ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ಸುದ್ದಿಯಲ್ಲಿ ಇದ್ದಾರೆ. ಕಾಂಟ್ರವರ್ಸಿಯಿಂದ ಕೊಂಚ ದೂರ ಇರಬೇಕು ಅಂದುಕೊಳ್ತಿದ್ದ ಈ ನಟಿ ಈಗ ಸುದ್ದಿಗೆ ಬಂದಿದ್ದಾರೆ. ದರ್ಶನ್ ವಿಚಾರವಾಗಿ ಮಾತನಾಡಿದ್ದ ನಟಿ ರಚಿತಾ ಬಳಿಕ ಎಲ್ಲೂ ಕೂಡ ಮಾಧ್ಯಮಗಳ ಮುಂದೆ ಬಂದಿರಲಿಲ್ಲ. ಆದರೆ ಈಗ ತಮ್ಮದೇ ನಟನೆಯ ಸಿನಿಮಾ ವಿಚಾರವಾಗಿ ಕಾಂಟ್ರವರ್ಸಿ ಮಾಡಿಕೊಂಡು ಸುದ್ದಿಯಾಗಿದ್ದಾರೆ. ಸುದ್ದಿ ಅಷ್ಟೆ ಆಗಿದ್ದರೆ ಓಕೆ, ಆದರೆ ಈ ನಟಿಯ ವಿರುದ್ಧ ದೂರು ಕೂಡ ನೀಡಲಾಗಿದೆ.
ಸಂಜು ವೆಡ್ಸ್ ಗೀತಾ 2 ಸಿನಿಮಾ ಸಮಯ ಸರಿ ಇಲ್ವಾ ಅಥವಾ ರಚಿತಾರಾಮ್ ನಿಂದಲೇ ಹೀಗೆ ಆಗ್ತಾ ಇದ್ಯಾ ಗೊತ್ತಿಲ್ಲ. ಈ ಸಿನಿಮಾವನ್ನ ಜನವರಿ 17ರಂದು ಬಿಡುಗಡೆ ಮಾಡಲಾಗಿತ್ತು. ಆದರೆ ಸಿನಿಮಾ ಬಿಡುಗಡೆಯಾಗಿ ಕೆಲವೇ ಕೆಲವು ದಿನಗಳಲ್ಲಿ ನಿಲ್ಲಿಸಬೇಕಾಯ್ತು. ಕಾನೂನಿನ ತೊಂದರೆ ಉಂಟಾಗಿದ್ದರಿಂದ ಪ್ರದರ್ಶನ ನಿಲ್ಲಿಸಲಾಯಿತು ಅಂತ ಕಾರಣ ನೀಡಲಾಯ್ತು. ಬಳಿ ಸಿನಿಮಾಗೆ ಕೆಲವು ಬದಲಾವಣೆ ಮಾಡಿ ಮತ್ತೆ ಬಿಡುಗಡೆ ಮಾಡಬೇಕು ಅಂತ ಚಿತ್ರತಂಡ ನಿರ್ಧರಿಸಿ ಆ ಜೂನ್ 6ರಂದು ಸಿನಿಮಾವನ್ನು ಮರು ಬಿಡುಗಡೆ ಮಾಡಲಾಯಿತು. ಇದು ಒಂದು ಕಥೆಯಾದ್ರೆ, ಮತ್ತೊಂದು ಅಡೆತಡೆ ನಟಿಯಿಂದ ಆಗಿದೆ.

