ಅಂಬರೀಷ್ ಪುತ್ರ ಅಭಿಷೇಕ್ ಮದುವೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಈಗಾಗಲೇ ಜೂನಿಯರ್ ಅಂಬರೀಶ್ ಮದುವೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಸಂಗೀತ ಕಾರ್ಯಕ್ರಮದ ಪೂರ್ವ ತಯಾರಿ ಕೂಡ ಅಂಬರೀಶ್ ಮನೆಯಲ್ಲಿ ನಡೆಯುತ್ತಿದೆ. ನಟ ಅಭಿಷೇಕ್ ಈಗಾಗಲೇ ಹಸೆಮಣೆಗೆ ಏರಲು ಸಿದ್ದರಾಗಿದ್ದು, ತನ್ನ ತಂದೆ ಅಂಬರೀಶ್ ಕನಸಿನಂತೆ ಈ ಮದುವೆ ನಡೆಯುತ್ತೆ ಎನ್ನಲಾಗಿದೆ. ಈಗಾಗಲೇ ವಿವಾಹ ಶಾಸ್ತ್ರಗಳು ಆರಂಭಗೊಂಡಿದ್ದು, ಇದರ ಜೊತೆ ಜೊತೆಗೆ ಸಂಗೀತ ಕಾರ್ಯಕ್ರಮ ಕೂಡ ನಡೆಯಲಿದೆ ಎನ್ನಲಾಗಿದೆ. ಖಾಸಗಿ ಹೋಟೆಲ್ ನಲ್ಲಿ ನೆಡೆಯಲಿರುವ ಈ ಕಾರ್ಯಕ್ರಮಕ್ಕೆ ಸೆಲೆಬ್ರಿಟಿಗಳ ದಂಡು ಸೇರಲಿದೆ. ಅಂಬರೀಷ್ ಹಾಗೂ ಸುಮಲತಾ ಕುಟುಂಬಕ್ಕೆ ಸಾಕಷ್ಟು ಸಿನಿಮಾ ಹಾಗೂ ರಾಜಕೀಯ ನಂಟಿದ್ದು, ರಾಜಕೀಯ ದಿಗ್ಗಜರು ಹಾಗೂ ಸಿನಿಮಾ ದಿಗಜ್ಜರು ಅಭಿಷೇಕ್ ಮದುವೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಮದುವೆ ತಯಾರಿ ಜೋರಾಗಿದ್ದು, ಅಂಬರೀಶ್ ಮನೆಯಲ್ಲಿ ಈಗಾಗಲೇ ಚಪ್ಪರ ಹಾಕಲಾಗಿದ್ದು, ಜೂನಿಯರ್ ಅಂಬಿ ಮದುವೆಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ವಿದ್ಯುತ್ ದೀಪಗಳಿಂದ ಮನೆಯನ್ನ ಅಲಂಕರಿಸಲಾಗಿದ್ದು, ಈಗಾಗಲೇ ಹಳದಿ ಶಾಸ್ತ್ರ ವರಪೂಜೆ, ಮೆಹಂದಿ ಶಾಸ್ತ್ರಗಳನ್ನ ಅಂಬಿ ಮನೆಯಲ್ಲೇ ನೆರವೇರಿಸಲಾಗಿದೆ. ಅಂಬಿ ಪುತ್ರನ ಮದುವೆ ಮುಹೂರ್ತ ಯಾವಾಗ? ಜೂನ್ 5 ರಂದು ಮಾಣಿಕ್ಯ ಚಾಮರ ವಜ್ರದಲ್ಲಿ ಕರ್ಕಾಟಕ ಲಗ್ನ 9.30 ರಿಂದ 10.30 ನಡುವೆ ಮದುವೆ ಸಮಾರಂಭ ನಡೆಯಲಿದೆ.ಜೂನ್ 7 ಕ್ಕೆ ಬೆಂಗಳೂರು ಪ್ಯಾಲೇಸ್ ಗ್ರೌಂಡ್ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ ಕಾರ್ಯಕ್ರಮ ಕೂಡ ನಡೆಯಲಿದೆ.

