ನಟ ಯಶ್ ಅವರು ಒಂದು ಕಾಲದಲ್ಲಿ ಸಾಮಾನ್ಯ ಹುಡುಗನಾಗಿ ಬೆಂಗಳೂರಿಗೆ ಬಂದವರು. ಆದರೆ ಯಶ್ ಅವರಿಗೆ ಬದುಕಿನಲ್ಲಿ ಏನಾದರೂ ಸಾಧಿಸಲೇಬೇಕು ಅನ್ನೋ ಛಲ, ಧೈರ್ಯ ಕೂಡ ಇತ್ತು. ಬೆಂಗಳೂರಿಗೆ ಬಂದು ಇಲ್ಲಿ ನಾನೊಬ್ಬ ಹೀರೋ ಆಗೇ ಆಗ್ತೀನಿ, ಗಾಂಧಿನಗರದಲ್ಲಿ ನನ್ನ ಕಟೌಟ್ ಬಿದ್ದೇ ಬೀಳುತ್ತೆ ಅನ್ನೋ ದೃಢ ನಿರ್ಧಾರ ಹೊಂದಿದ್ದರು. ಅದರಂತೆಯೇ ಮುಂದೆ ಹೆಜ್ಜೆ ಇಟ್ಟರು. ಧಾರಾವಾಹಿಗಳ ಮೂಲಕ ನಟನೆ ಶುರು ಮಾಡಿ, ಸಿಕ್ಕ ಒಂದೊಂದೇ ಅವಕಾಶಗಳನ್ನು ಉಪಯೋಗಿಸಿಕೊಂಡು. ಒಂದೊಂದೇ ಗೆಲುವುಗಳನ್ನು ಪಡೆಯುತ್ತಾ, ಮುಂದೆ ಕೆಜಿಎಫ್ ಅಂಥ ದೊಡ್ಡ ಸಿನಿಮಾ ಮಾಡಿದರು. ಕೆಜಿಎಫ್ ಚಾಪ್ಟರ್ 1 ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಎಷ್ಟು ದೊಡ್ಡ ಮಟ್ಟಕ್ಕೆ ಸದ್ದು ಮಾಡಿತು ಎಂದು ನಮಗೆಲ್ಲಾ ಗೊತ್ತೇ ಇದೆ. ಇನ್ನು ಕೆಜಿಎಫ್2 ಸಿನಿಮಾ ಅದಕ್ಕಿಂತ ದೊಡ್ಡ ಹೆಸರು ಮಾಡಿತು.

ಕೆಜಿಎಫ್2 ನಂತರ ಯಶ್ ಅವರು ಇಡೀ ಭಾರತ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ, ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇವರ ಮುಂದಿನ ಸಿನಿಮಾಗಾಗಿ ಭಾರತಾದ್ಯಂತ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ಟಾಕ್ಸಿಕ್ ಸಿನಿಮಾದ ಟೀಸರ್ ಸಹ ಬಿಡುಗಡೆಯಾಗಿ, ಜನರಿಂದ ಅದ್ಭುತವಾದ ರೆಸ್ಪಾನ್ಸ್ ಸಿಕ್ಕಿತು. ಇನ್ನು ಟಾಕ್ಸಿಕ್ ಸಿನಿಮಾ ಈ ವರ್ಷ ಬಿಡುಗಡೆ ಆಗುವುದಿಲ್ಲ. ಮುಂದಿನ ವರ್ಷ ಬಿಡುಗಡೆ ಅಗಬಹುದು ಎಂದು ಕೆಲ ದಿನಗಳ ಹಿಂದೆ ಮಾಹಿತಿ ಸಿಕ್ಕಿತ್ತು. ಹಾಗೆಯೇ ಯಶ್ ಅವರ ಅಭಿಮಾನಿಗಳಿಗೆ ಈಗ ಬಹುದೊಡ್ಡ ಸಂತೋಷದ ಸುದ್ದಿಯೊಂದು ಕೇಳಿಬಂದಿದೆ. ಅದೇನು ಎಂದರೆ, ಇಂದು ಟಾಕ್ಸಿಕ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ.