ಹೌದು, ನಟಿ ರಚಿತಾ ರಾಮ್ ಅವರು ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದು ಶ್ರೀನಗರ ಕಿಟ್ಟಿಗೆ ಜೊತೆಯಾಗಿದ್ದಾರೆ. ಸಿನಿಮಾ ಮಾಡುವಾಗ ಎಲ್ಲವೂ ಸರಿ ಇತ್ತು. ಆದರೆ ಸಿನಿಮಾ ಚಿತ್ರೀಕರಣ ಪೂರ್ಣಗೊಂಡು ಇನ್ನೇನು ತೆರೆಗೆ ಬರುತ್ತೆ ಎನ್ನುವ ವೇಳೆಯಲ್ಲೇ ಪ್ರಚಾರಕ್ಕೆ ಕೈಕೊಟ್ಟಿದ್ದಾರೆ ಈ ನಟಿ. ಇದು ಕೂಡ ರೀ ರಿಲೀಸ್ ಗೆ ಮತ್ತೊಂದು ಕಾರಣ ಎನ್ನಲಾಗುತ್ತಿದೆ. ಈಗಾಗಲೇ ಸಿನಿಮಾ ಥಿಯೇಟರ್ ನಲ್ಲಿ ಓಡುತ್ತಿದೆ. ಜನ ಕೂಡ ಸಿನಿಮಾ ನೋಡ್ತಾ ಇದ್ದಾರೆ. ಈ ಮಧ್ಯೆ ನಟಿ ಪ್ರಚಾರಕ್ಕೆ ಬರುತ್ತಲೇ ಇಲ್ಲ. ಸಿನಿಮಾ ತಂಡ ಇನ್ನಿಲ್ಲದ ಪ್ರಯತ್ನ ಮಾಡಿದರೂ ರಚಿತಾ ರಾಮ್ ಸಿನಿಮಾ ಪ್ರಚಾರಕ್ಕೆ ಬಂದಿಲ್ಲ.
ಹೀಗಾಗಿ ಸಿನಿಮಾ ತಂಡ ಇವರ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ನಿರ್ದೇಶಕ ನಾಗಶೇಖರ್ ಇವರ ವಿರುದ್ಧ ದೂರು ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ದೂರಿನಲ್ಲಿ ಬರೆದಿರುವ ಅವರು,
ನಮ್ಮ ಸಿನಿಮಾ ಸಂಜು ವೆಡ್ಸ್ ಗೀತಾ 2 ಬಿಡುಗಡೆಯಾಗಿದ್ದು ಚಿತ್ರ ಯಶಸ್ಸು ಕಂಡಿದೆ. ಪ್ರೇಕ್ಷಕರು ಮನಸ್ಸು ಗೆದ್ದಿದ್ದು ಪ್ರಚಾರವನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಪ್ರೇಕ್ಷಕ ಪ್ರಭುಗಳಿಗೆ ತಲುಪಿಸುವಲ್ಲಿ ಸಿನಿಮಾವು ಮತ್ತಷ್ಟು ದೊಡ್ಡ ಯಶಸ್ಸು ಕಾಣುತ್ತದೆ. ನಟಿ ರಚಿತಾ ರಾಮ್ ರವರನ್ನ ನಾವು ಕಳೆದ 45 ದಿನಗಳಿಂದ ನಿರಂತರವಾಗಿ ಅವರ ಮ್ಯಾನೇಜರ್ ಮೂಲಕ ಸಂಪರ್ಕಿಸಲು ಪ್ರಯತ್ನ ಮಾಡಿದ್ದೇವೆ. ಆದರೆ ಅವರು ಬಂದಿಲ್ಲ. ಆ ಮೂಲಕ ಅವರನ್ನು ಪ್ರಚಾರಕ್ಕೆ ಕರೆತ್ತಿರುವಲ್ಲಿ ವಿಫಲವಾಗಿದೆ.
