ನಟಿ ರಶ್ಮಿಕಾ ಮಂದಣ್ಣ ಇಂದು ಪ್ಯಾನ್ ಇಂಡಿಯಾ ಸ್ಟಾರ್. ಇವರು ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್, ಬಾಲಿವುಡ್ ಎಲ್ಲಾ ಕಡೆ ಗುರುತಿಸಿಕೊಂಡಿರುವ ಹೀರೋಯಿನ್. ರಶ್ಮಿಕಾ ಅವರು ಇಂದು ಹೆಚ್ಚಾಗಿ ಪ್ಯಾನ್ ಇಂಡಿಯಾ ಸಿನಿಮಾಗಳನ್ನೇ ಮಾಡುತ್ತಿದ್ದಾರೆ. ರಿಲೀಸ್ ಗೆ ರೆಡಿ ಇರುವ ಮುಂದಿನ ಸಿನಿಮಾ ಪುಶ್ಪ2. 2021ರಲ್ಲಿ ಪುಷ್ಪ ದಿ ರೈಸ್ ಸಿನಿಮಾ ಬಿಡುಗಡೆಯಾಗಿ, ಬ್ಲಾಕ್ ಬಸ್ಟರ್ ಎನ್ನಿಸಿಕೊಂಡಿತ್ತು, ಈ ಸಿನಿಮಾಗೆ ಇನ್ನು ಅದೇ ರೀತಿ ಕ್ರೇಜ್ ಇದೆ. ಇದೀಗ ಪುಷ್ಪ2 ಬಿಡುಗಡೆ ಅಗೋದಕ್ಕೆ ಸಜ್ಜಾಗಿದೆ. ಇದಕ್ಕಾಗಿ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ ಪುಷ್ಪ2 ತೆರೆಕಾಣಬೇಕಿತ್ತು.

ಆದರೆ ಸಿನಿಮಾ ಕೆಲಸಗಳು ನಿಧಾನ ಆದ ಕಾರಣ ಪುಷ್ಪ2 ಸಿನಿಮಾ ಇನ್ನು ಬಿಡುಗಡೆ ಆಗಿಲ್ಲ. ಶೀಘ್ರದಲ್ಲೇ ಬಿಡುಗಡೆ ಆಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಈ ವೇಳೆ ನಟಿ ರಶ್ಮಿಕಾ ಅವರು ನಟ ಅಲ್ಲು ಅರ್ಜುನ್ ಅವರಿಗೆ ಬೆಳ್ಳಿ ನಾಣ್ಯವನ್ನು ಗಿಫ್ಟ್ ಆಗಿ ಕಳಿಸಿದ್ದಾರೆ, ಅದರ ಜೊತೆಗೆ ಒಂದು ಸುಂದರವಾದ ಲೆಟರ್ ಅನ್ನು ಕೂಡ ಬರೆದು ಕಳಿಸಿದ್ದಾರೆ. ಈ ಗಿಫ್ಟ್ ಹಾಗೂ ಲೆಟರ್ ಬಗ್ಗೆ ಅಲ್ಲು ಅರ್ಜುನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿ ಹಾಕಿ ಪೋಸ್ಟ್ ಮಾಡಿದ್ದು, ರಶ್ಮಿಕಾ ಮಂದಣ್ಣ ಅವರಿಗೆ ಧನ್ಯವಾದ ತಿಳಿಸಿ, ಈ ಸಮಯದಲ್ಲಿ ಲಕ್ ಬೇಕೇ ಬೇಕು ಎಂದು ಬರೆದಿದ್ದಾರೆ..
ಈಗ ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬ ಅಥವಾ ಅವರ ವೆಡ್ಡಿಂಟ್ ಆನಿವರ್ಸರಿ ಯಾವುದು ಅಲ್ಲ.. ಹಾಗಿದ್ದರೂ ರಶ್ಮಿಕಾ ಅವರು ಬೆಳ್ಳಿ ನಾಣ್ಯ ಕೊಟ್ಟಿರೋದು ಯಾಕೆ ಎನ್ನುವ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಸಿನಿಮಾ, ಹೌದು ಪುಷ್ಪ2 ಸಿನಿಮಾದ ಶೂಟಿಂಗ್ ಕೆಲಸಗಳು ಎಲ್ಲವೂ ಮುಗಿದಿದ್ದು, ಸಿನಿಮಾ ಪ್ರೊಮೋಷನ್ಸ್ ಹಾಗೂ ಬಿಡುಗಡೆ ಆಗಬೇಕಿದೆ. ಇಡೀ ತಂಡ ಈ ಚಿತ್ರಕ್ಕಾಗಿ ಬಹಳ ಶ್ರಮ ಪಟ್ಟಿದೆ. ಈ ಕಾರಣಕ್ಕೆ ಒಳ್ಳೆಯದಾಗಲಿ ಎಂದು ಒಳ್ಳೆಯ ಮನಸ್ಸಿನಿಂದ ರಶ್ಮಿಕಾ ಮಂದಣ್ಣ ಅವರು ಅಲ್ಲು ಅರ್ಜುನ್ ಅವರಿಗೆ ಬೆಳ್ಳಿ ನಾಣ್ಯವನ್ನು ದೀಪಾವಳಿ ಹಬ್ಬದ ಉಡುಗೊರೆಯಾಗಿ ಕಳಿಸಿದ್ದಾರೆ.

