ಕಳೆದ ವರ್ಷ ಬಾಕ್ಸ್ ಆಫೀಸಿನಲ್ಲಿ ಧೂಳೆಬ್ಬಿಸಿದ ಕೆಜಿಎಫ್ 2 ಸಿನಿಮಾ ಬಳಿಕ ನಟ ಯಶ್ ಅವರು ಯಾವುದೇ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ. ಈ ಹಿಂದೆ ತಮಿಳು ಸಿನಿಮಾ ವಿಮರ್ಶಕ ಮನೋಬಾಲಾ ಅವರು ಅಕ್ಟೋಬರ್ನಲ್ಲಿ ನಟ ಯಶ್ ಅವರು ತಮ್ಮ ಮುಂದಿನ ಸಿನಿಮಾ ಬಿಡುಗಡೆಯಾಗುವುದಾಗಿ ಹೇಳಿಕೊಂಡಿದ್ದರು. ಹೀಗೆ ಯಶ್ ಮುಂದಿನ ಸಿನಿಮಾದ ಬಗ್ಗೆ ಸಾವಿರಾರು ಅಂತೆ-ಕಂತೆಗಳು ಓಡಾಡುತ್ತಿದ್ದರೂ ಕೂಡ ಯಾವುದೂ ಕೂಡ ಪೈನಲ್ ಆಗಿಲ್ಲ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು ಯಶ್ ಅವರಿಗೆ ಪೋಲಿಯೊ ಅಟ್ಯಾಕ್ ಆಗಿದ್ಯಾ? ಎಂಬ ಶಂಕೆ ಹುಟ್ಟು ಹಾಕಿದೆ.
ವೈರಲ್ ವಿಡಿಯೋ ಕಂಡು ಯಶ್, ಹೊಸ ಸಿನಿಮಾ ಅನೌನ್ಸ್ ಮಾಡದಿರಲು ಕಾರಣ ಇದೇನಾ ಎಂಬ ಚರ್ಚೆ ಶುರುವಾಗಿದೆ. ಈ ವಿಡಿಯೋ ನೋಡಿದರೆ ಕೆಲವರು ಇದು ನಿಜ ಇರಬಹುದು ಎನ್ನುತ್ತಿದ್ದಾರೆ. ಇನ್ನೂ ಕೆಲವರು ಇದು ಫೇಕ್ ವಿಡಿಯೋ, ಯಾರದ್ದೋ ದೇಹಕ್ಕೆ ಬೇರೆ ಯಾರದ್ದೋ ಕಾಲುಗಳನ್ನು ಎಡಿಟ್ ಮಾಡಿ ಈ ರೀತಿ ಬೇಕಂತಲೇ ಹರಿಯಬಿಡಲಾಗಿದೆ ಎನ್ನುತ್ತಿದ್ದಾರೆ. Box Office-South India ಎಂಬ ಎಕ್ಸ್ ಪೇಜ್ ಯಶ್ ವರ್ಕೌಟ್ ಮಾಡುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿದೆ.
ವಿಡಿಯೋದೊಂದಿಗೆ ಯಶ್ ಕಾಲಿಗೆ ಪೋಲಿಯೋ ಅಟ್ಯಾಕ್ ಆಗಿದೆ, ಇದರಿಂದ ಯಶ್ ಗುಣಮುಖರಾಗುತ್ತಿದ್ದಾರೆ. ಸಂಪೂರ್ಣ ಆರೋಗ್ಯ ಸಮಸ್ಯೆಯಿಂದ ಹೊರಬಂದ ನಂತರ ಯಶ್, ಹೊಸ ಸಿನಿಮಾ ಅನೌನ್ಸ್ ಮಾಡುತ್ತಾರೆ ಎಂದು ಬರೆಯಲಾಗಿದೆ. ವಿಡಿಯೋ ನೋಡಿದರೆ ಕಾಲು ಹಾಗೂ ಮೇಲಿನ ಭಾಗಕ್ಕೂ ಹೊಂದಾಣಿಕೆ ಇಲ್ಲದಂತೆ ಕಾಣುತ್ತಿದೆ. ವಿಡಿಯೋ ನೋಡಿ ಯಶ್ ಅಭಿಮಾನಿಗಳು ಕಂಗಾಲಾಗಿದ್ದಾರೆ.