ನಟಿ ರಶ್ಮಿಕಾ ಮಂದಣ್ಣ ಇಂದು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಹೆಸರು ಮಾಡಿರಬಹುದು. ಆದರೆ ರಶ್ಮಿಕಾ ಅವರು ಈ ಸ್ಥಾನಕ್ಕೆ ಬರುವುದಕ್ಕೆ ಮೊದಲು ಅವಕಾಶ ಸಿಕ್ಕಿದ್ದು, ರಿಷಬ್ ಶೆಟ್ಟಿ ಅವರು ನಿರ್ದೇಶನ ಮಾಡಿ, ರಕ್ಷಿತ್ ಶೆಟ್ಟಿ ಅವರು ನಾಯಕನಾಗಿ ನಟಿಸಿದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ. ಇದು ರಶ್ಮಿಕಾ ಅಭಿನಯದ ಮೊದಲ ಸಿನಿಮಾ. ಈ ಚಿತ್ರದ ಸಾನ್ವಿ ಪಾತ್ರದ ಮೂಲಕ ರಶ್ಮಿಕಾ ಕರ್ನಾಟಕ ಕ್ರಶ್ ಎಂದು ಫೇಮಸ್ ಆದರು. ತೆಲುಗು ಅವಕಾಶ ಸಿಕ್ಕಿದ್ದು, ಕಿರಿಕ್ ಪಾರ್ಟಿ ಯಶಸ್ಸಿನ ನಂತರವೇ. ಈ ಸಿನಿಮಾ ಬಿಡುಗಡೆಯಾಗಿ 8 ವರ್ಷ ಕಳೆದಿದೆ. ರಶ್ಮಿಕಾ ಹೀರೋಯಿನ್ ಆಗಿಯೂ 8 ವರ್ಷ ತುಂಬಿದೆ.
ಕಿರಿಕ್ ಪಾರ್ಟಿ ಸಿನಿಮಾವನ್ನ ರಿಷಬ್ ಶೆಟ್ಟಿ ನಿರ್ದೇಶನ ಮಾಡಿದರು, ಇದು ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಸಂಯುಕ್ತ ಹೆಗ್ಡೆ ಇವರೆಲ್ಲರಿಗೂ ದೊಡ್ಡ ಹೆಸರು ತಂದುಕೊಟ್ಟ ಸಿನಿಮಾ. ಹಾಗಾಗಿ ಎಲ್ಲರೂ ಸಹ ಕಿರಿಕ್ ಪಾರ್ಟಿ ಸಿನಿಮಾ 8 ವರ್ಷ ಪೂರೈಸಿದ್ದನ್ನು ಸಂಭ್ರಮಿಸಿದ್ದಾರೆ. ಈ ಸಂತೋಷದ ಭಾಗವಾಗಿ ರಿಷಬ್ ಶೆಟ್ಟಿ ಅವರು ಎಕ್ಸ್ ನಲ್ಲಿ ಒಂದು ಟ್ವೀಟ್ ಮಾಡಿದ್ದು, ಈ ಟ್ವೀಟ್ ಬಹಳಷ್ಟು ಜನಕ್ಕೆ ಇಷ್ಟ ಆಗಿದ್ದರು ಸಹ, ರಶ್ಮಿಕಾ ಫ್ಯಾನ್ಸ್ ಗೆ ಮಾತ್ರ ಕೋಪ ತರಿಸಿದೆ. ಅಷ್ಟಕ್ಕೂ ರಿಷಬ್ ಶೆಟ್ಟಿ ಅವರ ವಿರುದ್ಧ ರಶ್ಮಿಕಾ ಫ್ಯಾನ್ಸ್ ತಿರುಗಿ ಬಿದ್ದಿರುವುದು ಯಾಕೆ ಎಂದು ನೋಡುವುದಾದರೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ರಿಷಬ್ ಶೆಟ್ಟಿ ಅವರು ಕಿರಿಕ್ ಪಾರ್ಟಿ ಸಿನಿಮಾದ ಪೋಸ್ಟರ್ ಒಂದನ್ನು ಶೇರ್ ಮಾಡಿ, “ಕಿರಿಕ್ ಪಾರ್ಟಿ ನಮ್ಮ ಜೀವನದ ಭಾಗವಾಗಿ 8 ವರ್ಷಗಳು ಕಳೆದಿವೆ.. ಅನೇಕ ಸುಂದರ ನೆನಪುಗಳು ಮತ್ತು ನಿಮ್ಮ ಪ್ರೀತಿ, ಈ ಪಯಣವನ್ನು ಅರ್ಥಪೂರ್ಣವನ್ನಾಗಿಸಿವೆ. ನಿಮ್ಮ ಬೆಂಬಲಕ್ಕೆ ಹೃತ್ಪೂರ್ವಕ ಧನ್ಯವಾದಗಳು..” ಎಂದು ಬರೆದಿದ್ದಾರೆ ರಿಷಬ್. ಆದರೆ ಈ ಪೋಸ್ಟ್ ಗೆ ಶೇರ್ ಮಾಡಿರುವ ಪೋಸ್ಟರ್ ನಲ್ಲಿ ರಶ್ಮಿಕಾ ಒಬ್ಬರನ್ನ ಬಿಟ್ಟು ಬೇರೆ ಎಲ್ಲಾ ಕಲಾವಿದರು ಇದ್ದಾರೆ. ಜೊತೆಗೆ ಟ್ವೀಟ್ ನಲ್ಲಿ ಉಲ್ಲೇಖಿಸಿರುವ ಹೆಸರುಗಳಲ್ಲಿ ರಕ್ಷಿತ್ ಶೆಟ್ಟಿ ಅವರ ಹೆಸರಿದೆ ಆದರೆ ರಶ್ಮಿಕಾ ಮಂದಣ್ಣ ಅವರ ಹೆಸರು ಇಲ್ಲ.
