ಚಂದನವನದಲ್ಲಿ ಒಂದೆರಡು ದಿನಗಳಿಂದ ಬಹಳ ಚರ್ಚೆಯಾಗಿ, ಸುದ್ದಿಯಾಗುತ್ತಿರುವ ವಿಚಾರ ನಟಿ ರನ್ಯಾ ರಾವ್ ಅವರ ಚಿನ್ನ ಸಾಗಾಣಿಕೆ ಕೇಸ್ ಆಗಿದೆ. ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದ ನಟಿ ಈ ರೀತಿ ಮಾಡಿದ್ದಾರೆ ಎನ್ನುವುದನ್ನೇ ಒಪ್ಪುವುದಕ್ಕೆ ಸ್ವಲ್ಪ ಕಷ್ಟ ಆಗುತ್ತಿದೆ. ಅಂಥದ್ರಲ್ಲಿ ಈ ಕೇಸ್ ಬಗ್ಗೆ ದಿನಕ್ಕೊಂದು ಹೊಸ ಮಾಹಿತಿಗಳು, ಅಪ್ಡೇಟ್ ಗಳು ಸಿಗುತ್ತಲೇ ಬಂದಿದೆ. ನಟಿ ರನ್ಯಾ ರಾವ್ ಕೇಸ್ ಬಗ್ಗೆ ಡಿ.ಆರ್.ಐ ಇಂದ ತನಿಖೆ ನಡೆಯುತ್ತಲೇ ಇದೆ. ಆದರೆ ಇದೀಗ ಈ ಕೇಸ್ ನಲ್ಲಿ ರನ್ಯಾ ರಾವ್ ಅವರ ತಂದೆ ಡಿಐಜಿ ರಾಮಚಂದ್ರ ರಾವ್ ಅವರು ಇನ್ವಾಲ್ವ್ ಆಗಿದ್ದರು ಎನ್ನುವ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದಕ್ಕೆ ಸಾಕ್ಷಿಗಳು ಸಹ ಸಿಕ್ಕಿದೆ. ಅಷ್ಟಕ್ಕೂ ಆಗಿರೋದೇನು? ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ.
ಕೆಲವು ದಿನಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದ ನಟಿ ರನ್ಯಾ ರಾವ್, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳ್ಳ ಚಿಕ್ಕ ಸಾಗಾಣಿಕೆ ಕೇಸ್ ನಲ್ಲಿ, ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡರು. ಇವರು ನಟಿ ಎನ್ನುವ ಕಾರಣ, ಹಾಗೆಯೇ ಡಿಐಜಿ ರಾಮಚಂದ್ರ ರಾವ್ ಅವರ ಮಗಳು ಎನ್ನುವ ಕಾರಣಕ್ಕೆ ಈ ಕೇಸ್ ದೊಡ್ಡ ಹಂತಕ್ಕೆ ತಿರುಗಿತು. ಅಂದು ದುಬೈ ಇಂದ ಬೆಂಗಳೂರಿಗೆ ಬಂದ ರನ್ಯಾ ಅವರ ಬಳಿ ಇದ್ದಿದ್ದು 14.8 ಕೆಜಿ ಚಿನ್ನ ಎಂದು ಗೊತ್ತಾಗಿ ಅದನ್ನು ಸೀಜ್ ಮಾಡಲಾಗಿತ್ತು. ಹಾಗೆಯೇ ರನ್ಯಾ ರಾವ್ ಅವರು ಈ ಕೆಲಸ ಮಾಡಿದ್ದು ಯಾಕೆ? ಇವರ ಹಿಂದೆ ಯಾರಿದ್ದಾರೆ? ಈ ರೀತಿ ಮಾಡೋದಕ್ಕೆ ಹೇಳಿದ್ದು ಯಾರು? ಈ ಎಲ್ಲಾ ಪ್ರಶ್ನೆಗಳು ಕೂಡ ಬರುವುದಕ್ಕೆ ಶುರುವಾಯಿತು. ಡಿ.ಆರ್.ಐ ಮತ್ತು ಸಿಬಿಐ ಎರಡು ಡಿಪಾರ್ಮೆಂಟ್ ಗಳು ಕೂಡ ಈ ಕೇಸ್ ನಲ್ಲಿ ವಿಚಾರಣೆ ನಡೆಸುತ್ತಿವೆ.

