ಇದು ಸೋಷಿಯಲ್ ಮೀಡಿಯಾ ಯುಗ ಇಲ್ಲಿ ಯಾರು ಯಾವಾಗ ಬೇಕಾದರೂ ವೈರಲ್ ಆಗಬಹುದು. ಒಂದು ರೀಲ್ಸ್, ಒಂದು ವಿಡಿಯೋ ಫೋಟೋ ಇಷ್ಟು ಸಾಕು ವೈರಲ್ ಆಗೋಕೆ. ಇಂಥ ನೂರಾರು ಜನರು ಹೀಗೆ ಟ್ರೋಲ್ ಆಗುತ್ತಾರೆ, ವೈರಲ್ ಆಗುತ್ತಾರೆ. ಮೀಮ್ ಪೇಜ್ ಗಳಲ್ಲಿ, ಟ್ರೋಲ್ ಪೇಜ್ ಗಳಲ್ಲಿ ಇವರದ್ದೇ ರಾಜ್ಯ ಭಾರ ಆಗುತ್ತದೆ, ಒಂದು ಅರ್ಥದಲ್ಲಿ ಇವರು ಫೇಮಸ್ ಆಗೋಕೆ ಇದೇ ಕಾರಣ ಎಂದು ಹೇಳಿದರೆ ಸಹ ತಪ್ಪಲ್ಲ. ಕಿಪಿ ಕೀರ್ತಿ, ಮಂಜಣ್ಣ ಹೀಗೆ ಹಲವು ಜನರು ಇನ್ಸ್ಟಾಗ್ರಾಮ್ ಇಂದ ವೈರಲ್ ಆಗಿದ್ದಾರೆ. ಹೀಗೆ ವೈರಲ್ ಆಗಿರುವವರಲ್ಲಿ ರೀಲ್ಸ್ ರೇಶ್ಮಾ ಸಹ ಒಬ್ಬರು. ಇವರನ್ನ ಎಲ್ಲರೂ ಸಹ ರೀಲ್ಸ್ ರೇಶ್ಮಾ ಆಂಟಿ ಎಂದೇ ಎಲ್ಲರೂ ಕರೆಯುತ್ತಾರೆ. ಈ ಹೆಸರಲ್ಲೇ ಫೇಮಸ್ ಆಗಿದ್ದಾರೆ ರೇಶ್ಮಾ ಆಂಟಿ. ಇತ್ತೀಚೆಗೆ ಇವರ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ರೀಲ್ಸ್ ರೇಶ್ಮಾ ಅವರು ಈಗ ಇನ್ಸ್ಟಾಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುವ ವ್ಯಕ್ತಿ. ಶುರುವಿನಲ್ಲಿ ಇವರು ಹಾಕೋ ರೀಲ್ಸ್ ಗೆ ಟ್ರೋಲ್ ಗಳೇ ಹೆಚ್ಚಾಗಿ ಬರುತ್ತಿತ್ತು, ಈಗ ಟ್ರೋಲ್ ಆಗುವುದು ಕಡಿಮೆ ಅಂತೂ ಆಗಿಲ್ಲ. ಹಾಯ್ ಫ್ರೆಂಡ್ಸ್ ಏನಾಯ್ತು ಗೊತ್ತಾ ಎಂದುಕೊಂಡೆ ರೀಲ್ಸ್ ವಿಡಿಯೋ ಶುರು ಮಾಡುತ್ತಿದ್ದರು ರೇಶ್ಮಾ. ತಮ್ಮ ಮನೆಯಲ್ಲಿ ನಡೆಯೋ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಅಡುಗೆ ಮಾಡೋದು, ಹೊರಗಡೆ ಓಡಾಡೋದು, ಗಂಡ ಬಯ್ಯೊದು, ಗಂಡನ ಜೊತೆಗೆ ಜಗಳ ಆಡೋದು ಇದೆಲ್ಲವನ್ನು ರೀಲ್ಸ್ ಮೂಲಕ ಹಂಚಿಕೊಳ್ಳುತ್ತಿದ್ದರು. ಇವರ ಗಂಡ ಹೊಡೆದಾಗ, ತಂದೆಗೆ ಅವಮಾನ ಮಾಡಿದಾಗ ಇದೆಲ್ಲವನ್ನು ಸಹ ಹಂಚಿಕೊಂಡಿದ್ದ ರೇಶ್ಮಾ ಅವರಿಗೆ ನಗಟಿವ್ ಕಾಮೆಂಟ್ಸ್ ಗಳು ಬಂದಿದ್ದೇ ಹೆಚ್ಚು. ನಿಮ್ಮ ಲೈಫ್ ಅಲ್ಲಿ ಏನಾಗ್ತಿದೆ ಅನ್ನೋದನ್ನ ತಿಳ್ಕೊಂಡು ನಾನೇನ್ ಮಾಡ್ಲಿ ಅಂತ ಹೇಳಿದವರೇ ಹೆಚ್ಚು.

