ಮೊನ್ನೆಯಷ್ಟೇ ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ಲವರ್ ಶೋ ನೋಡಲು ಬಂದ ಸಂಧರ್ಭದಲ್ಲಿ ರಸ್ತೆಯಲ್ಲಿದ್ದ ಸ್ವಚ್ಚಾತಾಕಾರ್ಮಿಕರೊಬ್ಬರಿಗೆ ಕಾರಿನಲ್ಲಿ ಡಿಕ್ಕಿ ಹೊಡೆದಿದ್ದರು. ಇದಾದ ಬಳಿಕ ಸೌಜನ್ಯಕ್ಕೂ ಕೂಡ ಕಾರ್ಮಿಕನ ಕ್ಷೇಮ ವಿಚಾರಿಸಿದೇ ತೆರಳಿದ್ದರು.ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ರಾಜ್ಯದಾದ್ಯಂತ ರಚಿತಾ ರಾಮ್ ವಿರುದ್ಧ ಸಾಕಷ್ಟು ಆಕ್ರೋಶ, ಟೀಕೆಗಳು ಕೇಳಿ ಬಂದಿದ್ದವು. ಇದೀಗ ನಟಿ ಕಾರ್ಮಿಕನನ್ನು ಮನೆಗೆ ಕರೆಸಿ ಕ್ಷಮೆ ಯಾಚಿಸಿದ್ದಾರೆ.
77ನೇ ವರ್ಷದ ಸ್ವಾತಂತ್ರ್ಯೋತ್ಸವದ ಹಿನ್ನಲೆಯಲ್ಲಿ ಮೊನ್ನೆಯಷ್ಟೇ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಪ್ಲವರ್ ಶೋ ಆಯೋಜಿಸಲಾಗಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ರಚಿತಾ ರಾಮ್ ಕಾರಿನಲ್ಲಿ ಆಗಮಿಸಿದ್ದರು. ಇದೇ ವೇಳೆ ರಸ್ತೆಯ ಬದಿಯಲ್ಲಿದ್ದ ಸ್ವಚ್ಚತಾ ಕಾರ್ಮಿಕರೊಬ್ಬರಿಗೆ ಕಾರು ಡಿಕ್ಕಿಯಾಗಿದೆ. ಆ ಸಂಧರ್ಭದಲ್ಲಿ ಕಾರನ್ನು ನಿಲ್ಲಿಸದೆ ಚಾಲಕ ಮುಂದುವರಿದುದ್ದ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರಚಿತಾ ರಾಮ್ ಅವರಿಗೆ ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ. ನೆಟ್ಟಿಗರು ಆಕ್ರೋಶ ಹೆಚ್ಚಾಗುತ್ತಿದ್ದಂತೆ ಡಿಂಪಲ್ ಕ್ವೀನ್ ಪರಿಸ್ಥಿತಿ ಅರ್ಥ ಮಾಡಿಕೊಂಡಿದ್ದಾರೆ.
ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ರಚಿತಾ ರಾಮ್ ತೋಟಗಾರಿಕಾ ಇಲಾಖೆಯ ಕಾರ್ಮಿಕನನ್ನು ಮನೆಗೆ ಕರೆಸಿಕೊಂಡು ಕ್ಷಮೆ ಯಾಚಿಸಿದ್ದು, ‘ನನ್ನಿಂದ ತಪ್ಪಾಗಿ ಕ್ಷಮಿಸಿ. ಅಂದು ನಾನು ಬಹಳ ಬ್ಯುಸಿಯಾಗಿದ್ದೆ. ಘಟನೆ ನಡೆದಾಗ ನಾನು ಫೋನ್ನಲ್ಲಿ ಮಾತನಾಡಿತ್ತಿದ್ದೆ ಆದ್ದರಿಂದ ಘಟನೆ ನನ್ನ ಗಮನಕ್ಕೆ ಬಂದಿಲ್ಲ. ನನ್ನ ಡ್ರೈವರ್ ಕೂಡ ತಪ್ಪು ಮಾಡಿದ್ದಾನೆ. ಆದರೆ ಇದು ಅಹಂಕಾರದಿಂದ ಆದದ್ದಲ್ಲ, ತಿಳಿಯದೇ ಮಾಡಿದ ತಪ್ಪು. ನನ್ನ ಕ್ಷಮಿಸಿ ಬಿಡಿ’ ಎಂದು ಕಾರ್ಮಿಕನ ಕೈ ಹಿಡಿದು ರಚಿತಾ ವಿನಂತಿಸಿದ್ದಾರೆ.