ದಿನದಿಂದ ದಿನಕ್ಕೆ ಕೇಸ್ ಗೆ ಸಂಬಂಧಿಸಿದ ಹಾಗೆ ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ. ಮೊನ್ನೆಯಷ್ಟೇ ನಟಿ ರನ್ಯಾ ಅವರು ಈ ಕೆಲಸ ಮಾಡಲು ಎಷ್ಟು ಹಣ ಪಡೆಯುತ್ತಿದ್ದರು ಎನ್ನುವ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಆಶ್ಚರ್ಯ ಎನ್ನುವ ಹಾಗೆ ಅವರ ತಂದೆ ಕೂಡ ಮಗಳಿಗೆ ಸಹಾಯ ಮಾಡಿದ್ದರು ಎನ್ನುವ ಮಾಹಿತಿ ಬಯಲಾಗಿದೆ. ಹೌದು, ನಟಿ ರನ್ಯಾ ರಾವ್ ಅವರ ತಂದೆ ಡಿಐಜಿ ರಾಮಚಂದ್ರ ರಾವ್ ಅವರು ಕೂಡ ಮಗಳಿಗೆ ಈ ವಿಚಾರದಲ್ಲಿ ಸಹಾಯ ಮಾಡಿದ್ದಾರೆ. ರನ್ಯಾ ಅವರು ಈ ಕೇಸ್ ನಲ್ಲಿ ಸಿಲುಕಿಕೊಂಡಾಗ, ರಾಮಚಂದ್ರ ರಾವ್ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ ಅವರು ಇದಕ್ಕೂ ತಮಗೂ ಸಂಬಂಧವಿಲ್ಲ ಎಂದಿದ್ದರು. ಮದುವೆಯಾದ ನಂತರ ಇದೆಲ್ಲವೂ ನಡೆದಿದೆ, ಅವಳ ಮದುವೆಯಾದ ನಂತರ ಅಷ್ಟೇನು ಕನೆಕ್ಷನ್ ಇಲ್ಲ ಎಂದಿದ್ದರು..

ಆದರೆ ಈಗ ಸಿಕ್ಕಿರುವ ಮಾಹಿತಿಯೇ ಬೇರೆ. ಈ ಕೆಲಸ ಮಾಡಲು ರನ್ಯಾ ಏರ್ಪೋರ್ಟ್ ಗೆ ಹೋಗುವ ದಿವಸ, ಖುದ್ದು ಅವರ ತಂದೆಯೇ ಏರ್ಪೋರ್ಟ್ ನ ಟರ್ಮಿನಲ್ 1 ನಲ್ಲಿ ಪ್ರೊಟೊಕಾಲ್ ವಿಭಾಗದಲ್ಲಿ ಕೆಲಸ ಮಾಡುವ ಪಿಸಿ ಬಸವರಾಜು ಅವರಿಗೆ ಕರೆ ಮಾಡಿ, ನನ್ನ ಮಗಳು ಬರುತ್ತಿದ್ದಾಳೆ ನೋಡಿಕೊಳ್ಳಿ ಎಂದು ಹೇಳುತ್ತಿದ್ದರಂತೆ. ಇದು ಒಂದು ಬಾರಿ, ಎರಡು ಬಾರಿ ಮಾತ್ರವಲ್ಲ, ಪ್ರತಿ ಬಾರಿ ರನ್ಯಾ ಅವರು ಹೋಗುವಾಗ ಅವರ ತಂದೆ ಇದೇ ರೀತಿ ಪಿಸಿ ಬಸವರಾಜು ಅವರಿಗೆ ಫೋನ್ ಮಾಡಿ ಹೇಳುತ್ತಿದ್ದರಂತೆ. ಇದರಿಂದ ರನ್ಯಾ ಅವರಿಗೆ ಯಾವುದೇ ತೊಂದರೆ ಆಗುತ್ತಿರಲಿಲ್ಲ ಎನ್ನಲಾಗಿದೆ. ಇನ್ನು ಕಳೆದ ಬಾರಿ ಹೋಗುವಾಗ, ಖುದ್ದು ರನ್ಯಾ ಅವರೇ ಬಸವರಾಜ್ ಅವರಿಗೆ ಕರೆ ಮಾರಿ, ನಾನು ಟರ್ಮಿನಲ್ 1 ಹತ್ತಿರ ಬರುತ್ತಿದ್ದೇನೆ, ನೀನು ಅಲ್ಲಿಗೆ ಬಾ ಎಂದು ಹೇಳಿದರಂತೆ.
ಆದರೆ ಬಸವರಾಜ್ ಅಂದು ಟರ್ಮಿನಲ್ 2 ನಲ್ಲಿ ಕೆಲಸ ಮಾಡುತ್ತಿದ್ದರಂತೆ. ಬೇರೆ ವಿಐಪಿ ಗಳು ಇದ್ದ ಕಾರಣ, ಆ ಕೆಲಸದಲ್ಲಿ ಬ್ಯುಸಿ ಇದ್ದು, ಟರ್ಮಿನಲ್ 1 ಗೆ ಬರಲು ಆಗೋದಿಲ್ಲ ಎಂದರಂತೆ. ಆಗ ರನ್ಯಾ, ನೀನು ಬರಲಿಲ್ಲ ಎಂದರೆ ನನ್ನ ತಂದೆಗೆ ಹೇಳುತ್ತೇನೆ ಎಂದು ಹೇಳಿದರಂತೆ. ಈ ಎಲ್ಲಾ ವಿಚಾರಗಳು ಈಗ ಬಯಲಾಗಿದೆ. ಮಗಳು ಮಾಡುತ್ತಿದ್ದ ಕೆಲಸಕ್ಕೆ, ತಂದೆಯೇ ಸಾಥ್ ಕೊಡುತ್ತಿದ್ದರು ಎನ್ನುವುದು ಆಶ್ಚರ್ಯಕರ ವಿಚಾರ. ಇನ್ನು ಈ ರೀತಿ ಸಾಕಾಣಿಕೆ ಮಾಡುತ್ತಿದ್ದನ್ನು ಕೊಡುತ್ತಿದ್ದಿದ್ದು ಯಾರಿಗೆ? ಇದರ ಹಿಂದೆ ಇರುವ ಕೈಗಳು ಯಾರದ್ದು ಎಂದು ತಿಳಿದುಕೊಳ್ಳಬೇಕಿದೆ. ಮುಂದಿನ ತಣಿಕೆಗಳಲ್ಲಿ ಇದೆಲ್ಲವು ಗೊತ್ತಾಗಬೇಕಿದೆ. ಈ ಕೇಸ್ ನಲ್ಲಿ ರನ್ಯಾ ರಾವ್ ತಂದೆ ಕೂಡ ಭಾಗಿಯಾಗಿದ್ದಾರೆ ಎನ್ನುವುದೇ ಬಿಗ್ ಟ್ವಿಸ್ಟ್.

