ಬಿಗ್ ಬಾಸ್ ಕನ್ನಡ ಸೀಸನ್11 ಮುಗಿದಿದೆ. ಒಂದು ದೊಡ್ಡ ಅಧ್ಯಾಯದ ಅಂತ್ಯವಿದು. ಇಷ್ಟು ವರ್ಷ ಒಂದು ಸೀಸನ್ ಮುಗಿದಾಗ ಕಿಚ್ಚ ಸುದೀಪ್ ಅವರು ಮುಂದಿನ ಸೀಸನ್ ಗೆ ಬರುತ್ತಾರೆ ಎನ್ನುವ ಸಂತೋಷ ಇತ್ತು. ಆದರೆ ಈ ಸೀಸನ್ ನಲ್ಲಿ ಆ ಸಂತೋಷವಿಲ್ಲ. ಸುದೀಪ್ ಅವರ ಕೊನೆಯ ಸೀಸನ್ ಇದು, ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆ ಮಾಡಿ, ಯಾರು ಮರೆಯಲಾಗದ 11ನೇ ಸೀಸನ್ ಅನ್ನು ಜನರಿಗೆ ನೀಡಿದ್ದಾರೆ. ಕಿಚ್ಚ ಸುದೀಪ್ ಅವರ ಬದಲಾಗಿ ಮುಂದಿನ ಸೀಸನ್ ನಲ್ಲಿ ನಿರೂಪಣೆ ಮಾಡುವವರು ಯಾರು ಎನ್ನುವ ಪ್ರಶ್ನೆ ಸಹ ಶುರುವಾಗಿದೆ, ಅದಕ್ಕೆಲ್ಲಾ ಇನ್ನು ಕೂಡ ಉತ್ತರ ಸಿಕ್ಕಿಲ್ಲ. ಆದರೆ ಸುದೀಪ್ ಅವರು ಮನಸ್ಸು ಬದಲಾಯಿಸಿ ಮತ್ತೆ ಬಿಗ್ ಬಾಸ್ ಮನೆಗೆ ಬರಲಿ ಎನ್ನುವುದೇ ಎಲ್ಲರ ಆಸೆ ಆಗಿದೆ. ಬಿಗ್ ಬಾಸ್ ಅಂದ್ರೆ ಸುದೀಪ್ ಅನ್ನಿಸೋದು ಎಲ್ಲರಿಗು..
ಬಿಗ್ ಬಾಸ್ ಗೆ ಸುದೀಪ್ ಅವರು ಬರೋದಿಲ್ಲ ಅನ್ನೋ ಬೇಸರ ಇರುವುದಂತೂ ನಿಜ. ಹಾಗೆಯೇ ಜನರು ಹನುಮಂತನ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ. ಹಳ್ಳಿ ಹುಡುಗ ಹನುಮಂತ ಯಾರು ಊಹಿಸದ ರೀತಿಯಲ್ಲಿ ಬೆಳೆದು, ತನ್ನನ್ನು ತಾನು ಪ್ರೂವ್ ಮಾಡಿಕೊಂಡು, ಜನರ ಪ್ರೀತಿ ಮತ್ತು ಪ್ರೋತ್ಸಾಹ ಗಳಿಸಿ ಗೆದ್ದು ಬಂದಿದ್ದಾರೆ. ಇನ್ನು ಟಾಪ್ 3 ನಲ್ಲಿ ಇದ್ದ ಮೂವರು ಸ್ಪರ್ಧಿಗಳು ಸಹ ಗೆಲುವಿಗೆ ಅರ್ಹವಾದ ಸ್ಪರ್ಧಿಗಳು ಇನ್ನು ಮಹಿಳಾ ಸ್ಪರ್ಧಿಯಾಗಿ ಮೋಕ್ಷಿತಾ ಅವರು ಗೆಲ್ಲಬೇಕು ಎನ್ನುವ ಆಸೆ ಕೂಡ ಎಲ್ಲರಿಗೂ ಇತ್ತು. ಆದರೆ ಅದು ನಡೆಯದೇ ಇದ್ದರು ಸಹ, ಹನುಮಂತ ಗೆದ್ದಿರುವುದು ಎಲ್ಲರಿಗೂ ಸಂತೋಷ ಇದೆ. ಟಾಪ್ 3 ನಲ್ಲಿ ರಜತ್, ತ್ರಿವಿಕ್ರಂ ಹಾಗೂ ಹನುಮಂತ ಇದ್ದರು. 2ನೇ ರನ್ನರ್ ಅಪ್ ಆಗಿ ರಜತ್ ಹೊರ ಬಂದರೆ, ಮೊದಲನೇ ರನ್ನರ್ ಅಪ್ ಆದವರು ತ್ರಿವಿಕ್ರಂ.