ರೇಶ್ಮಾ ಅವರ ಲೈಫ್ ವಿಡಿಯೋ ಗಳು ಎಷ್ಟು ವೈರಲ್ ಆದವೋ ಕೆಲ ದಿನಗಳ ಬಳಿಕ ಇವರ ಬಗ್ಗೆ ಬರುತ್ತಿದ್ದ ಕಾಮೆಂಟ್ಸ್ ಗಳು ಸಹ ಬದಲಾಗುವುದಕ್ಕೆ ಶುರುವಾದವು. ಕೆಲವು ಸೆಲೆಬ್ರಿಟಿಗಳು ಸಹ ರೇಶ್ಮಾ ಅವರು ಯಾರು ಏನು ಹೇಳಿದರೂ ಸಹ ತಲೆಕೆಡಿಸಿಕೊಳ್ಳದೇ ನಾನು ಇರೋದೆ ಹೀಗೆ ಎಂದು ಇರುತ್ತಾರೆ. ಅವರ ಲೈಫ್ ಅನ್ನು ತೋರಿಸುತ್ತಾರೆ, ಆ ಧೈರ್ಯ ಎಲ್ಲರಿಗೂ ಬರೋದಿಲ್ಲ. ರೇಶ್ಮಾ ಅವರಲ್ಲಿ ಇರುವ ಮುಗ್ಧತೆ ಹಾಗೂ ಧೈರ್ಯವನ್ನು ಸಹ ಎಲ್ಲರೂ ಮೆಚ್ಚಬೇಕು ಎನ್ನುವುದಕ್ಕೆ ಶುರು ಮಾಡಿದರು. ಜನರು ಸಹ ರೇಶ್ಮಾ ಆಂಟಿ ತುಂಬಾ ಮುಗ್ಧರು ಎನ್ನುವುದಕ್ಕೆ ಶುರು ಮಾಡಿದರು. ಇದರಿಂದ ಒಂದೆರಡು ಇಂಟರ್ವ್ಯೂಗಳಲ್ಲಿ ಕಾಣಿಸಿಕೊಂಡ ರೇಶ್ಮಾ ಅವರಿಗೆ ನಂತರ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಸ್ಪರ್ಧಿಯಾಗಿ ಹೋಗುವ ಅವಕಾಶ ಪಡೆದಫು. ಗಿಚ್ಚಿ ಗಿಲಿ ಗಿಲಿ ಶೋ ಮೂಲಕ ಮನೆಮಾತಾದರು.
