ಬಿಗ್ ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಪರಿಚಯವಾಗಿ, ಪರಿಚಯ ಸ್ನೇಹವಾಗಿ ನಂತರ ಇಬ್ಬರು ಮದುವೆಯಾದರು. ವರ್ಷಗಳು ಕಳೆದಂತೆ ಇಬ್ಬರು ತಮ್ಮ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆದುಕೊಂಡು ದೂರವಾದರು. ಮದುವೆಯಾದ ಮೇಲೆ ಇವರಿಬ್ಬರ ಜೋಡಿಯನ್ನು ಮೆಚ್ಚಿ ಇವರ ಪೋಸ್ಟ್ ರಿಲೀಸ್ ಮಾಡಿ ಲೈಕ್ ಗಳನ್ನು ಮಾಡುತ್ತಿದ್ದ ನೆಟ್ಟಿಗರು ಏಕಾಏಕಿ ಚಂದನ್ ಶೆಟ್ಟಿಯ ಪರವಾಗಿ ನಿವೇದಿತಾ ಗೌಡ ವಿರುದ್ಧವಾಗಿ ಕಾಮೆಂಟ್ಗಳನ್ನು ಮಾಡತೊಡಗಿದರು. ಅದು ಮುಂದುವರೆದು ಇಂದಿಗೂ ಕೂಡ ನಿವೇದಿತಾ ಗೌಡ ಯಾವುದೇ ರೀತಿಯ ರೀಲ್ಸ್ ಮಾಡಲಿ ಪೋಸ್ಟ್ಗಳನ್ನು ಹಾಕಿದರೆ ಅದಕ್ಕೆ ನಿಟ್ಟಿಗರು ಕೆಟ್ಟದಾಗಿ ಕಮೆಂಟ್ಗಳನ್ನು ಹಾಕುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತಿದ್ದಾರೆ.

ಜೊತೆಗೆ ವಿಚ್ಛೇದನದ ಸಂದರ್ಭದಲ್ಲಿ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ರವರ ಹೆಸರಿನ ಜೊತೆ ನಿವೇದಿತಾ ಗೌಡ ಹೆಸರು ತಳಕು ಹಾಕಿಕೊಂಡಿತ್ತು. ಅವರಿಬ್ಬರ ಮಧ್ಯ ಇರುವ ಸಂಬಂಧದ ಬಗ್ಗೆ ಹಲವಾರು ಊಹಾಪೋಹಗಳು ಹರಿದಾಡಿತ್ತು. ಇದ್ಯಾವುದೇ ವಿಚಾರ ಗಳಿಗು ತಲೆ ಕೆಡಿಸಿಕೊಳ್ಳದೆ ಡೋಂಟ್ ಕೇರ್ ಎನ್ನುವ ರೀತಿಯಲ್ಲಿ ನಿವೇದಿತಾ ಗೌಡ ತಮ್ಮದೇ ರೀತಿಯಲ್ಲಿ ತಮ್ಮ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

ಬಾರ್ಬಿ ಡಾಲ್ ಎಂದೆ ಹೆಸರುವಾಸಿಯಾಗಿರುವ ನಿವೇದಿತಾ ಗೌಡ ಯಾರು ಎಷ್ಟೇ ಟೀಕೆ ಟಿಪ್ಪಣಿಗಳನ್ನು ಮಾಡಿ ಕಾಲೆಳೆದರು ಕೂಡ ತಲೆಕೆಡಿಸಿಕೊಳ್ಳದೆ ತಮ್ಮ ಹವ್ಯಾಸವಾದ ರೀಲ್ಸ್ ಅನ್ನು ಮಾಡುತ್ತಲೇ ಬಂದಿದ್ದಾರೆ. ತುಂಡ್ ಉಡುಗೆಯ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.
ರಿಲ್ಸ್ ಮಾಡುವ ಹವ್ಯಾಸದ ಜೊತೆಗೆ ದೇಶವಿದೇಶವನ್ನು ಸುತ್ತುವ ಹವ್ಯಾಸ ಕೂಡ ನಿವೇದಿತಾಗೆ ಇದೆ. ಒಮ್ಮೆ ನಿವೇದಿತಾ Newyorkನಲ್ಲಿ ಕಾಣಿಸಿಕೊಂಡರೆ ಮತ್ತೊಮ್ಮೆ ಗೋವಾದಲ್ಲಿ ಮತ್ತೊಮ್ಮೆ ಫ್ಲೋರಿಡಾದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಕನ್ನಡದಲ್ಲಿ ಸದ್ಯ ಅಲ್ಲಿ ಇಲ್ಲಿ ಎನ್ನುವಂತೆ ಒಂದೆರಡು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವುದನ್ನ ಬಿಟ್ಟರೆ ಚಿತ್ರರಂಗದಲ್ಲಿ ಅಷ್ಟೇನೂ ಚಿತ್ರಗಳನ್ನು ಮಾಡಿಲ್ಲ. ಸದ್ಯ ಚಂದನ್ ಶೆಟ್ಟಿ ಕೂಡ ಜೊತೆಯಲ್ಲಿ ಇಲ್ಲದೆ ಹೀಗೆ ದೇಶ ವಿದೇಶಗಳನ್ನು ಸುತ್ತುತ್ತಿದ್ದಾರೆ. ಹೀಗಾಗಿ ನೆಟ್ಟಿಗರು ದೇಶ ವಿದೇಶ ಸುತ್ತಲೂ , ಜೀವನ ನಡೆಸಲು ನಿವೇದಿತ ಗೌಡಾದೆ ದುಡ್ಡು ಎಲ್ಲಿಂದ ಬರುತ್ತದೆ ನಿಮ್ಮ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಎದ್ದಿರುವ ಪ್ರಶ್ನೆಗೆ ಸ್ವತಹ ನಿವೇದಿತಾ ಗೌಡ ರವರೆ ಅದಕ್ಕೆ ಉತ್ತರಿಸಿದ್ದಾರೆ.



