ಟಾಲಿವುಡ್ ನಲ್ಲಿ ಎಲ್ಲರ ಪ್ರೀತಿ ಗಳಿಸಿರುವ ಕಲಾವಿದರ ಪೈಕಿ ಅನುಷ್ಕಾ ಶೆಟ್ಟಿ ಮತ್ತು ನಟ ಪ್ರಭಾಸ್ ಅಗ್ರಸ್ಥಾನ ವಹಿಸುತ್ತಾರೆ ಎಂದರೆ ತಪ್ಪಲ್ಲ. ಇವರಿಬ್ಬರು ಜೊತೆಯಾಗಿ ನಟಿಸಿರುವ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್. ಈ ಜೋಡಿ ನಿಜ ಜೀವನದಲ್ಲಿ ಕೂಡ ಒಂದಾಗಲಿ, ಇಬ್ಬರು ಮದುವೆಯಾಗಲಿ ಎನ್ನುವುದು ಅವರ ಅಭಿಮಾನಿಗಳ ಆಸೆ. ಇಬ್ಬರು ಲವ್ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳು ಕೆಲ ವರ್ಷಗಳ ಕಾಲ ಸದ್ದು ಮಾಡಿತು, ಆದರೆ ಪ್ರಭಾಸ್ ಅವರಾಗಲಿ ಅನುಷ್ಕಾ ಅವರಾಗಲಿ ತಮ್ಮ ರಿಲೇಷನ್ಷಿಪ್ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಈ ಜೋಡಿಯ ಮದುವೆ ಬಗ್ಗೆ ಆಗಾಗ ಸುದ್ದಿಗಳು ಕೇಳಿಬರುವುದು ಸುಳ್ಳಲ್ಲ.

ಪ್ರಭಾಸ್ ಅವರು ಹಾಗೂ ಅನುಷ್ಕಾ ಅವರು ಇಬ್ಬರು ಸಹ 40 ವರ್ಷ ಮೀರಿದವರಾಗಿದ್ದಾರೆ ಆದರೆ ಇನ್ನೂ ಕೂಡ ಇಬ್ಬರು ಮದುವೆ ಆಗುವ ಮನಸ್ಸು ಮಾಡಿಲ್ಲ. ಜೊತೆಯಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ, ಅದರಲ್ಲೂ ಇವರಿಬ್ಬರು ಜೊತೆಯಾಗಿ ನಟಿಸಿದ ಬಾಹುಬಲಿ1 ಮತ್ತು ಬಾಹುಬಲಿ2 ಈ ಎರಡು ಸಿನಿಮಾಗಳು ಎಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ ಎಂದು ನಮಗೆಲ್ಲಾ ಗೊತ್ತೇ ಇದೆ. ಆ ಸಮಯದಿಂದ ಕೂಡ ಈ ಜೋಡಿ ನಡುವೆ ಕುಚ್ ಕುಚ್ ನಡೆಯುತ್ತಿದೆ, ಇಬ್ಬರು ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿ ಅಂತೂ ಕೇಳಿ ಬರುತ್ತಲೇ ಇದೆ. ಕಾರ್ಯಕ್ರಮಗಳಲ್ಲಿ ಇವರಿಬ್ಬರು ಅನ್ಯೋನ್ಯವಾಗಿ ಇದ್ದ ಕಾರಣ ಈ ಗಾಸಿಪ್ ಶುರುವಾಯಿತು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಆದರೆ ಇದು ನಿಜ ಎಂದೇ ಎಲ್ಲರೂ ಅಂದುಕೊಂಡಿದ್ದರು, ಬಾಹುಬಲಿ ಸಿನಿಮಾ ಮುಗಿದ ಬಳಿಕ ಇಬ್ಬರು ಮದುವೆಯಾಗುತ್ತಾರೆ ಎನ್ನುವ ಗಾಸಿಪ್ ಕೇಳಿಬಂದಿತ್ತು. ಆದರೆ ಈ ಜೋಡಿ ತಮ್ಮ ನಡುವೆ ಪ್ರೀತಿ ಇದೆ ಎಂದು ಎಲ್ಲೂ ಹೇಳಿಕೊಂಡಿಲ್ಲ. ಆದರೂ ಇವರ ಅಭಿಮಾನಿಗಳು ಈ ಜೋಡಿ ಬೇಗ ಒಂದಾಗಲಿ ಎಂದು ಕಾಯುತ್ತಿದ್ದಾರೆ. ಇದೀಗ ಪ್ರಭಾಸ್ ಹಾಗೂ ಅನುಷ್ಕಾ ಜೋಡಿಯ ನಿಶ್ಚಿತಾರ್ಥ ನಡೆದೇ ಹೋಗಿದೆ ಎನ್ನುವಂತಹ ಒಂದೆರಡು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ಫೋಟೋವನ್ನು ಅಭಿಮಾನಿಗಳು ಎಲ್ಲಾ ಕಡೆ ಶೇರ್ ಮಾಡುತ್ತಿದ್ದಾರೆ.