ಈ ಶೋನಲ್ಲೋ ಕಾಮಿಡಿ ಆಕ್ಟಿಂಗ್ ಮಾಡಬೇಕು. ಇದನ್ನು ರೇಶ್ಮಾ ಆಂಟಿ ಚೆನ್ನಾಗಿಯೇ ಮಾಡುವುದಕ್ಕೆ ಶುರು ಮಾಡಿದರು. ಎಪಿಸೋಡ್ ಇಂದ ಎಪಿಸೋಡ್ ಗೆ ರೇಶ್ಮಾ ಅವರ ಆಕ್ಟಿಂಗ್ ಸ್ಕಿಲ್ ಇಂಪ್ರೂವ್ ಆಗುತ್ತಾ ಹೋಯಿತು. ಇವರ ಆಕ್ಟಿಂಗ್ ನೋಡಿ ಜಡ್ಜ್ ಗಳಾದ ಶ್ರುತಿ ಅವರು ಸಹ ಬಹಳ ಸಂತೋಷ ಪಟ್ಟಿದ್ದರು. ರೇಶ್ಮಾ ಅವರಿಗೆ ಎಲ್ಕರ ಪ್ರೋತ್ಸಾಹ ಸಹ ಸಿಕ್ಕಿತ್ತು. ಗಿಚ್ಚಿ ಗಿಲಿ ಗಿಲಿ ಶೋ ಇಂದ ರೇಶ್ಮ ಅವರಿಗೆ ಇನ್ನಷ್ಟು ಜನಪ್ರಿಯತೆ ಮತ್ತು ಅವಕಾಶ ಎಲ್ಲವೂ ಸಿಗುವುದಕ್ಕೆ ಶುರುವಾಯಿತು. ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಬ್ರ್ಯಾಂಡ್ ಪ್ರೊಮೋಷನ್ ಸಹ ಮಾಡಿದ ರೇಶ್ಮಾ ಆಂಟಿ ಇದೀಗ ಹೊಸದೊಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದಾರೆ. ಅದು ಹೊಸ ರೀಲ್ಸ್ ಗಳ ಮೂಲಕ ಡಿಜೆ ನವೀನ್ ಕುಮಾರ್ ಅವರ ಜೊತೆಗೆ ರೀಲ್ಸ್ ಮಾಡುತ್ತಾ ಸುದ್ದಿಯಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ರೇಶ್ಮಾ ಹಾಗೂ ನವೀನ್ ಕುಮಾರ್ ಅವರ ರೀಲ್ಸ್ ಡ್ಯಾನ್ಸ್ ವಿಡಿಯೋಗಳು ವೈರಲ್ ಆಗುತ್ತಲೇ. ಇಬ್ಬರು ಒಂದಷ್ಟು ಕನ್ನಡ ಹಾಡುಗಳಿಗೆ ವಿಡಿಯೋ ಮಾಡುತ್ತಲೇ ಇದ್ದಾರೆ. ಇದರಿಂದಲು ಟ್ರೋಲ್ ಆಗಿದ್ದಾರೆ. ರೇಶ್ಮಾ ಆಂಟಿ ಅವರ ಗಂಡ ಯಾಸೀನ್ ಅವರು ಈ ವಿಡಿಯೋಗಳನ್ನ ನೋಡಿದರೆ ರೇಶ್ಮಾ ಆಂಟಿಗೆ ಮತ್ತೆ ಹೊಡೆದು ಕ್ಲಾಸ್ ತಗೋತಾರೆ, ಇದೆಲ್ಲಾ ಬೇಕಿತ್ತಾ ಇವರಿಬ್ಬರದ್ದು ಓವರ್ ಆಯ್ತು ಎಂದು ನೂರಾರು ಕಾಮೆಂಟ್ಸ್ ಗಳು ಬರುವುದಕ್ಕೆ ಶುರುವಾಯಿತು. ಆದರೆ ಸಂದರ್ಶನ ಒಂದರಲ್ಲಿ ಮಾತನಾಡಿದ ರೇಶ್ಮಾ ಆಂಟಿ ಹಾಗೂ ಡಿಜೆ ನವೀನ್ ಕುಮಾರ್ ಇಬ್ಬರು ಸಹ ರೇಶ್ಮಾ ಆಂಟಿ ಅವರ ಗಂಡ ಯಾಸೀನ್ ಅವರಿಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ, ಅವರಿಗೆ ಎಲ್ಲವೂ ಗೊತ್ತು ಅವರೇ ಸಪೋರ್ಟ್ ಮಾಡುತ್ತಾರೆ ಎಂದು ಹೇಳಿದರು. ಆದರೂ ಜನ ಟ್ರೋಲ್ ಮಾಡುವುದಂತೂ ಕಡಿಮೆ ಆಗಿಲ್ಲ.