ಯಶ್ ಅವರು ನಡೆದುಬಂದ ಹಾದಿ ಸುಲಭದ್ದಲ್ಲ, ಒಂದು ಕಾಲದಲ್ಲಿ ಯಶ್ ಅವರು, ಗಾಂಧಿನಗರದಲ್ಲಿ ತನ್ಮ ಕಟೌಟ್ ಇರಬೇಕು ಎಂದು ಪಣ ತೊಟ್ಟಿದ್ದರು, ಆದರೆ ಇತ್ತೀಚೆಗೆ ಕರ್ನಾಟಕದ ಗಡಿಯನ್ನು ದಾಟಿ ಯಶ್ ಅವರ ಕಟೌಟ್ ಮುಂಬೈನಲ್ಲಿ ನಿಂತಿತ್ತು. ಈ ಕಟೌಟ್ ನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ, ಈ ಕಟೌಟ್ ಹೊರಬಂದಿರುವುದಕ್ಕೆ ಕಾರಣ ಏನಿರಬಹುದು ಎಂದು ಅಭಿಮಾನಿಗಳ ನಡುವೆ ಚರ್ಚೆ ಆಗಿತ್ತು. ಆದರೆ ಆ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಇನ್ನು ಟಾಕ್ಸಿಕ್ ಸಿನಿಮಾ ಬಗ್ಗೆ ಹೇಳುವುದಾದರೆ ಮುಂಬೈನಲ್ಲಿ ಒಂದಷ್ಟು ದಿವಸಗಳ ಕಾಲ, ಬೆಂಗಳೂರಿನಲ್ಲಿ ಒಂದಷ್ಟು ದಿವಸಗಳ ಕಾಲ ಟಾಕ್ಸಿಕ್ ಸಿನಿಮಾ ಚಿತ್ರೀಕರಣ ನಡೆದಿದೆ. ನಟಿ ನಯನತಾರ ಸೇರಿದಂತೆ ಬಿಗ್ ಸ್ಟಾರ್ ಗಳು ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕೂಡ ಮಾಹಿತಿ ಸಿಕ್ಕಿದೆ.

ಅಷ್ಟೇ ಅಲ್ಲದೆ, ಟಾಕ್ಸಿಕ್ ಸಿನಿಮಾ ಗ್ಲೋಬಲ್ ಲವೆಲ್ ನಲ್ಲಿ ಸದ್ದು ಮಾಡುವುದಕ್ಕೆ ಮುಂದಾಗಿದೆ. ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಇಂಗ್ಲಿಷ್ ಮತ್ತು ಕನ್ನಡ ಎರಡು ಭಾಷೆಯಲ್ಲಿ ಚಿತ್ರೀಕರಣ ಆಗುತ್ತಿರುವ ಸಿನಿಮಾ ಆಗಿದೆ ಟಾಕ್ಸಿಕ್. ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ನೀಡಿರುವ ಮಾಹಿತಿಯ ಅನುಸಾರ, ಈ ಸಿನಿಮಾವನ್ನು ಗ್ಲೋಬಲ್ ಆಡಿಯನ್ಸ್ ಗಾಗಿ ತಯಾರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸಿನಿಮಾದ ಕ್ವಾಲಿಟಿ ಹೇಗಿದೆ ಅನ್ನೋದು ಸಿನಿಮಾದ ಒಂದು ಟೀಸರ್ ನೋಡಿಯೇ ಗೊತ್ತಾಗಿದೆ. ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾ ಮೂಲಕ ಯಶ್ ಅವರು ಕನ್ನಡ ಚಿತ್ರರಂಗವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರು. ಆದರೆ ಈಗ ಟಾಕ್ಸಿಕ್ ಮೂಲಕ ಗ್ಲೋಬಲ್ ಲೆವೆಲ್ ಗೆ ತೆಗೆದುಕೊಂಡು ಹೋಗುತ್ತಿದ್ದಾರೆ..
ಎಲ್ಲಾ ಕನ್ನಡದ ಅಭಿಮಾನಿಗಳಿಗೆ ಇದು ಹೆಮ್ಮೆ ತರುವಂಥ ವಿಷಯ. ಮೊದಲ ಫಸ್ಟ್ ಲುಕ್ ನ ಅನುಸಾರ 2025ರ ಏಪ್ರಿಲ್ ತಿಂಗಳಿನಲ್ಲಿ ಟಾಕ್ಸಿಕ್ ಸಿನಿಮಾ ತೆರೆಕಾಣಬೇಕಿತ್ತು. ಆದರೆ ಸಿನಿಮಾ ಕೆಲಸಗಳು ಇನ್ನು ಮುಗಿಯದ ಕಾರಣ, ಮುಂದಕ್ಕೆ ಹೋಗಿದೆ. ಇಂದು ಟಾಕ್ಸಿಕ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಹೊಸ ಅಪ್ಡೇಟ್ ನ ಅನುಸಾರ, ಯಶ್ ಅವರ ಟಾಕ್ಸಿಕ್ ಸಿನಿಮಾ ಮುಂದಿನ ವರ್ಷ, 2026ರ ಮಾರ್ಚ್ 19ರಂದು ತೆರೆಕಾಣಲಿದೆ. ಯಶ್ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಇನ್ನು ಒಂದು ವರ್ಷ ಕಾಯಬೇಕು ಎನ್ನುವ ಬೇಸರ ಒಂದು ಕಡೆ ಇದೆ. ಆದರೆ ಟಾಕ್ಸಿಕ್ ಸಿನಿಮಾ ಕೊನೆಗೂ ಬಿಡುಗಡೆ ದಿನಾಂಕ ಅನೌನ್ಸ್ ಮಾಡಿದೆ ಎನ್ನುವುದು ಯಶ್ ಅವರ ಅಭಿಮಾನಿಗಳಿಗೆ ಬಹಳ ಸಂತೋಷ ಕೊಟ್ಟಿರುವ ವಿಷಯ ಆಗಿದೆ. ಈ ಸಿನಿಮಾ ತೆರೆಮೇಲೆ ಎಷ್ಟು ಅದ್ಭುತವಾಗಿ ಮೂಡಿ ಬರುತ್ತದೆ ಎಂದು ಕಾದು ನೋಡಬೇಕಿದೆ..
