ಕನ್ನಡ ಚಿತ್ರರಂಗದಲ್ಲಿ ನಾಯಕಿಯರಿಗೆ ಸಂಭಾವನೆ ಸಿಗುವುದು ಕಡಿಮೆ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಇದೇ ಕಾರಣಕ್ಕೆ ಹಲವು ಬಾರಿ ಚರ್ಚೆಗಳು ನಡೆದಿರುವುದು ಇದೆ, ನಾಯಕಿಯರಿಗೆ ಕಡಿಮೆ ಸಂಭಾವನೆ ಎಂದು ಹಲವರು ಹೇಳಿದ್ದು ಇದೆ. ಈ ಕಾರಣಕ್ಕೆ ಹೆಚ್ಚು ಸಂಭಾವನೆ ಕೊಡುವ ಬೇರೆ ಭಾಷೆಗಳಿಗೆ ಹೋಗಿ, ಹೊರರಾಜ್ಯದಲ್ಲಿ ಸಿನಿಮಾ ಮಾಡುತ್ತಿರುವವರು ಕೂಡ ಸಾಕಷ್ಟು ನಾಯಕಿಯರು ಇದ್ದಾರೆ. ಈ ಕಾಂಪಿಟೇಶನ್ ಗಳು, ಹಣದ ವಿಚಾರಗಳು ಎಲ್ಲವು ಒಂದು ಕಡೆ ಇದ್ದೇ ಇರುತ್ತದೆ. ಅದರ ಜೊತೆಗೆ ನಮ್ಮಲ್ಲಿ ಕೊಡುವ ಸಂಭಾವನೆಯಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿ ಯಾರು ಎನ್ನುವ ಚರ್ಚೆ ಕೂಡ ಶುರುವಾಗುತ್ತದೆ.

ಹೌದು, ಇಂಥದ್ದೊಂದು ಚರ್ಚೆ ಆಗಾಗ ನಡೆಯುತ್ತಲೇ ಇರುತ್ತದೆ. ಈ ಲಿಸ್ಟ್ ಗೆ ಹಲವು ನಾಯಕಿಯರು ಬಂದು ಹೋಗುವುದನ್ನು ಕೂಡ ನಾವು ನೋಡಿರುತ್ತೇವೆ. ಈ ಲಿಸ್ಟ್ ನಲ್ಲಿ ಈಗ ಅಗ್ರಸ್ಥಾನದಲ್ಲಿ ಇರುವ ನಾಯಕಿ ರಚಿತಾ ರಾಮ್ ಎಂದು ಹೇಳಲಾಗುತ್ತಿದೆ. ಹೌದು, ನಟಿ ರಚಿತಾ ರಾಮ್ ಅವರು ಕನ್ನಡದ ಬಹುಬೇಡಿಕೆಯ ನಟಿ ಎಂದರೆ ತಪ್ಪಲ್ಲ, ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ತೆರೆ ಹಂಚಿಕೊಂಡಿರುವ ರಚಿತಾ ರಾಮ್ ಸೂಪರ್ ಹಿಟ್ ಸಿನಿಮಾಗಳ ನಾಯಕಿ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ, ಬಿಡುವಿಲ್ಲದೇ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ವೇಳೆ ರಚಿತಾ ರಾಮ್ ಅವರ ಸಂಭಾವನೆ ವಿಷಯ ಸದ್ದು ಮಾಡುತ್ತಿದೆ
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸಿರುವ ಸಂಜು ವೆಡ್ಸ್ ಗೀತಾ2 ಸಿನಿಮಾ ತೆರೆ ಕಾಣುವುದಕ್ಕೆ ಸಿದ್ಧವಾಗಿದೆ. ಇದು ಒಂದು ದಶಕದ ಹಿಂದೆ ತೆರೆಕಂಡಿದ್ದ ಸಂಜು ವೆಡ್ಸ್ ಗೀತಾ ಸಿನಿಮಾದ ಪ್ರೀಕ್ವೆಲ್ ಆಗಿದೆ, ನಾಗಶೇಖರ್ ಅವರು ಸಿನಿಮಾ ನಿರ್ದೇಶನ ಮಾಡಿದ್ದು, ಶ್ರೀನಗರ ಕಿಟ್ಟಿ ಅವರು ಹೀರೋ ಆಗಿದ್ದಾರೆ. ಸಂಜು ವೆಡ್ಸ್ ಗೀತಾನಲ್ಲಿ ರಮ್ಯಾ ಅವರು ನಾಯಕಿ ಆಗಿದ್ದರು, ಪಾರ್ಟ್2 ನಲ್ಲಿ ರಚಿತಾ ಹೀರೋಯಿನ್ ಆಗಿದ್ದಾರೆ. ಈ ಸಿನಿಮಾ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮುಂದಿನ ವರ್ಷ ಅದ್ಧೂರಿಯಾಗಿ ಸಿನಿಮಾ ಬಿಡುಗಡೆ ಆಗಲಿದ್ದು, ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.