ಆದರೆ ಎಲ್ಲರೂ ಅಂದುಕೊಳ್ಳುತ್ತಿರುವ ಹಾಗೆ ಪ್ರಭಾಸ್ ಹಾಗೂ ಅನುಷ್ಕಾ ಜೋಡಿಯ ನಿಶ್ಚಿತಾರ್ಥ ನಡೆದಿಲ್ಲ. ಇಬ್ಬರು ಈ ಬಗ್ಗೆ ಎಲ್ಲಿಯೂ ಹೇಳಿಲ್ಲ, ವೈರಲ್ ಆಗುತ್ತಿರುವ ಫೋಟೋಗಳು ಅವರಿಬ್ಬರ ಅಭಿಮಾನಿಗಳು AI ಬಳಸಿ ತಯಾರಿಸಿರುವ ಫೋಟೋ ಆಗಿದೆ. ಆದರೆ ಈ ಫೋಟೋ ತುಂಬಾ ನ್ಯಾಚುರಲ್ ಆಗಿರುವ ಕಾರಣ ನೆಟ್ಟಿಗರು ಆಶ್ಚರ್ಯ ಪಟ್ಟಿದ್ದಾರೆ. ನಿಜಕ್ಕೂ ಪ್ರಭಾಸ್ ಹಾಗೂ ಅನುಷ್ಕಾ ಎಂಗೇಜ್ಮೆಂಟ್ ಆಗಿರಬಹುದು ಎನ್ನುವ ಹಾಗೆ ಬಿಂಬಿಸಿತು. ಆದರೆ ಇದು AI ಎಡಿಟ್ ಮಾತ್ರ ಆಗಿದ್ದು, ಇಬ್ಬರಿಗೂ ಎಂಗೇಜ್ಮೆಂಟ್ ನಡೆದಿಲ್ಲ. ಇವರಿಬ್ಬರು ಇತ್ತೀಚೆಗೆ ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಂಡಿದ್ದು ಇಲ್ಲ ಎಂದು ಗೊತ್ತೇ ಇದೆ.
ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಇಬ್ಬರು ಸಹ ತಮ್ಮ ತಮ್ಮ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ಈಗ ಇಬ್ಬರು ಕೂಡ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ. ಅನುಷ್ಕಾ ಶೆಟ್ಟಿ ಅವರ ಹುಟ್ಟುಹಬ್ಬದ ದಿವಸ ಅವರು ಅಭಿನಯಿಸುತ್ತಿರುವ ಹೊಸ ಸಿನಿಮಾಗಳ ಟೀಸರ್ ಹಾಗೂ ಫಸ್ಟ್ ಲುಕ್ ಗಳು ಬಿಡುಗಡೆ ಆಗಿ, ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಲಾಗಿತ್ತು. ಅನುಷ್ಕಾ ಮತ್ತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವುದು ಅವರ ಅಭಿಮಾನಿಗಳಿಗೆ ಸಂತೋಷ ತಂದಿರುವ ವಿಷಯ ಆಗಿದೆ. ಇನ್ನು ಪ್ರಭಾಸ್ ಅವರು ಸಹ ಎರಡು ಮೂರು ಸಿನಿಮಾಗಳಲ್ಲಿ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ.



