ಐಪಿಎಲ್ ಅನ್ನುವ ಕ್ರಿಕೆಟ್ ಹಬ್ಬವನ್ನು ಆಚರಿಸದವರು ಬಹುಶಃ ಯಾರೂ ಇಲ್ಲ. ಅದರಲ್ಲೂ ಐಪಿಎಲ್ ಇತಿಹಾಸದಲ್ಲಿ ಒದೇ ಒಂದು ಬಾರಿಯೂ ಕಪ್ ಗೆಲ್ಲದ RCB. ತಂಡಕ್ಕಿರುವಷ್ಟು ಅಭಿಮಾನಿಗಳೂ ಕೂಡ ಯಾವ ತಂಡಕ್ಕೂ ಇಲ್ಲ. ಇದೀಗ RCB ತಂಡದಲ್ಲಿ ಆಡಿದ್ದ ಕಿರಿಯ ಆಟಗಾರನೊವ್ಬ ಮದುವೆಯಾಗಿ ಸುದ್ದಿಯಾಗಿದ್ದಾನೆ. ಇತ್ತೀಚೆಗಷ್ಟೇ ಕಾಶ್ಮೀರಿ ಹುಡುಗಿಯೊಂದಿಗೆ ಈ ಆಟಗಾರ ಅದ್ದೂರಿಯಾಗಿ ವಿವಾಹವಾಗಿದ್ದಾನೆ.

ಹೌದು RCB ತಂಡದ ಮಾಜಿ ಆಟಗಾರ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದ 25 ವರ್ಷದ ಯುವ ಆಟಗರ ಸರ್ಫರಾಜ್ ಖಾನ್ ಕಾಶ್ಮೀರದ ಸೋಫಿಯಾನ ಜಿಲ್ಲೆಯ ಯುವತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ವೇಳೆ ಸರ್ಫರಾಜ್ ಕಪ್ಪು ಶೆರ್ವಾನಿ ತೊಟ್ಟಿದ್ದು, ವಧು ಕೆಂಪು ಬಣ್ಣದ ಸಾಂಪ್ರದಾಯಿಕ ಉಡುಗೆ ತೊಟ್ಟು, ಮೈ ತುಂಬಾ ಆಭರಣ ಧರಿಸಿ ಕಂಗೊಳಿಸಿದ್ದಾರೆ.
ಗುಟ್ಟಾಗಿ ಮದುವೆಯಾದ ಸರ್ಫರಾಜ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕಾಶ್ಮೀರದಲ್ಲಿ ಮದುವೆಯಾಗಿದ್ದು ತನ್ನ ಅದೃಷ್ಟ ಎಂದು ಹೇಳಿಕೊಂಡಿದ್ದಾರೆ. ಸರ್ಫರಾಜ್ ದೇಶೀಯ ಕ್ರಿಕೆಟ್ ನಲ್ಲಿ ಉತ್ತಮ ಫಾರ್ಮ್ ನಲ್ಲಿದ್ದು, 39 ಪ್ರಥಮ ದರ್ಜೆ ಪಂದ್ಯಗಳಲ್ಲಿ 13 ಶತಕಗಳೊಂದಿಗೆ 6,559 ರನ್ ಗಳಿಸಿದ್ದಾರೆ. ಐ.ಪಿ.ಎಲ್.ನಲ್ಲಿ ಉತ್ತಮ ಪ್ರದರ್ಶನದ ಮೂಲಕ ಭಾರತ ತಂಡ ಸೇರುವ ಕನಸಿನಲ್ಲಿದ್ದಾರೆ.