ಯಶ್ ಅವರು ಇಂದು ಈ ಮಟ್ಟಕ್ಕೆ ಬೆಳೆದು ನಿಂತಿರುವುದನ್ನು ನೋಡಿದರೆ ಬಹಳ ಸಂತೋಷ ಆಗುತ್ತದೆ. ಗಾಂಧಿನಗರಕ್ಕೆ ಬಂದು, ಇಲ್ಲಿ ಹೀರೋ ಆಗಿ ಸಾಧನೆ ಮಾಡುತ್ತೀನಿ ಎಂದು ಛಲ ತೊಟ್ಟಿದ್ದ ಯಶ್ ಅವರು ಇಂದು, ಎತ್ತರಕ್ಕೆ ಬೆಳೆದಿದ್ದಾರೆ. ಕರ್ನಾಟಕ ಹಾಗೂ ಕನ್ನಡ ಚಿತ್ರರಂಗ ಮಾತ್ರವಲ್ಲ ಭಾರತ ಚಿತ್ರರಂಗ ಅವರತ್ತ ತಿರುಗಿ ನೋಡುತ್ತಿದೆ. ಕೆಜಿಎಫ್ ಚಾಪ್ಟರ್ 1 ಹಾಗೂ ಚಾಪ್ಟರ್ 2 ಸಿನಿಮಾಗಳು ಯಶ್ ಅವರಿಗೆ ಅಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ತಂದುಕೊಟ್ಟಿದೆ. ಟಾಕ್ಸಿಕ್ ಸಿನಿಮಾದಲ್ಲಿ ಬಾಲಿವುಡ್ ನಟಿ, ದಕ್ಷಿಣ ಭಾರತದ ಖ್ಯಾತ ನಟಿಯರು, ಹಾಲಿವುಡ್ ತಂತ್ರಜ್ಞರು ಎಲ್ಲರೂ ಸಹ ಈ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದು ಟಾಕ್ಸಿಕ್ ದೊಡ್ಡ ಮಟ್ಟದಲ್ಲಿ ಹೆಸರು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈಗ ಟಾಕ್ಸಿಕ್ ಅಪ್ಡೇಟ್ ಏನೋ ಸಿಕ್ಕಿದೆ..

ಇದರ ಜೊತೆಗೆ ರಾಮಾಯಣ ಅಪ್ಡೇಟ್ ಗಾಗಿ ಸಹ ಫ್ಯಾನ್ಸ್ ಕಾಯುತ್ತಿದ್ದಾರೆ. ರಾಮಾಯಣ ಸಿನಿಮಾದಲ್ಲಿ ಯಶ್ ಅವರು ರಾವಣನ ಪಾತ್ರದಲ್ಲಿ ನಟಿಸುತ್ತಾರೆ ಎಂದು ನಮಗೆಲ್ಲಾ ಗೊತ್ತೇ ಇದೆ. ಈ ಸಿನಿಮಾದಲ್ಲಿ ಯಶ್ ಅವರು ನಟನೆ ಮಾತ್ರ ಮಾಡುತ್ತಿಲ್ಲ, ನಿರ್ಮಾಣದ ಜವಾಬ್ದಾರಿ ಸಹ ಹೊತ್ತಿದ್ದಾರೆ. ರಾಮಾಯಣದಲ್ಲಿ ರಾವಣನ ಪಾತ್ರ ತುಂಬಾ ಇಂಟರೆಸ್ಟಿಂಗ್ ಆಗಿರುವ ಪಾತ್ರ ಎಂದು ಯಶ್ ಅವರು ಈಗಾಗಲೇ ಒಂದು ಸಂದರ್ಶನದಲ್ಲಿ ಹೇಳಿದ್ದು, ಮುಂದಿನ ವರ್ಷ ಈ ಸಿನಿಮಾ ತೆರೆಕಾಣುವ ಸಾಧ್ಯತೆ ಇದೆ. ಇನ್ನು ಕೆಜಿಎಫ್3 ಸಿನಿಮಾ ಕೂಡ ಮೂಡಿಬರಲಿದೆ, ಆದರೆ ಅದಕ್ಕಾಗಿ ಎಷ್ಟು ವರ್ಷಗಳು ಕಾಯಬೇಕು ಎಂದು ಗೊತ್ತಿಲ್ಲ. ಪ್ರಶಾಂತ್ ನೀಲ್ ಅವರು ಬ್ಯುಸಿ ಇದ್ದಾರೆ, ಯಶ್ ಅವರು ಬ್ಯುಸಿ ಇದ್ದಾರೆ. ಇವರಿಬ್ಬರು ಬೇರೆ ಸಿನಿಮಾಗಳನ್ನು ಮುಗಿಸಿ ಕೆಜಿಎಫ್3 ಶುರು ಮಾಡಬೇಕಿದೆ.