ಬಳಿಕ ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದೆವು. ಅವರೂ ಕೂಡ ನಟಿಯನ್ನ ಸಂಪರ್ಕ ಮಾಡಿದರೆ ಅದಕ್ಕೂ ಯಾವುದೇ ಪ್ರತ್ಯುತ್ತರ ಬಂದಿಲ್ಲ. ಅಥವಾ ಸಹಕಾರವಾಗಲಿ ಇಲ್ಲ. ಈ ಮೂಲಕ ಮಂಡಳಿಗೆ ಗೌರವ ತೋರುತ್ತಾರೆ. ಅದಾದ ನಂತರ ಕಲಾವಿದರ ಸಂಘದ ಕಾರ್ಯದರ್ಶಿಗಳಾದ ರಾಕ್ ಲೈನ್ ವೆಂಕಟೇಶ್ ಮೂಲಕ ಸಂಪರ್ಕಿಸಿ ಪ್ರಯತ್ನ ಮಾಡಿದ್ದೆವು. ಅವರಿಗೂ ಗೌರವ ಸಲ್ಲಿಸಿದ್ದಾರೆ. ತದನಂತರ ನಿರ್ಮಾಪಕರಾದ ಶ್ರೀಯುತ ಸೂರಪ್ಪ ಬಾಬು ಅವರೂ ಕೂಡ ಪ್ರಚಾರಕ್ಕೆ ಬರುವಂತೆ ಅವರು ರಚಿತರಾಮ್ ಅವರಿಗೆ ಮನವಿ ಮಾಡಿದ್ದರು. ಆದರೆ ಅವರಿಗೂ ಗೌರವ ಗೌರವ ಸಲ್ಲಿಸಿದ್ದಾರೆ. ಈ ರೀತಿಯ ಚಿತ್ರದ ನಿರ್ಮಾಪಕ, ನಿರ್ದೇಶಕ ಮತ್ತು ತಾನೆ ನಟಿಸಿ ಅನ್ನ ತಿಂದ ಚಿತ್ರಕ್ಕೆ ದೋಹ ದ್ರೋಹ ಬಗೆದಿದ್ದಾರೆ. ಹೀಗಾಗಿ ಅವರ ವಿರುದ್ಧ ದೂರು ನೀಡುತ್ತಿದ್ದೇನೆ. ರಚಿತಾರಾಮ್ರಿಂದ ಸ್ಪಷ್ಟನೆ ಪಡೆದು ಅವರಿಂದ ತಪ್ಪಾಗಿದೆ ಎಂದು ತಮಗೆ ಅರಿವಾಗಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ವಿನಂತಿಸಿಕೊಳ್ಳುತ್ತೇನೆ ಎಂದು ದೂರಿನಲ್ಲಿ ಹೇಳಿದ್ದಾರೆ.
ನಟಿ ರಚಿತಾ ರಾಮ್ ವಿರುದ್ಧ ನಾಗಶೇಖರ್ ಕಂಪ್ಲೆಂಟ್..
ಸದ್ಯ ನಟಿಯ ನಡೆಯ ವಿರುದ್ಧ ತಿರುಗಿ ಬಿದ್ದಿದೆ ಚಿತ್ರತಂಡ. ನಾವು ಇಂತಹ ಕಲಾವಿದರಿಗೆ ಕಠಿಣ ಕ್ರಮ ತೆಗೆದುಕೊಳ್ಬೇಕು. ನಮ್ಮ ಸಿನಿಮಾ ಪ್ರಚಾರಕ್ಕೆ ಒಂಚೂರು ಸಪೋರ್ಟ್ ಕೊಟ್ಟಿಲ್ಲ. ರಮ್ಯಾ, ತಮನ್ನಾ ಎಲ್ಲರಿಗೂ ಸಿನಿಮಾ ಮಾಡಿದ್ದೀನಿ. ಆದ್ರೆ ಇಂತಹ ಸಮಸ್ಯೆ ಯಾವ ನಟಿಯೂ ಕೊಟ್ಟಿಲ್ಲ. ಸಿನಿಮಾಗೆ ಇಷ್ಟು ದಿನ ಪ್ರದರ್ಶನ ಕಂಡರು ಒಂದು ದಿನವೂ ಸಪೋರ್ಟ್ ಕೊಟ್ಟಿಲ್ಲ. ಶಿವಣ್ಣ, ಉಪೇಂದ್ರ, ಸುದೀಪ್ ಅಂಥವ್ರೇ ಈ ಸಿನಿಮಾಗೆ ಸಪೋರ್ಟ್ ಕೊಟ್ಟಿದ್ದಾರೆ. ನಾವು ಅವರಿಗೆ ಪೇಮೆಂಟ್ ಕಮ್ಮಿ ಕೊಟ್ಟಿಲ್ಲ ಅಂತಲೂ ನಾಗಶೇಖರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಸದ್ಯ ರಚಿತಾ ರಾಮ್ ವಿರುದ್ಧ ದೂರೇನು ದಾಖಲಾಗಿದೆ. ಆದರೆ ಈ ವಿಚಾರವಾಗಿ ರಚಿತಾ ರಾಮ್ ಏನು ಸ್ಪಷ್ಟನೆ ಕೊಡುತ್ತಾರೆ..? ಹಾಗೂ ವಾಣಿಜ್ಯ ಮಂಡಳಿ ರಚಿತಾರಾಮ್ ವಿರುದ್ಧ ಏನು ಕ್ರಮ ತೆಗೆದುಕೊಳ್ಳುತ್ತಾರೆ ಅಂತ ಕಾದು ನೋಡಬೇಕು.



