ಬಿಗ್ ಬಾಸ್ ಶೋ ಅಂದ್ರೆ ಪ್ರತಿ ಸೀಸನ್ ನಲ್ಲೂ ಅಲ್ಲಿ ಒಂದಲ್ಲ ಒಂದು ವಿಶೇಷತೆ ಇದ್ದೇ ಇರುತ್ತದೆ. ಕೆಲವರು ಅಗ್ರೇಷನ್ ಇಂದ ಸುದ್ದಿಯಾದರೆ, ಕೆಲವರು ಒಳ್ಳೇತನದಿಂದ ಸುದ್ದಿಯಾಗುತ್ತಾರೆ, ಇನ್ನ್ಚ್ ಕೆಲವರು ಲವ್ ಬರ್ಡ್ಸ್ ಗಳಾಗಿ ಸುದ್ದಿಯಾಗುತ್ತಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಗೆ ಹೋಗೋ ಸ್ಪರ್ಧಿಗಳು ಒಂದಲ್ಲಾ ಒಂದು ರೀತಿಯಲ್ಲಿ ಸಿಕ್ಕಾಪಟ್ಟೆ ಪಾಪ್ಯುಲರ್ ಆಗುತ್ತಾರೆ. ಕಳೆದ ಸೀಸನ್ ನಲ್ಲಿ ಇದೇ ರೀತಿ ಪಾಪ್ಯುಲರ್ ಆದ ಜೋಡಿ ಶಿಶಿರ್ ಹಾಗೂ ಐಶ್ವರ್ಯ ಸಿಂಧೋಗಿ. ಇವರಿಬ್ಬರು ಬಿಗ್ ಬಾಸ್ ಮನೆಯ ಒಳಗೆ ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಸ್ವಲ್ಪ ಜಾಸ್ತಿಯೇ ಇನ್ವಾಲ್ವ್ ಆಗಿ, ಶಿಶಿರ್ ಬೇಗ ಎಲಿಮಿನೇಟ್ ಆಗುವ ಹಾಗೆ ಆಯಿತು. ಇದೀಗ ಈ ಜೋಡಿಗೆ ಮಾಜಿ ಬಿಗ್ ಬಾಸ್ ವಿನ್ನರ್ ಒಳ್ಳೇ ಹುಡುಗ ಪ್ರಥಮ್ ವಾರ್ನಿಂಗ್ ಕೊಟ್ಟಿದ್ದಾರೆ. ನನ್ನ ಹಾಗೂ ಐಶ್ವರ್ಯ ನಡುವೆ ಬಂದರೆ ಸುಮ್ಮನೆ ಬಿಡೋದಿಲ್ಲ ಎಂದಿದ್ದಾರೆ. ಏನಿದು ಹೊಸ ಕಥೆ?