ಲೆಟರ್ ನಲ್ಲಿ ರಶ್ಮಿಕಾ ಅವರು, ನನ್ನ ತಾಯಿ ಬೆಳ್ಳಿ ಅದೃಷ್ಟ ತರುತ್ತದೆ ಎಂದು ಹೇಳಿದ್ದರು, ಹಾಗಾಗಿ ಬೆಳ್ಳಿ ನಾಣ್ಯವನ್ನು ಕಳಿಸುತ್ತಿದ್ದೇನೆ, ಇದರಿಂದ ನಿಮಗೆ ಅದೃಷ್ಟ, ನೆಮ್ಮದಿ, ಶಾಂತಿ ಎಲ್ಲವೂ ದೊರೆಯಲಿ ಎಂದು ಪುಟ್ಟ ಲೆಟರ್ ನಲ್ಲಿ ಬರೆದಿದ್ದಾರೆ ರಶ್ಮಿಕಾ. ನಟಿಯ ಈ ಒಳ್ಳೆಯ ಮನಸ್ಸಿನಿಂದ ಅವರಿಗೂ ಒಳ್ಳೆಯದಾಗಲಿ ಎಂದು ಕೆಲವರು ರಶ್ಮಿಕಾ ಅವರ ಗುಣಗಾನ ಮಾಡುತ್ತಿದ್ದಾರೆ. ಆದರೆ ಇನ್ನೂ ಕೆಲವರು ರಶ್ಮಿಕಾ ಅವರ ರೇಂಜ್ ಗೆ ಚಿನ್ನಾನೇ ಕೊಡಬಹುದಿತ್ತಲ್ಲ, ಬೆಳ್ಳಿ ನಾಣ್ಯ ಯಾಕೆ ಕೊಟ್ಟರು ಎಂದು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಇದರ ಹಿಂದೆ ಕೂಡ ಒಂದು ಪ್ರಮುಖವಾದ ಕಾರಣ ಇದೆ ಎನ್ನುವುದು ಹಲವರಿಗೆ ಗೊತ್ತಿಲ್ಲ.
ಹೌದು, ರಶ್ಮಿಕಾ ಅವರು ಬೆಳ್ಳಿ ನಾಣ್ಯವನ್ನು ದೀಪಾವಳಿ ಉಡುಗೊರೆಯಾಗಿ ನೀಡಿರುವುದಕ್ಕೆ ಕಾರಣವಿದೆ. ನಮ್ಮ ಶಾಸ್ತ್ರದ ಪ್ರಕಾರ ಬೆಳ್ಳಿ ತುಂಬಾ ಒಳ್ಳೆಯದು, ಬೆಳ್ಳಿಯನ್ನು ಗಿಫ್ಟ್ ಆಗಿ ಪಡೆದವರ ಮನೆಯಲ್ಲಿ ಅದೃಷ್ಟ, ಸಮೃದ್ಧಿ, ಸಂಭ್ರಮ ಇರುತ್ತದೆ. ರಶ್ಮಿಕಾ ಅವರಿಗೆ ಚಿನ್ನದ ನಾಣ್ಯ ಕೊಡುವುದು ದೊಡ್ಡ ವಿಷಯ ಅಲ್ಲ. ಆದರೆ ಅದೃಷ್ಟ ಇರಲಿ, ಪುಷ್ಪ 2 ಸಿನಿಮಾಗೆ ಒಳ್ಳೆಯದಾಗಲಿ, ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲಿ ಎನ್ನುವ ಕಾರಣಕ್ಕೆ ರಶ್ಮಿಕಾ ಮಂದಣ್ಣ ಅವರು ಅಲ್ಲು ಅರ್ಜುನ್ ಅವರಿಗೆ ಈ ಬೆಳ್ಳಿಯ ನಾಣ್ಯವನ್ನು ಉಡುಗೊರೆಯಾಗಿ ಕಳಿಸಿಕೊಟ್ಟಿದ್ದಾರೆ.