ಸ್ಪಂದನಾ ಅವರ ದಿಢೀರ್ ಸಾವು ಎಲ್ಲರನ್ನೂ ಭಾವುಕಗೊಳಿಸಿದೆ. ಚಿತ್ರರಂಗ, ಆಪ್ತಲಯ ಅಕ್ಷರಶಃ ದುಃಖದ ಕಡಲಲ್ಲಿದೆ. ಈ ನಡುವೆ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಬಗ್ಗೆ ಕಿರುತೆರೆ ನಿರ್ದೇಶಕಿ ರೇಖಾರಾಣಿ ಸುಧೀರ್ಘ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಸ್ಪಂದನಾ ಅವರ ವ್ಯಕ್ತಿತ್ವ, ಬಾಲ್ಯ, ಲವ್ ಸ್ಟೋರಿಯ ಬಗ್ಗೆಯು ಕೆಲವು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ಹಂಚಿಕೊಂಡಿದ್ದು, ಈ ಭಾವನಾತ್ಮಕ ಪತ್ರ ಅದ್ಯ ವೈರಲ್ ಆಗುತ್ತಿದೆ.

ಭಾವನಾತ್ಮಕ ಪತ್ರದಲ್ಲಿ ಏನಿದೆ?
ನಿರ್ದೇಶಕಿ ರೇಖಾರಾಣಿ ತಮ್ಮ ಪತ್ರದಲ್ಲಿ, ‘ಸ್ಪಂದನಾ, ನನ್ನ ಅಚ್ಚು ಅವಳು ಹುಟ್ಟಿದಾಗಿನಿಂದ ನಾನವಳನ್ನ ಆ ಹೆಸರಿನಿಂದ ಕರೆದೇ ಇಲ್ಲ. ಕರೆದದ್ದೆಲ್ಲ ಅಚ್ಚು ಎಂದೆ. ಸೌಮ್ಯ ಮುಖದ ಸುಂದರ ಹಠಮಾರಿ. ಆಸೆ ಪಟ್ಟಿದ್ದನ್ನು ಈಡೇರಿಸಲು ಅಪ್ಪ, ಅಮ್ಮ, ಅಣ್ಣ ತುದಿಗಾಲಿನಲ್ಲಿ ನಿಂತಿರುತ್ತಿದ್ದರು. ನಂತರ ಗಂಡನಾಗಿ ಸಿಕ್ಕ ವಿಜಯ ರಾಘವೇಂದ್ರ ದೇವ. ಅಳತೆ ಮಾಡಿ ಸಿಕ್ಕಂತ ವಜ್ರ. ಆತನ ಪ್ರಪಂಚದಲ್ಲಿ ಮೊದಲು ಪತ್ನಿಗೆ ಸ್ಥಾನ ನಂತರ ಮಿಕ್ಕೆಲ್ಲ.

ಬಹಳಾ ಮುಗ್ದೆಯಾಗಿದ್ದ ನನ್ನ ಅಚ್ಚುವನ್ನ ಒಮ್ಮೆ ಸದಾಶಿವ ನಗರದ ಪಾರ್ಕಿನಲ್ಲಿ ಹುಡುಗನೊಬ್ಬನೊಂದಿಗೆ ಹರಟೆ ಹೊಡೆಯೋದನ್ನು ಕಂಡು ಜೀವ ಬಾಯಿಗೆ ಬಂದಂತಾಗಿತ್ತು. ಅವಳಪ್ಪ ಬಿ.ಕೆ. ಶಿವರಾಂ ಮೊದಲೇ ಹುಲಿ. ಇಂತಹ ಅಪ್ಪನ ಬಳಿ ಮಗಳ ಹಿತರಕ್ಷಣೆಗಾಗು ಚಾಡಿ ಹೇಳಲೋ?, ಬೇಡವೋ? ಎಂದು ಬಹಳಾ ದಿನ ಒದ್ದಾಡಿದ್ದೆ. ನಂತರ ಕರೆ ಮಾಡಿ ನಿನ್ನ ಜೊತೆ ಕಾರಿನಲ್ಲಿದ್ದ ಹುಡುಗನ ವಿವರ ಕೊಡು ಎಂದೆ. ‘ಆಂಟಿ ನಾನು ಮದುವೆಯಾದ್ರೆ ಅವರನ್ನೆ ಅಪ್ಪನನ್ನು ಒಪ್ಪಿಸಿ’ ಎಂದಳು.