ಐಶ್ವರ್ಯ ಸಿಂಧೋಗಿ ಹಾಗೂ ಶಿಶಿರ್ ಶಾಸ್ತ್ರಿ ಇಬ್ಬರು ಸಹ ಬಿಗ್ ಬಾಸ್ ಮನೆಗೆ ಹೋಗುವುದಕ್ಕಿಂತ ಮೊದಲಿನಿಂದಲೂ ಬೆಸ್ಟ್ ಫ್ರೆಂಡ್ಸ್ ಆಗಿದ್ದವರು. ಈ ಜೋಡಿ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಬಿಗ್ ಬಾಸ್ ಮನೆಯ ಒಳಗೆ ಇದ್ದಾಗ ಇಬ್ಬರು ಬಹಳ ಕ್ಲೋಸ್ ಆಗಿದ್ದರು. ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದರು. ಒಂದು ಸಮಯದಲ್ಲಿ ಈ ಕ್ಲೋಸ್ನೆಸ್ ಇಂದ, ಐಶ್ವರ್ಯ ಅವರ ಜೊತೆಗೆ ಹೆಚ್ಚು ಟೈಮ್ ಸ್ಪೆನ್ಡ್ ಮಾಡುತ್ತಾ ಶಿಶಿರ್ ಶಾಸ್ತ್ರಿ ಅವರು ಟಾಸ್ಕ್ ಗಳ ಕಡೆಗೆ ಸರಿಯಾಗಿ ಗಮನ ಕೊಡದೇ ಇದ್ದಿದ್ದಕ್ಕೆ ಕಿಚ್ಚ ಸುದೀಪ್ ಅವರು ಸಹ ಬುದ್ಧಿವಾದ ಹೇಳಿದ್ದರು. ಫ್ರೆಂಡ್ಶಿಪ್ ಇದ್ದೆ ಇರುತ್ತೆ, ಟಾಸ್ಕ್ ಕಡೆಗೆ ಕೂಡ ಗಮನ ಕೊಡಬೇಕು ಎಂದಿದ್ದರು. ಆದರೆ ಈ ಫ್ರೆಂಡ್ಶಿಪ್ ನಿಲ್ಲಲಿಲ್ಲ. ಈ ಕಾರಣಕ್ಕೋ ಏನೋ, ಶಿಶಿರ್ ಬಹಳ ಬೇಗ ಎಲಿಮಿನೇಟ್ ಆಗಿ ಹೊರಬಂದರು.

ಫಿನಾಲೆ ವರೆಗು ಇರುತ್ತಾರೆ, ವಿನ್ನರ್ ಆಗುತ್ತಾರೆ ಎಂದು ಶಿಶಿರ್ ಅವರ ಬಗ್ಗೆ ಎಲ್ಲರಿಗೂ ಸಹ ನಿರೀಕ್ಷೆ ಇತ್ತು. ಆದರೆ ಶಿಶಿರ್ ಅವರು ಬಹಳ ಬೇಗ ಎಲಿಮಿನೇಟ್ ಆಗಿ ಹೊರಬಂದರು. ಆದರೆ ಐಶ್ವರ್ಯ ಸಿಂಧೋಗಿ ಇನ್ನು ಹೆಚ್ಚು ವರ್ಷಗಳ ಕಾಲ ಬಿಗ್ ಬಾಸ್ ಮನೆಯ ಒಳಗಿದ್ದು, ಬಿಗ್ ಬಾಸ್ ಇಂದ ಅದ್ಭುತವಾದ ಬೀಳ್ಕೊಡುಗೆ ಪಡೆದುಕೊಂಡು ಎಲಿಮಿನೇಟ್ ಆಗಿ ಹೊರಬಂದರು. ಐಶ್ವರ್ಯ ಅವರು ಹೊರಬಂದಿದ್ದನ್ನ ಯಾರು ಕೂಡ ಮರೆಯುವ ಹಾಗಿಲ್ಲ. ಮಗಳನ್ನು ತವರು ಮನೆಯಿಂದ ಕಳಿಸಿ ಕೊಡುವ ಹಾಗೆ, ಬಹಳ ಪ್ರೀತಿಯಿಂದ ಐಶ್ವರ್ಯಾ ಅವರನ್ನು ಬಿಗ್ ಬಾಸ್ ಕಳಿಸಿ ಕೊಟ್ಟಿದ್ದರು. ಇನ್ನು ಡಾಟರ್ ಆಫ್ ಕರ್ನಾಟಕ ಎಂದು ಐಶ್ವರ್ಯ ಅವರಿಗೆ ಹೆಸರು ಸಹ ಸಿಕ್ಕಿತು. ಬಿಗ್ ಬಾಸ್ ಮನೆ ಐಶ್ವರ್ಯ ಅವರಿಗೆ ತಾವು ಕಳೆದುಕೊಂಡ ಕುಟುಂಬವನ್ನೇ ನೀಡಿತು ಎಂದರು ತಪ್ಪಲ್ಲ.

