ಕಾಂತಾರಾ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ಡಿವೈನ್ ಸ್ಟಾರ್ ರಿಶಬ್ ಶೆಟ್ಟಿ ಇದೀಗ ‘ಕಾಂತಾರ2’ ಸಿದ್ಧತೆಯಲ್ಲಿದ್ದಾರೆ. ಈ ನಡುವೆ ರಿಶಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಶೆಟ್ಟಿ ಫೋಟೋಶೂಟ್ ನಡೆಸಿದ್ದು, ಗೋಲ್ಡ್&ಬ್ಲಾಕ್ ಡ್ರೆಸ್ ನಲ್ಲಿ ಶೆಟ್ಟಿ ದಂಪತಿ ಮಿಂಚಿದ್ದಾರೆ. ಈ ಕ್ಯೂಟ್ ಫೋಟೋಗಳನ್ನು ಪ್ರಗತಿ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಫೋಟೋಗಳು ವೈರಲ್ ಆಗುತ್ತಿವೆ.


ಕಾಂತಾರ ಸಿನಿಮಾದಲ್ಲಿ ಪ್ರಗತಿ ಶೆಟ್ಟಿ ರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ಸಿನಿಮಾ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಗತಿ ಕೂಡ ರಿಷಬ್ ಶೆಟ್ಟಿಯ ಅನೇಕ ಸಿನಿಮಾಗಳಿಗೂ ಅವರೆ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ. ಇದೀಗ ಪ್ರಗತಿ ಶೆಟ್ಟಿ, ರಿಷಬ್ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬ್ಲ್ಯಾಕ್ ಅಂಡ್ ಗೋಲ್ಡ್ ಡ್ರೆಸ್ನಲ್ಲಿ ದಂಪತಿಗಳು ಸಖತ್ತಾಗಿ ಮಿಂಚಿದ್ದಾರೆ.
ರಿಶಬ್ ನಿರ್ದೇಶನದ ಕಾಂತಾರ ಚಿತ್ರ ದೇಶದಾದ್ಯಂತ ಮ್ಯಾಜಿಕ್ ಮಾಡಿತ್ತು. ಬಾಲಿವುಡ್ ಅಂಗಳದಲ್ಲೂ ಭರ್ಜರಿ ಪ್ರದರ್ಶನ ಕಂಡು ದಾಖಲೆ ಬರೆಯಿತು. ಇತ್ತೀಚೆಗಷ್ಟೇ ಸೈಮಾ ಅವಾರ್ಡ್ಸ್ 2023ರಲ್ಲಿ ಕನ್ನಡದ ಹೆಮ್ಮೆಯ ಸಿನಿಮಾ ಕಾಂತಾರ 10 ಪ್ರಶಸ್ತಿ ಗೆದ್ದುಕೊಂಡಿತ್ತು. ಸಿನಿಮಾ ರಿಷಬ್ ಲಕ್ ಅನ್ನೇ ಬದಲಿಸಿದೆ. ಕಾಂತಾರ ಸಿನಿಮಾ ಮೂಲಕ ನಟ, ನಿರ್ದೇಶಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗಮನ ಸೆಳೆಯುತ್ತಿದ್ದಾರೆ.