ಸಿನಿಮಾ ರಂಗದಲ್ಲಿ ಯಾವುದು ಸುಲಭವಲ್ಲ.ಅವರ ವಯಕ್ತಿಕ ಜೀವನ ಹಾಗೂ ವ್ಯವಹಾರ ಜೀವನ ಯಾವುದು ಕೂಡ ಗುಟ್ಟಾಗಿ ಇಡಲು ಸಾಧ್ಯವೇ ಇಲ್ಲ. ಇವರ ಜೀವನದಲ್ಲಿ ಅವರದೇ ಆದ ಯಾವ ಆಯ್ಕೆಗಳು ಕೂಡ ಇರುವುದಿಲ್ಲ.ತಮ್ಮದೇ ಆದ ಸಮಯ ಇಚ್ಚೆ ಆಸೆ ಯಾವುದು ಕೂಡ ಇರಲು ಸಾಧ್ಯವೇ ಇರುವುದಿಲ್ಲ.ಹಾಗಾಗಿ ನೋಡುವುದುದಕ್ಕೆ ಎಲ್ಲವೂ ಸುಲಭ ಆದರೆ ಅದರ ಅಂತರಾಳ ಎಲ್ಲವೂ ಅದನ್ನು ಅನುಭವ ಮಾಡಿದವರಿಗೆ ಮಾತ್ರ ತಿಳಿದಿರುತ್ತದೆ.ಇನ್ನು ಸಿನಿಮಾ ರಂಗದಲ್ಲಿ ನಟ ನಟಿಯರು ಒಂದು ಒಳ್ಳೆಯ ಹೆಸರು ಪಡೆದುಕೊಂಡು ಬರುವುದೂ ಅಷ್ಟು ಸುಲಭವಲ್ಲ.

ಈಗಿನ ಅಭಿಮಾನಿಗಳು ಹೇಗಿದ್ದಾರೆ ಎಂದರೆ ತಮ್ಮ ನಟ ನಟಿಯರು ಮಾಡಿದೆಲ್ಲವು ಸರಿ ಹಾಗೂ ಅದನ್ನು ಅನುಸರಿಸುವವರೆ ಹೆಚ್ಚು.ಇನ್ನು ಹುಚ್ಚು ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರು ಯಾವ ತಪ್ಪು ಮಾಡಿದರು ಕೂಡ ಅದನ್ನು ಸರಿ ತಪ್ಪುಗಳನ್ನು ಅಲೋಚಿಸದೆ ತಮ್ಮ ನೆಚ್ಚಿನವರ ಪರವಾಗಿ ನಿಂತು ಮಾತನಾಡುತ್ತಾರೆ.ಅದು ಅಕ್ಷರ ಸತ್ಯಾ ಎಂದರೆ ತಪ್ಪಾಗಲಾರದು. ಇದೀಗ “ಪವನ್ ಕಲ್ಯಾಣ್” ಅವರ ವಿಚಾರದಲ್ಲೂ ಕೊಡ ಆಗುತ್ತಿರುವುದು ಅದೇ.ಈ ನಟ ಟಾಲಿವುಡ್ ನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ.
ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿರುವ ಪವನ್ ಕಲ್ಯಾಣ್ ಅವರು ಚಿತ್ರರಂಗದಲ್ಲಿ ಅಲ್ಲದೆ ರಾಜಕೀಯದಲ್ಲೂ ಕೂಡ ತೊಡಗಿಸಿಕೊಂಡಿದ್ದಾರೆ.ಈ ಎರಡು ಜೀವನ ಶೈಲಿಯಲ್ಲಿ ದೊಡ್ಡ ಮಟ್ಟದ ಸಾಧನೆ ಹಾಗೂ ಹೆಸರು ಮಾಡಿರುವ ಈ ನಟ ತಮ್ಮ ವಯಕ್ತಿಕ ಬಾಳಿನಲ್ಲೂ ಕೂಡ ದೊಡ್ಡ ಮಟ್ಟದ ಸುದ್ದಿಯನ್ನು ಮಾಡಿದ್ದಾರೆ ಎಂದು ಹೆಳಬಹುದು.ಆದರೆ ಅವರ ವಯಕ್ತಿಕ ವಿಚಾರ ಯಾವ ಸಕಾರಾತ್ಮಕವಾಗಿ ಇಲ್ಲ. ಎಲ್ಲವೂ ನಕಾರಾತ್ಮಕ ವಾಗಿಯೇ ಇದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪವನ್ ಅವರಿಗೆ ಮೂರು ಪತ್ನಿಯರು.
ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದ ಪವನ್ ಅವರು 1997ರಲ್ಲಿ “ನಂದಿನಿ” ಎಂಬುವವರನ್ನು ಮದುವೆಯಾದರು.ಆದರೆ ಅವರಿಬ್ಬರ ವೈವಾಹಿಕ ಜೀವನ ನಾಲ್ಕು ವರ್ಷಕ್ಕೆ ಮುರಿದು ಬಿತ್ತು. ಆ ನಂತರ ವಿ*ಚ್ಛೇ*ದನ ಪಡೆದ ಬಳಿಕ “ರೇಣು ದೇಸಾಯಿ” ಎಂಬುವವರೊಟ್ಟಿಗೆ ಏಳು ವರ್ಷದ ವರೆಗೂ ಲಿವಿಂಗ್ ರಿಲೇಶನ್ ನಲ್ಲಿ ಇದ್ದು ಆ ನಂತರ 2009ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರ ಪ್ರೀತಿಯ ಗುರುತಾಗಿ ಅಕಿರಾ “ನಂದಾ ಹಾಗೂ ಆದ್ಯ” ಹೆಸರಿನ ಮಕ್ಕಳಿದ್ದಾರೆ. ಆ ಬಳಿಕ ಪವನ್ ಕಲ್ಯಾಣ್ ರಷ್ಯಾದ ಅನ್ನಾ “ಲೆಜ್ನೇ”ವಾರನ್ನು ವಿವಾಹವಾದರು. ಅವರಿಂದ “ಮಾರ್ಕ್ ಶಂಕರ್ ಹಾಗೂ ಪೋಲೇನಾ ಅಂಜನಾ” ಹೆಸರಿನ ಮಕ್ಕಳನ್ನು ಪಡೆದಿದ್ದಾರೆ.
ಇದೀಗ ರೇಣು ಅವರು ತಮ್ಮ ವಯಕ್ತಿಕ ಜೀವನದಲ್ಲಿ ಬಹಳ ಬ್ಯುಸಿ ಇದ್ದು ವಿದೇಶದಲ್ಲಿ ತಮ್ಮ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾರೆ.ಈ ಹಿಂದೆ ತಮ್ಮ ವಿ*ಚ್ಛೇ*ದನಕ್ಕೆ ಕಾರಣ ನಾನೇ ಎಂದು ದೂಷಿಕೊಂಡಿದ್ದರು.ಆಗಲು ಪವನ್ ಕಲ್ಯಾಣ್ ನಮ್ಮ ವಿಚ್ಛೇದನಕ್ಕೂ ನಾನೇ ಕಾರಣ ಎಂದು ದೋಷಿಸಿದ್ದರು.ಇದೀಗ ಮತ್ತೆ ಮಾಧ್ಯಮಗಳ ಮುಂದೆ ಬಂದು ರೇಣು ಪವನ್ ಅವರ ವಿರುದ್ಧ ಮಾತುಗಳನ್ನು ಆಡಿದ್ದಾರೆ.ಹಾಗಾಗಿ ಪವನ್ ಅವರ ಅಭಿಮಾನಿಗಳು ರೇಣು ಅವರನ್ನು ಕ್ಲಾಸ್ ತೆಗೆದುಕೊಂಡಿದ್ದಾರೆ.ಈಗ ರೇಣು ಅವರ ಪ್ರತ್ಯುತ್ತರ ಏನಾಗಿರಬಹುದು ಎಂದು ನಾವೆಲ್ಲರೂ ಕಾದು ನೋಡಬೇಕಿದೆ.