ರಜತ್ ಹಾಗೂ ಹನುಮಂತ ಇವರಿಬ್ಬರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ವೈಲ್ಡ್ ಕಾರ್ಡ್ ಎಂಟ್ರಿ ಸ್ಫರ್ಧಿಯಾಗಿ. ಬಿಗ್ ಬಾಸ್ ಇತಿಹಾಸದಲ್ಲೇ ಫಿನಾಲೆ ತಲುಪಿದ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಇವರೇ. ಹನುಮಂತ ಒಂದು ರೀತಿಯಲ್ಲಿ ಜನರಿಗೆ ಇಷ್ಟವಾದರೆ, ರಜತ್ ಇನ್ನೊಂದು ರೀತಿಯಲ್ಲಿ ಜನರಿಗೆ ತುಂಬಾ ಇಷ್ಟವಾಗಿದ್ದರು. ರಜತ್ ಅವರ ನೇರ ನುಡಿ, ಜೋರು ಆಟಿಟ್ಯೂಡ್, ನಂದೆ ಹವಾ ಎನ್ನುವ ಹಾಗಿದ್ದ ನಡವಳಿಕೆ, ಆ ಗತ್ತು, ಇವರು ಕೊಡುತ್ತಿದ್ದ ಮನರಂಜನೆ ಎಲ್ಲವೂ ಸಹ ಜನರಿಗೆ ಬಹಳ ಇಷ್ಟವಾಗಿತ್ತು. 50 ದಿನಗಳ ನಂತರ ರಜತ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು ಸಹ, ಹೆಚ್ಚು ಮನರಂಜನೆ ಕೊಟ್ಟಿದ್ದು ಇವರೇ ಎಂದರು ತಪ್ಪಲ್ಲ. ಹೇಳಿದ ಮಾತಿನಂತೆಯೇ ಎಲ್ಲರನ್ನು ಮನೆಯಿಂದ ಹೊರಗಡೆ ಕಳಿಸಿ, ನಂತರ ಹೊರ ಬಂದಿದ್ದಾರೆ. ರಜತ್ ಹಾಗೂ ಚೈತ್ರಾ ಜಗಳ, ಇವರಿಬ್ಬರ ಕಾಂಬಿನೇಷನ್ ಕೂಡ ಜನರಿಗೆ ತುಂಬಾ ಇಷ್ಟವಾಗಿತ್ತು.
ರಜತ್ ಮಾತುಗಳನ್ನ ಸುದೀಪ್ ಅವರು ಕೂಡ ತುಂಬಾ ಎಂಜಾಯ್ ಮಾಡುತ್ತಿದ್ದರು. ವೀಕೆಂಡ್ ಎಪಿಸೋಡ್ ಗಳಲ್ಲಿ ರಜತ್ ಅವರು ಸುದೀಪ್ ಅವರನ್ನು ಸಿಕ್ಕಾಪಟ್ಟೆ ನಗಿಸುತ್ತಿದ್ದು ಸಹ ಇದೆ. ರಜತ್ ಒಳಗಿರುವ ಸ್ಪರ್ಧಿಗಳ ಜೊತೆಗೆ ಎಷ್ಟೇ ಜಗಳ ಆಡುತ್ತಿದ್ದರು ಏನೇ ನಡೆದರು, ಕೊನೆಗೆ ತಮಾಷೆ, ನಗು ಇದೆಲ್ಲವೂ ಇದ್ದೇ ಇರುತ್ತಿತ್ತು. ಇದೇ ಆಟಿಟ್ಯೂಡ್ ಇಂದಲೇ ಫಿನಾಲೆ ವರೆಗು ತಲುಪಿದರು ರಜತ್. ಚೈತ್ರಾ ಅವರನ್ನ ಹೊರಗಡೆ ಕಳಿಸಿದ ನಂತರವೇ ನಾನು ಹೋಗೋದು ಎಂದು ಹೇಳುತ್ತಲೇ ಬಂದ ರಜತ್, ಅದೇ ರೀತಿ ಚೈತ್ರಾ ಅವರನ್ನು ಕಳಿಸಿಯೇ ಫಿನಾಲೆ ತಲುಪಿದರು. ಇದೀಗ ಹೊರಗಡೆ ಬಂದಿರುವ ರಜತ್ ಜನರ ಪ್ರೀತಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ಕೆಲವು ಇಂಟರ್ವ್ಯೂಗಳಲ್ಲಿ ಪಾಲ್ಗೊಳ್ಳುತ್ತಿದ್ದು, ಹೆಂಡತಿ ಬಗ್ಗೆ ಕಂಪ್ಲೇಂಟ್ ಸಹ ಮಾಡಿದ್ದಾರೆ.
ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೆಂಡತಿ ವಿಚಾರವಾಗಿ ರಜತ್ ಹೇಳಿದ ಮಾತುಗಳನ್ನು ಪ್ರಶ್ನೆಯ ರೀತಿಯಲ್ಲಿ ಕೇಳಲಾಯಿತು. ನನ್ನ ಬುಟ್ ಬುಡೇ ಅಂತ ನೀವ್ ಹೇಳಿದ್ದು ತುಂಬಾ ಚೆನ್ನಾಗಿತ್ತು ಎಂದು ಹೇಳಿದ್ದಕ್ಕೆ, ನನ್ನ ಹೆಂಡಿತಿ ತುಂಬಾ ಹಿಂ*ಸೆ ಕೊಡ್ತಾಳೆ, ಯಾವಾಗಲೂ ಜೊತೆಯಲ್ಲೇ ಇರಬೇಕು ಅಂತಾಳೆ, ಆ ಥರ ಇರೋದಕ್ಕೆ ಆಗುತ್ತಾ ಹೇಳಿ, ಅದಿಕ್ಕೆ ನೀನಿಲ್ಲದೆ ನೆಮ್ಮದಿಯಾಗಿದ್ದೆ ಅಂತ ಹೇಳಿದ್ದು ಎಂದು ಹೆಂಡತಿ ಬಗ್ಗೆ ಕಂಪ್ಲೇಂಟ್ ಮಾಡಿದ್ದಾರೆ. ಇನ್ನು ರಜತ್ ಅಕ್ಷಿತ ದಂಪತಿಗೆ ಇಬ್ಬರು ಮಕ್ಕಳ, ರಜತ್ ಅವರಿಗೆ ಮಗಳ ಬಗ್ಗೆ ಸ್ವಲ್ಪ ಪ್ರೀತಿ ಜಾಸ್ತಿ, ಮಗ ಅಂದ್ರೆ ನಮ್ಮ ಶಿಷ್ಯ ಥರ, ಆದರೆ ಮಗಳು ಇನ್ನು ಸ್ಪೆಷಲ್, ಮಗಳನ್ನ ಎತ್ತಿಕೊಳ್ಳೋದು ಅದೆಲ್ಲಾ ತುಂಬಾ ಸ್ಪೆಶಲ್ ಅಲ್ವಾ, ಅದಕ್ಕೆ ಮಗಳಂದ್ರೆ ಹಾಗೆ, ಹಾಗಂತ ಮಗನ ಮೇಲೆ ಪ್ರೀತಿ ಇಲ್ಲ ಅಂತ ಅಲ್ಲ. ಇಬ್ಬರ ಮೇಲು ಪ್ರೀತಿ ಇದ್ದೇ ಇರುತ್ತದೆ ಎಂದಿದ್ದಾರೆ.