ರನ್ಯಾ ರಾವ್ ಅವರ ತಂದೆ ಅಧಿಕಾರದಲ್ಲಿ ಇರುವ ಆಫೀಸರ್. ತಮ್ಮ ಸ್ವಾರ್ಥಕ್ಕೆ ಇನ್ನೊಬ್ಬ ಪಿಸಿಯನ್ನು ಬಳಸಿಕೊಳ್ಳುವುದು ಎಷ್ಟು ಸರಿ? ಪಿಸಿ ಆಗಲಿ ಅಥವಾ ಇನ್ಯಾವುದೇ ಕೆಲಸಗಾರ ಆಗಲಿ, ಮೇಲಿನ ಅಧಿಕಾರಿಗಳು ಕೇಳಿದ ಕೆಲಸವನ್ನು ಚಾಚೂತಪ್ಪದೆ ಪಾಲಿಸುವುದೇ ಅವರ ಕೆಲಸ ಆಗಿರುತ್ತದೆ. ಹಾಗಾಗಿ ಪಿಸಿ ಬಸವರಾಜು ಅವರಿಗೆ ಇದರಿಂದ ತಪ್ಪಿಸಿಕೊಳ್ಳಲು ಆಗಿರುವುದಿಲ್ಲ. ಅದೇ ರೀತಿ, ತಮ್ಮ ಸ್ವಾರ್ಥಗಳಿಗೆ ಇನ್ನೊಬ್ಬರನ್ನು ಬಳಸಿಕೊಳ್ಳುವುದು ಕೂಡ ತುಂಬಾ ತಪ್ಪಾಗುತ್ತಿದೆ. ಪಾಪ ಆ ವ್ಯಕ್ತಿಯ ಬದುಕಿಗೂ ತೊಂದರೆ ಆಗುತ್ತದೆ. ಈ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಇನ್ನು ಏನೆಲ್ಲಾ ವಿಷಯಗಳು ಹೊರಗಡೆ ಬರುತ್ತದೆ, ಇನ್ನು ಯಾರೆಲ್ಲಾ ಈ ಕೇಸ್ ನಲ್ಲಿ ಭಾಗಿಯಾಗಿದ್ದಾರೆ ಎಂದು ಕಾದು ನೋಡಬೇಕಿದೆ.

ಇನ್ನು ಒಂದೆರಡು ದಿನಗಳ ಹಿಂದಷ್ಟೇ ರನ್ಯಾ ರಾವ್ ಅವರು ಮತ್ತೊಂದು ಸ್ಫೋಟಕ ಮಾಹಿತಿ ರಿವೀಲ್ ಮಾಡಿದ್ದರು. ಈ ಕೆಲಸದಿಂದ ಅವರಿಗೆ ಎಷ್ಟು ಹಣ ಸಿಗುತ್ತಿದೆ ಎನ್ನುವುದನ್ನು ತಿಳಿಸಿದ್ದರು. ರನ್ಯಾ ರಾವ್ ಅವರು ಹೇಳಿದ್ದ ಮಾತಿನ ಅನುಸಾರ, ಒಂದು ಕೆಜಿ ಚಿನ್ನಕ್ಕೆ 3.80 ಲಕ್ಷ ರೂಪಾಯಿಗಳನ್ನು ಇವರಿಗೆ ಕೊಡಲಾಗುತ್ತಿತ್ತಂತೆ. ಇದುವರೆಗೂ ಸುಮಾರು 40 ಸಾರಿ ರನ್ಯಾ ರಾವ್ ದುಬೈ ಗೆ ಹೋಗಿ ಬಂದಿದ್ದು, 500 ಕೆಜಿಗಿಂತ ಹೆಚ್ಚು ಚಿನ್ನದ ಕಳ್ಳ ಸಾಗಾಣಿಕೆ ಮಾಡಿದ್ದಾರೆ. ಇದರಿಂದಲೇ ಸುಮಾರು 18 ರಿಂದ 19 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಈ ಕೇಸ್ ಇತ್ತೀಚಿನ ದಿನಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ಮುಂದೆ ಯಾವ ರೂಪ ಪಡೆದುಕೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.