ನಾನು ಎಷ್ಟು ಹಠ ಮಾಡಿದ್ರೂ ಹುಡುಗನ ಹೆಸರು ಹೇಳಿಲ್ಲ ಕೊನೆಗೆ ‘ಆಂಟಿ ಸಿನಿಮಾದವನು ಅಂದ್ರೆ ನೀವೆಲ್ಲ ಬೇಡಾ ಅಂತೀರ. ಹಾಗಾಗಿ ಹೇಳೊಲ್ಲಾ’ ಎಂದಳು. ಅಚ್ಚು ಮೇಲೆ ಕಣ್ಣಿಟ್ಟಿದ್ದರು ಆಕೆ ಕೈಗೆ ಸಿಗದಷ್ಟು ದೊಡ್ಡವಳಾಗಿ ಬಿಟ್ಟಿದ್ದಳು. ಬಹಳ ಗಲಾಟೆ ಮಾಡಿದ ನಂತರ ಹೇಳಿದ್ಲು ‘ಚಿನ್ನಾರಿ ಮುತ್ತ’. ಈ ವಿಚಾರವನ್ನು ಶಿವರಾಮ್ ಹೇಳಬೇಕು ಅಂತ ಇದ್ರೂ ಶೂಟಿಂಗ್ ನಲ್ಲಿ ಬ್ಯುಸಿ ಇದ್ದೆ. ಬೆಳಗ್ಗೆ ಶಿವರಾಮ್ ಕರೆ ಬಂತು ‘ನಿನ್ನ ಮಗಳು ಅಚ್ಚುಗೆ ಮದುವೆ ಮಾಡ್ತಾ ಇದ್ದೀವಿ ಅಂತ.
ಹುಡುಗ ಯಾರು ಎಂದು ನಡುಗುವ ದ್ವನಿಯಿಂದ ಕೇಳಿದೆ. ಅಚ್ಚು ಕನಸು ಛಿದ್ರವಾಗುವುದು ನನಗೆ ಇಷ್ಟವಿರಲಿಲ್ಲ. ಏಕೆಂದರೆ ಅವಳಿ ಸ್ವರ್ಗದಿಂದ ನೇರವಾಗು ನಮ್ಮ ಕೈಗೆ ಸಿಕ್ಕ ಹೂವು. ಶಿವರಾಮ್ ಹೇಳಿದ ‘ಅಚ್ಚುನೇ ಹುಡುಗ ಹುಡುಕಿದ್ದಾಳೆ. ವಿಜಯ ರಾಘವೇಂದ್ರ ಅಂತ. ಒಳ್ಳೆ ಆಯ್ಕೆ ಅಲ್ವಾ’ ಅಂತ. ಇದನ್ನು ಕೇಳಿ ನೂರಾರು ಬಂಡೆಗಳು ತಲೆಯಿಂದ ಉರುಳಿ ಸಮಾದಾನವಾದಂತಾಯಿತು. ಇಲ್ಲಿ ವಿಜಯ್ ಪುಣ್ಯ ಮಾಡಿದ್ದನೋ, ಅಚ್ಚು ಪುಣ್ಯ ಮಾಡಿದ್ದಳೋ ಗೊತ್ತಿಲ್ಲ. ಆದರೆ ಅವರ ದಾಂಪತ್ಯ ಸ್ವರ್ಗದ ಗೋಡೆಗಳಿಂದ ರಚನೆಯಾಗಿತ್ತು. ಪರಸ್ಪರ ತುಂಬಾ ಪ್ರೀತಿಸುತ್ತಿದ್ದರು.
ಅಚ್ಚು ಚಿಕ್ಕವಳಿದ್ದಾಗ ರಾತ್ರಿಯ ವರೆಗೂ ನನ್ನೊಂದಿಗೆ ಕುಳಿತು ಶೂಟಿಂಗ್ ನೋಡುತ್ತಿದ್ದಳು. ಮುಂದಿನ ಧಾರವಾಹಿಯ ಪಾತ್ರಗಳಿಗೆ ಅವಳದ್ದೇ ಹೆಸರಿಟ್ಟೆ. ಆದರೆ ಈಗ ನೀನು ನಿನ್ನದೇ ತವರಾದ ಸ್ವರ್ಗಕ್ಕೆ ಹೋಗಿಬಿಟ್ಟೆ. ಆದರೂ ಇಷ್ಟೊಂದು ಅವಸರ ಏನಿತ್ತು. ಮರಳಿ ಬಾರದ ಲೋಕಕ್ಕೆ ಹೋಗಿ ಬಿಟ್ಟಿದ್ದೀಯ. ಅಲ್ಲೂ ಸುಖವಾಗಿರು ಕಂದಾ…ಎಂದು ರೇಖಾರಾಣಿ ಭಾವನಾತ್ಮಕ ಪತ್ರ ಬರೆದಿದ್ದಾರೆ.