ಇತ್ತೀಚೆಗೆ ಇವರು ಶೇರ್ ಮಾಡಿದ ರೀಲ್ಸ್ ಈಗ ಮೊದಲಿಗಿಂತ ಹೆಚ್ಚು ವೈರಲ್ ಆಗಿ, ಟ್ರೋಲ್ ಸಹ ಆಗಿದೆ. ಈ ಬಾರಿ ಇವರು ರೀಲ್ಸ್ ಮಾಡಿರುವುದು ತೆಲುಗಿನ ಸ್ಟಾರ್ ಹೀರೋ ಬಾಲಯ್ಯ ಅವರ ಹೊಸ ಸಿನಿಮಾ ಡಾಕು ಮಹಾರಾಜ್ ಸಿನಿಮಾದ ದಬಿಡಿ ದಿಬಿಡಿ ಹಾಡಿಗೆ. ಈ ಹಾಡಿಗೆ ರೇಶ್ಮಾ ಆಂಟಿ ಹಾಗೂ ಡಿಜೆ ನವೀನ್ ಕುಮಾರ್ ಇಬ್ಬರೂ ಸಖತ್ ಹಾಟ್ ಆಗಿ ಬೋಲ್ಡ್ ಆಗಿ ಸ್ಟೆಪ್ ಹಾಕಿದ್ದು, ಈಗಾಗಲೇ ಈ ವಿಡಿಯೋ ಗೆ 4 ಮಿಲಿಯನ್ ವೀಕ್ಷಣೆ ಬಂದಿದೆ. ಅಷ್ಟೇ ಅಲ್ಲದೇ, 3 ಸಾವಿರಕ್ಕಿಂತ ಹೆಚ್ಚು ಕಾಮೆಂಟ್ಸ್ ಗಳು ಬಂದಿವೆ. ಜನರೆಲ್ಲರೂ ಇವರಿಬ್ಬರ ಬಗ್ಗೆ ನೆಗಟಿವ್ ಆಗಿ ಮಾತನಾಡುತ್ತ, ನೆಗಟಿವ್ ಆಗಿ ಕಾಮೆಂಟ್ಸ್ ಹಾಕುತ್ತಿದ್ದಾರೆ. ನೆಗಟಿವ್ ಆಗಿ ಟ್ರೋಲ್ ಆಗುತ್ತಿದ್ದರು ಸಹ ಇವರಿಗೆ ಸಿಗುತ್ತಿರುವ ಪ್ರಚಾರ ಮಾತ್ರ ಕಡಿಮೆ ಆಗುತ್ತಿಲ್ಲ, ಯಾವುದೋ ಒಂದು ರೀತಿಯಲ್ಲಿ ರೇಶ್ಮಾ ಆಂಟಿ ಸುದ್ದಿಯಲ್ಲೇ ಇದ್ದಾರೆ.

ಕೆಲವೊಮ್ಮೆ ಇದೆಲ್ಲ ಬೇಕಾ ಎಂದು ಅನ್ನಿಸಿದರೂ ಸಹ, ಸೋಷಿಯಲ್ ಮೀಡಿಯಾದಲ್ಲಿ ಈಗ ಇದೆಲ್ಲವೂ ಬಹಳ ಕಾಮನ್ ಎನ್ನುವ ಹಾಗೆ ಆಗಿದೆ. ಎಲ್ಲರೂ ಇದೇ ರೀತಿ ವೈರಲ್ ಆಗುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರನ್ನು ಬಯ್ಯುತ್ತಿರುವ ಜನರೇ ಇವರು ಫೇಮಸ್ ಆಗುವ ಹಾಗೆ ಮಾಡುತ್ತಿದ್ದಾರೆ ಎಂದು ಹೇಳಿದರು ತಪ್ಪಲ್ಲ. ಮುಂದೊಂದು ದಿನ ಈ ಸೋಶಿಯಲ್ ಮೀಡಿಯಾ ಇಂದಲೇ ಕನ್ನಸ್ಜರು5 ವೈರಲ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ರೇಶ್ಮಾ ಆಂಟಿ, ಕಿಪಿ ಕೀರ್ತಿ, ಮಂಜಣ್ಣ ಇವರೆಲ್ಲರೂ ಮುಂದೆ ಇನ್ನಷ್ಟು ರೀಲ್ಸ್ ಗಳ ಮೂಲಕ ವೈರಲ್ ಆಗುವುದಂತೂ ಗ್ಯಾರೆಂಟಿ.