ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾದಲ್ಲಿ ಅನಿರುಧ್ ಸಂಗೀತ ಹಾಗೂ ತಮನ್ನಾ ಬಾಟಿಯ ಸ್ಟೆಪ್ ಮೂಲಕ ವೈರಲ್ ಆದ ಕಾವಾಲಯ್ಯ ಹಾಡಿಗೆ ಹೆಜ್ಜೆ ಹಾಕದವರೇ ಇಲ್ಲ. ಸಿನಿಮಾ ಬಿಡುಗಡೆಯಾಗಿ ವಾರ ಕಳೆದರೂ ಕೂಡ ಈ ಹಾಡಿನ ಕ್ರೇಜ್ ಒಂದಿಂಚೂ ಕಡಿಮೆಯಾಗಿಲ್ಲ. ಸದ್ಯ, ಟ್ರೆಂಡಿಂಗ್ ನಲ್ಲಿರುವ ಈ ಹಾಡಿಗೆ ಪುಟಾಣಿ ಪೋರಿಯೊಬ್ಬಳು ಸಕ್ಕತ್ ಸ್ಟೆಪ್ ಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.

ಮುದ್ದಾದ ಗೊಂಬೆಯಂತಿರುವ ಈ ಪುಟಾಣಿ ಹೆಣ್ಣು ಮಗುವಿನ ‘ಕಾವಾಲಯ್ಯ’ ಡ್ಯಾನ್ಸ್ ವಿಡಿಯೋ ವಿಡಿಯೋ ಜು. 17ರಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ. ಈತನಕ ಸುಮಾರು 9.2 ಲಕ್ಷ ಜನರು ಲೈಕ್ ಮಾಡಿದ್ದಾರೆ. 10 ಮಿಲಿಯನ್ ಜನರು ಇದನ್ನು ನೋಡಿ ಮೆಚ್ಚಿಕೊಂಡಿದ್ದು, ಈಗಲೂ ಕೂಡ ಈ ಡ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈಕೆಯ ಸ್ಟೆಪ್, ಎಕ್ಸ್ಪ್ರೆಷನ್ ಕಂಡು ನೆಟ್ಟಿಗರು ಬಾಲಕಿನ್ನು ಹಾಡಿ ಹೊಗಳುತ್ತಿದ್ದಾರೆ.
ಕಳೆದೊಂದು ತಿಂಗಳಿನಿಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿರುವ ಕಾವಾಲಯ್ಯ ಹಾಡಿಗೆ ಸದ್ಯ, ಮಗುವಿನ ಡ್ಯಾನ್ಸ್ ಕಂಡ ನೆಟ್ಟಿಗರು, ‘ತಮನ್ನಾನೇ ಈ ಮಗುವಿನಿಂದ ಡ್ಯಾನ್ಸ್ ಕಲಿಯಬೇಕು ಅನ್ನಿಸುತ್ತೆ, ಈ ಡ್ರೆಸ್ ಮತ್ತು ಮಗುವಿನ ಎಕ್ಸ್ಪ್ರೆಷನ್ಸ್ ಅದ್ಭುತ, ಈಕೆ ಮುಂದೊಂದು ದಿನ ದೊಡ್ಟ ನೃತ್ಯ ಪಟುವಾಗುತ್ತಾಳೆ’ ಎಂದೆಲ್ಲ ಹೊಗಳಿದ್ದಾರೆ. ಈ ಮಗುವಿನ ಡ್ಯಾನ್ಸ್ ವಿಡಿಯೋ ಇದೀಗ ಅಡ್ಗಿಚ್ಚಿನಂತೆ ಎಲ್ಲೆಡೆ ಹರಿದಾಡುತ್ತಿದೆ.