ಬ್ಲಾಕ್ಬಸ್ಟರ್ ‘ಕಾಂತಾರ’ ಸಿನಿಮಾದ ಶ್ರೀಕ್ವೆಲ್ ತಯಾರಿ ಜೋರಾಗಿ ನಡೆಯುತ್ತಿದೆ. ಈ ಬಾರಿ ಅದ್ಧೂರಿಯಾಗಿ ನಿರ್ಮಾಣವಾಗಲಿರುವ ಈ ಸಿನಿಮಾಗೆ ಅಂದಾಜು 150 ಕೋಟಿ ರೂ ಬಜೆಟ್ ಈ ಮೀಸಲಿಡಲಾಗಿದೆಯಂತೆ. ಇದರ ಮೊದಲ ಭಾಗವನ್ನು ಸುಮಾರು 15 ಕೋಟಿ ರೂ.ನಲ್ಲಿ, ನಿರ್ಮಾಣ ಮಾಡಲಾಗಿತ್ತು. ಈ ಸಿನಿಮಾ 600 ಕೋಟಿ ರೂ.ಗಿಂತಲೂ ಹೆಚ್ಚು ಲಾಭ ಮಾಡಿತು.

ಕನ್ನಡ ಮಾತ್ರವಲ್ಲದೇ, ತಮಿಳು, ಮಲೆಯಾಳಂ, ಹಿಂದಿ ಸೇರಿದಂತೆ ಪರಭಾಷೆಗಳಿಗೆ ಡಬ್ ಆಗಿ, ಅಲ್ಲಿಯೂ ದೊಡ್ಡದಾಖಲೆ ಸೃಷ್ಟಿಸಿತ್ತು. ದೇಶದಾದ್ಯಂತ ‘ಕಾಂತಾರ’ ಸಿನಿಮಾ ಕತೆ, ನಿರ್ದೇಶನ ಹಾಗೂ ರಿಶಬ್ ಶೆಟ್ಟಿ ಅವರ ನಟನೆಯನ್ನು ಮೆಚ್ಚಿಕೊಂಡಿದ್ದರು ಆ ಕಾರಣ ಈಗ ‘ಕಾಂತಾರ ‘ ಸಿನಿಮಾದ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ.
ನಟ ರಿಷಬ್ ಶೆಟ್ಟಿ ಈ ಚಿತ್ರಕ್ಕಾಗಿ ಭಾರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಅವರು ಈ ಸಿನಿಮಾಗಾಗಿ 11 ಕೆ.ಜಿ ದೇಹ ತೂಕ ಕಡಿಮೆ ಮಾಡಿಕೊಳ್ಳಲಿದ್ದಾರೆ. ಈ ಸಿನಿಮಾದ ಕಥೆ, ಚಿತ್ರಕಥೆ ಬರೆಯಲು ರಿಷಬ್ ಶೆಟ್ಟಿ ಮತ್ತು ಈ ಚಿತ್ರದ ಬರಹಗಾರರಾದ ಅನಿರುದ್ಧ ಮಹೇಶ್, ಶನೀಲ್, ಗುರು ಮಂಗಳೂರು ಸುತ್ತಮುತ್ತ ಬಿಡುಬಿಟ್ಟಿದ್ದಾರೆ ಎನ್ನಲಾಗಿದೆ.