ಜೂನ್ 16 ಅದ್ದೂರಿಯಾಗಿ ಮಂಡ್ಯದಲ್ಲಿ ಬೀಗರ ಊಟ ಕೂಡ ನಡೆಯಲಿದೆ.ಅಭಿಷೇಕ್ ತನ್ನ ಗೆಳತಿ ಅವಿವಾ ಬಿಡಪ ಜೊತೆ ಸಪ್ತಪದಿ ತುಳಿಯಲು ಸಿದ್ದರಾಗಿದ್ದಾರೆ. ಇತ್ತೀಚಿಗೆ ಇವರ ಇಬ್ಬರ ಪರಸ್ಪರ ಪರಿಚಯಗೊಂಡು, ಈ ಪರಿಚಯ ಪ್ರೀತಿಯಾಗಿ ಇದೀಗ ಇವರಿಬ್ಬರು ಮದುವೆಯಾಗಲು ಸಿದ್ದರಾಗಿದ್ದಾರೆ. ಈಗಾಗಲೇ ಕುಟುಂಬದ ಒಪ್ಪಿಗೆಯಿಂದ ಇಬ್ಬರ ನಿಶ್ಚಿತಾರ್ಥ ಕೂಡ ಮುಗಿದಿದ್ದು, ಮೆಹಂದಿ ಶಾಸ್ತ್ರದಲ್ಲಿ ಅಭಿಷೇಕ್ ಅಂಬರೀಶ್ ಫೋಟೋಸ್ ಸಾಮಾಜಿಕ ಜಾಲತಾಣಗಳಲ್ಲಿ ನೋಡಸಿಗುತ್ತಿದೆ.ಅಷ್ಟೇ ಅಲ್ಲದೆ ಅಂಬರೀಷ್ ತಮ್ಮ ಪ್ರೀತಿ ಪಾತ್ರರ ಹೆಸರನ್ನು ಬರೆಸಿದ್ದು, ಇದೀಗ ಆ ಫೋಟೋಗಳು ವೈರಲ್ ಆಗಿದೆ.
ಅಭಿಷೇಕ್ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದು, ಜನರ ಜೊತೆ ಉತ್ತಮವಾಗಿ ಬೆರೆಯುವ ವ್ಯಕ್ತಿತ್ವವಾಗಿದ್ದು, ತನ್ನದೇಯಾದಂತ ಒಂದಿಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಅಮರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಅಭಿಷೇಕ್ ತಮ್ಮ ತಂದೆಯ ಮ್ಯಾನರಿಸಮ್ ಜೊತೆ ಉತ್ತಮ ನಟನ ಕೌಶಲ್ಯವನ್ನು ಹೊಂದಿದ್ದಾರೆ. ಈ ಮದುವೆ ಸಮಾರಂಭದಲ್ಲಿ ಅಂಬರೀಶ್ ಇದಿದ್ದರೆ ಇನ್ನಷ್ಟು ಮೆರಗು ಬರುತಿತ್ತು. ಅಂಬರೀಶ್ ಅಗಲಿದ ಬಳಿಕ ಮನೆಯಲ್ಲಿ ನಡೆಯುತ್ತಿರುವ ಶುಭಕಾರ್ಯಗಳಲ್ಲಿ ಅಪ್ಪನ ನೆನಪು ತುಂಬಾನೇ ಕಾಡುತ್ತೆ ಎನ್ನುವ ಹೇಳಿಕೆಯನ್ನ ಈ ಹಿಂದೆ ಅಭಿಷೇಕ್ ಹೇಳಿದ್ದರು.
ಇನ್ನೂ ಅಂಬರೀಶ್ ಸಾವಿನ ಬಳಿಕ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸುಮಲತಾ ಅಂಬರೀಶ್ ಲೋಕಸಭಾ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕ್ ಸ್ಟಾರ್ ಯಶ್ ಇವರಿಬ್ಬರೂ ಅಂಬರೀಶ್ ಕುಟುಂಬಕ್ಕೆ ಆಪ್ತರಾಗಿದ್ದು, ಅಭಿಷೇಕ್ ಮದುವೆಯಲ್ಲಿ ಇವರಿಬ್ಬರು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸುಮಲತಾ ಅಂಬರೀಶ್ ಪರ ಭರ್ಜರಿ ಪ್ರಚಾರದಲ್ಲಿ ಈ ಇಬ್ಬರು ನಾಯಕರು ತೊಡಗಿದ್ದಾರೆ. ಒಟ್ಟಾರೆ ಅಭಿಷೇಕ್ ರವರ ದಾಂಪತ್ಯ ಜೀವನ ಸಂತೋಷದಿಂದ ಕೂಡಿರಲಿ ಎನ್ನುವುದೇ ನಮ್ಮ ಆಶಯ.