ಐಶ್ವರ್ಯ ಸಿಂಧೋಗಿ ಅವರು ಹೊರಗಡೆ ಬಂದ ನಂತರ ಕೂಡ ಜನರ ಸಪೋರ್ಟ್ ಅದೇ ರೀತಿ ಇದೆ. ಐಶ್ವರ್ಯ ಅವರನ್ನು ಎಲ್ಲರೂ ಬಹಳ ಪ್ರೀತಿ ಮಾಡುತ್ತಾರೆ, ನನ್ನ ತಂಗಿಯ ಹಾಗೆ, ಅಕ್ಕನ ಹಾಗೆ, ಮನೆಯ ಮಗಳ ಹಾಗೆ ಎಂದು, ಐಶ್ವರ್ಯ ಅವರನ್ನು ತಮ್ಮ ಕುಟುಂಬವಾಗಿ ಜನರು ನೋಡುತ್ತಿದ್ದಾರೆ. ಇದಕ್ಕಿಂತ ಭಾಗ್ಯ ಇನ್ನೇನು ಬೇಕು ಹೇಳಿ.. ಇನ್ನು ಶಿಶಿರ್ ಅವರು ಸಹ ಈ ವಿಚಾರದಲ್ಲಿ ಲಕ್ಕಿ, ಬಿಗ್ ಬಾಗ್ ಇಂದ ಹೊರಬಂದ ನಂತರ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಾಯಕನಾಗಿ ಅವಕಾಶಗಳನ್ನು ಪಡೆದಿದ್ದಾರೆ. ಸಿನಿಮಾಗಳು ಸೆಟ್ಟೇರಿದೆ. ಇವರಿಬ್ಬರ ಫ್ರೆಂಡ್ಶಿಪ್ ಎಲ್ಲವೂ ಒಂದು ಕಡೆಯಾದರೆ, ಇದೀಗ ಮಾಜಿ ಬಿಗ್ ಬಾಸ್ ವಿನ್ನರ್ ಪ್ರಥಮ್ ಅವರು ಶಿಶಿರ್ ಅವರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಐಶ್ವರ್ಯ ಸಿಂಧೋಗಿ ಹಾಗೂ ಪ್ರಥಮ್ ಇಬ್ಬರು ಸಹ ಭೇಟಿ ಮಾಡಿದ್ದು, ಈ ಸಂದರ್ಭದಲ್ಲಿ ಒಂದು ವಿಡಿಯೋ ಮಾಡಿದ್ದಾರೆ. ಇದರಲ್ಲಿ ಪ್ರಥಮ್ ಅವರು, ನಾನು ಹಾಗೂ ಐಶ್ವರ್ಯ ಒಂದು ಸಿನಿಮಾ ಮಾಡೇ ಮಾಡ್ತೀವಿ, ಇದಕ್ಕೆ ಶಿಶಿರ್ ಡಿಸ್ಟರ್ಬ್ ಮಾಡೋ ಹಾಗಿಲ್ಲ ಎಂದು ಹೇಳಿದ್ದಾರೆ. ಆಗ ಐಶ್ವರ್ಯ, ನಾವು ಯಾವಾಗ ಸಿನಿಮಾ ಮಾಡೋದು? ನನಗೆ ಮಗು ಆದಮೇಲಾ? ಅಥವಾ ನಿಮಗೆ ಮೊಮ್ಮಗು ಆದಮೇಲಾ? ಎಂದು ಐಶ್ವರ್ಯ ತಮಾಷೆ ಮಾಡಿದ್ದಾರೆ. ಆಗ ಪ್ರಥಮ್ ಖಂಡಿತವಾಗಿ ನಾವಿಬ್ಬರು ಒಂದು ಸಿನಿಮಾ ಮಾಡೋಣ ಎಂದಿದ್ದಾರೆ. ಇನ್ನು ಶಿಶಿರ್ ಅವರಿಗೆ ಸಹ ಪ್ರಥಮ್ ಒಂದು ವಾರ್ನಿಂಗ್ ಕೊಟ್ಟಿದ್ದು, ನನ್ನ ಹಾಗೂ ಐಶ್ವರ್ಯ ನಡುವೆ ಬಂದರೆ ಸುಮ್ಮನೆ ಇರೋದಿಲ್ಲ ಎಂದು ತಮಾಷೆ ಮಾಡುತ್ತಾರೆ.