ಸಂಜು ವೆಡ್ಸ್ ಗೀತಾ2 ಸಿನಿಮಾಗಾಗಿ ರಚಿತಾ ರಾಮ್ ಅವರು 54 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನುವ ವಿಷಯ ಈಗ ವೈರಲ್ ಆಗಿದೆ. ಹೌದು, ಇದು ಕನ್ನಡದಲ್ಲಿ ಒಬ್ಬ ನಟಿ ಪಡೆದಿರುವ ಅತಿಹೆಚ್ಚು ಸಂಭಾವನೆ ಎಂದು ಹೇಳಲಾಗುತ್ತಿದೆ. ಈ ಮೊದಲು ರಮ್ಯಾ ಅವರು ಅತಿಹೆಚ್ಚು ಸಂಭಾವನೆ ಪಡೆದಿರುವ ನಾಯಕಿ ಎಂದು ರೆಕಾರ್ಡ್ ಮಾಡಿದ್ದರು, ಇದೀಗ ಆ ಲಿಸ್ಟ್ ಗೆ ರಚಿತಾ ರಾಮ್ ಸೇರಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನಟಿ ರಚಿತಾ ರಾಮ್ ಅವರಾಗಲಿ ಅಥವಾ ಚಿತ್ರತಂಡ ಆಗಲಿ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ರಚಿತಾ ರಾಮ್ ಅವರು ನಿಜಕ್ಕೂ ಅಷ್ಟು ಸಂಭಾವನೆ ಪಡೆದಿದ್ದಾರಾ ಅನ್ನುವ ಬಗ್ಗೆ ಕೂಡ ಅಧಿಕೃತ ಮಾಹಿತಿ ಇಲ್ಲ.
ಆದರೆ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯ ಜೋರಾಗಿಯೇ ಚರ್ಚೆ ಆಗುತ್ತಿದೆ. ರಚಿತಾ ರಾಮ್ ಅವರು ಅಯೋಗ್ಯ2 ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಕೂಡ ಭಾರಿ ನಿರೀಕ್ಷೆ ಇದೆ. ಅಯೋಗ್ಯ2 ಸಿನಿಮಾಗೆ ಇವರಿಗೆ ಎಷ್ಟು ಸಂಭಾವನೆ ಕೊಡಲಾಗಿದೆ ಎನ್ನುವ ಬಗ್ಗೆ ಕೂಡ ಯಾವುದೇ ಮಾಹಿತಿ ಇಲ್ಲ. ಆದರೆ ಇವರು ಪ್ರಸ್ತುತ ಕನ್ನಡದಲ್ಲಿ ಅತಿ ಹೆಚ್ಚು ಬ್ಯುಸಿ ಆಗಿರುವ ನಟಿ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಬಿಡುವಿಲ್ಲದ ಹಾಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡು, ಅಭಿನಯಿಸುತ್ತಿದ್ದಾರೆ ರಚಿತಾ ರಾಮ್. ಈ ಸುದ್ದಿ ನಿಜವೇ ಆದರೆ ಅವರ ಅಭಿಮಾನಿಗಳಿಗೆ ಕೂಡ ಸಂತೋಷವೇ.