ಅವರ ಗೀತಾ ಸಿನಿಮಾದ ಜೊತೆಯಲಿ ಜೊತೆ ಜೊತೆಯಲಿ ಹಾಡನ್ನು ಪ್ರೀತಿಯಿಂದ ಹಾಡಿದ್ದಾರೆ. ಈ ವಿಡಿಯೋ ಶೇರ್ ಮಾಡಿರುವ ರಾಧಿಕಾ ಪಂಡಿತ್ ಅವರು, “ಇದು ಎಂದೆಂದಿಗೂ ನಮ್ಮ ಹಾಡು.. ಯಾವಾಗಲೂ ಜೊತೆಯಲಿ ಜೊತೆ ಜೊತೆಯಲ್ಲಿ.. ನನ್ನ ಹೃದಯಬಡಿತ ಇನ್ನೂ ಜೋರಾಗಿದೆ..” ಎಂದು ಕ್ಯಾಪ್ಶನ್ ಬರೆದು, ಯಶ್ ಅವರು ಹಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ ರಾಧಿಕಾ ಪಂಡಿತ್. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಯಶ್ ಅವರ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಯಶ್ ಅವರು ಅಷ್ಟು ಮುದ್ದಾಗಿ ಹಾಡುತ್ತಿರುವ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ.
ಗಂಡ ಅಂದರೆ ಯಶ್ ಅವರ ಹಾಗಿರಬೇಕು, ಪತ್ನಿಯನ್ನು ಇಷ್ಟು ಪ್ರೀತಿಯಿಂದ ಗೌರವದಿಂದ ನೋಡಿಕೊಳ್ಳಬೇಕು ಎನ್ನುವ ಅಭಿಪ್ರಾಯ ಜನರಲ್ಲಿ ಮೂಡಿಬಂದಿದೆ. ರಾಕಿಂಗ್ ಜೋಡಿ ಯಾವಾಗಲೂ ಹೀಗೆ ನಗುನಗುತ್ತಾ ಖುಷಿಯಾಗಿರಲಿ ಅಂತಿದ್ದಾರೆ ಫ್ಯಾನ್ಸ್. ಇನ್ನು ರಾಧಿಕಾ ಪಂಡಿತ್ ಅವರಿಗೆ ಈಗ 41 ವರ್ಷ ತುಂಬಿದೆ. ಆದರೆ ರಾಧಿಕಾ ಅವರು ಇನ್ನು ಯಂಗ್ ಆಗಿ ಕಾಣುತ್ತಾರೆ. ಸ್ಯಾಂಡಲ್ ವುಡ್ ಗೆ ಇವರು ಕಂಬ್ಯಾಕ್ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. 2019ರ ನಂತರ ರಾಧಿಕಾ ಅವರು ಮತ್ತೆ ನಟಿಸಿಲ್ಲ. ಆದಷ್ಟು ಬೇಗ ಇವರು ಕಂಬ್ಯಾಕ್ ಮಾಡಲಿ. ಇನ್ನು ಯಶ್ ಅವರ ಟಾಕ್ಸಿಕ್ ಸಿನಿಮಾ ಕೂಡ ಬಹಳ ಬೇಗ ಬಿಡುಗಡೆ ಆಗಲಿ. ಕನ್ನಡ ಚಿತ್ರರಂಗಕ್ಕೆ ಇನ್ನು ಒಳ್ಳೆಯ ಹೆಸರು ತಂದುಕೊಡಲಿ.