ಇನ್ನು ಸುದೀಪ್ ಅವರ ಬಗ್ಗೆ ಮಾತನಾಡಿದ ರಜತ್, ಸುದೀಪ್ ಅವರು ಫಿನಾಲೆ ದಿವಸ ಧರಿಸಿದ್ದ ಜ್ಯಾಕೆಟ್ ಕೊಟ್ಟಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಜ್ಯಾಕೆಟ್ ಬೆಲೆ ಎಷ್ಟು ಅಂತ ಗೊತ್ತಾಗಿದ್ದು ಹೊರಗಡೆ ಬಂದಮೇಲೆ, ಸರ್ ಅದನ್ನ ಹೇಳಲಿಲ್ಲ. ಬೇರೆಯವರಿಂದ ಗೊತ್ತಾಯ್ತು, ಆ ಜ್ಯಾಕೆಟ್ ರೆಡಿ ಮಾಡೋಕೆ 1 ತಿಂಗಳ ಸಮಯ ತಗೊಂಡಿದೆ, ಅಂಥದ್ರಲ್ಲಿ ಸರ್ ಹಿಂದೆ ಮುಂದೆ ಯೋಚನೆ ಮಾಡದೇ ಜ್ಯಾಕೆಟ್ ಕೊಟ್ಟುಬಿಟ್ರು. ಅವರು ಕೊಟ್ಟಿರೋ ಕಿವಿ ಓಲೆ ಕೂಡ ಪ್ಲಾಟಿನಂ ದು ಎಂದು ಬಾಯಿತಪ್ಪಿ ಹೇಳಿ, ಕ್ಷಮೆ ಕೇಳಿದ್ದಾರೆ ಸುದೀಪ್ ಅವರಿಗೆ. ಸ್ಪರ್ಧಿಗಳು ಹೇಳೋ ಈ ಮಾತುಗಳನ್ನ ಕೇಳಿದರೆ, ಕಿಚ್ಚನ ಗುಣ ಎಂಥದ್ದು, ಸ್ಪರ್ಧಿಗಳಿಗೆ ಸ್ನೇಹಿತರನ್ನು ಸುದೀಪ್ ಅವರು ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎನ್ನುವುದು ಅರ್ಥ ಆಗುತ್ತದೆ. ಸುದೀಪ್ ಅವರು ಎಲ್ಲರಿಗು ಇಷ್ಟ ಆಗುವುದು ಕೂಡ ಇದೇ ಕಾರಣಕ್ಕೆ ಎಂದರು ತಪ್ಪಲ್ಲ.

ಇನ್ನು ತಾವು ಎಲ್ಲರ ಜೊತೆಗೆ ಮಾತನಾಡುತ್ತಿದ್ದ ರೀತಿ, ರೇಗಿಸುತ್ತಿದ್ದರ ಬಗ್ಗೆ ಕೇಳ್ಕದ್ದಕ್ಕೆ ಮಾತನಾಡಿರುವ ರಜತ್, ನಾನು ಹೊರಗಡೆ ಕೂಡ ಅದೇ ರೀತಿ ಇರೋದು, ನನ್ನ ಫ್ರೆಂಡ್ಸ್ ಜೊತೆಗೆ ಹೇಗಿದ್ನೋ ಅದೇ ರೀತಿ ಬಿಗ್ ಬಾಸ್ ಮನೆಯ ಒಳಗಡೆ ಕೂಡ ಇದ್ದೆ. ಯಾವುದನ್ನು ಕೂಡ ಪ್ಲಾನ್ ಮಾಡಿ ಮಾಡಿಲ್ಲ ಎಂದು ರಜತ್ ಹೇಳಿದ್ದಾರೆ. ಇನ್ನು ವೈಯಕ್ತಿಕ ಜೀವನದಲ್ಲಿ ಒಂದೇ ಒಂದು ಕೆಲಸವನ್ನು ಕೂಡ ಮಾಡದ ರಜತ್, ಬಿಗ್ ಬಾಸ್ ಮನೆಯ ಒಳಗೆ ಬಾತ್ ರೂಮ್ ಕ್ಲೀನ್ ಮಾಡಿದ್ದು, ಮರೆಯಲು ಸಾಧ್ಯ ಆಗದೇ ಇರುವ ಘಟನೆ, ಕ್ಲೀನ್ ಮಾಡಿದ್ರು ಕೂಡ ಅವರೆಲ್ಲಾ ಸರಿಯಾಗಿ ಮಾಡಿಲ್ಲ ಹಾಗೆ ಮಾಡು, ಹೀಗೆ ಮಾಡು ಅಂತಿದ್ರು, ನಾನು ಮಾಡೋದೇ ಹೀಗೆ ಅಂತ ಹೇಳಿ ಬರ್ತಾ ಇದೆ. ಬಿಗ್ ಬಾಸ್ ಮನೆ ಎಲ್ಲವನ್ನು ಕಲಿಸಿಬಿಡುತ್ತೆ, ಕೆಲಸ ಮಾಡಿದ್ರೆ ನಿನಗೆ ಊಟ ಸಿಗೋದು ಅನ್ನೋದನ್ನ ಅರ್ಥ ಮಾಡಿಸುತ್ತೇ ಎಂದಿದ್ದಾರೆ ರಜತ್.