ಸದ್ಯ ಗಾಸಿಪ್ ವಲಯಗಳಲ್ಲಿ ಜನಪ್ರಿಯ ಸಂಗೀತ ಸಂಯೋಜಕ, ಗಾಯಕ ಎಆರ್ ರೆಹಮಾನ್ರದ್ದೇ ಸುದ್ದಿ. ಪತ್ನಿ ಸಾಯಿರಾ ಬಾನು ಅವರಿಂದ ದೂರಾಗಿರುವುದು ಕೇಳಿ ಅವರ ಅಭಿಮಾನಿಗಳಿಗೆ ಶಾಕ್ ಆಗಿದೆ. ಕಳೆದ ರಾತ್ರಿ ಎಆರ್ ರೆಹಮಾನ್ ಮತ್ತು ಸಾಯಿರಾ ಬಾನು ತಮ್ಮ 29 ವರ್ಷದ ದಾಂಪತ್ಯ ಜೀವನ ಅಂತ್ಯವಾಗಿರುವುದನ್ನು ಘೋಷಿಸಿ ಜಂಟಿ ಹೇಳಿಕೆ ನೀಡಿದ್ದರು. ಇದರ ನಂತರ ಅವರು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಅನ್ನು ಸಹ ಹಂಚಿಕೊಂಡಿದ್ದರು. ಆದರೆ, ತಮ್ಮ ಪೋಸ್ಟ್ನಲ್ಲಿ ಎಆರ್ ರೆಹಮಾನ್ ಕೊನೆಯಲ್ಲಿ ಈ ರೀತಿ ಬರೆದುದರಿಂದ ಜನರು ಈಗ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಅವರ ಪೋಸ್ಟ್ಗೆ ಜನ ಚಿತ್ರ ವಿಚಿತ್ರ ಪ್ರತಿಕ್ರಿಯೆಯನ್ನೂ ನೀಡುತ್ತಿದ್ದಾರೆ.

ಪೋಸ್ಟ್ನಲ್ಲಿ ಮಿಸ್ಟೇಕ್
ಎಆರ್ ರೆಹಮಾನ್ ಕಳೆದ ರಾತ್ರಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ನಲ್ಲಿ ಪತ್ನಿ ಸಾಯಿರಾ ಬಾನು ಅವರಿಂದ ದೂರವಾಗುತ್ತಿರುವುದಾಗಿ ಘೋಷಿಸಿದರು. ಹಾಗೆಯೇ ತಮ್ಮ ಪೋಸ್ಟ್ನ ಕೊನೆಯಲ್ಲಿ, ಎಆರ್ ರೆಹಮಾನ್ #arsairabreakup ಎಂಬ ಹ್ಯಾಶ್ಟ್ಯಾಗ್ ಅನ್ನು ಬಳಸಿದ್ದಾರೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ತಕ್ಷಣ, ಪ್ರತ್ಯೇಕತೆಯ ಸುದ್ದಿ ಕೇಳಿ ಎಲ್ಲರೂ ದಿಗ್ಭ್ರಮೆಗೊಂಡರು. ಜನರು ಮೊದಲು ಅವರಿಗೆ ಖುಷಿಯಾಗಿರಿ ಎಂದು ಸಲಹೆ ನೀಡಿದರು. ಅನೇಕ ಅಭಿಮಾನಿಗಳು ಕಷ್ಟದ ಸಮಯದಲ್ಲಿ ಗಟ್ಟಿಯಾಗಿರಲು ಸಂದೇಶವನ್ನು ಸಹ ನೀಡಿದರು. ಇದೇ ವೇಳೆ ಕೆಲವರ ಗಮನ ಎಆರ್ ರೆಹಮಾನ್ ಅವರ ಹ್ಯಾಷ್ ಟ್ಯಾಗ್ ಕಡೆಗೆ ಹೋಯಿತು. ಈ ಹ್ಯಾಷ್ ಟ್ಯಾಗ್ ನೋಡಿದ್ದೇ ತಡ ಕೆಲವರು ತರಾಟೆ ತೆಗೆದುಕೊಳ್ಳಲು ಪ್ರಾರಂಭಿಸಿದರು.

ಟ್ರೋಲ್ ಮಾಡಿದ ಸಾಮಾಜಿಕ ಮಾಧ್ಯಮ ಬಳಕೆದಾರರು
ವಿಚ್ಛೇ*ದನವನ್ನು ಘೋಷಿಸುವಾಗ ಬ್ರೇಕಪ್ ಹ್ಯಾಶ್ಟ್ಯಾಗ್ ಬಳಸಿದ್ದಕ್ಕೆ ಸಾಮಾಜಿಕ ಮಾಧ್ಯಮ ಬಳಕೆದಾರರು ಎಆರ್ ರೆಹಮಾನ್ ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ. ಏತನ್ಮಧ್ಯೆ, ಪೋಸ್ಟ್ಗೆ ಕಾಮೆಂಟ್ ಮಾಡಿದ ಬಳಕೆದಾರರು “ಇಂತಹ ಪರಿಸ್ಥಿತಿಯಲ್ಲಿ ಈ ಹ್ಯಾಶ್ಟ್ಯಾಗ್ ಅನ್ನು ಯಾರು ಬಳಸುತ್ತಾರೆ? ನಿಮ್ಮ ನಿರ್ವಾಹಕರನ್ನು ವಜಾಗೊಳಿಸಿ” ಎಂದರೆ, ಇನ್ನೋರ್ವ ಬಳಕೆದಾರರು “ಡಿವೋರ್ಸ್ ಪೋಸ್ಟ್ಗೂ ಹ್ಯಾಶ್ಟ್ಯಾಗ್ ಬಳಸುತ್ತಾರಾ”? ಎಂದೆಲ್ಲಾ ಪ್ರಶ್ನೆ ಮಾಡಿರುವುದನ್ನು ನೀವು ನೋಡಬಹುದು.
ಎಆರ್ ರೆಹಮಾನ್ ಮತ್ತು ಸಾಯಿರಾ ಬಾನು 1995 ರಲ್ಲಿ ವಿವಾಹವಾದರು ಎಂಬುದು ಗಮನಾರ್ಹ. ಮನೆಯವರು ನಿಶ್ಚಯಿಸಿದ ವಿವಾಹವಿದು. ಇಬ್ಬರೂ ಸುಮಾರು 29 ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ ಈಗ ಅವರು ದೂರವಾಗುತ್ತಿರುವುದಾಗಿ ಘೋಷಿಸುವ ಮೂಲಕ ಜನರನ್ನು ಅಚ್ಚರಿಗೊಳಿಸಿದ್ದಾರೆ.