ಐಶ್ವರ್ಯ ಹಾಗೂ ಪ್ರಥಮ್ ಒಂದು ಸಿನಿಮಾ ಮಾಡಿದರೆ, ಆ ಸಿನಿಮಾಗೆ ಶಿಶಿರ್ ಅವರನ್ನೇ ವಿಲ್ಲನ್ ಆಗಿ ಹಾಕಿಕೊಳ್ಳಬೇಕು, ಶಿಶಿರ್ ಅವರು ಬೇಕಿದ್ದರೆ ಆಗಾಗ ಕಾಫಿ ತಂದುಕೊಡಬಹುದು.ಆದರೆ ನಮ್ಮಿಬ್ಬರ ಮಧ್ಯೆ ಬರೋ ಹಾಗಿಲ್ಲ ಎಂದು ಪ್ರಥಮ್ ತಮಾಷೆ ಮಾಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಐಶ್ವರ್ಯ ಸಿಂಧೋಗಿ ಹಾಗೂ ಪ್ರಥಮ್ ಅವರು ಯಾವಾಗ ಸಿನಿಮಾ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ. ಪ್ರಥಮ್ ಅವರು ಮಾಡಿರುವ ಸಿನಿಮಾ ಇನ್ನು ಕೂಡ ಬಿಡುಗಡೆ ಆಗಿಲ್ಲ. ಈಗ ಐಶ್ವರ್ಯ ಅವರ ಜೊತೆಗೆ ಸಿನಿಮಾ ಮಾಡೋ ಪ್ಲಾನ್ ನಲ್ಲಿದ್ದಾರೆ, ಈ ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎಂದು ಕಾದು ನೋಡಬೇಕಿದೆ..

ಇನ್ನು ಐಶ್ವರ್ಯ ಸಿಂಧೋಗಿ ಹಾಗೂ ಶಿಶಿರ್ ಇಬ್ಬರು ಬೆಸ್ಟ್ ಫ್ರೆಂಡ್ಸ್. ಇವರಿಬ್ಬರು ಸಹ ಸ್ಪೆಷಲ್ ಆಗಿ ಕೆಲವು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹಾಗೆಯೇ ಇತ್ತೀಚೆಗೆ ಶಿಶಿರ್, ಐಶ್ವರ್ಯ ಹಾಗೂ ಮೋಕ್ಷಿತಾ ಮೂವರು ಸಹ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಮತ್ತು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಬಂದಿದ್ದರು. ಅಲ್ಲಿಗೆ ಹೋಗಿಬಂದ ಫೋಟೋಗಳು, ಪ್ರಸಾದ ಸೇವಿಸುತ್ತಿರುವ ಫೋಟೋಗಳನ್ನು ಸಹ ಶೇರ್ ಮಾಡಿಕೊಂಡಿದ್ದರು. ಇದೀಗ ಪ್ರಥಮ್ ಅವರ ಜೊತೆಗಿರುವ ಐಶ್ವರ್ಯ ಸಿಂಧೋಗಿ ಅವರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದು ತಮಾಷೆಯ ವಿಡಿಯೋ ಆಗಿದ್ದು, ವೀಕ್ಷಕರನ್ನು ನಕ್ಕು ನಗಿಸಿದೆ. ಪ್ರಥಮ್ ಅಂದ್ರೆ ಮನರಂಜನೆ ಇರಲೇಬೇಕು ಅಲ್ವಾ..