ಕಿರಿಕ್ ಪಾರ್ಟಿ ನಮ್ಮ ಜೀವನದ ಭಾಗವಾಗಿ 8 ವರ್ಷಗಳು ಕಳೆದಿವೆ,
ಅನೇಕ ಸುಂದರ ನೆನಪುಗಳು ಮತ್ತು ನಿಮ್ಮ ಪ್ರೀತಿ ಈ ಪಯಣವನ್ನು ಅರ್ಥಪೂರ್ಣವನ್ನಾಗಿಸಿವೆ.
ನಿಮ್ಮ ಬೆಂಬಲಕ್ಕೆ ಹೃತ್ಪೂರ್ವಕ ಧನ್ಯವಾದಗಳು.
8 years ago, a journey began that touched hearts and created countless memories.
Here’s to your love and support… pic.twitter.com/67ehO9dnOz
— Rishab Shetty (@shetty_rishab) December 30, 2024
ಇದರಿಂದಾಗಿ ರಶ್ಮಿಕಾ ಮಂದಣ್ಣ ಫ್ಯಾನ್ಸ್ ಕೋಪಗೊಂಡಿದ್ದಾರೆ. ರಶ್ಮಿಕಾ ಅವರು ಇರುವ ಪೋಸ್ಟರ್ ಅನ್ನು ಶೇರ್ ಮಾಡಬೇಕಿತ್ತು, ಬೇಕೆಂದೇ ಈ ರೀತಿ ಮಾಡಿದ್ದಾರೆ. ಉದ್ದೇಶಪೂರ್ವಕವಾಗಿಯೇ ರಶ್ಮಿಕಾ ಅವರ ಹೆಸರನ್ನು ತೆಗೆದುಕೊಂಡಿಲ್ಲ. ರಶ್ಮಿಕಾ ಇಲ್ಲದೇ ಹೋಗಿದ್ದರೆ, ಇದೊಂದು ಕೆಟ್ಟ ಸಿನಿಮಾ ಆಗಿರುತ್ತಿತ್ತು. ರಶ್ಮಿಕಾ ಅವರ ಪಾತ್ರವೇ ಈ ಸಿನಿಮಾದ ಹೈಲೈಟ್ ಎಂದು ರಶ್ಮಿಕಾ ಫ್ಯಾನ್ಸ್ ರಿಷಬ್ ಶೆಟ್ಟಿ ಟ್ವೀಟ್ ಗೆ ನೆಗಟಿವ್ ಆಗಿ ಕಾಮೆಂಟ್ಸ್ ಬರೆಯುತ್ತಿದ್ದಾರೆ. ಆದರೆ ರಿಷಬ್ ಶೆಟ್ಟಿ ಅವರಾಗಲಿ ಅವರ ತಂಡವಾಗಲಿ ಈ ಯಾವುದೇ ಪ್ರಶ್ನೆಗಳಿಗೆ ಏನು ಉತ್ತರ ಕೊಟ್ಟಿಲ್ಲ. ತಲೆ ಕೆಡಿಸಿಕೊಳ್ಳುವುದಕ್ಕೆ ಸಹ ಹೋಗಿಲ್ಲ. ಆದರೆ ಈ ಕೋಲ್ಡ್ ವಾರ್ ಮಾತ್ರ ಇದ್ದೇ ಇದೆ.
ಇತ್ತ ರಕ್ಷಿತ್ ಅವರು ತಮ್ಮ ಸಿನಿಮಾ ಕೆಲಸಗಳಲ್ಲಿ ಬಿಡುವಿಲ್ಲದೇ ಬ್ಯುಸಿ ಆಗಿದ್ದಾರೆ. ರಿಷಬ್ ಶೆಟ್ಟಿ ಅವರು ಸಹ, ಕಾಂತಾರ ಪ್ರೀಕ್ವೆಲ್ ನಲ್ಲಿ ಬಿಡುವಿಲ್ಲದೇ ಬ್ಯುಸಿ ಆಗಿದ್ದಾರೆ. 2022ರಲ್ಲಿ ಕಾಂತಾರ ಸಿನಿಮಾ ತೆರೆಕಂಡು ಯಶಸ್ವಿಯಾಯಿತು, ಪ್ಯಾನ್ ಇಂಡಿಯಾ ರೀಚ್ ಪಡೆದುಕೊಂಡಿತು. ಇದೀಗ ಕಾಂತಾರ ಪ್ರೀಕ್ವೆಲ್ ಸಿದ್ಧವಾಗುತ್ತಿತ್ತು, ಈ ಸಿನಿಮಾ 7 ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಆದಷ್ಟು ಬೇಗ ಸಿನಿಮಾವನ್ನು ತೆರೆಮೇಲೆ ತರುವುದಕ್ಕೆ ಚಿತ್ರತಂಡ ಕೆಲಸ ಮಾಡುತ್ತಿದೆ. ಇದಲ್ಲದೇ ರಿಷಬ್ ಶೆಟ್ಟಿ ಅವರು ಛತ್ರಪತಿ ಶಿವಾಜಿ ಮಹಾರಾಜ್ ಅವರ ಪಾತ್ರದಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ..